Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಗಂಡ-ಹೆಂಡತಿ ವಿಚ್ಛೇದನಕ್ಕೆ ಕಾರಣವಾಗಿದ್ದು ಟೂತ್ ಪೇಸ್ಟ್..!!
ವಿಶ್ವದಲ್ಲಿ ಯಾವೆಲ್ಲಾ ವಿಚಾರಕ್ಕೆ ವಿಚ್ಛೇದನ ಪಡೆಯುತ್ತಾರೆ ಅನ್ನೋದು ಸಹ ಈಗ ಕುತೂಹಲ ಮೂಡಿಸುತ್ತೆ. ಚಿತ್ರ ವಿಚಿತ್ರ ಕಾರಣಗಳಿಗೆ ಗಂಡು ಹೆಣ್ಣು ಬೇರೆ ಬೇರೆಯಾಗಿರುವ ಉದಾಹರಣೆಗಳಿವೆ. ಹಿಂದೆಲ್ಲಾ ವರದಕ್ಷಿಣೆ ಕಾರಣಕ್ಕೆ ವಿಚ್ಛೇದನ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಈಗ ವಿಚಿತ್ರ ಕಾರಣಗಳಿಗೆ ವಿಚ್ಛೇದನ ಪಡೆಯುತ್ತಾರೆ.
ಈಗ ನಡೆದಿರುವ ಪ್ರಕರಣ ಸಹ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ವ್ಯಕ್ತಿ ಒಬ್ಬ ತನ್ನ ಅತ್ತೆ ತನ್ನ ಟೂತ್‌ಪೇಸ್ಟ್ ಅನ್ನು ಬಳಸಿದ್ದರಿಂದ ಪತ್ನಿಗೆ ವಿಚ್ಛೇದನ ನೀಡಿರುವ ವಿಚತ್ರ ಘಟನೆಯೊಂದು ನಡೆದಿದೆ. ಇಟಲಿಯ ವೆನಿಸ್‌ನಲ್ಲಿ ಈ ವಿಚಿತ್ರ ಪ್ರಕರಣ ವರದಿಯಾಗಿದೆ. ರಜೆಯಲ್ಲಿ ತವರು ಮನೆಗೆ ಇಡೀ ಕುಟುಂಬ ಪ್ರವಾಸ ಮಾಡಿತ್ತು. ಆತ ತನ್ನೊಂದಿಗೆ ಎಲ್ಲಾ ವಸ್ತುಗಳ ತೆಗೆದುಕೊಂಡು ಹೋಗಿದ್ದ.

38 ವರ್ಷದ ಪತಿ ಆತನ ಪತ್ನಿ ಮನೆಯಲ್ಲಿ ಇಂತಹ ಘಟನೆಗೆ ಸಾಕ್ಷಿಯಾಗಿದ್ದಾನೆ. ಪತ್ನಿಯ ತಾಯಿ ಆತನನ್ನು ಕೇಳದೆ ಟೂಥ್ ಪೇಸ್ಟ್ ಬಳಸಿದ್ದಕ್ಕೆ ಪತ್ನಿಗೆ ವಿಚ್ಛೇನೆ ನೀಡಿದ್ದಾನೆ. ಆತ ತನ್ನೊಂದಿಗೆ ಪೇಸ್ಟ್, ಬ್ರಷ್, ಟವೆಲ್ ಹೀಗೆ ಎಲ್ಲಾ ವಸ್ತುಗಳನ್ನು ಪತ್ನಿ ತಾಯಿ ಮನೆಗೆ ತೆಗೆದುಕೊಂಡು ಹೋಗಿದ್ದ ಆದರೆ ಅತ್ತೆ ತನ್ನ ಟೂತ್ ಪೇಸ್ಟ್ ಬಳಸಿದ್ದೇ ಇಬ್ಬರ ವಿಚ್ಛೇದನಕ್ಕೆ ಕಾರಣವಾಗಿದೆ.
ಆತನಿಗೆ 5 ವರ್ಷದ ಮಗಳು ಸಹ ಇದ್ದಾಳೆ. ಅತ್ತೆಯ ಮನೆಯಲ್ಲಿ ಬೆಳಗ್ಗೆ ಆತನ ಪೇಸ್ಟ್ ಹುಡುಕಾಡಿದಾಗ ಕಾಣದಾಗಿತ್ತು, ಈ ವೇಳೆ ಅತ್ತೆ ಬಂದು ತಾನು ಬಳಸಿರುವುದಾಗಿ ಹೇಳಿದ್ದಾಳೆ. ಈ ವೇಳೆ ಏನು ಮಾತನಾಡದ ಆತ ನಿಗದಿತ ದಿನಕ್ಕಿಂತ ಮುನ್ನವೇ ಅತ್ತೆ ಮನೆಯಿಂದ ಮರಳಲು ಮುಂದಾಗಿದ್ದಾನೆ. ನಂತರ ಮನೆಗೆ ಬಂದವನೇ ಪತ್ನಿ ಜತೆ ಗಲಾಟೆ ಮಾಡಿದ್ದ ಆತ ವಿಚ್ಛೇದನ ನೀಡಿದ್ದಾನೆ.
ಇಷ್ಟೇ ಅಲ್ಲ ಅತ್ತೆ ಆಕೆಯ ಮನೆಯಲ್ಲಿ ಪತ್ನಿಯೊಂದಿಗೆ ತನ್ನ ರೂಮು ಹಂಚಿಕೊಂಡಿದ್ದಳು, ಆಕ ತನ್ನ ಪತ್ನಿಯೊಂದಿಗೆ ಮಲಗಿದ್ದಳು ಇದರಿಂದ ಪತಿ ಕೋಪಗೊಂಡಿದೆ. ಆತ ಎಲ್ಲರಿಗೂ ಪ್ರತ್ಯೇಕ ಕೊಠಡಿ ಬೇಕು ಎಂದು ವಾದ ಮಾಡಿದ್ದ. ಆದರೆ ಚಿಕ್ಕ ಮನೆಯಾಗಿದ್ದರಿಂದ ಇದು ಸಾಧ್ಯವಾಗಿರಲಿಲ್ಲ. ಇದಲ್ಲದೆ ಅತ್ತೆ ಸ್ವಚ್ಛತೆ ಕಾಪಾಡಿಕೊಳ್ಳುತ್ತಿಲ್ಲ. ಆಕೆ ಯಾವಾಗಲು ತನ್ನ ವಸ್ತುಗಳ ಬಳಸುತ್ತಾಳೆ. ಹಲ್ಲುಜ್ಜುವ ಬ್ರಷ್‌ಗೆ ತಾಕಿಸಿಕೊಂಡು ಪೇಸ್ಟ್ ಹಾಕುವುದು, ಟವೆಲ್ ಬಳಸುವುದು ಮಾಡುವುದು ನನಗೆ ಇಷ್ಟವಾಗಲಿಲ್ಲ ಎಂದು ಆತ ಹೇಳಿದ್ದಾನೆ.
ಸದ್ಯ ಈ ಪ್ರಕರಣ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿದೆ. ಒಂದು ಟೂತ್ ಪೇಸ್ಟ್ ಇಬ್ಬರ ವಿಚ್ಛೇದನಕ್ಕೆ ಕಾರಣವಾಗುತ್ತಾ ಎಂದು ಎಲ್ಲರು ಅಚ್ಚರಿ ಹೊರಹಾಕಿದ್ದಾರೆ. ಜೊತೆಗೆ ತಮಾಷೆಯ ಕೆಮೆಂಟ್‌ಗಳು ಹರಿದಾಡುತ್ತಿವೆ. ಟೂತ್ ಪೇಸ್ಟ್ ಬಳಕೆದಾರರು ಎಚ್ಚರ ವಹಿಸಿ ಇನ್ನುಮುಂದೆ ನಿಮ್ಮ ನಿಮ್ಮ ವಸ್ತುಗಳಿಗೆ ನೀವೆ ಜವಾಬ್ದಾರರಾಗಿ ಎಂಬ ಕಮೆಂಟ್‌ಗಳು ಹರಿದಾಡಿವೆ.
ಪೇಸ್ಟ್ ಬಳಸಿದರೆ ವಿಚ್ಛೇದನ ಸಿಗೋದಾದ್ರೆ ಪೇಸ್ಟ್ ಬಳಕೆ ನಿಲ್ಲಿಸೋದು ಉತ್ತಮ. ನಿಮ್ಮ ಪೇಸ್ಟ್ ಜಾಗರುಕತೆಯಿಂದ ಬಳಸಿ ಎನ್ನುತ್ತಿದ್ದಾರೆ



Click it and Unblock the Notifications
