Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬ್ರೇಕ್‌ಅಪ್ ಆದವರ ಜೊತೆಗೆ ಮತ್ತೆ ಒಂದಾಗಲು ಮನಸ್ಸಾಗಿದ್ಯಾ? ಈ ಬಗ್ಗೆ ಯೋಚಿಸಿ
ಪ್ರೀತಿ ಶಾಶ್ವತ ಅಂತಾರೆ ಆದರೆ ಅದೆಷ್ಟೋ ವರ್ಷಗಳ ಪ್ರೀತಿಸಿದ ಪ್ರೇಮಿಗಳು ಕೂಡ ಇನ್ನೇನು ಮದುವೆಯಾಗಬೇಕು ಅಂದುಕೊಳ್ಳುವಷ್ಟರಲ್ಲಿ ಬೇರೆ ಬೇರೆ ಯಾಗುತ್ತಾರೆ. ಪ್ರೀತಿಸಿದವರು ಬೇರೆ ಬೇರೆಯಾಗಲು ಅನೇಕ ಕಾರಣಗಳಿದೆ. ಒಂದು ಸಣ್ಣ ಜಗಳ, ಮನಸ್ಥಾಪಗಳು ಕೂಡ ಎಷ್ಟೋ ವರ್ಷದ ಪ್ರೀತಿಗೆ ತಿಲಾಂಜಲಿ ಇಟ್ಟ ಉದಾಹರಣೆಗಳನ್ನು ನಾವು ನೋಡಿದ್ದೇವೆ.
ನಾವು ಇಂದು ಅಂತಹದ್ದೇ ಪ್ರೀತಿಯ ಬಗ್ಗೆ ಚರ್ಚಿಸೋಣ. ಬ್ರೇಕ್ ಅಪ್ ಆದ ನಂತರ ಕೆಲವು ಸಮಯ ಆತ/ಆಕೆಯ ಮುಖ ನೋಡಲು ಕೂಡ ಇಷ್ಟ ಪಡೋದಿಲ್ಲ. ಆದರೆ ಪ್ರತಿದಿನ ಒಂದೇ ರೀತಿ ಇರೋದಿಲ್ಲ ಅಲ್ವಾ? ಯಾವತ್ತಾದರೂ ಒಂದು ದಿನ ಮತ್ತೆ ನಮ್ಮ ಹಳೆಯ ಪ್ರೀತಿ ಬೇಕು ಅಂತ ಅನ್ನಿಸುತ್ತೆ. ಅವರ ಜೊತೆಗೆ ಮತ್ತೆ ಒಂದಾಗಲು ಮನಸ್ಸು ಹಂಬಲಿಸುತ್ತದೆ. ಹಾಗಾದ್ರೆ ದೂರಾದ ನಿಮ್ಮ ಹಳೆಯ ಪ್ರೀತಿಯೊಂದಿಗೆ ಮತ್ತೆ ಒಂದಾಗೋದು ಹೇಗೆ ಇಲ್ಲಿದೆ ಟಿಪ್ಸ್.

1. ಬ್ರೇಕ್‌ಅಪ್ ನಂತರ ನೀವು ಅರ್ಥ ಮಾಡಿಕೊಂಡಿದ್ದನ್ನು ಸಂಗಾತಿಗೆ ತಿಳಿಸಿ
ಸಂಬಂಧವನ್ನು ಒಡೆಯೋದಕ್ಕೆ ಒಂದು ಕ್ಷಣ ಸಾಕು. ಆದರೆ ಒಡೆದು ಹೋದ ಹೃದಯವನ್ನು ಮತ್ತೆ ಜೋಡಿಸೋದು ತುಂಬಾನೇ ಕಷ್ಟ. ನೀವು ನಿಮ್ಮ ಸಂಗಾತಿಯನ್ನು ಮತ್ತೆ ಸೇರ ಬಯಸಿದ್ದೇ ಆದರೆ ಅವರ ಬಳಿ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳಿ ಬ್ರೇಕ್‌ಅಪ್ ನಂತರ ಏನೆಲ್ಲಾ ಆಯ್ತು. ಸಂಗಾತಿಯ ಬಗ್ಗೆ ನಿಮಗೆ ಕಾಡುತ್ತಿದ್ದ ನೆನಪುಗಳು, ಮತ್ತೆ ನೀವು ಯಾವ ಕಾರಣಕ್ಕೆ ಹಳೆಯ ಪ್ರೀತಿಗೆ ಹಂಬಲಿಸುತ್ತಿದ್ದೀರಿ ಅನ್ನೋದನ್ನ ಅರ್ಥೈಸಿ.
2. ಸ್ನೇಹಿತರು ಕುಟುಂಬಸ್ಥರೊಂದಿಗೆ ಈ ಬಗ್ಗೆ ಚರ್ಚಿಸಿ
ಹಳೆಯ ಪ್ರೀತಿ ನೆನಪುಗಳು ನಿಮ್ಮನ್ನು ಪದೇ ಪದೇ ಕಾಡುತ್ತಿರಬಹುದು. ಇಂತಹ ಸಂದರ್ಭದಲ್ಲಿ ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗಬೇಡಿ. ಬದಲಾಗಿ ನಿಮ್ಮ ಸ್ನೇಹಿತರು ಅಥವಾ ಕುಟುಂಬಸ್ಥರೊಂದಿಗೆ ಈ ಬಗ್ಗೆ ಚರ್ಚಿಸಿ. ನಿಮ್ಮ ನಿರ್ಧಾರದ ಬಗ್ಗೆ ಅವರಿಗೆ ತಿಳಿಸಿ. ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.
3. ನಿಮ್ಮ ಸಂಗಾತಿಯ ಜಾಗದಲ್ಲಿ ನಿಂತು ಆಲೋಚಿಸಿ
ಕೆಲವೊಂದು ಸಾರಿ ನಾವು ಹಳೆಯ ಪ್ರೀತಿಯನ್ನು ಸೇರಲು ಮನಸ್ಸು ಮಾಡುತ್ತೇವೆ. ಆದರೆ ಆ ಕ್ಷಣದಲ್ಲಿ ಅವರಿಂದ ನಮಗಾದ ನೋವುಗಳು ನೆನಪಾಗುತ್ತಿರುತ್ತದೆ. ಇಂತಹ ಸಮಯದಲ್ಲಿ ಒಂದು ಸಾರಿ ಅವರ ಜಾಗದಲ್ಲಿ ನಿಂತು ಆಲೋಚಿಸಿ. ಅವರು ಯಾಕೆ ಆ ರೀತಿ ಹೇಳಿರಬಹುದು, ಆ ಕ್ಷಣ ನನ್ನಿಂದಲೇ ತಪ್ಪಾಗಿತ್ತಾ ಅಂತ ಯೋಚಿಸಿ ನೋಡಿ. ಎಲ್ಲದಕ್ಕೂ ಉತ್ತರ ಸಿಗುತ್ತದೆ.
4. ನಿರ್ಧಾರ ಗಟ್ಟಿಯಾಗಿರಲಿ
ಯಾವುದೇ ವಿಚಾರದಲ್ಲೇ ಆಗಿರಲಿ ಆತುರದ ನಿರ್ಧಾರ ಮಾಡಲೇಬಾರದು. ಒಂದು ಸಾರಿ ಬ್ರೇಕ್ ಅಪ್ ಆದ ಮೇಲೆ ಮತ್ತೆ ಅವರ ಜೊತೆಗೆ ಸೇರಬೇಕಾದರೆ ನೂರು ಸಾರಿ ಆಲೋಚನೆ ಮಾಡಿ. ಆತುರಕ್ಕೆ ಬಿದ್ದು ಅವರ ಜೊತೆಗೆ ಒಂದಾದರೆ ಆಪತ್ತು ತಪ್ಪಿದಲ್ಲ. ಮತ್ತೆ ಬ್ರೇಕ್ ಅಪ್ ಆಗುವ ಸಾಧ್ಯತೆ ಇದೆ. ಹೀಗಾಗಿ ನೀವು ತೆಗೆದುಕೊಳ್ಳೋ ಒಂದು ನಿರ್ಧಾರದ ಮೇಲೆ ನಿಮ್ಮ ಇಡೀ ಭವಿಷ್ಯವೇ ನಿಂತಿದೆ.
5. ಹಿಂದೆ ಮಾಡಿದ ತಪ್ಪುಗಳಿಂದ ಪಾಠ ಕಲಿತುಕೊಳ್ಳಿ
ನಿಮ್ಮ ಹಳೆಯ ಸಂಗಾತಿಯೊಂದಿಗೆ ಮತ್ತೆ ಒಟ್ಟಾಗೋದು ಖುಷಿಯ ವಿಚಾರ. ಆದರೆ ಈ ಹಿಂದೆ ಆದ ತಪ್ಪುಗಳನ್ನು ಮತ್ತೆ ಮತ್ತೆ ಮಾಡಿದರೆ ಖಂಡಿತ ಅದು ನಿಮ್ಮ ಮೂರ್ಖತನವಾಗುತ್ತದೆ. ಹಿಂದಿನ ತಪ್ಪುಗಳನ್ನು ನಿಮ್ಮ ಮುಂದಿನ ಜೀವನಕ್ಕೆ ಪಾಠವಾಗಲಿ. ತಪ್ಪುಗಳನ್ನು ತಿದ್ದಿ ಮುಂದೆ ಸಾಗಿದರೆ ಬದುಕು ಬಂಗಾರವಾಗುತ್ತದೆ.
6. ಹಳೆಯ ಪ್ರೀತಿಯನ್ನು ಬಯಸಲು ಕಾರಣವೇನು?
ಪ್ರೀತಿ ಎರಡು ಮನಸ್ಸುಗಳನ್ನು ಒಂದು ಮಾಡಬೇಕೆ ಹೊರತು ಮನಸ್ಸುಗಳನ್ನು ಒಡೆಯೋದು ಪ್ರೀತಿ ಆಗಲೇಬಾರದು. ಹಳೆಯ ಪ್ರೀತಿಯನ್ನು ಸೇರಲು ಮತ್ತೆ ಮನಸ್ಸಾಗಿದೆ ಎಂದರೆ ಅದರ ಹಿಂದೆ ಖಂಡಿತ ಒಂದಲ್ಲ ಒಂದು ಕಾರಣ ಇದ್ದೇ ಇರುತ್ತದೆ. ಆದರೆ ನಿಮ್ಮ ನಿರ್ಧಾರ ಸರಿಯಾಗಿದ್ಯಾ? ಮತ್ತೆ ಪ್ರೀತಿಯನ್ನು ಉಳಿಸಿಕೊಳ್ಳೋ ತಾಳ್ಮೆ ಇದ್ಯಾ? ಹಳೆಯ ಪ್ರೀತಿಯಲ್ಲಿ ನೀವು ಮತ್ತೆ ಖುಷಿಯಾಗಿರಬಹುದಾ ಎಂದು ನಿಮ್ಮನ್ನು ನೀವೆ ಪ್ರಶ್ನಿಸಿಕೊಳ್ಳಿ.
7. ಸಂಬಂಧ ಕೊನೆಗೊಳ್ಳಲು ಕಾರಣ ಏನು ಎಂಬುವುದನ್ನು ಚಿಂತಿಸಿ
ಪ್ರೀತಿಸಿದ ಎರಡು ಜೀವಗಳು ದೂರಾಗುವ ನಿರ್ಧಾರಕ್ಕೆ ಬಂದ ದಿನವನ್ನು ಜ್ಞಾಪಿಸಿಕೊಳ್ಳಿ. ಯಾವ ಕಾರಣಕ್ಕಾಗಿ ದೂರ ಆಗಿದ್ದೀರಿ ಅನ್ನೋದನ್ನು ಅವಲೋಕಿಸಿ. ನೀವು ಮತ್ತೆ ಅವರ ಜೊತೆಗೆ ಒಂದಾದರೆ ಖುಷಿಯಾಗಿರಬಹುದಾ ಅನ್ನೋದನ್ನ ಲೆಕ್ಕಹಾಕಿ. ಆಗ ನೀವೆ ಒಂದು ಸರಿಯಾದ ನಿರ್ಧಾರಕ್ಕೆ ಬರುತ್ತೀರಿ.
ಹಳೆಯ ಸಂಗಾತಿಯ ಜೊತೆಗೆ ಮತ್ತೆ ಒಂದಾಗೋದು ತಮಾಷೆಯ ವಿಚಾರವಲ್ಲ. ಹೀಗಾಗಿ ಅಳೆದು ತೂಗಿ ನಿರ್ಧಾರ ಮಾಡಿ. ಕೊಂಚ ಎಡವಿದರು ಮತ್ತೆ ನೋವು ಅನುಭವಿಸುತ್ತೀರಿ. ಪ್ರೀತಿಯನ್ನು ದಡ ಸೇರಿಸುವ ಶಕ್ತಿ ಇದ್ದರೆ ಮಾತ್ರ ಹಳೆಯ ಪ್ರೀತಿಯ ಜೊತೆಗೆ ಮತ್ತೆ ಒಂದಾಗಿ.



Click it and Unblock the Notifications














