Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಿರಾಟ್ ಕೊಹ್ಲಿ ಒಬ್ಬ ವ್ಯಕ್ತಿಯಾಗಿ, ಗಂಡನಾಗಿ ಈ ಕಾರಣಗಳಿಂದ ದಿ ಗ್ರೇಟ್ ಅನಿಸಿಕೊಳ್ಳುತ್ತಾರೆ
ವಿರಾಟ್ ಆಟದಲ್ಲಿ ಮಾತ್ರವಲ್ಲ ತಮ್ಮ ಗುಣ, ಸಿಂಪ್ಲಿಸಿಟಿ, ದೇವರ ಮೇಲೆ ಇಟ್ಟಿರುವ ಭಕ್ತಿ ಭಾವ ಹೀಗೆ ಅನೇಕ ಕಾರಣಗಳಿಂದ ಗಮನ ಸೆಳೆಯುತ್ತಾರೆ. ಅಷ್ಟೊಂದು ದೊಡ್ಡ ಸ್ಟಾರ್ ಆದರೂ ಆ ವ್ಯಕ್ತಿಯನ್ನು ನೋಡುವಾಗ ತುಂಬಾ ಸಿಂಪಲ್ ಅನಿಸುತ್ತಾರೆ. ಒಬ್ಬ ಕ್ರಿಕೆಟಿಗಾಗಿ ಎಷ್ಟು ಗಮನ ಸೆಳೆಯುತ್ತಾರೋ ಒಬ್ಬ ಮ್ಯಾನ್ ಆಗಿ ಕೂಡ ಅಷ್ಟೇ ಗಮನ ಸೆಳೆಯುತ್ತಾರೆ.
ವಿರುಷ್ಕಾ... ಅನುಷ್ಕಾ-ವಿರಾಟ್ ಕೊಹ್ಲಿ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ ಕರೆಯುವ ಹೆಸರು. ಈ ದಂಪತಿ ನೋಡಿದವರಿಗೆ ಇಬ್ಬರು ಎಷ್ಟು ದೊಡ್ಡ ಸ್ಟಾರ್‌ಗಳು, ಆದರೂ ಅದರ ಯಾವ ಹಮ್ಮು-ಬಿಮ್ಮುವಿಲ್ಲದ ಜೋಡಿ ಎಂದನಿಸದೆ ಇರಲ್ಲ. ಅನುಷ್ಕಾ ಶರ್ಮಾ ಒಮ್ಮೆ ವಿರಾಟ್ ಕೊಹ್ಲಿ ಬಗ್ಗೆ ಹೇಳುವಾಗ 'I am married to the greatest man in the world' ಎಂಬ ಮಾತನ್ನು ಹೇಳಿದ್ದರು. ಈ ಪದಗಳೇ ಸಾಕು ವಿರಾಟ್ ಎಂಥ ಅದ್ಭುತ ವ್ಯಕ್ತಿ ಎಂದ ಹೇಳಲು.

ವಿರುಷ್ಕಾ ಜೋಡಿಯ ಸುಂದರ ದಾಂಪತ್ಯದ ರಹಸ್ಯ ತಿಳಿಸಿದ ಅನುಷ್ಕಾಶರ್ಮಾ
ಒಂದು ಖಾಸದಿ ಮಾಧ್ಯಮ ನೀವು ಹಾಗೂ ವಿರಾಟ್ ಇಬ್ಬರು ದೊಡ್ಡ ಸೆಲೆಬ್ರಿಟಿ, ಇಬ್ಬರು ಬೇರೆ-ಬೇರೆ ಕ್ಷೇತ್ರದಲ್ಲಿ ತುಂಬಾನೇ ಹೆಸರು ಮಾಡಿದವರು, ನೀವು ಜೊತೆಗಿರುವಾಗ ಹೇಗೆ ಇದನ್ನು ಮ್ಯಾನೇಜ್ ಮಾಡುತ್ತೀರಿ ಎಂದು ಕೇಳಿದ್ದರು. ಅದಕ್ಕೆ ಅನುಷ್ಕಾರವರು ನಾವಿಬ್ಬರು ಆ ರೀತಿ ಯೋಚಿಸಲು ಹೋಗುವುದೇ ಇಲ್ಲ, ನಾವಿಬ್ಬರೂ ಆ ಪ್ರಸಿದ್ಧಿ, ಫೇಮ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ನಾವು ನಮ್ಮ ಪ್ರಸಿದ್ಧಿ ಬಗ್ಗೆ ಯೋಚಿಸಿಲಾರಂಭಿಸಿದರೆ ನಮ್ಮ ಬಗ್ಗೆ ಹೆಚ್ಚು ಯೋಚಿಸಲಾರಂಭಿಸಿದರೆ ಆ ಸಂಬಂಧದಲ್ಲಿ ಸಮಸ್ಯೆಯಿದೆಯೆಂದರ್ಥ. ನಾವಿಬ್ಬರು ತುಂಬಾನೇ ಸಿಂಪಲ್, ತುಂಬಾ ಸಿಂಪಲ್ ವಿಷಯಗಳನ್ನು ಇಷ್ಟಪಡುವವರು ಎಂದು ಹೇಳಿದ್ದರು.
ನಾವು ನಮ್ಮದೇ ಲೋಕದಲ್ಲಿ ಬಾಳಲು ಇಷ್ಟಪಡುವವರು, ಆದ್ದರಿಂದಲೇ ಈ ಸ್ಟಾರ್‌ಡಮ್‌ನಿಂದ ದೂರ ಓಡಿ ಹೋಗುವ ಪ್ರಯತ್ನ ಪಡುತ್ತೇವೆ. ನಾವಿಬ್ಬರು ಬೇರೆ-ಬೇರೆ ಎಂದು ಭಾವಿಸುವುದೇ ಇಲ್ಲ, ಇಬ್ಬರು ಇಬ್ಬರನ್ನೊಬ್ಬರು ಗೌರವಿಸುತ್ತೇವೆ. ನಮ್ಮ ಕೆಲಸವನ್ನು ನಾವು ಮಾಡುತ್ತೇವೆ, ಆದರೆ ಮನೆಗೆ ಮರಳಿದ ಮೇಲೆ ನಮ್ಮ ಬದುಕು ನಮ್ಮದಾಗಿರುತ್ತದೆ. ಅಲ್ಲದೆ ನಾವಿಬ್ಬರು ಧಾರ್ಮಿಕ ವಿಷಯಗಳಲ್ಲಿ ಸಮಾನ ಆಸಕ್ತಿಯಿರುವವರು, ಹಾಗಾಗಿ ನಾವು ಬದುಕನ್ನು ತುಂಬಾ ಸರಳವಾಗಿ ಬದುಕಲು ಇಷ್ಟಪಡುತ್ತೇವೆ ಎಂದು ಹೇಳಿದ್ದರು.
ಪತ್ನಿಯನ್ನು ಟೀಕಿಸಿದವರ ಬಾಯಿ ಮುಚ್ಚಿಸಿದ್ದರು ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಗೆದ್ದಾಗ ಎಲ್ಲರೂ ಬೀಗುತ್ತಾರೆ, ಆದರೆ ಸೋತಾಗ ಅಷ್ಟೇ ಟೀಕೆ ಮಾಡುತ್ತಾರೆ. ಹೀಗೆ ಟೀಕೆ ಮಾಡುವ ಭರದಲ್ಲಿ ಅನುಷ್ಕಾರನ್ನು ಟೀಕಿಸಿದ್ದರು. ವಿರಾಟ್ ಸೋಲಿಗೆ ಅನುಷ್ಕಾ ಕಾರಣ ಎಂಬ ರೀತಿಯಲ್ಲಿ ಟೀಕಿಸಿದ್ದರು. ಆದರೆ ವಿರಾಟ್ ಸೌತ್ ಆಫ್ರಿಕಾ ಶ್ರೇಣಿಯಲ್ಲಿ ಗೆಲ್ಲುವ ಮೂಲಕ ನನ್ನ ಪತ್ನಿ ನನ್ನನ್ನು ಸದಾ ಹುರಿದುಂಬಿಸುತ್ತಾರೆ, ಆಕೆಯೇ ನನ್ನ ಶಕ್ತಿ, ಜನರು ಅವರನ್ನು ಟೀಕಿಸಿದ್ದರು, ನಾವು ಅದನ್ನೆಲ್ಲಾ ಮೀರಿ ಬಂದಿದ್ದೇವೆ, ಅವರು ನನ್ನಲ್ಲಿ ಸದಾ ಪಾಸಿಟಿವಿಟಿ ತುಂಬುವ ವ್ಯಕ್ತಿ ಎಂದು ಹೇಳುವ ಮೂಲಕ ಟೀಕೆ ಮಾಡಿದವರಿಗೆ ಸರಿಯಾಗಿಯೇ ತಿರುಗೇಟು ನೀಡಿದ್ದರು.
ಹೀಗೆ ಒಬ್ಬ ಆಟಗಾರಗಿ ಮಾತ್ರವಲ್ಲ ಆಟಗಾರನಾಗಿ ಒಬ್ಬ ಅದ್ಭುತ ಮ್ಯಾನ್.
ಭಾರತದ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ವಿರಾಟ್
* 50 ಶತಕ ಸೃಸ್ಟಿಸಿದ ಏಕೈಕ ಕ್ರಿಕೆಟಿಗ, ಈ ಮೂಲಕ ವಿರಾಟ್ ಪಾಲಿಗೆ ದೇವರಾಗಿರುವ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ್ದಾರೆ. ಇವರು ದಾಖಲೆ ಮುರಿದಿರುವುದಕ್ಕೆ ಸಚಿನ್ ಕೂಡ ಖುಷಿ ಪಟ್ಟಿದ್ದಾರೆ. ಇನ್ನಷ್ಟು ದಾಖಲೆಗಳನ್ನು ಬರಿಯುವಂತಾಗಲಿ, We Proud Of You Virat Kohli.....



Click it and Unblock the Notifications
