Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಲಕ್ಷಣಗಳು ನಿಮ್ಮ ಸಂಗಾತಿಯಲ್ಲಿದ್ಯಾ? ಹಾಗಾದ್ರೆ ಖಂಡಿತ ಅವರು ನಿಮ್ಮನ್ನು ತುಳಿಯುತ್ತಿದ್ದಾರೆ ಎಂದರ್ಥ !
ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವುದೇ ದಾಂಪತ್ಯ. ಈ ದಾಂಪತ್ಯದಲ್ಲಿ ಯಾರು ಕೂಡ ಮೇಲೂ ಹಾಗೂ ಕೀಳು ಎಂಬ ಭಾವನೆ ಬರಲೇಬಾರದು. ಕೆಲವೊಂದು ಸಲ ದಾಂಪತ್ಯದಲ್ಲಿ ಒಬ್ಬರು ಪ್ರಾಬಲ್ಯವನ್ನು ಮೆರೆಯುತ್ತಾರೆ. ಕೆಲವೊಂದು ಸಲ ಅವರು ನಮ್ಮ ಮೇಲೆ ಪ್ರಾಬಲ್ಯವನ್ನು ಮೆರೆಯುತ್ತಿದ್ದಾರೆ ಅನ್ನೋದು ಗೊತ್ತೇ ಆಗುವುದಿಲ್ಲ. ಅಷ್ಟಕ್ಕು ನಿಮ್ಮ ಸಂಗಾತಿ ನಿಮ್ಮನ್ನು ಭಾವನಾತ್ಮಕವಾಗಿ ನಿಂದಿಸುತ್ತಿದ್ದಾರ? ನಿಮ್ಮನ್ನು ತುಳಿಯುತ್ತಿದ್ದಾರಾ? ಹಾಗಾದ್ರೆ ಅದರ ಲಕ್ಷಣಗಳು ಯಾವುದು ಅನ್ನೋದನ್ನು ತಿಳಿಯೋಣ.
1. ಸಂಗಾತಿ ನಿಮ್ಮ ಭಾವನೆಗಳನ್ನು ನಂಬೋದಿಲ್ಲ
ನಂಬಿಕೆಯು ಸಂಬಂಧದ ಒಂದು ಗಟ್ಟಿಯಾದ ಅಡಿಪಾಯ ಇದ್ದ ಹಾಗೆ. ಆದರೆ ನಿಮ್ಮ ಸಂಗಾತಿ ನಿಮ್ಮನ್ನು ನಿಂದಿಸುವವನಾದರೇ ಅವನು ನಿಮ್ಮ ಯಾವುದೇ ಭಾವನೆಗಳಿಗೆ ಬೆಲೆ ಕೊಡೋದಿಲ್ಲ. ಬದಲಾಗಿ ನಿಮ್ಮ ಭಾವನೆಗಳನ್ನು ಅವಮಾನಿಸುತ್ತಾನೆ. ಸಂಬಂಧದಲ್ಲಿ ನಂಬಿಕೆಯ ಕೊರತೆಯಿಂದಾಗಿ ನೀವು ಭಾವನಾತ್ಮಕವಾಗಿ ನೋವಿನಲ್ಲಿದ್ದಾಗ ಸಂಗಾತಿ ನಿಮ್ಮನ್ನು ಸಮಾಧಾನ ಪಡಿಸುವ ಬದಲು ನಿಮಗೆ ದೈಹಿಕವಾಗಿ ಹಾನಿ ಮಾಡುತ್ತಾರೆ.

2. ನಿಮ್ಮ ಮೇಲೆ ಹೊಟ್ಟೆಕಿಚ್ಚು ಪಡುತ್ತಾರೆ
ನಿಮಗೆ ವಿರುದ್ಧ ಲಿಂಗದ ಸ್ನೇಹಿತರಿದ್ದರೆ ಅವರ ಜೊತೆಗೆ ನೀವು ಮಾತನಾಡುವುದು, ಜೊತೆಗೆ ಓಡಾಡುವುದು, ಅವರನ್ನು ಅಪ್ಪಿಕೊಳ್ಳೋದನ್ನು ಮಾಡಿದರೆ ನಿಮ್ಮ ಸಂಗಾತಿ ಅದನ್ನು ಸಹಿಸೋದಿಲ್ಲ. ಅವರು ನಿಮ್ಮ ಮೇಲೆ ಹೊಟ್ಟೆ ಕಿಚ್ಚು ಪಡಿತ್ತಾರೆ. ಇದೇ ಕಾರಣಕ್ಕೆ ಪ್ರತಿನಿತ್ಯ ಮನೆಯಲ್ಲಿ ಜಗಳವಾಗುತ್ತೆ. ಸುಖಾ ಸುಮ್ಮನೇ ಪತಿಯು ನಿಮ್ಮನ್ನು ನಿಂದಿಸುತ್ತಾರೆ. ನಿಮ್ಮ ಭಾವನೆಗಳು ಅವರಿಗೆ ಅರ್ಥವಾಗದೇ ಇರೋ ರೀತಿಯಲ್ಲಿ ನಡೆದುಕೊಳ್ಳುತ್ತಾರೆ.
3. ಪ್ರತಿ ಸಾರಿ ನಿಮ್ಮನ್ನು ಟೀಕಿಸುವುದು
ಟೀಕಿಸುವುದು ನಿಮ್ಮ ಸಂಗಾತಿಯ ಮತ್ತೊಂದು ಗುಣವಾಗಿರುತ್ತದೆ. ನೀವು ನಿಂತರೂ, ಕೂತರೂ, ನಡೆದಾಡಿದರೂ, ಯಾವುದೇ ಬಟ್ಟೆ ಧರಿಸಲಿ, ನಿಮ್ಮ ಕೆಲಸಕ್ಕೂ ಹೀಗೆ ಪ್ರತಿ ಹೆಜ್ಜೆ ಹೆಜ್ಜೆಗೂ ನಿಮ್ಮನ್ನು ಟೀಕಿಸೋದನ್ನು ಅವರು ನಿಲ್ಲಿಸೋದಿಲ್ಲ. ನೀವು ಏನೇ ಮಾಡಿದರೂ ಅದಕ್ಕೆ ಅವರು ಕೊಂಕು ನುಡಿಯದೇ ಇರೋದಿಲ್ಲ. ಇನ್ನೂ ನೀವೇನಾದರೂ ಅವರ ತಪ್ಪನ್ನು ತಿದ್ದೋದಕ್ಕೆ ಹೋದರೆ ಖಂಡಿತ ಅವರು ಅದನ್ನು ಸ್ವೀಕರಿಸೋದಕ್ಕೆ ಸಿದ್ಧವಿರೋದಿಲ್ಲ.
4. ಕೆಟ್ಟ ಮಾತುಗಳಿಂದ ಬೈಯುವುದು
ದಾಂಪತ್ಯದಲ್ಲಿ ಜಗಳಗಳಾಗೋದು ಸಹಜ. ಇಂತಹ ಸಂದರ್ಭದಲ್ಲಿ ಅನೇಕ ಜನ ಏನು ಮಾಡುತ್ತಾರೆ ಎಂದರೆ ಒಬ್ಬರಿಗೊಬ್ಬರು ಮಾತು ಬಿಡುತ್ತಾರೆ. ಹಾಗೇ ನೋಡೋದಕ್ಕೆ ಹೋದರೆ ಮಾತು ಬಿಡೋದು ಒಂದು ರೀತಿಯಲ್ಲಿ ಒಳ್ಳೆಯದೇ. ಕೆಲವೊಂದು ಸಲ ಏನಾಗುತ್ತೆ ಅಂದರೆ ಜಗಳವಾದಾಗ ಪತಿ ಅಥವಾ ಪತ್ನಿ ತನ್ನ ಸಂಗಾತಿಗೆ ಹಿಗ್ಗಾ-ಮುಗ್ಗಾ ಬೈಯುತ್ತಾರೆ. ಅದೂ ಕೂಡ ಕೆಟ್ಟ ಪದಗಳನ್ನೇ ಬಳಸಿ ಬೈಯುತ್ತಾರೆ. ಇದು ಸಂಬಂಧಕ್ಕೆ ಶೋಭೆ ತರೋದಿಲ್ಲ.
5. ಆರ್ಥಿಕವಾಗಿ ತುಳಿಯುತ್ತಾರೆ
ಪತಿ-ಪತ್ನಿ ಇಬ್ಬರೂ ದುಡಿದರೆ ದಾಂಪತ್ಯವನ್ನು ಚೆನ್ನಾಗಿ ಸಾಗಿಸಬಹುದು. ಆದರೆ ಯಾವಾಗ ನಿಮ್ಮ ಸಂಗಾತಿಗೆ ನಿಮ್ಮನ್ನು ಕಂಡರೆ ಆಗುವುದಿಲ್ಲವೋ ಆಗ ಅವರು ನಿಮ್ಮನ್ನು ಆರ್ಥಿಕವಾಗಿ ತುಳಿಯೋದಕ್ಕೆ ಪ್ರಯತ್ನಿಸುತ್ತಾರೆ ಅವರು ದುಡಿಯುತ್ತಿದ್ದರೂ ಕೂಡ ಮನೆಯ ಎಲ್ಲಾ ಖರ್ಚು- ವೆಚ್ಚಗಳನ್ನು ನಿಮ್ಮ ಮೇಲೆ ಹಾಕಿ ನಿಮ್ಮನ್ನು ದಿವಾಳಿಯಾಗಿಸಲು ಪ್ರಯತ್ನಿಸುತ್ತಾರೆ.
ಇನ್ನೊಂದು ಪ್ರಕರಣದಲ್ಲಿ ಪತಿ ದುಡಿಯುತ್ತಿದ್ದು, ಪತ್ನಿ ಏನಾದರೂ ದುಡಿಯುತ್ತಿಲ್ಲ ಎಂದಾದರೆ ಆಕೆ ಪತಿಯ ಡೆಬಿಟ್ ಹಾಗೂ ಕ್ರೇಡಿಟ್ ಕಾರ್ಡ್‌ಗಳನ್ನು ಬಳಸಿ ದುಂದು ವೆಚ್ಚ ಮಾಡುತ್ತಾಳೆ. ಪತಿಯ ಬಗ್ಗೆ ಒಂಚೂರು ಪಾಪ- ಪುಣ್ಯ ತೋರುವುದಿಲ್ಲ. ಆಕೆಗೆ ಹೇಗಾದರೂ ಮಾಡಿ ಆತನನನ್ನು ಕೆಳಗೆ ಹಾಕುವ ಉದ್ದೇಶ ಮಾತ್ರ ಇರುತ್ತದೆ.
6. ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ
ನಿಮ್ಮ ಸಂಗಾತಿಗೆ ನಿಮ್ಮನ್ನು ಕಂಡರೆ ಆಗೋದಿಲ್ಲ. ಪ್ರತಿ ನಿತ್ಯ ನಿಮ್ಮನ್ನು ನಿಂದಿಸಿ, ನಿಮ್ಮ ಮೇಲೆ ಧ್ವೇಷ ಕಾರುತ್ತಿರುತ್ತಾರೆ. ಆದರೆ ಯಾವಾಗ ಅವರಿಗೆ ಲೈಂಗಿಕ ಆಸಕ್ತಿ ಇರುತ್ತದೆಯೋ ಆಗ ನೀವು ಅವರಿಗೆ ಸ್ಪಂಧಿಸುವಂತೆ ನಿಮ್ಮ ಮೇಲೆ ಒತ್ತಡ ಹೇರುತ್ತಾರೆ. ಒಂದು ವೇಳೆ ನಿಮ್ಮ ಇಷ್ಟವಿಲ್ಲದಿದ್ದರೂ ಹೆದರಿ, ಗದರಿಸಿ ಬಲವಂತ ಮಾಡುತ್ತಾರೆ.
7. ನಿಮ್ಮ ಖಾಸಗಿತನಕ್ಕೆ ಅವರು ಅವಕಾಶ ನೀಡುವುದಿಲ್ಲ
ಪ್ರತಿಯೊಬ್ಬರಿಗೂ ಖಾಸಗಿತನ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಆದರೆ ಪತಿ, ಪತ್ನಿಯಾದವರೂ ಯಾವ ವಿಚಾರದಲ್ಲಿ ಮುಚ್ಚು ಮರೆ ಮಾಡೋದಿಲ್ಲ. ಎಲ್ಲಾ ವಿಚಾರಗಳನ್ನು ಇಬ್ಬರೂ ಹಂಚಿಕೊಂಡಿರುತ್ತಾರೆ. ಆದರೆ ನಿಮ್ಮಬ್ಬರ ಸಂಬಂಧ ಅಷ್ಟಾಗಿ ಸರಿಯಿಲ್ಲದಾಗಲೂ ನಿಮ್ಮ ಸಂಗಾತಿ ನಿಮ್ಮ ಎಲ್ಲಾ ಪಾಸ್ ವರ್ಡ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಸೋಶಿಯಲ್ ಮೀಡಿಯಾ, ಡೆಬಿಟ್, ಕ್ರೆಡಿಟ್ ಕಾರ್ಡ್ ಎಲ್ಲದರ ಬಗ್ಗೆಯೂ ಒಂದು ಕಣ್ಣಿಟ್ಟಿರುತ್ತಾರೆ. ಆದರೆ ಅವರ ಖಾಸಗಿ ವಿಚಾರದ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡೋದಿಲ್ಲ.
ದಾಂಪತ್ಯದಲ್ಲಿ ಆಸಕ್ತಿ ಕಳೆದುಕೊಂಡಾಗ ಅಥವಾ ಒಬ್ಬರ ಮೇಲೆ ಮತ್ತೊಬ್ಬರಿಗೆ ಪ್ರೀತಿ ಇಲ್ಲದ ಸಂದರ್ಭದಲ್ಲಿ ಈ ರೀತಿ ಆಗೋದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ದಾಂಪತ್ಯವನ್ನು ಸರಿಪಡಿಸೋದಕ್ಕೆ ಪ್ರಯತ್ನಿಸಿ. ಆದರೆ ಎಷ್ಟು ಸರಿ ಮಾಡಿದರೂ ನಿಮ್ಮ ಸಂಗಾತಿ ಸುಧಾರಿಸೋದಿಲ್ಲ ಅಂತಾದರೆ ಅವರನ್ನು ಬಿಟ್ಟು ಬಿಡೋದೇ ಒಳ್ಳೆಯದು.



Click it and Unblock the Notifications

