Latest Updates
-
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ!
ನೀವು ಗರ್ಭಿಣಿಯಾಗಿಲ್ಲ ಎಂದು ಅತ್ತೆ ಕಡೆಯಿಂದ ಮೊಮ್ಮಗುವಿಗೆ ಬೇಡಿಕೆ ಬರುತ್ತಿದೆಯೇ?
ಮದುವೆಯಾಗಿ ಆರು ತಿಂಗಳಾಗಿರಲ್ಲ ಅಷ್ಟರಲ್ಲಿಯೇ ಎಲ್ಲರೂ ಗುಡ್ ನ್ಯೂಸ್ ಇಲ್ವಾ?? ಅಂತ ಕೇಳಲು ಶುರು ಮಾಡುತ್ತಾರೆ. ಈ ಪ್ರಶ್ನೆ ಮುಜುಗರವನ್ನುಂಟು ಮಾಡುವುದಲ್ಲದೆ ಕೋಪ ಕೂಡ ತರಿಸುತ್ತದೆ ಅಲ್ವಾ? ನಮಗೆ ಮಗುವಾಗಲು ಇವರಿಗೇನು ಅವಸರ ಎಂದನಿಸದೆ ಇರಲ್ಲ. ಹೊರಗಿನವರು ಕೇಳುವಾಗ ಅವರಿಗೆ ಉತ್ತರ ಕೊಡದಿರಬಹುದು, ಆದರೆ ಮನೆಯಲ್ಲಿ ಅತ್ತೆ ಮಾವ ಇನ್ ಡೈರಕ್ಟ್ ಆಗಿ ಮಗುವಿನ ಬಗ್ಗೆ ಹೇಳಲು ಶುರು ಮಾಡುತ್ತಾರೆ.
"ಇವರೊಂದು ಮೊಮ್ಮಗು ಕೊಟ್ಟರೆ ಆಡಿಸಿಕೊಂಡು ಆರಾಮವಾಗಿ ಇರುತ್ತೇವೆ ಅಥವಾಮೊಮ್ಮಗುನೋಡಿ ಕಣ್ಮುಚ್ಚಿದರೆ ಸಾಕು ಈ ರೀತಿ ಸೆಮಟಿಮೆಂಟ್ ಡೈಲಾಗ್‌ಗಳಿಗೇನು ಕಡಿಮೆಯಿರಲ್ಲ ಅಲ್ವಾ? ಎಷ್ಟೋ ದಂಪರಿಗೆ ಬೇಗನೆ ಮಗು ಮಾಡಿಕೊಳ್ಳಜುವ ಯಾವ ಇಚ್ಛೆಯೂ ಇರಲ್ಲ. ಸ್ವಲ್ಪ ವರ್ಷ ಕಳೆಯಿಲಿ ನಂತರ ನೋಡುವ ಅಂತ ಆಲೋಚಿಸಿರುತ್ತಾರೆ. ಮನೆಯವರ ಹಾಗೂ ಸೋಷಿಯಲ್ ಪ್ರೆಷರ್‌ಗೆ ಬೇಗನೆ ಮಗು ಮಾಡಿಕೊಳ್ಳುತ್ತಾರೆ. ನಿಮ್ಮ ವೈಯಕ್ತಿಕ ಬದುಕು ನಿಮ್ಮದು ಅದರಲ್ಲಿ ಮೂರನೇಯವರ ಅಭಿಪ್ರಾಯಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳದಿರುವುದು ಒಳ್ಳೆಯದು. ನಿಮ್ಮ ಅತ್ತೆ ಈ ಕುರಿತು ಕೇಳಿದರೆ ಈ ಇಂಥ ಸೆನ್ಸಿಟಿವ್ ವಿಷಯಗಳನ್ನು ಈ ರೀತಿ ಡೀಲ್ ಮಾಡಿ:

ಅವರಿಗೆ ಭರವಸೆ ನೀಡಿ
ನಾವು ಮಗು ಮಾಡಿಕೊಳ್ಳುತ್ತೇವೆ, ಆದರೆ ಈಗಲ್ಲ, ಈಗ ನಾವು ಕುರಿತು ಯೋಚಿಸಿಲ್ಲ, ಮೊದಲು ಲೈಫ್‌ನಲ್ಲಿ ಸೆಟ್ಲ್ ಆಗಲಿ ಮತ್ತೆ ನೋಡುವ ಅನ್ನಿ. ಈ ರೀತಿ ಹೇಳಿದಾಗ ಕೂಡ ನೀವು ಮಗುವನ್ನು ಕೊಟ್ಟರೆ ಸಾಕು ನಾವು ನೋಡಿಕೊಳ್ಳುತ್ತೇವೆ ಎಂದೆಲ್ಲಾ ಹೇಳಬಹುದು. ಆದರೆ ನಾವಿಬ್ಬರು ಇನ್ನೂ ಆ ಕುರಿತು ಯೋಚಿಸಿಲ್ಲ, ಸದ್ಯಕ್ಕೆ ನೀವೂ ಆ ಯೋಚನೆ ಬಿಟ್ಟು ಆರಾಮವಾಗಿರಿ ಎಂದು ನಗು ನಗುತ್ತಾ ಹೇಳಿ...
ತಾಳ್ಮೆಯಿಂದ ವರ್ತಿಸಿ
ನೀವಾಗಿ ಸ್ವಲ್ಪ ಸಮಯ ನಮಗೆ ಮಗು ಬೇಡ ಎಂದು ತೀರ್ಮಾನಿಸಿದ್ದರೆ ಮಗುವಿಗೆ ಸಂಬಂಧಿಸಿದ ಪ್ರಶ್ನೆ ಬರುವಾಗ ಏನೂ ಅನಿಸಲ್ಲ, ಅದೇ ನೀವು ಕೂಡ ಮಗುವಿಗಾಗಿ ಪ್ರಯತ್ನಿಸುತ್ತಿದ್ದು ಅತ್ತೆ ಮಗು ಬೇಕು ಎಂದು ಹೇಳಿದಾಗ ಕೋಪ ಬರುವುದು ಸಹಜ. ಆದರೆ ಇಲ್ಲಿ ಸಂಬಂಧ ಕಾಪಾಡುವುದು ಕೂಡ ಮುಖ್ಯ, ಆದ್ದರಿಂದ ತಾಳ್ಮೆಯಿಂದ ವರ್ತಿಸಿ. ನಿಮ್ಮ ಈಗೀನ ಪರಿಸ್ಥಿತಿ ಬಗ್ಗೆ ಅವರಿಗೆ ಹೇಳಲು ಇಚ್ಛಿಸದಿದ್ದರೆ ನನಗೆ ಈಗಲೇ ಮಗು ಬೇಡ ಎಂದು ಹೇಳಿ, ಇದರಿಂದ ಅವರು ಪದೇ ಪದೇ ಕೇಳಿ ನಿಮ್ಮ ಮನಸ್ಸಿಗೆ ನೋವುಂಟಾಗುವುದು ತಪ್ಪುತ್ತೆ.
ಪರಿಸ್ಥಿತಿ ಅರ್ಥೈಸಿ
ಏನಾದರೂ ಸಮಸ್ಯೆ ನಿಮಗೆ ಅಥವಾ ನಿಮ್ಮ ಪತಿಗೆ ಇದ್ದು ನೀವು ಚಿಕಿತ್ಸೆ ಪಡೆಯುತ್ತಿದ್ದರೆ ಈ ಕುರಿತು ಅವರಿಗೆ ತಿಳಿಸಿ. ಆವಾಗ ಮಗುವಿನ ಬಗ್ಗೆ ಕೇಳಿ ಮನಸ್ಸಿಗೆ ನೋವುಂಟು ಮಾಡಲು ಯೋಚಿಸುವುದಿಲ್ಲ. ಒಂದು ವೇಳೆ ನಿಮ್ಮ ಆರೋಗ್ಯ ಸ್ಥಿತಿ ಗೊತ್ತಿದ್ದು ಅವರು ಮಗುವಿನ ಕಾರಣಕ್ಕೆ ಚುಚ್ಚು ಮಾತುಗಳನ್ನು ಹೇಳುವಂತಾವರಾದರೆ ನೆಗೆಟಿವ್ ಮಾತುಗಳಿಗೆ ಕಿವಿಕೊಡಲೇ ಹೋಗಬೇಡಿ. ಮಗುವಿನ ಪಡೆಯಲು ನಿಮ್ಮ ಪ್ರಯತ್ನವನ್ನು ಧನಾತ್ಮಕ ಮನಸ್ಥಿತಿಯಿಂದ ಮಾಡಿ, ಫಲ ಸಿಗುವುದು.
ಮಾನಸಿಕ ಸ್ಥೈರ್ಯ ಕಳೆದುಕೊಳ್ಳಬೇಡಿ
ಕೆಲವರು ಒಂದು ಮಗುವಿಗಾಗಿ ತುಂಬಾನೇ ಪ್ರಯತ್ನ ಮಾಡುತ್ತಿರುತ್ತಾರೆ. ಫರ್ಟಿಲಿಟಿ ಚಿಕಿತ್ಸೆ ಅನೇಕ ಔಷಧಗಳು ಎಲ್ಲಾ ಪಡೆದರೂ ಅದರ ಫಲ ಸಿಕ್ಕಿರಲ್ಲ, ಆವಾಗ ಆ ನೋವು ಮನಸ್ಸನ್ನು ತುಂಬಾ ಕಾಡುತ್ತಿರುತ್ತದೆ, ಅದರ ಜೊತೆಗೆ ಅತ್ತೆ-ಮಾವ, ಮನೆಯವರ ಮಾತುಗಳು ಮನಸ್ಸಿಗೆ ತುಂಬಾನೇ ನೋವುಂಟು ಮಾಡಬಹುದು. ಕೆಲವರು ಈ ಕಾರಣಕ್ಕೆ ಕುಗ್ಗಿ ಹೋಗುತ್ತಾರೆ. ನೀವು ಯಾವುದೇ ಕಾರಣಕ್ಕೆ ನಿಮ್ಮ ಮಾನಸಿಕ ಸ್ಥೈರ್ಯ ಕಳೆದುಕೊಳ್ಳಬೇಡಿ, ನಿಮಗಾಗಿ ಏನೋ ಒಂದು ಒಳಿತು ಕಾದಿರುತ್ತೆ ಅದರತ್ತ ಗಮನಹರಿಸಿ.
ಇತರರ ಒತ್ತಡಕ್ಕೆ ಮಗುವಿಗಾಗಿ ಪ್ಲ್ಯಾನ್ ಮಾಡಬೇಡಿ
* ಗಂಡ-ಹೆಂಡತಿ ಇಬ್ಬರು ತಮಗೆ ಮಗುಬೇಕೆಂದು ತೀರ್ಮಾನಿಸಿದಾಗ ಮಗುವಿಗಾಗಿ ಪ್ಲ್ಯಾನ್ ಮಾಡಿ.
* ಆರ್ಥಿಕವಾಗಿ ಸದೃಢವಾದ ಮೇಲೆ ಮಗು ಸಾಕು ಎಂದು ತೀರ್ಮಾನಿಸಿದ್ದರೆ ನೀವು ಸೆಟ್ಲ್ ಆದ ಮೇಲೆ ಮಾಡುವುದು ಒಳ್ಳೆಯದು.
* ತಾಯ್ತನಕ್ಕೆ ನೀವು ರೆಡಿ ಎಂದಾಗ ಮಾತ್ರ ಮಗುವಿಗಾಗಿ ಪ್ರಯತ್ನಿಸಿ.



Click it and Unblock the Notifications