Latest Updates
-
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ!
ಗಂಡ-ಹೆಂಡತಿ ಮಧ್ಯೆ ಮಾತುಕತೆ ತುಂಬಾನೇ ಮುಖ್ಯ ಅನ್ನೋದು ಇದೇ ಕಾರಣಕ್ಕೆ !
ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಈ ನಾಣ್ಣುಡಿಯನ್ನು ನೀವು ಕೇಳಿರಬಹುದು. ಯಾರು ಸರಿಯಾದ ರೀತಿಯಲ್ಲಿ ಸಂವಹನ ಮಾಡಲು ಬಲ್ಲರೋ ಅಂಥವರ ನಡುವೆ ಯಾವುದೇ ಜಗಳವು ಆಗುವುದಿಲ್ಲ ನಮಗೆ ಮಾತನಾಡುವ ಕಲೆ ಜನ್ಮತ: ಬಂದಿರುವಂಥದ್ದು ಆದರೆ ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದೆ ಇದ್ದರೆ ಸಂಬಂಧದಲ್ಲಿ ಸಮಸ್ಯೆ ಉಂಟಾಗೋದು ಖಚಿತ. ಎಷ್ಟೋ ಬಾರಿ ದಾಂಪತ್ಯ ಸಂಗಾತಿಯ ಜೊತೆಗೆ ಮೌಖಿಕ ಸಂವಹನವನ್ನು ಅವಲಂಬಿಸಿರುತ್ತದೆ. ನಾವು ನಮಗೆ ಅನ್ನಿಸಿದ್ದನ್ನು ನಮಗೆ ಬೇಕಾಗಿರುವುದನ್ನು ಇನ್ನೊಬ್ಬರಿಗೆ ಹೇಳದೆ ಅವರು ನಮ್ಮನ್ನ ಅರ್ಥ ಮಾಡಿಕೊಳ್ಳಬೇಕು. ಎಂದು ನಿರೀಕ್ಷೆ ಮಾಡುವುದು ತಪ್ಪು.
ಸಾಕಷ್ಟು ಬಾರಿ ನಾವು ಸರಿಯಾದ ರೀತಿಯಲ್ಲಿ ಸಂವಹನ ಮಾಡದೆ ಇದ್ದರೆ ಅದು ಸಂಬಂಧದ ಮೇಲೆ ಒತ್ತಡ ಉಂಟು ಮಾಡುತ್ತದೆ ಸಂಗಾತಿಗಳ ನಡುವೆ ಅಂತರವನ್ನು ಸೃಷ್ಟಿಸುತ್ತದೆ. ಸಂಗತಿಯ ನಡುವೆ ಇರುವ ಉತ್ತಮ ಸಂವಹನ ಹಲವು ಸಮಸ್ಯೆಯನ್ನು ಪರಿಹರಿಸಿ ಸ್ಪಷ್ಟತೆಯನ್ನು ನೀಡುತ್ತದೆ ಕನಿಷ್ಠ ಒಂದು ಒಳ್ಳೆಯ ಸಂದೇಶ ರವಾನೆ ಕೂಡ ಪರಿಣಾಮಕಾರಿಯಾದ ಸಂವಹನ ಆಗಬಹುದು.

ಸಂವಹನ ವೈಯಕ್ತಿಕ ಮನೋಭಾವದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬಲ್ಲದು ಹಾಗೂ ಒಬ್ಬ ವ್ಯಕ್ತಿಯ ಆಲೋಚನೆ ನಡವಳಿಕೆಯ ಮೇಲೆ ಪರಿಣಾಮ ಬೀರಬಲ್ಲದು. ಸಂಬಂಧಗಳಲ್ಲಿ ಈ ಸಂವಹನ ಕಲೆ ಇದ್ದಾಗ ಮಾತ್ರ ಆ ಸಂಬಂಧವು ಉತ್ತಮವಾಗಿ ಇರಲು ಸಾಧ್ಯ.
ಉತ್ತಮ ಕೇಳುಗರಾಗಿ:
ಚೆನ್ನಾಗಿ ಸಂವಹನ ಮಾಡಬೇಕೆಂದರೆ ಮೊದಲು ಚೆನ್ನಾಗಿ ಕೇಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಮ್ಮಲ್ಲಿ ಇರುವ ಮುಖ್ಯವಾದ ಕೊರತೆ ಅಂದರೆ ನಾವು ಇನ್ನೊಬ್ಬರ ಅಭಿಪ್ರಾಯವನ್ನ ಕೇಳುವುದಿಲ್ಲ ಬದಲು ನಮ್ಮ ಅಭಿಪ್ರಾಯವನ್ನು ಹೇಳುತ್ತೇವೆ ಅಷ್ಟೇ. ಸಮಾನದಲ್ಲಿ ಯಾವುದೇ ತೀರ್ಮಾನಕ್ಕೆ ಬರುವುದಕ್ಕಿಂತಲೂ ಮೊದಲು ಒಂದು ಮಾಹಿತಿಯ ವಿನಿಮಯವಾಗಬೇಕು ಅದಕ್ಕೆ ಇನ್ನೊಬ್ಬರು ಏನು ಹೇಳುತ್ತಾರೆ ಎಂಬುದನ್ನು ಮೊದಲು ಸರಿಯಾಗಿ ಕೇಳಬೇಕು.
ಮಾತನಾಡುವಾಗ ನಿಮ್ಮ ಉಪಸ್ಥಿತಿ ಮುಖ್ಯ:
ನಮ್ಮ ದೇಹ ಭಾಷೆ ನಮಗೆ ಸಂಭಾಷಣೆಯಲ್ಲಿ ಆಸಕ್ತಿ ಇದೆಯೋ ಇಲ್ಲವೋ ಎಂಬುದನ್ನು ತಿಳಿಸಿ ಬಿಡುತ್ತದೆ. ಒಬ್ಬರು ಮಾತನಾಡುವಾಗ ನೀವು ಅವರ ಮಾತನ್ನು ಕೇಳುತ್ತಿದ್ದೀರಾ ಅಥವಾ ಫೋನ್ ನಲ್ಲಿ ನಿರತರಾಗಿದ್ದೀರಾ? ಅಥವಾ ಸುತ್ತಲೂ ನೋಡುತ್ತಾ ಅವರ ಮಾತಿನಲ್ಲಿ ನಿರಾಸಕ್ತಿ ತೋರಿಸುತ್ತಿದ್ದೀರಾ ಎನ್ನುವುದು ನಿಮ್ಮ ನಡೆ ನುಡಿಯಿಂದಲೇ ಅರ್ಥವಾಗುತ್ತದೆ. ಈ ರೀತಿಯಾಗಿ ಸಂಭಾಷಣೆ ಅಥವಾ ಚರ್ಚೆ ನಡೆಯುವ ನೀವು ನಿರಾಸಕ್ತಿ ತೋರಿಸಿದರೆ ಅದು ಕೂಡ ಸಾಕಷ್ಟು ಮಾಹಿತಿ ಪರಸ್ಪರ ಹಂಚಿಕೆ ಮಾಡಿಕೊಳ್ಳುವಲ್ಲಿ ಸಮಸ್ಯೆಯಾಗಬಹುದು.
ನಿಮ್ಮ ಮಾತನಾಡುವ ಟೋನ್ ಬಗ್ಗೆ ಎಚ್ಚರ:
ಎಷ್ಟೋ ಬಾರಿ ನಾವು ಯಾವ ವಿಷಯ ಮಾತನಾಡುತ್ತಿದ್ದೇವೆ ಎನ್ನುವುದಕ್ಕಿಂತ ಆ ವಿಷಯವನ್ನು ಯಾವ ರೀತಿ ಇತರರಿಗೆ ತಲುಪಿಸುತ್ತಿದ್ದೇವೆ ಎಂಬುದು ಬಹಳ ಮುಖ್ಯ. ನಮ್ಮ ಧ್ವನಿಯಲ್ಲಿನ ಏರಿಳಿತ ಆ ವಿಷಯವನ್ನು ಎಷ್ಟು ಇನ್ನೊಬ್ಬರಿಗೆ ತಲುಪಿಸುತ್ತದೆ ಎನ್ನುವುದು ಮುಖ್ಯ. ನೀವು ಒಳ್ಳೆಯ ಉದ್ದೇಶ ಇಟ್ಟುಕೊಂಡು ಕೆಟ್ಟ ಸ್ವರದಲ್ಲಿ ಮಾತನಾಡಿದರೆ ಅಂತಹ ಸಂವಹನ ಬೇರೆಯವರಿಗೆ ಅರ್ಥವೂ ಆಗುವುದಿಲ್ಲ ಜೊತೆಗೆ ಸಂಗಾತಿಗಳ ನಡುವೆ ಇರಬೇಕಾದ ಸಮತೋಲನವನ್ನು ಕೂಡ ಅಲ್ಲೋಲಕಲ್ಲೋಲ ಮಾಡಿಬಿಡಬಹುದು. ಹಾಗಾಗಿ ನಾವು ಮಾತನಾಡುವ ಮಾತು ಮಾತನಾಡುವ ಟೋನ್ ಹಾಗೂ ದೈಹಿಕ ಭಾಷೆ ಎಲ್ಲವೂ ಸರಿ ಹೊಂದಾಣಿಕೆ ಆದರೆ ಮಾತ್ರ ಆ ವಿಷಯ ಇತರರಿಗೆ ಬಹಳ ಬೇಗ ತಲುಪುತ್ತದೆ.
ಮನಸ್ಸು ಬಿಚ್ಚಿ ಮಾತನಾಡಿ:
ಎಷ್ಟೋ ಬಾರಿ ಮಾನಸಿಕ ಮತ್ತು ಭಾವನಾತ್ಮಕವಾಗಿ ನಾವು ಮನಸ್ಸಿನಲ್ಲಿ ಇರುವುದನ್ನು ಹೇಳಿಕೊಳ್ಳದೆ ಸಮಸ್ಯೆಗೆ ಒಳಗಾಗುತ್ತೇವೆ. ನಮಗೆ ಅನಿಸಿದ್ದನ್ನು ಸರಿಯಾದ ರೀತಿಯಲ್ಲಿ ಹೇಳಲು ನಮಗೆ ಸಾಧ್ಯವಾಗಬೇಕು ಹಿಂದಿನ ಅನುಭವಗಳು ಭವಿಷ್ಯದಲ್ಲಿ ಮತ್ತೆ ಮರುಕಳಿಸದೆ ಇರುವಂತೆ ನೋಡಿಕೊಂಡರೆ ಸಂಬಂಧಗಳು ಹಾಳಾಗುವುದಿಲ್ಲ.
ಸಂವಹನದ ಸಂದರ್ಭದಲ್ಲಿ ನಿಮ್ಮನ್ನು ಬೇರೆಯವರನ್ನು ಗೌರವಿಸಿ:
ಸಂಗಾತಿಯ ನಡುವೆ ಮಾನಸಿಕ, ಭಾವನಾತ್ಮಕ, ದೈಹಿಕ ಸಂಬಂಧವು ಪರಸ್ಪರ ಕೊಡುವುದು ಮತ್ತು ತೆಗೆದುಕೊಳ್ಳುವುದು. ಆದರೆ ಇದಕ್ಕೆ ಸರಿಯಾದ ಕಮ್ಯುನಿಕೇಶನ್ ಅಥವಾ ಸಂವಹನ ಬೇಕು. ನಿಮ್ಮ ಸ್ವಂತ ಆಸೆಗಳ ಜೊತೆಗೆ ಇತರರ ಆಸೆಗಳನ್ನು ಗೌರವಿಸಿದರೆ ಮಾತ್ರ ಸಂಬಂಧದಲ್ಲಿ ಇನ್ನಷ್ಟು ಪ್ರೀತಿ ವಿಶ್ವಾಸ ಬೆಳೆಯಲು ಸಾಧ್ಯ.
ಸಂವಹನದಲ್ಲಿ ಪ್ರಾಮಾಣಿಕತೆ ಅತ್ಯಗತ್ಯ;
ಮಾನಸಿಕ ತಜ್ಞರು ಹೇಳುವಂತೆ ದಾಂಪತ್ಯದಲ್ಲಿ ಒಬ್ಬರು ಇನ್ನೊಬ್ಬರಿಗೆ ಸಂಭಾಷಣೆಯ ಮೂಲಕ ಅಥವಾ ಸಂವಹನದ ಮೂಲಕ ಯಾವುದಾದರೂ ವಿಷಯವನ್ನು ತಿಳಿಸಬೇಕಿದ್ದರೆ ಮೊದಲು ಅದರಲ್ಲಿ ಪ್ರಾಮಾಣಿಕತೆ ಇರಬೇಕು. ಯಾವುದೇ ಸುಳ್ಳು ಮಾತನಾಡದೆ ಮುಕ್ತವಾಗಿ ಪ್ರಾಮಾಣಿಕವಾಗಿ ಮಾತನಾಡಿದಾಗ ಮಾತ್ರ ಸಂಬಂಧವು ಇನ್ನಷ್ಟು ಗಟ್ಟಿಯಾಗುತ್ತದೆ ಜೊತೆಗೆ ಘರ್ಷಣೆಯಾಗುವ ಸಂಭವವೂ ಕಡಿಮೆ. ಅದೆಷ್ಟೋ ಬಾರಿ ತಪ್ಪು ಗ್ರಹಿಕೆಯಿಂದಲೇ ಸಂಬಂಧಗಳು ಮುರಿದುಬಿದ್ದಿವೆ. ಹಾಗಾಗಿ ನಮ್ಮ ಮಾತಿನಲ್ಲಿ ಸ್ಪಷ್ಟತೆ ಇದ್ದರೆ ಬೇರೆಯವರಿಗೆ ಅದನ್ನ ಅರ್ಥ ಮಾಡಿಸುವುದು ಸುಲಭ.
ನಿಮ್ಮ ಸಂಗಾತಿಯ ಭಾವನೆಗಳ ಬಗ್ಗೆ ನಿಮಗೆ ಸಹಾನುಭೂತಿ ಇರಬೇಕು. ಸಂಭಾಷಣೆ ಮಾಡುವಾಗಲೂ ಅವರಿಗೆ ನೀವು ಕೊಡುವ ಆತ್ಮವಿಶ್ವಾಸ ಅವರು ಮಾಡುವ ಹಲವು ತಪ್ಪನ್ನ ಸರಿ ಪಡಿಸಬಲ್ಲದು. ಮೊದಲೇ ಯಾವುದೇ ತೀರ್ಮಾನಕ್ಕೆ ಬರದೇ ಒಬ್ಬರ ಮಾತನ್ನು ಒಬ್ಬರು ಕೇಳಬೇಕು ಆಗ ಸಂಬಂಧದಲ್ಲಿ ನಂಬಿಕೆಯು ಹುಟ್ಟಿಕೊಳ್ಳುತ್ತದೆ ಜೊತೆಗೆ ಮುಕ್ತವಾಗಿ ಮಾತನಾಡಲು ಸಹಾಯಕವಾಗುತ್ತದೆ.
ಸಾಮಾನ್ಯವಾಗಿ ನಾವು ಇಂದು ಮೊಬೈಲ್ ಅಥವಾ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಜೊತೆಗೆ ನಮ್ಮ ಸಮಯವನ್ನು ಕಳೆಯುತ್ತೇವೆ. ಗಂಡ ಹೆಂಡತಿಯ ನಡುವೆಯೂ ಕೂಡ ಮಾತುಕತೆಗಳೇ ಕಡಿಮೆಯಾಗಿ ಬಿಟ್ಟಿವೆ. ಆದರೆ ದಂಪತಿಗಳು ಸರಿಯಾದ ರೀತಿಯಲ್ಲಿ ಸಂವಹನ ನಡೆಸಿದರೆ ಮಾತ್ರ ಆ ದಾಂಪತ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸದಾ ಜೊತೆಯಾಗಿ ಇರಲು ಸಾಧ್ಯ.



Click it and Unblock the Notifications













