Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
Reasons for Break Up : ಗರ್ಲ್ ಫ್ರೆಂಡ್ ನ ನಡವಳಿಕೆ ಹೀಗಿದ್ದರೆ ಬ್ರೇಕ್ ಅಪ್ ಮಾಡ್ಕೊಳ್ಳೋದೇ ಬೆಸ್ಟ್!
ನಾವು ನಮ್ಮ ಗರ್ಲ್ ಫ್ರೆಂಡ್ ಅನ್ನು ತುಂಬಾನೇ ಪ್ರೀತಿಸ್ತೀವಿ. ಅವರ ಜೊತೆಗೆ ಭವಿಷ್ಯದ ಕನಸುಗಳನ್ನು ಕಾಣುತ್ತೇವೆ. ಹೆಚ್ಚಿನವರಂತೂ ಅವರನ್ನು ಪತ್ನಿಯೆಂದು ಸ್ವೀಕರಿಸಿರುತ್ತಾರೆ. ಅಷ್ಟೊಂದು ಆಳವಾಗಿ ಪ್ರೀತಿಯಲ್ಲಿ ಇದ್ದವರಿಗೆ ಏಕಾಏಕಿ ಆ ಪ್ರೀತಿ ಬೇಡ ಅನ್ನಿಸಿ ಬಿಡುತ್ತದೆ.
ಆ ಹುಡುಗಿಯ ಜೊತೆಗೆ ಬ್ರೇಕ್ ಅಪ್ ಮಾಡಿಕೊಳ್ಳೋದಕ್ಕೆ ನಿರ್ಧರಿಸುತ್ತಾರೆ. ಅಷ್ಟಕ್ಕು ಪ್ರೀತಿಸುತ್ತಿದ್ದ ಹುಡುಗಿಯ ಜೊತೆಗೆ ಏಕಾಏಕಿ ಬ್ರೇಕ್ ಅಪ್ ಮಾಡ್ಕೊಳ್ಬೇಕು ಅಂತ ಅನ್ನಿಸೋದು ಯಾಕೆ? ಈ ಲಕ್ಷಣಗಳು ನಿಮ್ಮ ಹುಡುಗಿಯಲ್ಲಿದ್ದರೆ ಬ್ರೇಕ್ ಮಾಡ್ಕೊಳ್ಳೋದೇ ಒಳ್ಳೆಯದು.

1. ನಿಮಗೆ ಅವರ ಹಳೆಯ ಪ್ರೀತಿಯ ವಿಚಾರವನ್ನು ಸ್ವೀಕರಿಸೋದಕ್ಕೆ ಸಾಧ್ಯವಿಲ್ಲದಿದ್ದಾಗ
ನಿಮ್ಮ ಹುಡುಗಿಯು ಹಿಂದೆ ಒಬ್ಬ ಹುಡುಗನನ್ನು ಪ್ರೀತಿ ಮಾಡುತ್ತಿದ್ದಳು. ಆದರೆ ಅವರಿಬ್ಬರು ಈಗ ಬೇರೆ ಬೇರೆ ಆಗಿದ್ದಾರೆ ಅನ್ನೋ ವಿಚಾರ ನಿಮಗೆ ಗೊತ್ತಿದ್ದೂ ನೀವು ಅವರನ್ನು ಪ್ರೀತಿಸುತ್ತಿರುತ್ತೀರಿ. ಆದರೆ ನಿಮ್ಮ ಹುಡುಗಿ ನಿಮಗೆ ಪ್ರಾಮಾಣಿಕವಾಗಿರೋದನ್ನು ಬಿಟ್ಟು ಹಳೆಯ ಹುಡುಗನ ಜೊತೆಗೆ ಸಂಪರ್ಕ ಇಟ್ಟುಕೊಳ್ಳೋದು, ನಿಮಗೆ ಗೊತ್ತಿಲ್ಲದ ಹಾಗೆ ಕದ್ದು ಮುಚ್ಚಿ ಹಳೆಯ ಹುಡುಗನನ್ನು ಭೇಟಿ ಮಾಡೋದನ್ನು ಮಾಡಿದ್ರೆ ಅವರಿಗೆ ಬುದ್ಧಿ ಹೇಳಿ. ಇಷ್ಟು ಹೇಳಿದ ಮೇಲೂ ಅವರು ನಿಮ್ಮ ಮಾತನ್ನು ಕೇಳದಿದ್ದರೆ ಅವರ ಜೊತೆಗೆ ಬ್ರೇಕ್ ಅಪ್ ಮಾಡಿಕೊಳ್ಳೋದೇ ಒಳ್ಳೆಯದು.
2. ಅವರ ಗುರಿಗಳು ನಿಮಗೆ ಇಷ್ಟ ಇಲ್ಲದಿದ್ದಾಗ
ಪ್ರತಿಯೊಬ್ಬರಿಗೂ ತಮ್ಮದೇ ಆದ ಆಸೆ, ಕನಸು, ಗುರಿಗಳು ಇದ್ದೇ ಇರುತ್ತದೆ. ನಾವೊಂದು ಗುರಿಯನ್ನು ಇಟ್ಟುಕೊಂಡ ಮೇಲೆ ಅದೇ ದಿಕ್ಕಿನಲ್ಲಿ ಸಾಗೋದಕ್ಕೆ ಇಷ್ಟ ಪಡುತ್ತೇವೆ. ನಿಮ್ಮ ಹುಡುಗಿಗೂ ಅದೇ ರೀತಿ ಒಂದು ಗುರಿ ಇರಬಹುದು. ಆದರೆ ಆಕೆಯ ಗುರಿ ನಿಮಗೆ ಇಷ್ಟ ಇರೋದಿಲ್ಲ. ಅದಕ್ಕೆ ನೀವು ಪ್ರೋತ್ಸಾಹವು ನೀಡೋದಿಲ್ಲ.
ಆದರೆ ನಿಮ್ಮ ಹುಡುಗಿ ಮಾತ್ರ ಅದೇ ಗುರಿಯನ್ನು ಬೆನ್ನತ್ತಿ ಹೋಗುತ್ತೇನೆ ಎಂದು ಖಡಾ ಖಂಡಿತವಾಗಿ ಹೇಳುತ್ತಾರೆ. ಈ ಸಂದರ್ಭದಲ್ಲಿ ನೀವು ಅವರನ್ನು ಬಿಟ್ಟು ಬಿಡೋದೇ ಒಳ್ಳೆಯದು. ಯಾಕಂದ್ರೆ ಭವಿಷ್ಯದಲ್ಲಿ ಇದೇ ವಿಚಾರಕ್ಕಾಗಿ ನಿಮ್ಮ ಮಧ್ಯೆ ಜಗಳ, ಮನಸ್ಥಾಪ ಕಾಣಿಸಿಕೊಳ್ಳಬಹುದು.
3. ಅವರು ನಿಮ್ಮ ನಿತ್ಯವು ನಿಂದಿಸುತ್ತಿದ್ದರೆ
ಅನೇಕ ಜನರಿಗೆ ಬೇರೆಯವರನ್ನು ನಿಂದಿಸುವ ಅಭ್ಯಾಸ ಇರುತ್ತದೆ. ಅದ್ರಲ್ಲೂ ತನ್ನ ಹುಡುಗ ಅಂತಾನೂ ನೋಡದೇ ಕೆಲ ಹುಡುಗಿಯರು ಅವರನ್ನು ನಿಂದಿಸುತ್ತಾರೆ. ನಿಮ್ಮ ಸಂಭಳ ಕಡಿಮೆ ಇದ್ದು, ಅವರ ಸಂಭಳ ಹೆಚ್ಚಿದ್ದರೆ ಪದೇ ಪದೇ ಈ ವಿಚಾರವನ್ನು ಹೇಳುತ್ತಾ ನಿಮಗೆ ನೋವು ಮಾಡುತ್ತಾರೆ.
ಇನ್ನೂ ನಿಮಗಿಂತ ಹುಡುಗಿ ಕಡೆಯವರು ಶ್ರೀಮಂತರಾಗಿದ್ದರೆ ಈ ವಿಚಾರವನ್ನು ಹೇಳುತ್ತಾ, ಭವಿಷ್ಯದಲ್ಲಿ ನಿನ್ನ ಜೊತೆ ನನಗೆ ಬದುಕೋದಕ್ಕೆ ಕಷ್ಟ ಆಗಬಹುದು ಎಂದು ಪದೇ ಪದೇ ಹೇಳುತ್ತಾರೆ. ಈ ಗುಣಗಳು ನಿಮ್ಮ ಹುಡುಗಿಗೂ ಇದ್ದರೆ ಅವರನ್ನು ಬಿಟ್ಟು ಬಿಡೋದೇ ಒಳ್ಳೆಯದು. ಯಾಕಂದ್ರೆ ಇಂತವರ ಜೊತೆಗೆ ಬದುಕು ನಡೆಸೋದು ಕಷ್ಟ.
4. ಹುಡುಗಿಗೆ ದುಶ್ಚಟಗಳು ಇದ್ದಾಗ
ಮನುಷ್ಯನಿಗೆ ಒಂದಲ್ಲ ಒಂದು ದುಶ್ಚಟಗಳು ಇರುತ್ತದೆ. ಹಾಗಂತ ದುಶ್ಚಟಗಳು ಇದ್ದ ತಕ್ಷಣ ಆತ ಕೆಟ್ಟವನು ಅಂತ ಹೇಳೋದಿಕ್ಕೆ ಆಗೋದಿಲ್ಲ. ಆದರೆ ದುಶ್ಚಟಗಳು ಅತಿಯಾಗಬಾರದು ಅಷ್ಟೇ. ಒಂದು ವೇಳೆ ನಿಮ್ಮ ಹುಡುಗಿಗೂ ಕೂಡ ದುಶ್ಚಟಗಳು ಇದೆ ಎಂದಿಟ್ಟುಕೊಳ್ಳಿ.
ಸಿಗರೇಟ್, ಮದ್ಯಪಾನ ಅಥವಾ ಡ್ರಗ್ಸ್ ಸೇವನೆಯನ್ನು ಅವರು ಅತಿಯಾಗಿ ಮಾಡುತ್ತಿದ್ದರೆ, ಆದಷ್ಟು ಅವರನ್ನು ಈ ಚಟಗಳಿಂದ ಹೊರ ತರಲು ಪ್ರಯತ್ನಿಸಿ. ಆದರೂ ಕೂಡ ಅವರು ನಿಮ್ಮ ಮಾತನ್ನು ಕೇಳದೇ ಅವರ ದುಶ್ಚಟದ ಅಭ್ಯಾಸವನ್ನು ಮುಂದುವರಿಸಿದರೆ ಅವರ ಜೊತೆಗೆ ಬ್ರೇಕ್ ಅಪ್ ಮಾಡಿಕೊಳ್ಖೋದೇ ಉತ್ತಮ.
5. ನಿಮ್ಮ ಮಾತುಗಳಿಗೆ ಬೆಲೆ ಕೊಡದಿದ್ದಾಗ
ಒಂದು ಹುಡುಗ-ಹುಡುಗಿ ಸಂಬಂಧದಲ್ಲಿ ಇದ್ದಾರೆ ಎಂದಾಕ್ಷಣ ಅವರಿಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿರಬೇಕು. ಅಷ್ಟೇ ಅಲ್ಲ, ಒಬ್ಬರ ಭಾವನೆಗಳಿಗೆ ಮತ್ತೊಬ್ಬರು ಬೆಲೆ ಕೊಡಲೇಬೇಕು. ಪರಸ್ಪರ ನಿರ್ಧಾರಗಳನ್ನು ಗೌರವಿಸಬೇಕು. ಹಾಗೂ ಅವರ ಮಾತುಗಳಿಗೂ ಬೆಲೆ ಕೊಡಬೇಕು. ಒಂದು ವೇಳೆ ನಿಮ್ಮ ಸಂಬಂಧದಲ್ಲಿ ನಿಮ್ಮ ಹುಡುಗಿ ನಿಮ್ಮ ಮಾತುಗಳಿಗೆ ಬೆಲೆ ಕೊಡದೇ ಅವರ ಮಾಡಿದ್ದೇ ಸರಿ ಎನ್ನುವ ರೀತಿ ಆಡುತ್ತಿದ್ದರೆ, ಅಂತಹ ಸಂಬಂಧ ಖಂಡಿತ ಬೇಡ. ಆ ಹುಡುಗಿಯ ಜೊತೆಗೆ ಸಂಬಂಧ ಮುರಿದುಕೊಳ್ಳೋದೇ ಉತ್ತಮ.
6. ನಿಮಗೆ ಬೇರೆ ಹುಡುಗಿಯ ಮೇಲೆ ಮನಸ್ಸಾದಾಗ
ನೀವು ಒಬ್ಬರ ಜೊತೆಗೆ ಪ್ರೀತಿಯಲ್ಲಿ ಇರುತ್ತೀರಿ. ಕೆಲವು ವರ್ಷಗಳಿಂದ ಅವರನ್ನು ಪ್ರೀತಿ ಮಾಡುತ್ತಿರುತ್ತೀರಿ. ಆದರೆ ನಿಮಗೆ ಅವರ ಜೊತೆಗೆ ಗಟ್ಟಿಯಾದ ಬಾಂಧವ್ಯ ಬೆಳೆದಿರೋದಿಲ್ಲ. ಆ ಹುಡುಗಿಯೂ ಕೂಡ ನಿಮ್ಮ ಬಗ್ಗೆ ಹೆಚ್ಚಿನ ಆಸಕ್ತಿಯಾಗಲಿ, ಕಾಳಜಿಯಾಗಲಿ ತೋರಿಸೋದಿಲ್ಲ. ಇಂತಹ ಸಂದರ್ಭದಲ್ಲಿ ನಿಮಗೆ ಬೇರೆ ಯಾವುದಾದರೂ ಹುಡುಗಿಯ ಮೇಲೆ ನಿಜವಾಗಿಯೂ ಪ್ರೀತಿಯಾಗಬಹುದು. ನಿಮ್ಮ ಮನಸ್ಸು ಆ ಹುಡುಗಿತ್ತ ವಾಲಬಹುದು. ಇಂತಹ ಸಂದರ್ಭದಲ್ಲಿ ನೀವು ಈಗ ಸಂಬಂಧದಲ್ಲಿ ಇರುವ ಹುಡುಗಿಯ ಜೊತೆಗೆ ಬ್ರೇಕ್ ಅಪ್ ಮಾಡಿಕೊಳ್ಳೋದೇ ಉತ್ತಮ.
ಈ ಎಲ್ಲಾ ಲಕ್ಷಣ ನಿಮ್ಮ ಹುಡುಗಿಯಲ್ಲಿದ್ದರೆ ಅವರ ಜೊತೆಗೆ ಸಂಬಂಧವನ್ನು ಮುರಿದುಕೊಳ್ಳೋದೇ ಉತ್ತಮ. ಯಾಕಂದ್ರೆ ಎಲ್ಲಾ ವಿಚಾರ ಗೊತ್ತಿದ್ದೂ ನೀವು ಮುರ್ಖರಂತೆ ಇದ್ದರೆ ಭವಿಷ್ಯದಲ್ಲಿ ನಿಮ್ಮ ದಾಂಪತ್ಯದಲ್ಲಿ ಕಳಹಗಳಾಗೋದು ಖಂಡಿತ.



Click it and Unblock the Notifications












