Latest Updates
-
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು
ದಂಪತಿಗಳ ಮಧ್ಯೆ ದುಡ್ಡಿನ ವಿಚಾರಕ್ಕೆ ಜಗಳವಾಗಿದ್ಯಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ
ದುಡ್ಡಿದ್ರೆ ಮಾತ್ರ ದುನಿಯಾ ಅನ್ನೋ ಮಾತಿದೆ. ಅನೇಕರು ಬದುಕೋದಕ್ಕೆ ಪ್ರೀತಿ ಒಂದಿದ್ದರೆ ಸಾಕು ಅನ್ನೋ ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ ವಾಸ್ತವ ಬೇರೇನೆ ಪ್ರೀತಿಯ ಜೊತೆಗೆ ದುಡ್ಡಿದ್ರೆ ಮಾತ್ರ ಸುಖ ಸಂಸಾರ ನಡೆಸೋದಕ್ಕೆ ಸಾಧ್ಯ. ಕೆಲವು ಮನೆಗಳಲ್ಲಿ ಹೇಗಾಗುತ್ತೆ ಅಂದ್ರೆ ಮನೆಯಲ್ಲಿ ದುಡಿಯುವ ಕೈ ಒಬ್ಬನದ್ದೇ ಆಗಿರೋದ್ರಿಂದ ಆರ್ಥಿಕ ಸಮಸ್ಯೆಗಳು ಎದುರಾಗುತ್ತದೆ.
ಇನ್ನೂ ಕೆಲವು ಕಡೆ ಗಂಡ ಹೆಂಡತಿ ಇಬ್ಬರು ದುಡಿದರೂ ಕೂಡ ದುಡ್ಡಿನ ವಿಚಾರಕ್ಕಾಗಿ ಪ್ರತಿನಿತ್ಯ ಜಗಳ, ಮನಸ್ಥಾಪ ಇದ್ದೇ ಇರುತ್ತದೆ. ಇದು ಬಗೆ ಹರಿಸಲು ಸಾಧ್ಯವಾಗದೇ ಇರೋ ದೊಡ್ಡ ಸಮಸ್ಯೆ ಏನಲ್ಲ. ಅಷ್ಟಕ್ಕು ಮದುವೆಯಾದ ಮೇಲೆ ಆರ್ಥಿಕ ಸಮಸ್ಯೆ ಬರಬಾರದೆಂದರೆ ಏನು ಮಾಡುಬೇಕು? ದಾಂಪತ್ಯದಲ್ಲಿ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಇಲ್ಲಿದೆ ಟಿಪ್ಸ್.

1. ಮುಕ್ತವಾಗಿ ಮಾತನಾಡಿ
ಕುಟುಂಬದಲ್ಲಿ ಒಬ್ಬರೇ ದುಡಿಯುತ್ತಿದ್ದಾಗ ಆರ್ಥಿಕ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಯಾಕಂದ್ರೆ ಪತಿಯೊಬ್ಬನೇ ದುಡಿಯೋದ್ರಿಂದ ಮನೆಯ ಖರ್ಚು ವೆಚ್ಚಗಳನ್ನೆಲ್ಲಾ ನೋಡಿಕೊಳ್ಳಬೇಕಾಗುತ್ತದೆ. ಇಂತಹ ಸಮಯದಲ್ಲಿ ಹೆಂಡತಿಗೆ ಅನೇಕ ಆಸೆಗಳಿರುತ್ತದೆ. ಇದನ್ನು ಪತಿಯಿಂದ ಈಡೇರಿಸಲು ಸಾಧ್ಯವಾಗೋದಿಲ್ಲ. ಇಂತಹ ಸಂದರ್ಭದಲ್ಲಿ ಪತಿಯು ತನ್ನ ಪತ್ನಿಗೆ ಅರ್ಥೈಸಿ ಹೇಳಬೇಕು. ಮುಂದಿನ ಸಲ ಆಕೆಯ ಆಸೆಗಳನ್ನು ಪೂರೈಸುತ್ತೇನೆಂದು ಮಾತು ಕೊಡಬೇಕು. ಹೆಂಡತಿಯು ಇದಕ್ಕೆ ಸಮ್ಮತಿ ಸೂಚಿಸಿದರೆ ಯಾವುದೇ ಸಮಸ್ಯೆ ಎದುರಾಗೋದಿಲ್ಲ.
2. ಖರ್ಚು-ವೆಚ್ಚಗಳನ್ನು ಹಂಚಿಕೊಳ್ಳಿ
ಒಂದು ವೇಳೆ ನಿಮ್ಮ ಕುಟುಬದಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿಯುವವರಾದರೆ ನಿಮಗೆ ಬರುವ ಸಂಭಳದಲ್ಲಿ ಕುಟುಂಬವನ್ನು ಯಾವ ರೀತಿ ನಿಭಾಯಿಸಬಹುದು ಎಂದು ಒಂದು ಬಜೆಟ್ ತಯಾರಿಸಿಕೊಳ್ಳಿ. ಖರ್ಚು-ವೆಚ್ಚಕ್ಕಾಗಿ ಇಂತಿಷ್ಟು ಅಂತ ಹಣವನ್ನು ಮೀಸಲಿಡಿ. ಉಳಿದ ಹಣವನ್ನು ಉಳಿತಾಯ ಮಾಡಿ. ಒಂದು ವೇಳೆ ಪತಿ/ಪತ್ನಿ ಒಬ್ಬರೇ ದುಡಿಯುವವರಾದರೆ ಆದಷ್ಟು ಖರ್ಚು ಕಡಿಮೆ ಮಾಡಿರಿ. ಒಂದು ವೇಳೆ ಉಳಿತಾಯ ಸಾಧ್ಯವಾಗದಿದ್ದರೆ ಮನೆಯಲ್ಲಿ ಹಪ್ಪಳ, ಸಂಡಿಗೆ, ನಿಪ್ಪಟ್ಟು ಮಾಡಿ ಮಾರಬಹುದು. ಇಲ್ಲವಾದರೆ ಟೈಲರಿಂಗ್‌ನಂತಹ ಕೆಲವನ್ನು ಮಾಡಬಹುದು. ಇದರಿಂದ ಕೊಂಚ ಹಣದ ಸಹಾಯ ಸಿಗುತ್ತದೆ.
3. ಹಣದ ಬಗ್ಗೆ ಭಯ ಬೇಡ
ನೀವು ಚಿಕ್ಕಂದಿನಿಂದ ಆರ್ಥಿಕ ಸಮಸ್ಯೆಯನ್ನು ನೋಡಿಕೊಂಡು ಬಂದಿದ್ದರೆ ನೀವು ಬೆಳೆದು ದೊಡ್ಡವರಾಗಿ ಮದುವೆಯಾದ ಮೇಲೂ ಆ ಭಯ ಇದ್ದೇ ಇರುತ್ತದೆ. ಕುಟುಂಬ ನಿಭಾಯಿಸಲಾಗದೇ ನೀವು ಸಾಲ ಮಾಡಿದ್ದರೆ ಅದನ್ನು ಹೇಗೆ ತೀರಿಸೋದು ಅನ್ನೋ ಭಯವಂತೂ ಖಂಡಿತ ಕಾಡುತ್ತೆ. ಇಂತಹ ಸಂದರ್ಭದಲ್ಲಿ ನಿಮಗೆ ನೀವೇ ದೈರ್ಯ ತಂದುಕೊಳ್ಳಬೇಕು. ದೈರ್ಯವೊಂದಿದ್ದರೆ ಎಂತಹ ಸಂದರ್ಭವನ್ನಾದರೂ ನಿಭಾಯಿಸಬಹುದು.
4. ಸಂಗಾತಿಯ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ
ಮಧ್ಯಮ ವರ್ಗದ ನಮ್ಮಂತವರಿಗೆ ಆಸೆ, ಆಕಾಂಕ್ಷೆಗಳು ಹೆಚ್ಚಿರುತ್ತದೆ. ಆದರೆ ನಮ್ಮ ಆಸೆಗಳನ್ನು ಪೂರೈಸಿಕೊಳ್ಳೋದಕ್ಕೆ ನಾವು ದುಡಿಯುವ ಹಣ ಸಾಕಾಗೋದಿಲ್ಲ. ಕೆಲವೊಂದು ಸಲ ದಂಪತಿಗಳಲ್ಲಿ ಇಬ್ಬರಲ್ಲಿ ಒಬ್ಬರಿಗೆ ಹಣವನ್ನು ದುಂದು ವೆಚ್ಚ ಮಾಡುವ ಅಭ್ಯಾಸವಿರುತ್ತದೆ. ಆದರೆ ತಿಂಗಳ ಕೊನೆಯಲ್ಲಿ ಒಂದು ರೂಪಾಯಿಗೂ ಪರದಾಟ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ ಸಂಗಾತಿಗೆ ಹಣದ ಬಗ್ಗೆ ಅರಿವು ಮೂಡಿಸೋದು ಅಗತ್ಯವಾಗಿರುತ್ತದೆ.
6. ವೈಯಕ್ತಿಕ ಆಸೆ ಪೂರೈಸಲು ಹಣ ಎತ್ತಿಡಿ
ಮದುವೆಯಾಗಿದ್ದರೂ ಕೂಡ ಪ್ರತಿಯೊಬ್ಬರಿಗೂ ವೈಯಕ್ತಿಕ ಆಸೆ ಅನ್ನೋದು ಖಂಡಿತ ಇರುತ್ತದೆ. ಆದರೆ ಬರುವ ಹಣ ತಿಂಗಳ ಖರ್ಚು ಹಾಗೂ ಭವಿಷ್ಯದ ಉಳಿತಾಯಕ್ಕೆ ಸರಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ದಿನಸಿ ಸಾಮಾಗ್ರಿಗಳಿಗಾಗಿ ಕೊಟ್ಟ ಹಣದಲ್ಲಿ ಕೊಂಚ ಉಳಿತಾಯ ಮಾಡಿ. ಪ್ರತಿ ತಿಂಗಳು ಕೊಂಚ ಉಳಿತಾಯ ಮಾಡುತ್ತಾ ಬಂದರೆ ಅದರಿಂದ ನೀವು ಏನನ್ನಾದರೂ ಖರೀದಿ ಮಾಡಬಹುದು.
7. ಮಕ್ಕಳ ಖರ್ಚಿನ ಬಗ್ಗೆ ನಿಗಾ ವಹಿಸಿ
ನಿಮಗೆ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿದ್ದರೆ ದೊಡ್ಡ ಮಕ್ಕಳ ಬಟ್ಟೆ, ಆಟದ ಸಾಮಾನು, ಪುಸ್ತಕಗಳನ್ನು ಚಿಕ್ಕವರಿಗೆ ಮರು ಬಳಕೆ ಮಾಡೋದಕ್ಕೆ ನೀಡಿ. ಚಿಕ್ಕವರಿಗಾಗಿ ಎಲ್ಲವನ್ನೂ ಹೊಸತಾಗಿ ಖರೀದಿಸುವ ಅವಶ್ಯಕತೆ ಇರೋದಿಲ್ಲ. ಇನ್ನೂ ನಿಮ್ಮ ಮಕ್ಕಳು ಹದಿಹರೆಯದ ವಯಸ್ಸಿನಲ್ಲಿದ್ದರೆ ಅವರ ಖರ್ಚಿಗೆ ಎಷ್ಟು ಬೇಕೋ ಅಷ್ಟು ದುಡ್ಡು ನೀಡಿದರೆ ಸಾಕು. ಹೆಚ್ಚಿಗೆ ದುಡ್ಡು ಕೊಟ್ಟರೆ ದುರುಪಯೋಗವಾಗುವ ಸಾಧ್ಯತೆ ಇದೆ. ಈ ರೀತಿ ಕೂಡ ನೀವು ಉಳಿತಾಯ ಮಾಡಬಹುದು.
ಸಮಸ್ಯೆಗಳು ಮನುಷ್ಯನಿಗೆ ಬಾರದೇ ಮರಕ್ಕೆ ಬರೋದಕ್ಕೆ ಸಾಧ್ಯಾನಾ? ಎಂತಹದ್ದೇ ಸಮಸ್ಯೆ ಬಂದರೂ ಅದನ್ನು ದೈರ್ಯದಿಂದ ಯಾವ ರೀತಿ ಎದುರಿಸಬೇಕು ಅನ್ನೋದು ನಮಗೆ ಗೊತ್ತಿರಬೇಕು.



Click it and Unblock the Notifications













