Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
10 ವರ್ಷಕ್ಕೆ ಮೊದಲೇ ಎಗ್‌ಫ್ರೀಜಿಂಗ್ ಮಾಡಿದ್ದರಿಂದ 40ರ ಪ್ರಾಯದಲ್ಲಿ ಗರ್ಭಧರಿಸಿದ ರಾಮಚರಣ್ ಪತ್ನಿ!
ರಾಮಚರಣ್ ಹಾಗೂ ಉಪಾಸನ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾಗಿ 10 ವರ್ಷಗಳ ಬಳಿಕ ಉಪಾಸನ ಗರ್ಭಿಣಿಯಾಗಿದ್ದು ಇತ್ತೀಚಿನ ಸಂದರ್ಶನವೊಂದರಲ್ಲಿ ನಾವು ಮಗುವನ್ನು ಪಡೆಯಲು 10 ವರ್ಷದ ಹಿಂದೆ ಎಗ್ ಫ್ರೀಜಿಂಗ್ (ಅಂಡಾಣು ಶೈತಲೀಕರಿಸಿರುವುದಾಗಿ) ಹೇಳಿಕೊಂಡಿದ್ದಾರೆ.
ವೃತ್ತಿ ಜೀವನಕ್ಕೆ ಅಧಿಕ ಒತ್ತು ನೀಡಿದ್ದರಿಂದ ಎಗ್ ಫ್ರೀಜಿಂಗ್ ಮಾಡಿದ್ದ ದಂಪತಿ
ರಾಮ್‌ಚರಣ್ ಹಾಗೂ ಉಪಾಸನ ದಂಪತಿ ತಮ್ಮ ವೃತ್ತಿ ಬದುಕಿನ ಕಡೆಗೆ ತುಂಬಾನೇ ಗಮನಹರಿಸಿದ್ದರು. ಈ ಕಾರಣಕ್ಕೆ ಮದುವೆಯಾಗಿ ಕೆಲವು ವರ್ಷಗಳವರೆಗೆ ಮಗುವನ್ನು ಪಡೆಯುವುದು ಬೇಡ ಎಂದು ನಿರ್ಧರಿಸುತ್ತಿದ್ದರು. ಈ ದಂಪತಿಗೆ ಮಗು ಯಾವಾಗ? ಮಗು ಯಾವಾಗ ಎಂಬ ಪ್ರಶ್ನೆ ಬರುತ್ತಲೇ ಇತ್ತು, ಒಮ್ಮೆ ಉಪಾಸನ ಅವರು ಮಗು ಯಾವಾಗ ಬೇಕೆಂದು ನಿರ್ಧರಿಸುತ್ತೇವೆ ಆವಾಗ ಮಾಡಿಕೊಳ್ಳುತ್ತೇವೆ ಎಂದು ತುಂಬಾ ನೇರವಾಗಿಯೇ ಉತ್ತರಿಸಿದ್ದರು.

ಮಗು ಯಾವಾಗ ಮಾಡಿಕೊಳ್ಳಬೇಕು ಎಂದು ನಿರ್ಧರಿಸುವುದು ದಂಪತಿ ನಿರ್ಧಾರವಾಗಿರುತ್ತದೆ, ಅದನ್ನು ಮೂರನೇಯ ವ್ಯಕ್ತಿ ಕೇಳುವುದೇ ತಪ್ಪು, ಆದರೂ ದಂಪತಿ ಈ ಸಮಸ್ಯೆ ಎದುರಿಸುತ್ತಾರೆ. ಮದುವೆಯಾಗಿ ಮಾರನೇಯ ತಿಂಗಳಿನಿಂದ ಈ ಪ್ರಶ್ನೆ ಕೇಳಲಾರಂಭಿಸುತ್ತಾರೆ, ಅದೇ ಪ್ರಶ್ನೆ ಈ ದಂಪತಿಗೂ ಎದುರಾಗಿತ್ತು. ಈಗ ಅವರು ಅಂದು ತಾವು ತೆಗೆದುಕೊಂಡಿದ್ದ ನಿರ್ಧಾರದ ಬಗ್ಗೆ ತುಂಬಾ ಓಪನ್ ಆಗಿ ಮಾತನಾಡಿದ್ದಾರೆ.
ಕೆರಿಯರ್ ಕಡೆ ತುಂಬಾ ಗಮನ ಕೊಡುವ ದಂಪತಿಗೆ ಎಗ್ ಫ್ರೀಜಿಂಗ್ ಅತ್ಯುತ್ತಮ ಆಯ್ಕೆಯಾಗಿದೆ
ಈಗ ನಮಗೆ ಮಗು ಬೇಡ, ಮುಂದೆ ಮಾಡಿಕೊಳ್ಳುವ ಎಂದು ಆಲೋಚಿಸಿದ್ದರೆ ಕೆರಿಯರ್‌ನಲ್ಲಿ ಒಂದು ಹಂತಕ್ಕೆ ಸೆಟ್ಲ್ ಆದ ಮೇಲೆ ನೋಡಿದರೆ ವಯಸ್ಸು ಅಧಿಕವಾಗಿರುತ್ತದೆ, ಆವಾಗ ಅನೇಕ ಆರೋಗ್ಯ ಸಮಸ್ಯೆಗಳಿಂದಾಗಿ ಮಕ್ಕಳಾಗುವುದು ಕಷ್ಟವಾಗುವುದು. ಬೇಗ ಮಕ್ಕಳಾದರೆ ಕೆರಿಯರ್ ಕಡೆ ಗಮನ ಕೊಡಲು ಸಾಧ್ಯವಾಗುವುದಿಲ್ಲ, ಇಂಥವರಿಗೆ ಎಗ್ ಫ್ರೀಜಿಂಗ್ ಎಂಬುವುದು ಅತ್ಯುತ್ತಮವಾದ ಆಯ್ಕೆಯಾಗಿದೆ.
ಗಂಡ-ಹೆಂಡತಿ ಬಾಂಧವ್ಯ ಗಟ್ಟಿಯಾಗಿಸುವಲ್ಲಿ ಈ ಎಗ್‌ಫ್ರೀಜಿಂಗ್ ಸಹಕಾರಿ
ಎಷ್ಟೋ ದಾಂಪತ್ಯದಲ್ಲಿ ಬೇಗನೆ ಮಕ್ಕಳಾಗಿರುವುದರಿಂದ ಕೆರಿಯರ್ ಕಡೆ ಗಮನ ಕೊಡಲು ಸಾಧ್ಯವಾಗಿಲ್ಲ, ಆರ್ಥಿಕವಾಗಿ ದೃಢವಾದ ಮೇಲೆ ಮಕ್ಕಳಾಗಿದ್ದರೆ ಬದುಕು ಇನ್ನೂ ಚೆನ್ನಾಗಿರುತ್ತಿತ್ತು ಎಂಬ ಅನಿಸಿಕೆ ಇರುತ್ತದೆ. ಇನ್ನು ಕೆಲವರಿಗೆ ಕೆರಿಯರ್ ಅಂತ ತಮ್ಮ ವೃತ್ತಿ ಜೀವನದ ಕಡೆಗೆ ಗಮನ ನೀಡಿ, ಜೀವನದಲ್ಲಿ ಒಂದು ಹಂತಕ್ಕೆ ಬೆಳೆದಿದ್ದೇವೆ ಇನ್ನು ನಮ್ಮ ಸಂಸಾರದಲ್ಲಿ ಮಗುವೊಂದಿದ್ದರೆ ಲೈಫ್ ಈಸ್ ಬ್ಯೂಟಿಫುಲ್ ಎಂದು ಮಗುವಿಗಾಗಿ ಪ್ರಯತ್ನಿಸಿದಾಗ ವಯಸ್ಸು ಅಧಿಕವಾಗಿರುತ್ತದೆ ಈ ಕಾರಣಕ್ಕೆ ಮಕ್ಕಳಾಗುವ ಸಾಧ್ಯತೆ ಕಡಿಮೆಯಾಗುವುದು, ಅದರಲ್ಲೂ 35ರ ನಂತರ ನೈಸರ್ಗಿಕವಾಗಿ ಗರ್ಭಧಾರಣೆಯಾಗುವುದು ಸ್ವಲ್ಪ ಕಷ್ಟವೇ... ವೃತ್ತಿ ಬದುಕಿನಲ್ಲಿ ಬೆಳೆಯಬೇಕು, ಮಡಿಲಿನಲ್ಲಿ ಮುದ್ದಾದ ಮಗು ಬೇಕೆನ್ನುವವರಿಗೆ ಎಗ್ ಫ್ರೀಜಿಂಗ್ ಒಳ್ಳೆಯ ಆಯ್ಕೆಯಾಗಿದೆ.
ಎಗ್ ಫ್ರೀಜಿಂಗ್ ಎಂದರೇನು?
ಇದನ್ನ ವೈದ್ಯಕೀಯ ಭಾಷೆಯಲ್ಲಿ cyte cryopreservation ಎಂದು ಕರೆಯಲಾಗುವುದು. ಮಹಿಳೆಯ ದೇಹದಲ್ಲಿ ಬಿಡುಗಡೆಯಾದ ಆರೋಗ್ಯಕರವಾದ ಅಂಡಾಣು ಸಂಗ್ರಹಿಸಿ , ಸಂರಕ್ಷಿಸಿ ಇಡುವ ವಿಧಾನವಾಗಿದೆ. ನಂತರ ಯಾವಾಗ ಮಗು ಬೇಕೆಂದು ನಿರ್ಧರಿಸುತ್ತಾರೋ ಆವಾಗ ಈ ಅಂಡಾಣು ಬಳಸಿ ಮಗು ಪಡೆಯಬಹುದು. ಎಗ್ ಫ್ರೀಜಿಂಗ್ ಮಾಡುವುದಾದರೆ 20-30 ವರ್ಷದೊಳಗಡೆ ಮಾಡಿದರೆ ತುಂಬಾ ಒಳ್ಳೆಯದು.
ಎಗ್ ಫ್ರೀಜಿಂಗ್ ತುಂಬಾ ದುಬಾರಿಯೇ?
ಸ್ವಲ್ಪ ಅನುಕೂಲಸ್ಥರು ಈ ವಿಧಾನ ಮೊರೆಯಾಗಬಹುದು. ಆಸ್ಪತ್ರೆಯಿಂದ ಆಸ್ಪತ್ರೆಗೆ ತಗುಲುವ ವೆಚ್ಚ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ವರ್ಷದಲ್ಲಿ 70 ಸಾವಿರಕ್ಕೂ ಅಧಿಕ ಖರ್ಚಾಗಬಹುದು.



Click it and Unblock the Notifications
