ಅಂಕಲ್‌ಗಳು ಯುವತಿಯರತ್ತ ಆಕರ್ಷಿಕರಾಗುವುದು ಇದೇ ಕಾರಣಕ್ಕೆ

ಪ್ರೀತಿಗೆ ಕಣ್ಣಿಲ್ಲ ಅಂತಾರೆ ಹಾಗೆ ನಮಗೆ ಯಾರ ಮೇಲೆ ಪ್ರೀತಿಯಾಗುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಅದಕ್ಕೆ ವಯಸ್ಸಿನ ಅಂತರವೂ ಯಾವುದೇ ಕಾರಣಕ್ಕೂ ಅಡ್ಡಿಯಾಗೋದಿಲ್ಲ. ಅದ್ರಲ್ಲೂ ಇತ್ತೀಚಿನ ಕಾಲದಲ್ಲಿ ಪುರುಷರು ತಮಗಿಂತ ತುಂಬಾ ಕಡಿಮೆ ವಯಸ್ಸಿನ ಮಹಿಳೆಯರನ್ನು, ಮಹಿಳೆಯರು ತಮಗಿಂತ ತುಂಬಾ ಕಡಿಮೆ ವಯಸ್ಸಿನ ಪುರುಷರನ್ನು ಮದುವೆಯಾಗೋದು ಕಾಮನ್ ಆಗ್ಬಿಟ್ಟಿದೆ. ಅಷ್ಟಕ್ಕು ವಯಸ್ಸಾದ ಪುರುಷರು ಯಾಕೆ ನವ ತರುಣಿಯರನ್ನು ಇಷ್ಟ ಪಟ್ಟು ಮದುವೆಯಾಗ್ತಿದ್ದಾರೆ ಗೊತ್ತಾ? ಇದರ ಹಿಂದಿನ ಕಾರಣ ಏನು ಅನ್ನೋದನ್ನು ತಿಳಿಯೋಣ.

1. ಅವರು ಮಾರ್ಗದರ್ಶನ ನೀಡೋದಕ್ಕೆ ಇಷ್ಟ ಪಡುತ್ತಾರೆ

ಹುಡುಗಿ ನಮ್ಮ ವಯಸ್ಸಿನವಳೇ ಆದರೆ ಅಥವಾ ನಮಗಿಂತ ಕೊಂಚ ಚಿಕ್ಕವಳಾದರೆ ನಾವು ಹೇಳೋ ಎಲ್ಲಾ ಮಾತನ್ನು, ಮಾರ್ಗದರ್ಶನಗಳನ್ನು ಕೇಳೋದಕ್ಕೆ ಇಷ್ಟ ಪಡೋದಿಲ್ಲ. ಆದರೆ ದಂಪತಿಗಳ ಮಧ್ಯೆ ಹೆಚ್ಚು ವಯಸ್ಸಿನ ಅಂತರವಿದ್ದರೆ ಹುಡುಗಿ ಪ್ರತಿಯೊಂದು ವಿಚಾರವನ್ನು ಕೇಳಿ ತಿಳಿದುಕೊಳ್ಳೋದಕ್ಕೆ ಆಸಕ್ತಿ ತೋರುತ್ತಾಳೆ. ಹೀಗಾಗಿ ಇವರಿಗೆ ಮಾರ್ಗದರ್ಶನ ಮಾಡೋದಕ್ಕೆ ಇಷ್ಟ ಇರೋದ್ರಿಂದ ಜೋಡಿಗಳಿಬ್ಬರಿಗೆ ಹೊಂದಾಣಿಕೆ ಆಗುತ್ತದೆ.

Uncovering the Reasons Why Older Men Likes Younger Women in Kannada

2. ಸಮಸ್ಯೆಗಳಿಂದ ಹೊರಬಂದು ಖುಷಿಯಾಗಿರಲು ಇಷ್ಟ ಪಡುತ್ತಾರೆ

ಪುರುಷರು 40 ರಿಂದ 50 ವರ್ಷದೊಳಗಿನ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಯೌವ್ವನದಲ್ಲಿ ಇದ್ದ ಆ ಉಲ್ಲಾಸ, ಉತ್ಸಾಹ ಅವರಲ್ಲಿ ಇರೋದಿಲ್ಲ. ಯಾವಾಗಲೂ ಒಂದು ರೀತಿ ವ್ಯಥೆಯಲ್ಲೇ ಕಳೆಯುತ್ತಾರೆ.

ಆದರೆ ನವತರುಣಿಯನ್ನು ಮದುವೆಯಾದರೆ ಅವರಲ್ಲಿ ಇನ್ನೂ ಉತ್ಸಾಹ ಹಾಗೆಯೇ ಇರುತ್ತದೆ. ಹೊಸ ಹೊಸ ವಿಚಾರಗಳನ್ನು ಕಲಿಯೋದು, ಚಟುವಟಿಕೆಗಳಲ್ಲಿ ತೊಡಗಿಕೊಳ್ಳೋದ್ರಲ್ಲಿ ಅವರು ಆಸಕ್ತಿಯನ್ನು ತೋರುತ್ತಾರೆ. ಇಂತವರನ್ನು ಮದುವೆಯಾದ್ರೆ ವಯಸ್ಸಾದ ಪುರುಷರ ಬದುಕು ಕೂಡ ಕೊಂಚ ಬದಲಾಗುತ್ತದೆ. ಸ್ವಲ್ಪ ಆಕ್ಟೀವ್ ಆಗಿ ಇರುತ್ತಾರೆ.

3. ಕಮಿಟ್ಮೆಂಟ್ ಬಗ್ಗೆ ತಲೆಕೆಡಿಸಿ ಕೊಳ್ಳಬೇಕಾಗಿಲ್ಲ

ಪುರುಷರ ಲೆಕ್ಕಾಚಾರ ಹೇಗಿರುತ್ತೆ ಅಂದ್ರೆ ನವ ಯುವತಿಯರು ಲೈಫ್ ಎಂಜಾಯ್ ಮಾಡೋದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅವರು ಮಕ್ಕಳ ಬಗ್ಗೆ ಆಗಲಿ ಅಥವಾ ಇನ್ಯಾವುದೋ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಹೀಗಾಗಿ ಪುರುಷರಿಗೂ ಕೂಡ ಮಕ್ಕಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವೇ ಎದುರಾಗೋದಿಲ್ಲ. ಕೆಲವೊಂದು ಸಲ ನಮಗೆ ಇದೇ ಬೇಕು ಎಂದು ಕೇಳೋದು ಇಲ್ಲ. ಹೀಗಾಗಿ ಆರಾಮಾಗಿ ಇರಬಹುದು ಎಂದು ಕೊಳ್ಳುತ್ತಾರೆ.

4. ಪರಿಸ್ಥಿತಿಯನ್ನು ನಿಭಾಯಿಸೋದು ಗೊತ್ತಿರುತ್ತದೆ

ಪುರುಷರು ಈಗಾಗಲೇ ಒಂದು ಮದುವೆಯಾಗಿ ವಿಚ್ಛೇದನವನ್ನು ಪಡೆದುಕೊಂಡಿದ್ದು, ಎರಡನೇ ಮದುವೆಯಾಗೋ ಸಂದರ್ಭದಲ್ಲಿ ಅನಿವಾರ್ಯವಾಗಿ ಚಿಕ್ಕ ವಯಸ್ಸಿನ ಹುಡುಗಿಯನ್ನು ಮದುವೆಯಾಗುತ್ತಾರೆ. ಆದರೆ ಇಂತಹ ಮದುವೆಗಳಲ್ಲಿ ಹೆಚ್ಚಿನ ಮನಸ್ಥಾಪ ಉಂಟಾಗೋದಿಲ್ಲ. ಏಕೆಂದರೆ ಪುರುಷನಿಗೆ ಈಗಾಗಲೇ ಒಂದು ಮದುವೆಯಾಗಿ ಅನುಭವ ಇರೋದ್ರಿಂದ ಅವರೇ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಾರೆ. ಜಗಳ, ಮನಸ್ಥಾಪಗಳಾದಾಗ ಪರಿಹರಿಸೋದು ಹೇಗೆ ಅಂತಾನೂ ಗೊತ್ತಿರುತ್ತದೆ.

5. ಸಂಗಾತಿಯ ಮೇಲೆ ನಿಯಂತ್ರಣ ಹೇರಬಹುದು

ತಮ್ಮ ವಯಸ್ಸಿನವರನ್ನೇ ಮದುವೆಯಾದರೆ ಅಥವಾ ತಮಗಿಂತ ಸ್ವಲ್ಪ ವಯಸ್ಸಿನಲ್ಲಿ ಚಿಕ್ಕವರನ್ನು ಮದುವೆಯಾದರೆ ಪುರುಷರಿಗೆ ಅವರ ಮೇಲೆ ನಿಯಂತ್ರಣ ಸಾಧಿಸುವುದು ಕಷ್ಟ. ಆದರೆ ಹುಡುಗಿ ತುಂಬಾ ಚಿಕ್ಕವರಾದರೆ ಅವರೊಂದಿಗೆ ಸುಲಭವಾಗಿ ನಿಯಂತ್ರಣ ಸಾಧಿಸಬಹುದು. ಹಾಗೂ ಇಂತಹ ಸಂಬಂಧಗಳಲ್ಲಿ ಪುರುಷರೇ ಹೆಚ್ಚಿನ ಪ್ರಾಬಲ್ಯವನ್ನು ಮೆರೆಯುತ್ತಾರೆ.

6. ಮಕ್ಕಳು ಬೇಕಾಗಿರೋದಿಲ್ಲ

ಒಂದು ವೇಳೆ ಪುರುಷನಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದರೆ ಮರು ಮದುವೆ ಮಾಡಿಕೊಳ್ಳುವಾಗ ಆತ ಮಕ್ಕಳನ್ನು ಪಡೆಯೋದಕ್ಕೆ ಇಷ್ಟ ಪಡೋದಿಲ್ಲ. ಚಿಕ್ಕ ವಯಸ್ಸಿನ ಹುಡುಗಿಯರನ್ನು ಮದುವೆಯಾದರೆ ಅವರು ಮಕ್ಕಳು ಬೇಕೆಂದು ಬಯಸೋದಿಲ್ಲ. ಮದುವೆಯಾಗಿ ಆರಾಮಾಗಿ ಇದ್ದು ಬಿಡೋಣ ಎಂದುಕೊಳ್ಳುತ್ತಾರೆ. ಚಿಕ್ಕ ವಯಸ್ಸಿನ ಹುಡುಗಿಯರನ್ನು ಮದುವೆಯಾಗಲು ಇದು ಕೂಡ ಒದು ಕಾರಣವಾಗಿದೆ.

7. ಲೈಂಗಿಕ ಜೀವನ ಸುಖಕರವಾಗಿರುತ್ತದೆ

30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರನ್ನು ಮದುವೆಯಾದರೆ ಪುರುಷರ ಲೈಂಗಿಕ ಜೀವನ ಉತ್ತಮವಾಗಿರುತ್ತದೆ. ಏಕೆಂದರೆ ಅವರಿಗೆ ಲೈಗಿಂಕ ಕ್ರಿಯೆಯಲ್ಲಿ ಆಸಕ್ತಿ ಹೆಚ್ಚಾಗಿದ್ದು, ಇದರಿಂದ ಪುರುಷರು ಸಂತೃಪ್ತರಾಗಲು ಸಾಧ್ಯವಾಗುತ್ತದೆ.

ನವ ತರುಣೆಯ ಮೇಲಿನ ಪ್ರೀತಿಯ ಕಾರಣಕ್ಕೋ ಅಥವಾ ಇನ್ಯಾವುದೋ ಬೇರೆ ಕಾರಣಕ್ಕೆ ವಯಸ್ಸಾದ ಪುರುಷರು ನವ ತರುಣೆಯರ ಮೇಲೆ ಹೆಚ್ಚಿನ ಆಸಕ್ತಿಯನ್ನು ತೋರುತ್ತಿದ್ದಾರೆ. ಅದೇನೇ ಇರಲಿ ಇಲ್ಲಿ ವಯಸ್ಸು ಮುಖ್ಯವಲ್ಲ ಅವರು ಸಂಸಾರವನ್ನು ಹೇಗೆ ನಡೆಸುತ್ತಾರೆ ಅನ್ನೋದೇ ಮುಖ್ಯವಾಗುತ್ತದೆ.

English summary

Uncovering the Reasons Why Older Men Likes Younger Women in Kannada

Uncovering the Reasons Why Older Men Likes Younger Women.
Story first published: Saturday, June 10, 2023, 21:00 [IST]
X
Desktop Bottom Promotion