Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಇಂತಹ ಸ್ನೇಹಿತರಿದ್ದರೆ ನಿಮಗೆ ನೋವು ಕಾಡೋದೇ ಇಲ್ಲ!
ಒಬ್ಬ ಮನುಷ್ಯನಿಗೆ ಆತನ ಜೀವನದಲ್ಲಿ ಪೋಷಕರು ಎಷ್ಟು ಮುಖ್ಯವಾಗುತ್ತಾರೋ ಅದೇ ರೀತಿ ಒರ್ವ ಸ್ನೇಹಿತ ಕೂಡ ಅಷ್ಟೇ ಮುಖ್ಯವಾಗುತ್ತಾನೆ. ಆತ ಬೇರೊಬ್ಬ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದಾನೆ ಅನ್ನೋದನ್ನು ಬಿಟ್ಟರೆ ನಮ್ಮ ಒಡಹುಟ್ಟಿದವನಂತೆಯೇ ಇರುವ ಸ್ನೇಹಿತರು ಅನೇಕ ಜನರಿದ್ದಾರೆ. ಜೀವಕ್ಕೆ ಜೀವ ಕೊಡೋ ಸ್ನೇಹವನ್ನೂ ನಾವು ನೋಡಿರ್ತೀವಿ.
ಯಾರಿಗೆ ಸ್ನೇಹಿತರಿರುವುದಿಲ್ಲವೋ ಅವರಿಗೆ ಜೀವನದಲ್ಲಿ ಏನನ್ನೂ ಕಳೆದುಕೊಂಡ ನೋವು ಇದ್ದೇ ಇರುತ್ತದೆ. ಯಾವಾಗ ನಮ್ಮ ಬಾಳಿನಲ್ಲಿ ನಿಜವಾದ ಸ್ನೇಹಿತನಿರುತ್ತಾನೋ ಆಗ ನಮ್ಮ ಜೀವನದಲ್ಲಿಸಂತೋಷವೇ ತುಂಬಿರುತ್ತದೆ. ನಾವು ಖುಷಿಯಾಗಿರೋದಕ್ಕೆ ನಮ್ಮ ಜೀವನದಲ್ಲಿ ಈ ರೀತಿಯ ಸ್ನೇಹಿತರು ಇರಲೇಬೇಕಂತೆ. ಹಾಗಾದ್ರೆ ನಮ್ಮ ಸ್ನೇಹಿತರಲ್ಲಿ ಎಂತಹ ಗುಣಗಳಿರಬೇಕು ಅನ್ನೋದನ್ನು ತಿಳಿಯೋಣ.

1. ಆತ್ಮೀಯ ಸ್ನೇಹಿತ
ನಮಗೆ ತುಂಬಾ ಜನ ಸ್ನೇಹಿತರು ಇರಬಹುದು. ಆದರೆ ನಮ್ಮ ಬಾಳಿನಲ್ಲಿ ಒಬ್ಬರು ಆತ್ಮೀಯ ಸ್ನೇಹಿತರು ಅನ್ನೋರು ಇರಲೇಬೇಕು. ಅವರ ಜೊತೆಗೆ ನಾವು ಎಲ್ಲಾ ರಹಸ್ಯಗಳನ್ನು ಹಂಚಿಕೊಳ್ಳುವಂತಿರಬೇಕು. ಅವರು ನಮ್ಮನ್ನು ಯಾವುದೇ ಕಾರಣಕ್ಕೂ ಜಡ್ಜ್ ಮಾಡುವುದಿಲ್ಲ. ಸಂಕಷ್ಟದಲ್ಲಿ ನಮಗೆ ಹೆಗಲಾಗೋರು. ಅವರಿಗೆ ನಮ್ಮ ಮೇಲಿರುವ ಪ್ರೀತಿ ಯಾವತ್ತಿದ್ದರೂ ಬದಲಾಗೋದಿಲ್ಲ. ಇಂತಹ ಒಬ್ಬ ಸ್ನೇಹಿತ ಖಂಡಿತ ಬೇಕು.
2. ನಿಮ್ಮನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವವರು
ನಮಗೆ ಸಲಹೆ ನೀಡುತ್ತಾ ನಮ್ಮನ್ನು ಕೈ ಹಿಡಿದು ನಡೆಸುವ ಒರ್ವ ಸ್ನೇಹಿತ ನಮಗೆ ಖಂಡಿತ ಬೇಕು. ಇಂತಹ ಸ್ನೇಹಿತ ನಿಮ್ಮ ಎಲ್ಲಾ ಮಾತುಗಳನ್ನು ಕೇಳುತ್ತಾನೆ ಹಾಗೂ ನಿಮ್ಮನ್ನು ಸರಿದಾರಿಯಲ್ಲಿ ನಡೆಸುವುದನ್ನು ಆತ ಮರೆಯುವುದಿಲ್ಲ. ನಿಮಗೆ ಯಾವಾಗಲೂ ಆತ ಅತ್ಯುತ್ತಮ ಸಲಹೆಗಳನ್ನೇ ನೀಡುತ್ತಾನೆ.
ನಮಗೆ ಪ್ರೇರಣೆ ನೀಡುವ ಸ್ನೇಹಿತ ಒಬ್ಬ ನಮ್ಮ ಜೀವನದಲ್ಲಿ ಬೇಕೇ ಬೇಕು. ನಾನು ಪ್ರತಿಬಾರಿ ಆತನಲ್ಲಿ ಮಾತನಾಡಿದಾಗ ನಮ್ಮಲ್ಲಿ ಒಂದು ರೀತಿಯ ಧನಾತ್ಮಕ ಚಿಂತನೆ ಹೆಚ್ಚಾಗಬೇಕು. ಇಂತಹ ಒಬ್ಬ ಸ್ನೇಹಿತ ಇದ್ದರೆ ಬಾಳು ಸುಂದರವಾಗಿರುತ್ತದೆ.
3. ಹಾಸ್ಯ ಮಾಡುವ ಸ್ನೇಹಿತ
ಮನುಷ್ಯ ಎಂದ ಮೇಲೆ ಎಲ್ಲಾ ಸಮಯದಲ್ಲೂ ಗಂಭೀರವಾಗಿರೋದಕ್ಕೆ ಸಾಧ್ಯವಿಲ್ಲ. ಆತನ ಬಾಳಿನಲ್ಲಿ ಖುಷಿ, ಸಂತೋಷ, ನಗು ಖಂಡಿತ ಬೇಕೇ ಬೇಕು. ಆದರೆ ನಗು ಚೆಲ್ಲುವ ಸ್ನೇಹಿತ ಆತನ ಜೀವನದಲ್ಲಿ ಇದ್ದರೆ ಮಾತ್ರ ಆತನ ಖುಷಿಯಾಗಿ ಇರಬಹುದು. ಇಂತಹ ಸ್ನೇಹಿತ ಎಂತಹದ್ದೇ ನೋವಿನ ಸಮಯದಲ್ಲೂ ನಿಮ್ಮ ಮುಖದಲ್ಲಿ ನಗು ತರುವವನಾಗಿರುತ್ತಾನೆ. ಆತನ ಯಾವಾಗಲೂ ನಿಮ್ಮನ್ನು ಖುಷಿಯಾಗಿಡಲು ಪ್ರಯತ್ನಿಸುವ ಒರ್ವ ಸ್ನೇಹಿತನಾಗಿರುತ್ತಾನೆ.
4. ನಿಮ್ಮ ಮಾತುಗಳನ್ನು ಕೇಳುವ ಸ್ನೇಹಿತ
ಈ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ನೋವು, ಚಿಂತೆ, ದುಃಖ ಖಂಡಿತ ಇದ್ದೇ ಇರುತ್ತದೆ. ನಮ್ಮ ಕಷ್ಟಗಳೇ ನೂರಾರು ಇರುವಾಗ ನಾವು ಬೇರೆಯವರ ಕಷ್ಟಗಳನ್ನು ಕೇಳೋದಕ್ಕೆ ಸಿದ್ಧವಿರೋದಿಲ್ಲ. ಆದರೆ ಎಲ್ಲರ ಬಾಳಿನಲ್ಲಿ ನಮ್ಮ ಕಷ್ಟಗಳನ್ನು ಕೇಳುವ ಒಬ್ಬ ಸ್ನೇಹಿತ ಇರಬೇಕು. ಆತ ನಾವು ಹೇಳುವ ಎಲ್ಲಾ ಮಾತುಗಳನ್ನು ಕೇಳಬೇಕು ಹಾಗೂ ನಮ್ಮ ದುಃಖಕ್ಕೆ ಹೆಗಲಾಗುವವನಾಗಿರಬೇಕು.
5. ಒಬ್ಬ ಸಾಹಸಿ ಸ್ನೇಹಿತ
ಜೀವನ ಒಂದೇ ರೀತಿ ಸಾಗುತ್ತಿದ್ದರೆ ಮಜಾ ಅನ್ನಿಸೋದಿಲ್ಲ. ನಿಜವಾದ ಮಜಾ ಸಿಗಬೇಕೆಂದರೆ ನಾವು ಸಾಹಸಮಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ನಮಗೂ ಒರ್ವ ದೈರ್ಯಶಾಲಿ ಹಾಗೂ ಪ್ರವಾಸ ಮಾಡೋದ್ರಲ್ಲಿ ಆಸಕ್ತಿ ಇರೋ ಸ್ನೇಹಿತ ಬೇಕು. ಅವನ ಜೊತೆಗೆ ಹೋದರೆ ನಮಗೂ ಕೂಡ ಬೇರೆ ಬೇರೆ ಜಾಗಗಳ ಪರಿಚಯವಾಗುತ್ತದೆ. ಸಾಹಸಮಯ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬಹುದು. ಇದರಿಂದ ನಾವು ಹೊಸತನ್ನು ಕಲಿಯೋದಕ್ಕೂ ಸಹಾಯವಾಗುತ್ತದೆ.
6. ಪ್ರಾಮಾಣಿಕ ಸ್ನೇಹಿತ
ಈ ಪ್ರಪಂಚದಲ್ಲಿ ಸ್ನೇಹಿತರಿಗೆ ಬರವಿಲ್ಲ. ನಮ್ಮಲ್ಲಿ ಬೇಕಾದಷ್ಟು ದುಡ್ಡಿದ್ದರೆ ಎಷ್ಟು ಜನ ಬೇಕಾದರೂ ನಮ್ಮ ಜೊತೆಗೆ ಸ್ನೇಹ ಬೆಳೆಸಿಕೊಳ್ಳುತ್ತಾರೆ. ಇದು ಲಾಭದ ಉದ್ದೇಶದಿಂದ ಬೆಳೆಸಿಕೊಳ್ಳುವ ಸ್ನೇಹ. ಆದರೆ ಒಬ್ಬ ಪ್ರಾಮಾಣಿಕ ಸ್ನೇಹಿತ ನಮ್ಮ ಜೀವನದಲ್ಲಿ ಇರಬೇಕು. ಇಂತಹ ಸ್ನೇಹಿತ ನಿಮಗೆ ನಿಮ್ಮ ಕಾಲಿನಲ್ಲಿ ನಿಲ್ಲೋದಕ್ಕೆ ಸಹಾಯ ಮಾಡುತ್ತಾನೆ. ಇವರು ನಿಮ್ಮ ಸಾಧನೆಯಲ್ಲಿ ನಿಮ್ಮ ಹೆಗೆಲಿಗೆ ನಿಲ್ಲತ್ತಾರೆ. ಹೀಗಾಗಿ ಪ್ರಾಮಾಣಿಕ ಸ್ನೇಹಿತರನ್ನು ನಿಮ್ಮ ಜೀವನದಿಂದ ದೂರ ಮಾಡಿಕೊಳ್ಳೋದಕ್ಕೆ ಹೋಗಲೇಬೇಡಿ.
7. ಆಹಾರ ಪ್ರಿಯ
ಆಹಾರ ಪ್ರಿಯರು ವಿಧ ವಿಧವಾದ ಆಹಾರಗಳನ್ನು ಸೇವಿಸೋದಕ್ಕೆ ಇಷ್ಟ ಪಡುತ್ತಾರೆ. ಹೀಗಾಗಿ ನೀವು ಕೂಡ ಅವರ ಜೊತೆಯಲ್ಲಿ ಬೇರೆ ಬೇರೆ ವಿಧಧ ಖಾದ್ಯಗಳನ್ನು ಸವಿಯಬಹುದು. ಇದರಿಂದ ನಿಮ್ಮ ಟೇಸ್ಟ್ ಕೂಡ ಬದಲಾಗಬಹುದು. ಇನ್ನೂ ನಿಮ್ಮ ಸ್ನೇಹಿತನ ಜೊತೆಗೆ ಸೇರಿ ಬೇರೆ ಬೇರೆ ಸ್ಥಳಗಳನ್ನು ವೀಕ್ಷಣೆ ಮಾಡುವ ಅವಕಾಶ ಕೂಡ ನಿಮಗೆ ಸಿಗುತ್ತದೆ. ಹೀಗಾಗಿ ನಿಮ್ಮ ಬಾಳಿನಲ್ಲೂ ಈ ರೀತಿ ಒರ್ವ ಸ್ನೇಹಿತ ಇದ್ದರೆ ಚೆಂದ.
ಇಷ್ಟು ಸ್ನೇಹಿತರು ಪ್ರತಿಯೊಬ್ಬ ವ್ಯಕ್ತಿಯ ಬಾಳಿನಲ್ಲೂ ಇರಲೇಬೇಕು. ಆಗ ನಿಮ್ಮ ಬಾಳಿನಲ್ಲೂ ಖುಷಿ ಸಂತೋಷ ತುಂಬಿರುತ್ತದೆ.



Click it and Unblock the Notifications












