Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೇಷ ರಾಶಿಗೆ ಶುಕ್ರ ಸಂಚಾರ: ಕುಟುಂಬ, ದಾಂಪತ್ಯ, ಪ್ರೀತಿಯಲ್ಲಿ ಯಾರಿಗೆಲ್ಲಾ ಲಾಭ..!!
ಫೆಬ್ರವರಿಯಲ್ಲಿ ಹಲವು ಗ್ರಹಗತಿಗಳ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಅದರಲ್ಲೂ ಹಲವು ರಾಶಿಗಳಲ್ಲಿ ಲಾಭ ನಷ್ಟಕ್ಕೆ ಕಾರಣವಾಗುತ್ತಿದೆ. ಅದರಲ್ಲು ಶುಕ್ರನು ಮೇಷ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಈ ಸಮಯದಲ್ಲಿ ಹಲವು ರೀತಿಯ ಬದಲಾವಣೆಗಳ ನಾವು ನೋಡಬಹುದಾಗಿದೆ. ಪ್ರೀತಿ ಸಂಬಂಧಗಳ ಪ್ರತೀಕವಾಗಿರುವ ಶುಕ್ರನು ಮೇಷ ರಾಶಿಗೆ ಚಲಿಸುತ್ತಿರುವುದು ಪ್ರೀತಿ, ಸಂಬಂಧಗಳಲ್ಲಿ ಯಾವ ರೀತಿ ಬದಲಾವಣೆ ತರಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಫೆಬ್ರವರಿ 4ರಂದು ಶುಕ್ರನ ಮೇಷ ರಾಶಿಗೆ ಚಲಿಸಿದ್ದಾನೆ. ಇದರಿಂದ ಹಲವು ರಾಶಿಗಳಲ್ಲಿ ಪ್ರೇಮ ಸಂಬಂಧಗಳು, ಕೌಟುಂಬಿಕ ವಿಚಾರಗಳ ಮೇಲೆ ಪ್ರಭಾವ ಉಂಟು ಮಾಡುತ್ತಿದೆ. ಹಾಗಾದ್ರೆ ಯಾರಿಗೆ ಈ ಶುಕ್ರನು ಲಾಭದಾಯಕವಾಗಲಿದ್ದಾನೆ. ಯಾರಿಗೆ ಸಮಸ್ಯೆ ತರಲಿದ್ದಾನೆ ಎಂಬುದನ್ನು ಇಲ್ಲಿ ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರಲ್ಲಿ ಈ ಶುಕ್ರನು ತಮ್ಮ ಸಂಬಂಧದಲ್ಲಿ ಮತ್ತಷ್ಟು ಬೆಂಬಲ, ಪ್ರೋತ್ಸಾಹಕ್ಕೆ ಕಾರಣನಾಗುತ್ತಾನೆ. ನಿಮ್ಮ ಪ್ರೀತಿ ಪಾತ್ರರು ನಿಮ್ಮಲ್ಲಿ ಹೆಚ್ಚು ನಂಬಿಕೆ ಇಡುತ್ತಾರೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಹೊಸ ಸಂಬಂಧದಲ್ಲಿ ನೀವು ನಂಬಿಕೆ ಇಡುತ್ತೀರಿ. ನೀವು ಅಂದುಕೊಂಡಂತೆ ಬೇರೆಯವರ ಮಾತುಗಳಿಂದ ಸಂತಸ ತರಲಿದೆ. ನಿಮ್ಮ ದಾಂಪತ್ಯ ಜೀವನದಲ್ಲೂ ಖುಷಿ ನೆಲೆಸಲಿದೆ.
ವೃಷಭ ರಾಶಿ
ಮೇಷ ರಾಶಿಯಲ್ಲಿ ಶುಕ್ರನು ಸಂಚರಿಸುವುದು ವೃಷಭ ರಾಶಿಯವರಲ್ಲಿ ಪರಿಪೂರ್ಣ ಲಾಭಕ್ಕೆ ಕಾರಣವಾಗುತ್ತಿದೆ. ನಿಮ್ಮ ಸಂಬಂಧಗಳಲ್ಲಿ ಸಂತೋಷ ನೆಲೆಸಲಿದೆ. ನೀವು ಅವಿವಾಹಿತರಾಗಿದ್ದರೆ ಶುಭ ಸುದ್ದಿ ಕೇಳುವ ನಿರೀಕ್ಷೆ ಇದೆ. ಬಹುಕಾಲದ ನಿಮ್ಮ ಮನದ ಭಾವನೆಯನ್ನು ಹೊರಹಾಕಲು ಇದು ಸೂಕ್ತ ಸಮಯ ಆಗಿರಲಿದೆ. ನಿಮ್ಮ ದಾಂಪತ್ಯದಲ್ಲಿ ಸಂತಸ ಕಾಣಬಹುದು. ಸಂಬಂಧಗಳ ವೃದ್ಧಿಗಾಗಿ ನೀವು ಹೆಚ್ಚು ಶ್ರಮಿಸಬೇಕಾಗುತ್ತದೆ.
ಕರ್ಕ ರಾಶಿ
ಶುಕ್ರ ಮೇಷ ರಾಶಿಗೆ ಚಲಿಸುವುದು ಕರ್ಕ ರಾಶಿಯವರಲ್ಲಿ ಶುಭಕ್ಕೆ ಕಾರಣವಾಗುತ್ತಿದೆ. ನೀವು ಪ್ರೀತಿಯಲ್ಲಿದ್ದರೆ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ, ಪ್ರೀತಿ ಪಾತ್ರರ ಜೊತೆಗೆ ನೀವು ಹೆಚ್ಚು ಸಮಯ ಕಳೆಯುತ್ತೀರಿ. ಅವರಿಂದ ಪಡೆಯುವ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ಶುಭವಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಂತಸ ನೋಡುತ್ತೀರಿ. ಪ್ರವಾಸ, ದೇವಾಲಯ, ಶುಭ ಕಾರ್ಯದಲ್ಲಿ ನೀವುಗಳು ಭಾಗಿಯಾಗುತ್ತೀರಿ.
ಸಿಂಹ ರಾಶಿ
ಮೇಷ ರಾಶಿಗೆ ಶುಕ್ರನ ಸಂಚಾರದಿಂದ ಸಿಂಹ ರಾಶಿಯವರಲ್ಲಿ ಸಂಬಂಧಗಳ ವೃದ್ಧಿಗೆ ಕಾರಣವಾಗುತ್ತಿದೆ, ನಿಮ್ಮ ಸುತ್ತಮುತ್ತಲಿನ ಸಂಬಂಧದಲ್ಲಿ ಹೆಚ್ಚು ಸಮಯ ಕಳೆಯುತ್ತೀರಿ. ನಿಮಗಾಗಿ ಕೆಲ ಹೊಸ ಸಂಬಂಧಗಳು ಹುಡುಕಿ ಬರಲಿವೆ. ಪ್ರೀತಿ ಪಾತ್ರರ ಮೆಚ್ಚುಗೆಗೆ ನೀವು ಒಳಗಾಗುತ್ತೀರಿ. ಹಿರಿಯರಿಂದ ನೀವು ಸಲಹೆ ಪಡೆಯುವುದು, ಅನುಸರಿಸುವುದು ಉತ್ತಮ. ಸಂಬಂಧ ಹಾಳು ಮಾಡಿಕೊಳ್ಳುವ ಯಾವುದೇ ಕೆಲಸ ಈ ಸಮಯದಲ್ಲಿ ಮಾಡಬೇಡಿ. ವಿವಾಹಿತರಲ್ಲಿ ಸಂತಸಮಯ ದಿನಗಳು ಇರಲಿವೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿ ಈ ಸಮಯದಲ್ಲಿ ಅತ್ಯಂತ ಲಾಭದಾಯಕ ಸಂಬಂಧ ಹೊಂದಿರುತ್ತಾರೆ. ಸ್ನೇಹಿತರಿಂದ, ಕುಟುಂಬಸ್ಥರಿಂದ ಬೆಂಬಲ ಪಡೆದುಕೊಳ್ಳುತ್ತೀರಿ. ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಇದು ಸಕಾಲವಾಗುತ್ತದೆ. ಪ್ರೀತಿ ಪಾತ್ರರಿಗೆ ನೀವು ದುಬಾರು ವಸ್ತು ಉಡುಗೊರೆಯಾಗಿ ನೀಡಲು ಮುಂದಾಗುತ್ತೀರಿ. ಕುಟುಂಬಸ್ಥರಿಗೆ ಎಲ್ಲಾ ಕೆಲಸಕ್ಕೂ ನೈತಿಕ ಬೆಂಬಲ ಸಿಗಲಿದೆ.
ತುಲಾ ರಾಶಿ
ತುಲಾ ರಾಶಿಯವರು ಈ ಸಮಯದಲ್ಲಿ ಸಂಬಂಧಗಳಲ್ಲಿ ಹೆಚ್ಚು ನಿಖರ ಮತ್ತು ಆಳವಾದ ಸ್ನೇಹ ನೋಡುತ್ತೀರಿ. ಪ್ರೀತಿಯಲ್ಲಿ ನೀವು ಕಳೆದು ಹೋಗುವಿರಿ. ಕುಟುಂಬದಲ್ಲಿ ಶಾಂತಿ ಇರಲಿದೆ. ನಿಮ್ಮ ಪರವಾದ ಒಲವು ನೋಡಬಹುದು. ನೀವು ಯಾವುದೇ ವಿಚಾರ ಮಂಡಿಸಿದರು ಅದನ್ನು ಒಪ್ಪಿಕೊಳ್ಳುವುದನ್ನು ನೋಡಬಹುದು. ಸಂಬಂಧಿಕರ ಭೇಟಿಯಿಂದ ಶುಭ ಸುದ್ದಿ ಕೇಳುವಿರಿ. ಬಹುದಿಂದ ನಿಮ್ಮ ಮನದಲ್ಲಿದ್ದ ವಿಚಾರ ಹೇಳಿಕೊಳ್ಳುತ್ತೀರಿ.



Click it and Unblock the Notifications