Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಸಂಬಂಧದಲ್ಲಿ ನಿಮ್ಮನ್ನು ಹೆಚ್ಚು ಪ್ರಬುದ್ಧರನ್ನಾಗಿ ಮಾಡಲು ಇಲ್ಲಿದೆ ಸಲಹೆಗಳು
ಪ್ರೀತಿ, ವಿಶ್ವಾಸ, ನಂಬಿಕೆ ಇದ್ದರೆ ಮಾತ್ರ ಸಂಬಂಧವು ದೀರ್ಘಕಾಲ ಉಳಿಯುವುದು ಮತ್ತು ಯಾವುದೇ ಏಳುಬೀಳುಗಳಿದ್ದರೂ ಅದು ಸುಗಮವಾಗಿ ಸಾಗುವುದು. ಆದರೆ ಇಂದಿನ ದಿನಗಳಲ್ಲಿ ಸಂಬಂಧಕ್ಕೆ ಹೆಚ್ಚು ಮಹತ್ವವೇ ಇಲ್ಲದಂತಾಗಿದೆ, ಹೀಗಾಗಿ ಜನರಲ್ಲಿ ಅಪನಂಬಿಕೆ ಉಂಟಾಗಿ, ಪರಸ್ಪರ ಹೊಂದಾಣಿಕೆ ಇಲ್ಲದಂತಾಗಿದೆ. ಇಲ್ಲಿ ಮುಖ್ಯವಾಗಿ ಬೇಕಿರುವುದು ಸಂಬಂಧದಲ್ಲಿ ಪ್ರೌಢತೆ. ಇದು ಇಲ್ಲವಾದಲ್ಲಿ ಸಂಬಂಧ ಹೆಚ್ಚು ಸಮಯ ಬಾಳದು.

ಸಂಬಂಧವೆನ್ನುವುದು ಮಕ್ಕಳಾಟಿಕೆಯಲ್ಲ, ಅದು ಜೀವನ ಪರ್ಯಂತ ಉಳಿಯಬೇಕು. ಹೀಗಾಗಿ ಪ್ರೌಢತೆ ಇದ್ದರೆ ಆಗ ಯಾವುದೇ ಕಠಿಣ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುವುದು, ಪ್ರೀತಿ ಮತ್ತು ಪ್ರೌಢತೆಯು ಸಮಾನವಾಗಿ ಸಾಗುವುದು. ಹೀಗಾಗಿ ಸಂಬಂಧ ಯಾವುದೇ ಆಗಿರಲಿ ಪ್ರೌಢತೆ ಅತೀ ಅಗತ್ಯವಾಗುತ್ತದೆ. ಸಂಬಂಧದಲ್ಲಿ ಪ್ರೌಢತೆ ಸಾಧಿಸಲು ಏನು ಮಾಡಬೇಕು ಎನ್ನುವ ಬಗ್ಗೆ ನಾವು ನಿಮಗೆ 8 ಸಲಹೆಗಳನ್ನು ನೀಡಲಿದ್ದೇವೆ. ಅದನ್ನು ನೀವು ತಿಳಿಯಿರಿ.

1. ಸ್ವಾರ್ಥ ಬರದಂತೆ ನೋಡಿಕೊಳ್ಳಿ
ಸಂಬಂಧ ದೀರ್ಘಕಾಲ ಬಾಳಬೇಕಾದರೆ ಸ್ವಾರ್ಥವನ್ನು ನೀವು ಹೊರಗೆಸೆಯಲೇಬೇಕು. ನಿಮ್ಮ ಸಂಗಾತಿಯ ಆಯ್ಕೆ, ಆಸೆಗಳ ಬಗ್ಗೆ ಕೂಡ ನೀವು ಗಮನವಹಿಸಬೇಕು. ಸಂಗಾತಿ ಬಗ್ಗೆ ನೀವು ನಿಜವಾಗಿಯೂ ಕಾಳಜಿ ವಹಿಸುತ್ತೀರಿ ಮತ್ತು ಆಕೆ ಅಥವಾ ಆತನ ಬಗ್ಗೆ ಬದ್ಧತೆ ಇದೆ ಎಂದು ಇದು ತೋರಿಸಿಕೊಡುತ್ತದೆ. ಪದೇ ಪದೇ ಜಗಳಕ್ಕೆ ಕಾರಣವಾಗುವಂತಹ ಕೆಟ್ಟ ಮನಸ್ಥಿತಿಯನ್ನು ಬಿಟ್ಟುಬಿಡುವುದು ಒಳಿತು.

2. ಸಂಗಾತಿ ಬಗ್ಗೆ ನಂಬಿಕೆ ಮತ್ತು ಗೌರವವಿರಲಿ
ಸಂಗಾತಿ ಬಗ್ಗೆ ನೀವು ಇಟ್ಟುಕೊಳ್ಳುವಂತಹ ನಂಬಿಕೆ ಮತ್ತು ಗೌರವವು ಸಂಬಂಧದಲ್ಲಿ ನಿಮ್ಮ ಪ್ರೌಢತೆಯ ಮಟ್ಟವನ್ನು ತೋರಿಸುವುದು. ನಿಮ್ಮ ಹಾಗೂ ಸಂಗಾತಿ ಮಧ್ಯೆ ಯಾವುದೇ ರೀತಿಯ ತಪ್ಪು ತಿಳುವಳಿಕೆ ಉಂಟಾಗಿದ್ದರೆ ಈ ವೇಳೆಯಲ್ಲಿ ನೀವು ಸಂಗಾತಿ ಮೇಲೆ ನಂಬಿಕೆಯನ್ನು ಇಡುವುದು ಅತೀ ಅಗತ್ಯವಾಗಿರುವುದು. ಸಂಗಾತಿಯ ನಡವಳಿಕೆಯಿಂದ ತುಂಬಾ ಬೇಸರವಾಗಿದ್ದರೆ ಅಥವಾ ಇದನ್ನು ನೀವು ಒಪ್ಪಿಕೊಳ್ಳದೆ ಇದ್ದರೂ, ಯಾವುದೇ ಕಾರ್ಯಕ್ರಮದಲ್ಲಿ ಅಥವಾ ಸಾರ್ವಜನಿಕವಾಗಿ ನೀವು ಇದನ್ನು ತೋರಿಸಿಕೊಡಬಾರದು. ಕೋಪಗೊಳ್ಳುವ ಬದಲು ನೀವು ಅಭಿಪ್ರಾಯವನ್ನು ಸಂಗಾತಿಯ ಜತೆ ಸಮಾಧಾನದಿಂದ ಚರ್ಚಿಸಿ ಪ್ರೌಢತೆಯಿಂದ ಈ ಸಮಸ್ಯೆ ಬಗೆಹರಿಸಿಕೊಳ್ಳಬಹುದು.

3. ಸಂಗಾತಿಯು ಪರಿಪೂರ್ಣವಾಗಿರಬೇಕೆಂದು ಬಯಸಬೇಡಿ
ಈ ಜಗತ್ತಿನಲ್ಲಿ ಯಾರೂ ಕೂಡ ಪರಿಪೂರ್ಣರಲ್ಲ, ನಿಮ್ಮ ಸಂಗಾತಿಯು ಪರಿಪೂರ್ಣರಾಗಿರಬೇಕು ಎಂದು ಬಯಸುವುದು ಬಾಲಿಶ. ಸಂಗಾತಿಯ ತಪ್ಪುಗಳನ್ನು ಹುಡುಕುವುದರಿಂದ ಅದು ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಜೀವನದಲ್ಲಿ ಹಲವಾರು ರೀತಿಯ ಏಳುಬೀಳುಗಳು ಇರುತ್ತದೆ. ಪ್ರತಿಯೊಬ್ಬರೂ ತಪ್ಪುಗಳನ್ನು ಮಾಡುತ್ತಾರೆ. ಅದೇ ರೀತಿಯಾಗಿ ನಿಮ್ಮ ಸಂಗಾತಿ ಕೂಡ. ಅವರಿಗೂ ಮನಸ್ಥಿತಿ ಬದಲಾವಣೆ ಎನ್ನುವುದು ಇರುತ್ತದೆ. ಅವರ ನ್ಯೂನ್ಯತೆಗಳನ್ನು ಹುಡಕಲು ಹೋಗಬೇಡಿ. ಅವರ ದೌರ್ಬಲ್ಯವನ್ನು ಬೊಟ್ಟು ಮಾಡಿ ತೋರಿಸಬೇಡಿ ಮತ್ತು ಅದಕ್ಕೆ ತೀರ್ಪು ನೀಡಬೇಡಿ. ನೀವು ತುಂಬಾ ಕೆಟ್ಟ ಮತ್ತು ನಕಾರಾತ್ಮಕ ಹೇಳಿಕೆ ನೀಡಿದರೆ ಆಗ ನಿಮ್ಮ ಸಂಬಂಧದ ಮೇಲೆ ಖಂಡಿತವಾಗಿಯೂ ಪರಿಣಾಮ ಉಂಟಾಗುವುದು. ಅವರು ಪರಿಪೂರ್ಣ ಅಲ್ಲದೆ ಇದ್ದರೂ ನೀವು ಅದನ್ನು ಶ್ಲಾಘಿಸಬೇಕು. ಇದರಲ್ಲಿ ನಿಮ್ಮ ಪ್ರೌಢತೆಯು ಎದ್ದು ಕಾಣುವುದು.

4. ತಾಳ್ಮೆ ಮತ್ತು ಸಹನೆ
ಸಂಬಂಧದಲ್ಲಿ ಏಳುಬೀಳುಗಳು ಇದ್ದೇ ಇರುತ್ತದೆ. ಈ ವೇಳೆ ನೀವು ದುರ್ಬಲರಾದರೆ ಅದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುವುದು. ಜಗಳದ ವೇಳೆ ಕೂಡ ನೀವು ತಾಳ್ಮೆಯಿಂದ ಇರಬೇಕು. ಸಂಗಾತಿಯು ತಪ್ಪು ಮಾಡಿದ್ದಾರೆ ಎಂದು ತಿಳಿದಿದ್ದರೂ ಆಗ ನೀವು ಅವರ ಮೇಲೆ ಕೂಗಾಡುವ ಬದಲು ತಾಳ್ಮೆ ವಹಿಸುವುದು ಅತೀ ಅಗತ್ಯವಾಗಿರುವುದು. ಸಂಗಾತಿಯ ಮನಸ್ಥಿತಿ ಒಳ್ಳೆಯದಾದರೆ ಆಗ ನೀವು ಇದರ ಬಗ್ಗೆ ಅವರಿಗೆ ವಿವರಿಸಬಹುದು. ಸಹನೆ ಹಾಗೂ ತಾಳ್ಮೆಯಿಂದ ಇದ್ದರೆ ಆಗ ಪ್ರೌಢತೆ ತನ್ನಿಂದ ತಾನೇ ಬರುವುದು.

5. ನಿಮಗಿಂತ ಮೊದಲು ಸಂಗಾತಿಯ ಅಗತ್ಯತೆಗೆ ಪ್ರಾಮುಖ್ಯತೆ ನೀಡಿ
ಸಂಗಾತಿಗಿಂತ ಮೊದಲು ನಿಮ್ಮ ಅಗತ್ಯತೆಗೆ ಮೊದಲ ಪ್ರಾಮುಖ್ಯತೆ ನೀಡುತ್ತಲಿದ್ದರೆ ಇದು ಅಪ್ರೌಢತೆ ಎಂದು ಹೇಳಲಾಗುತ್ತದೆ. ನೀವು ಪರಸ್ಪರರ ಬೇಕು ಬೇಡಗಳನ್ನು ಅರಿತುಕೊಳ್ಳಬೇಕು ಮತ್ತು ಇದರಿಂದ ಸಂಬಂಧವು ಸುಂದರವಾಗುವುದು. ಇದು ಪ್ರೌಢತೆಯ ಮಟ್ಟ ತೋರಿಸುವುದು ಮಾತ್ರವಲ್ಲದೆ ಸಂಗಾತಿಯ ಸಂತೋಷದ ಬಗ್ಗೆ ನೀವು ಎಷ್ಟು ಕಾಳಜಿ ವಹಿಸಿದ್ದೀರಿ ಎಂದು ಕೂಡ ತೋರಿಸಿಕೊಡುತ್ತದೆ.

6. ಸಂಗಾತಿಯ ದೃಷ್ಟಿಕೋನ ಅರ್ಥ ಮಾಡಿಕೊಳ್ಳಿ
ಕೆಲವೊಂದು ಸಂದರ್ಭದಲ್ಲಿ ನಿಮಗೆ ಸಂಗಾತಿಯ ದೃಷ್ಟಿಕೋನವನ್ನು ಅರಿತುಕೊಳ್ಳಲು ಸಾಧ್ಯವಾಗದೆ ಇರಬಹುದು. ಇದರಿಂದಾಗಿ ಹೆಚ್ಚಿನ ಸಮಯದಲ್ಲಿ ದಂಪತಿಯು ತಮ್ಮ ಸಂಗಾತಿಯ ಯೋಜನೆಯನ್ನು ಕಡೆಗಣಿಸುವರು. ಸಂಗಾತಿಯು ತಪ್ಪಾಗಿ ಇರಬಹುದು ಎಂದು ಭಾವಿಸುವಿರಿ. ಸಂಗಾತಿಯ ಆಯ್ಕೆಯನ್ನು ಪರಿಗಣಿಸುವುದು ಕೂಡ ಒಂದು ಪ್ರೌಢತೆಯಾಗಿದೆ.

7. ತಪ್ಪುಗಳನ್ನು ಸ್ವೀಕರಿಸಿ
ತಪ್ಪುಗಳನ್ನು ಒಪ್ಪಿಕೊಳ್ಳುವುದು ಮತ್ತು ಕ್ಷಮೆ ಕೇಳುವುದು ಸಂಬಂಧದಲ್ಲಿ ಪ್ರೌಢತೆ ತೋರಿಸುವ ಮತ್ತೊಂದು ವಿಧಾನವಾಗಿದೆ. ನೀವು ತಪ್ಪು ಮಾಡದೆ ಇದ್ದರೂ ಕ್ಷಮೆ ಕೇಳುವ ಮೂಲಕ ಸಂಬಂಧವು ಅತೀ ಮುಖ್ಯವೆಂದು ನೀವು ಅರ್ಥ ಮಾಡಿಕೊಳ್ಳಬೇಕು. ಸಂಗಾತಿಯು ಅವರ ತಪ್ಪನ್ನು ಅರ್ಥ ಮಾಡಿಕೊಳ್ಳುವಂತೆ ಮಾಡಿ, ಆದರೆ ಇದರಿಂದ ಅವರಿಗೆ ತುಂಬಾ ಮುಜುಗರ ಅಥವಾ ಅಪಮಾನ ಆಗುವಂತೆ ಮಾಡಬೇಡಿ. ನೀವು ತುಂಬಾ ಶಾಂತ ಸ್ವಭಾವದಿಂದ ಸಂಗಾತಿಗೆ ಅವರ ತಪ್ಪುಗಳ ಬಗ್ಗೆ ತಿಳಿಹೇಳಿ. ಸಂಗಾತಿಯು ಅವರ ತಪ್ಪುಗಳನ್ನು ಒಪ್ಪಿಕೊಂಡು ಕ್ಷಮೆ ಕೇಳಿದರೆ ಆಗ ನೀವು ಅವರನ್ನು ಕ್ಷಮಿಸಿ ಬಿಡಿ. ಸಂಬಂಧದಲ್ಲಿ ದ್ವೇಷ ಇಟ್ಟುಕೊಳ್ಳುವುದು ಸರಿಯಾಗಿ ವಿಚಾರವಲ್ಲ.

8. ಬದ್ಧತೆ ತೋರಿಸಿ
ಯಾವುದೇ ಕೆಲಸವಾದರೂ ಅದನ್ನು ಮನಸ್ಸಿಟ್ಟು ಮಾಡುವುದು ಕೂಡ ಒಂದು ರೀತಿಯ ಪ್ರೌಢತೆ ಎಂದು ಹೇಳಬಹುದು. ಅದೇ ರೀತಿಯಾಗಿ ಸಂಬಂಧದಲ್ಲಿ ಕೂಡ ಇದನ್ನು ಪಾಲಿಸಬೇಕು. ಸಂಗಾತಿಗೆ ನೀವು ಏನಾದರೂ ಮಾತು ಕೊಟ್ಟಿದ್ದರೆ ಅದನ್ನು ನಿಭಾಯಿಸಿ. ಸಂಬಂಧದಲ್ಲಿ ನೀವು ಎಷ್ಟು ಪ್ರಾಮಾಣಿಕವಾಗಿ ಇದ್ದೀರಿ ಎಂದು ಇದು ತೋರಿಸಿಕೊಡುತ್ತದೆ. ಸಂಬಂಧವು ಗಟ್ಟಿಗೊಳ್ಳಲು ಒಬ್ಬರಲ್ಲಾದರೂ ಹೆಚ್ಚಿನ ಮಟ್ಟದ ಪ್ರೌಢತೆ ಬೇಕು ಮತ್ತು ಒಂದೇ ದಿನದಲ್ಲಿ ಇದನ್ನು ಪಡೆಯಲು ಸಾಧ್ಯವಿಲ್ಲ. ಇದು ಎಷ್ಟೇ ಕಷ್ಟವಾಗಿದ್ದರೂ ನಿರಂತರ ಅಭ್ಯಾಸದಿಂದ ಎಲ್ಲವನ್ನು ಸಾಧಿಸಬಹುದು.



Click it and Unblock the Notifications











