Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ವಿವಾಹಿತ ಮಹಿಳೆಯರು ಮಲಗಲು ಇದು ಸರಿಯಾದ ಸ್ಥಳ! ದಾಂಪತ್ಯದಲ್ಲಿ ಸಂತೋಷ ಉಳಿಯುತ್ತೆ
ನಿದ್ರೆ ಎಲ್ಲರಿಗೂ ಇಷ್ಟ. ಆದರೆ, ಈ ರೀತಿ ಮಲಗುವುದು ಸಂಸಾರಕ್ಕೆ ಕಷ್ಟ! ಬಹುತೇಕ ವಿವಾಹಿತ ಮಹಿಳೆಯರಿಗೆ ಇದರ ಅರಿವು ಇರಲ್ಲ. ಹೀಗಾಗಿ, ದಾಂಪತ್ಯ ಜೀವನದಲ್ಲಿ ವಿವಿಧ ರೀತಿಯ ಅಡೆತಡೆಗಳನ್ನು ಎದುರಿಸುತ್ತಾರೆ. ಅಂತಹವರು ಈ ಸಲಹೆಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ಹೌದು, ವಿವಾಹಿತ ಮಹಿಳೆಯರು (Married Women) ಮಲಗಲು (sleeping) ಇದು ಸರಿಯಾದ ಸ್ಥಳ. ಇದರಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷ ಉಳಿಯುತ್ತದೆ. ಈ ಅಭ್ಯಾಸಗಳನ್ನು ಪಾಲಿಸಿದರೆ, ವಿವಾಹಿತ ಮಹಿಳೆಯರ ವೈವಾಹಿಕ ಜೀವನ ಹೆಚ್ಚು ಆಹ್ಲಾದಕರ. ಶಾಂತಿಯುತ ಮತ್ತು ಸಮೃದ್ಧವಾಗುತ್ತದೆ.
ವಿವಾಹಿತ ಮಹಿಳೆಯರು ಮಲಗುವ ಸ್ಥಳಕ್ಕೆ (Sleeping Direction) ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ಪ್ರಮುಖ ಸಲಹೆಗಳಿವೆ. ಇದು ಅವರ ಸಾಂಸಾರಿಕ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸಲು ಸಹಾಯ ಮಾಡುತ್ತದೆ. ನೀವು ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಿಂದ ಈ ನಿಯಮಗಳನ್ನು ಅನುಸರಿಸುವುದು ಒಳ್ಳೆಯದು. ಇದರಿಂದ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಜೊತೆಗೆ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ಸ್ಟ್ರಾಂಗ್ ಆಗುತ್ತದೆ.

ವಿವಾಹಿತ ಮಹಿಳೆಯರು ಯಾವ ದಿಕ್ಕಿನಲ್ಲಿ ಮಲಗಬೇಕು?
ವಿವಾಹಿತ ಮಹಿಳೆಯರು ಮನೆಯ ನೈಋತ್ಯ ದಿಕ್ಕಿನಲ್ಲಿ ಮಲಗಲು (Sleeping Position) ಆದ್ಯತೆ ನೀಡಬೇಕು. ಈ ದಿಕ್ಕು ಸ್ಥಿರತೆ ಮತ್ತು ವಿಶ್ವಾಸಾರ್ಹತೆಯ ಸಂಕೇತ ಎಂದು ಹೇಳಲಾಗಿದೆ. ನೀವು ಈ ದಿಕ್ಕಿನಲ್ಲಿ ಮಲಗುವುದರಿಂದ ದಾಂಪತ್ಯ ಜೀವನದಲ್ಲಿ ನಂಬಿಕೆ ಮತ್ತು ತಿಳುವಳಿಕೆ ಉಳಿಯುತ್ತದೆ. ಇದು ಪತಿ-ಪತ್ನಿಯರ ಸಂಬಂಧವನ್ನು ಬಲಪಡಿಸುತ್ತದೆ. ಜೊತೆಗೆ ವೈವಾಹಿಕ ಜೀವನದಲ್ಲಿ ಸ್ಥಿರತೆ ಉಂಟುಮಾಡುತ್ತದೆ.
ಪತಿಯ ಈ ಭಾಗದಲ್ಲಿ ಮಲಗಿದರೇ ಭಲೇ ಅದೃಷ್ಟ
ಪತ್ನಿಯು ತನ್ನ ಪತಿಯ ಬಲಭಾಗದಲ್ಲಿ ಮಲಗಬೇಕು. ವೈದಿಕ ದೃಷ್ಟಿಕೋನದಿಂದ ಈ ಸಂಪ್ರದಾಯವನ್ನು ಶುಭ ಎಂದು ಹೇಳಲಾಗುತ್ತದೆ. ಇದು ವೈವಾಹಿಕ ಸಂಬಂಧಗಳಲ್ಲಿ ಸಾಮರಸ್ಯ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ. ಇದು ಮಹಿಳೆಯ ಗೌರವದ ಪ್ರತೀಕ ಎನ್ನಲಾಗಿದೆ. ವಿಶೇಷವಾಗಿ, ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.
ನಿಮ್ಮ ಹಾಸಿಗೆ ಈ ದಿಕ್ಕಿನಲ್ಲಿ ಇರಬೇಕು
ಮಹಿಳೆಯರು ಈ ನಿಯಮದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮನೆಯಲ್ಲಿ ಹಾಸಿಗೆಯನ್ನು ಗೋಡೆಯಿಂದ ಸ್ವಲ್ಪ ದೂರದಲ್ಲಿ ಇಡಬೇಕು. ಹೆಡ್‌ರೆಸ್ಟ್ ಪೂರ್ವ ಅಥವಾ ದಕ್ಷಿಣದ ಕಡೆಗೆ ಇರಬೇಕು. ಇದು ಮಾನಸಿಕ ಶಾಂತಿಯನ್ನು ನೀಡುತ್ತದೆ. ವಿವಾಹಿತ ಮಹಿಳೆಯನ್ನು ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ. ಹೀಗೆ ಮಾಡಿದರೆ, ಮನೆಯಲ್ಲಿ ಸಂಘರ್ಷ ಅಥವಾ ವಿವಾದ ಬಾರದಂತೆ ನೋಡಿಕೊಳ್ಳುತ್ತದೆ.
ಹಾಸಿಗೆಯ ಕೆಳಗೆ ಖಾಲಿ ಜಾಗ ಇರಬಾರದು
ವಿವಾಹಿತ ಮಹಿಳೆಯರು ತಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ತಮ್ಮ ಹಾಸಿಗೆಯ ಕೆಳಗೆ ಸ್ವಚ್ಛತೆ ಮತ್ತು ಶುದ್ಧತೆ ಕಾಪಾಡಿಕೊಳ್ಳುವುದು ಮುಖ್ಯ. ಹಾಸಿಗೆಯ ಕೆಳಗೆ ಖಾಲಿ ಜಾಗವನ್ನು ಬಿಡುವುದು ಒಳಿತಲ್ಲ. ಹಾಗಯೇ ಶೂಗಳು, ಚಪ್ಪಲಿಗಳು ಅಥವಾ ಜಂಕ್ ವಸ್ತುಗಳನ್ನು ಇಡುವುದು ದಾಂಪತ್ಯದಲ್ಲಿ ಸಮಸ್ಯೆಗಳನ್ನು ತರಬಹುದು.
ಮಲಗುವ ಮುನ್ನ ಈ ಕೆಲಸ ತಪ್ಪದೇ ಮಾಡಿ
ಮಲಗುವ ಮುನ್ನ ಸ್ವಲ್ಪ ಸಮಯ ದೇವರನ್ನು ಪೂಜಿಸಿ. ಧ್ಯಾನ ಮಾಡಿ ಅಥವಾ ಪ್ರಾರ್ಥಿಸುವುದು ಸಂಪ್ರದಾಯ. ವಿವಾಹಿತ ಮಹಿಳೆಯರು ತಮ್ಮ ದಿನವನ್ನು ಕೊನೆಗೊಳಿಸುವ ಮೊದಲು ಕೆಲವು ಕ್ಷಣಗಳನ್ನು ದೇವರೊಂದಿಗೆ ಸಂವಹನ ನಡೆಸಲು ಮೀಸಲಿಡಬೇಕು. ಇದು ಮಾನಸಿಕ ಶಾಂತಿ ನೀಡುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಮತೋಲನ ಮತ್ತು ಆಧ್ಯಾತ್ಮಿಕ ಬಂಧವನ್ನು ಕಾಪಾಡುತ್ತದೆ.
ಈ 5 ವಸ್ತುಗಳನ್ನು ತಮ್ಮ ಕೋಣೆಯಲ್ಲಿ ಇಟ್ಟುಕೊಳ್ಳಿ
- ರಾಧಾ-ಕೃಷ್ಣರ ಚಿತ್ರ ಅಥವಾ ವಿಗ್ರಹ.
- ಪರಿಮಳಯುಕ್ತ ದ್ರವ್ಯ (ಧೂಪ) ಅಥವಾ ನೈಸರ್ಗಿಕ ಸುಗಂಧ ದ್ರವ್ಯ (ಉದಾ: ಶ್ರೀಗಂಧ, ಗುಲಾಬಿ).
- ಸ್ಫಟಿಕ ಚೆಂಡು ಅಥವಾ ಗುಲಾಬಿ ಸ್ಫಟಿಕ ಶಿಲೆ.
- ತಾಜಾ ಹೂವುಗಳ ಪುಷ್ಪಗುಚ್ಛ (ಕಮಲ, ಗುಲಾಬಿ ಮತ್ತು ಮಲ್ಲಿಗೆ ಹೂವು).
- ಏಳು ಕುದುರೆಗಳ ಚಿತ್ರ.



Click it and Unblock the Notifications
