Latest Updates
-
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ?
ಪ್ರಪೋಸ್ ಡೇಗೆ ನಿಮ್ಮ ಮನದ ಮಾತು ಹೇಳುವ ಗ್ರೀಟಿಂಗ್ಸ್
ಅಂದ ಹಾಗೆ ನೀವು ಕಾಶ್ಮೀರದಲ್ಲಿ ಈ ರೀತಿ ಮಂಜು ಆವರಿಸಿರುವ ಸಮಯದಲ್ಲಿ ಹೋಗಿದ್ದೀರಾ? ಈ ಸೌಂದರ್ಯವನ್ನು ಎಷ್ಟು ವರ್ಣಿಸಿದರೂ ಸಾಲದು, ಆದರೆ ಆ ಸಮಯದಲ್ಲಿ ಅಲ್ಲಿಯ ಜನರು ಹಲವಾರು ತೊಂದರೆಗಳನ್ನು ಕೂಡ ಅನುಭವಿಸುತ್ತಾರೆ, ಏಕೆಂದರೆ ನೀರು ತುಂಬಿಟ್ಟರೆ ಅದು ಕೂಡ ಐಸ್ ಆಗಿರುತ್ತದೆ. ಆದರೂ ಅಪರೂಪದ ಈ ದೃಶ್ಯಕ್ಕೆ ಕಾಶ್ಮೀಗರು ಹಂಬಲಿಸುವುದಂತೂ ಅಷ್ಟೇ ನಿಜ.
ವ್ಯಾಲೆಂಟೈನ್ ವೀಕ್‌ನಲ್ಲಿ ಫೆಬ್ರವರಿ 8 ಪ್ರಪೋಸ್ ದಿನ. ತಮ್ಮ ಪ್ರೇಮವನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುವವರ ಬಳಿ ಪ್ರೇಮ ನಿವೇದನೆ ಮಾಡುವ ದಿನ. ಈ ದಿನಕ್ಕಾಗಿ ಎಷ್ಟೋ ಜನರು ಕಾಯುತ್ತಿರುತ್ತಾರೆ, ಇಷ್ಟು ದಿನ ಪ್ರಪೋಸ್ ಮಾಡಬೇಕೆಂಬ ಮನಸ್ಸಿದ್ದು ದೈರ್ಯ ಸಾಲದೆ ಹೇಳದೆ ಇರುವವರು ಕೂಡ ಈ ಧೈರ್ಯ ಮಾಡಿ ಹೇಳಲು ಮುಂದಾಗುತ್ತಾರೆ.
ನಾವು ಒಬ್ಬರನ್ನು ಪ್ರೇಮಿಸುತ್ತಿದ್ದೇವೆ ಎಂದಾಗ ನಮ್ಮ ಮಾತಿನಲ್ಲಿ ಆ ಪ್ರೀತಿಯ ಆಳ ಅವರಿಗೆ ತಟ್ಟಬೇಕು, ಆಗ ಮಾತ್ರ ಆ ಕಡೆಯಿಂದಲೂ ಪಾಸಿಟಿವ್ ಪ್ರತಿಕ್ರಿಯೆ ಬರುತ್ತದೆ. ನಾವಿಲ್ಲಿ ಪ್ರಪೋಸ್ ಡೇಗೆ ವಿಶ್ ಕಳುಹಿಸಲು ರೊಮ್ಯಾಂಟಿಕ್ ಪ್ರಪೋಸಲ್ ಗ್ರೀಟಿಂಗ್ ನೀಡಿದ್ದೇವೆ, ನಿಮ್ಮ ಮನಸ್ಸಿನ ಮಾತು ಈ ಸಾಲುಗಳು ಹೇಳಬಹುದು ನೋಡಿ:

ಬಣ್ಣದ ಮಾತುಗಳ ಕಲೆ ಗೊತ್ತಿಲ್ಲ ನಂಗೆ
ಕವಿಯಂತೆ ವರ್ಣಿಸಲೂ ಕವಿಯೂ ಅಲ್ಲ
ಸೀದಾ ಸಾದ ಹೇಳುತ್ತಿದ್ದಾನೆ ನನ್ನ ಉಸಿರೇ ನೀನು.... ಲವ್ ಯೂ ಚಿನ್ನು....
ಕಣ್ಣು ನೀನಾದರೆ ಕಣ್ರೆಪ್ಪೆ ನಾನಾಗುವೆ
ನೀ ಇಡುವ ಹೆಜ್ಜೆಯಲ್ಲಿ ನೆರಳು ನಾನಾಗಿರುವೆ
ಈ ಜೀವನದಲ್ಲಿ ಉಸಿರು ಇರುವ ಕ್ಷಣದವರೆಗೂ ನಿನ್ನನ್ನೇ ಪ್ರೀತಿಸುವೆ... ಲವ್ ಯೂ
ನಮ್ಮ ಮನೆಗೆ, ನನ್ನ ಮನಕ್ಕೆ ರಾಣಿಯಾಗಿ ಬರುವೆಯಾ ನನ್ನ ಪಾಲಿನ ದೇವತೆ?
ನಿನ್ನಿಂದಲೇ ನನ್ನ ಈ ಮುಂದಿನ ಜೀವನ .... ಎಂದೆಂದೂ ನಿನ್ನವನಾಗ ಬಯಸುವ ಇಂತಿ ನಿನ್ನವ
ಹೇ ಹುಡುಗ.. ಅದ್ಯಾವ ಕ್ಷಣ ಎಲ್ಲರಿಗಿಂತ ಹತ್ತಿರದವನಾದೆ?
ನನ್ನ ಕೇಳದೆಯೇ ನನ್ನ ಹೃದಯ ಕದ್ದೆ ಏಕೆ?
ಕದ್ದ ಹೃದಯ ಮತ್ತೆಂದೂ ಮರಳಿಸದಿರು
ಇಂತಿ ನಿನ್ನವಳು
ಹೊಸದೊಂದು ಬಾಳ ಕನಸು ಕಂಡಿರುವೆ, ಅದೊಂದು ಪ್ರೀತಿಯ ಗೂಡು
ಆ ಗೂಡಿನಲ್ಲಿ ನಾನೂ-ನೀನು ಲವ್‌ಬರ್ಡ್ಸ್
ಉಸಿರು ನಿಲ್ಲುವವರೆಗೂ ಜೊತೆಯಾಗಿ ಬಾಳುವ
ಇಂತಿ ನಿನ್ನ ಪ್ರೇಮಿ
ಎಲ್ಲರಿಗಿಂತ ನೀನು ತುಂಬಾ ಸ್ಪೆಷಲ್ ಅನಿಸುತ್ತಿರುವೆ
ನಾನು ಎಲ್ಲೇ ಹೋದರೂ ನಿನ್ನದೇ ಕನವರಿಕೆ
ನಿನ್ನ ಪ್ರೀತಿಯ ಬಂಧನದಲ್ಲಿ ಸೆರೆಯಾಗುವ ಆಸೆ, ಒಪ್ಪಿಗೆಯಾ ನಿನಗೆ?
ತುಂಬಾ ದಿನಗಳಿಂದ ಹೇಳಬೇಕೆಂದಿರುವ ಮನದ ಮಾತುಗಳಿವು, ನನ್ನ ಬಾಳಲ್ಲಿ ಸುಖ-ದುಃಖದಲ್ಲಿ ಸಮಪಾಲು ತೆಗೆದುಕೊಳ್ಳಲು ಬರುವೆಯಾ? ನೀ ಬೇಕೆಂಬುವುದೇ ದೇವರಲ್ಲಿ ಬೇಡಿರುವ ಏಕೈಕ ಕೋರಿಕೆ.... ಲವ್ ಯೂ
ನನ್ನ ಪ್ರೀತಿಯನ್ನು ಹೇಳಲು ಪದಗಳು ಸಿಗುತ್ತಿಲ್ಲ, ಮಾತುಗಳು ಬರುತ್ತಿಲ್ಲ, ಆದರೆ ಒಂದು ಹೇಳುವೆ ನೀನಿಲ್ಲದೆ ಈ ಬದುಕಿಲ್ಲ
ನನ್ನ ಉಸಿರೇ ನೀನು... ಲವ್ ಯೂ



Click it and Unblock the Notifications







