Latest Updates
-
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ
ಮಗಳ ಮದುವೆಗೂ ಮೊದಲು ತಾಯಿ ಈ 10 ವಿಚಾರಗಳನ್ನು ಮಗಳಿಗೆ ತಿಳಿಸಲೇಬೇಕು!
ಅಮ್ಮ ಹಾಗೂ ಮಗಳ ಬಾಂಧವ್ಯ ಇಡೀ ಜಗತ್ತಿನಲ್ಲೇ ಬಿಡಿಸಲಾರದ ಒಂದು ಅನುಬಂಧ. ಮಗಳು ಶಾಶ್ವತವಾಗಿ ಅಮ್ಮನ ಜೊತೆಯಲ್ಲೇ ಇರೋದಿಕ್ಕೆ ಆಗೋದಿಲ್ಲ. ಒಂದಲ್ಲ ಒಂದು ದಿನ ಮದುವೆಯಾಗಿ ಆಕೆ ತನ್ನ ಗಂಡನ ಮನೆಗೆ ಹೋಗಲೇಬೇಕು. ಈ ಸಂದರ್ಭದಲ್ಲಿ ಆ ತಾಯಿಗೆ ಆಗುವ ದುಃಖ, ನೋವನ್ನು ಪದಗಳಲ್ಲಿ ವಿವರಿಸೋದಕ್ಕೆ ಸಾಧ್ಯವಿಲ್ಲ.
ಇತ್ತ ಮಗಳು ಕೂಡ ಅಮ್ಮನನ್ನು ಬಿಟ್ಟು ಹೋಗುವಾಗ ಅಷ್ಟೇ ನೋವು, ಯಾತನೆಯನ್ನು ಅನುಭವಿಸುತ್ತಾಳೆ. ಅದ್ರಲ್ಲೂ ಮಗಳ ಮದುವೆಗೂ ಮೊದಲು ತಾಯಿ ಈ 10 ಪಾಠಗಳನ್ನು ಮಗಳಿಗೆ ಹೇಳಿ ಕೊಡಲೇಬೇಕು. ಹಾಗಾದ್ರೆ ಆ ವಿಚಾರಗಳು ಯಾವುದು ಅನ್ನದನ್ನು ತಿಳಿಯೋಣ.

1. ಮೊದಲ ಒಂದು ವರ್ಷ ಕೊಂಚ ಕಷ್ಟ ಆಗುತ್ತದೆ
ಮದುವೆ ಅನ್ನೋದು ಒಂದು ಹೆಣ್ಣು ಮಗಳಿಗೆ ತನ್ನ ಜೀವನದ ಎರಡನೇ ಅಧ್ಯಾಯ ಇದ್ದ ಹಾಗೆ. ಒಂದು ಮನೆಯನ್ನು ಬಿಟ್ಟು ಮತ್ತೊಂದು ಮನೆಗೆ ಹೋದಾಗ ಅಲ್ಲಿ ತುಂಬಾ ವಿಚಾರಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಅವರ ಆಚಾರ ವಿಚಾರಗಳನ್ನು ಪಾಲಿಸಬೇಕಾಗುತ್ತದೆ. ಮೊದ ಮೊದಲು ಕಷ್ಟ ಆದರೂ ಕೂಡ ಒಂದು ವರ್ಷ ಆಗುವಷ್ಟರಲ್ಲಿ ಎಲ್ಲದಕ್ಕೂ ಹೊಂದಿಕೊಳ್ಳುತ್ತೀಯಾ ಎಂದು ಮಗಳಿಗೆ ಹೇಳಿ ಕಳುಹಿಸಿ.
2. ತಂದೆ-ತಾಯಿಗೆ ನೀಡುವ ಗೌರವವನ್ನು ಅತ್ತೆ-ಮಾವನಿಗೂ ನೀಡಬೇಕು
ಪ್ರತಿ ಮಕ್ಕಳಿಗೂ ತಂದೆ-ತಾಯಿಯ ಮೇಲೆ ಅತೀವ ಗೌರವ ಇದ್ದೇ ಇರುತ್ತದೆ. ಆದರೆ ಮದುವೆಯಾದ ಮೇಲೆ ಅತ್ತೆ-ಮಾವನ ಮೇಲೆ ಅದೇ ಗೌರವ ಬರುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಆದರೆ ಅದನ್ನು ರೂಢಿಸಿಕೊಳ್ಳಬೇಕು. ಅತ್ತೆ-ಮಾವನ ಜೊತೆಗೆ ಮಾನಸ್ಥಾಪ ಉಂಟಾದರೂ ಕೂಡ ಅದನ್ನು ಸರಿಪಡಿಸಿ ಸುಖ ಸಂಸಾರ ನಡೆಸಬೇಕು. ಆತ್ತೆ-ಮಾವನೊಂದಿಗೆ ಯಾವ ಕಾರಣಕ್ಕೂ ಕೋಪ ಮಾಡಿಕೊಳ್ಳಬಾರದು. ಅವರನ್ನು ನಿನ್ನ ಹೆತ್ತವರಂತೆ ನೋಡಿಕೊಳ್ಳಬೇಕು.
3. ಕುಟುಂಬದ ರಹಸ್ಯ ಹೊರಗಡೆ ಗೊತ್ತಾಗದಂತೆ ಕಾಪಾಡಬೇಕು
ಕುಟುಂಬ ರಹಸ್ಯಗಳು ಯಾವಾತ್ತಿಗೂ ಗುಟ್ಟಾಗಿರಬೇಕು. ಗಂಡನ ಮನೆಯಲ್ಲಿ ಆರ್ಥಿಕ ಸಮಸ್ಯೆ, ಅಣ್ಣ-ತಮ್ಮನ ಜಗಳ, ಅತ್ತೆಯ ಜೊತೆಗೆ ಮನಸ್ಥಾಪ ಏನೇ ಇರಬಹುದು. ಆದರೆ ಅದು ಹೊರಗಡೆ ಬಾರದಂತೆ ಹುಷಾರಾಗಿ ನೋಡಿಕೊಳ್ಳಬೇಕು. ಹೊರಗಿನವರ ಜೊತೆಗೆ ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಹೋಗಲೇಬಾರದು. ಮನೆಯ ಗುಟ್ಟು ಹೊರಗಡೆ ರಟ್ಟಾಗೋದಕ್ಕೆ ಅವಕಾಶ ಕೊಡಲೇಬಾರದು. ಮನೆ ಮರ್ಯಾದಿಯನ್ನು ಬೀದಿಗೆ ತರಬಾರದು ಎಂದು ಮಗಳಿಗೆ ಹೇಳಿ ಕೊಡಿ.
4. ಮನೆಯನ್ನು ನಡೆಸೋದನ್ನು ಕಲಿತಿರಬೇಕು
ಮನೆಯನ್ನು ನಿಭಾಯಿಸೋದು ಒಂದು ಕಲೆ. ಸೊಸೆಗೆ ಈ ಕಲೆ ಗೊತ್ತಿರಬೇಕು. ಅತ್ತೆ-ಮಾವನಿಗೆ ವಯಸ್ಸಾಗುತ್ತಿದ್ದಂತೆ ಈ ಜವಾಬ್ದಾರಿಯನ್ನು ಸೊಸೆ ನಿಭಾಯಿಸಬೇಕು. ಖುರ್ಚು-ವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗಬೇಕು, ಮನೆಯಲ್ಲಿರೋ ಎಲ್ಲರನ್ನೂ ಜೊತೆಯಾಗಿ ಕೊಂಡೊಯ್ಯಬೇಕು. ಮನೆಯಲ್ಲಿ ಯಾವುದೇ ವಿವಾದ, ಜಗಳಗಳಿಗೆ ಆಸ್ಪದ ನೀಡಬಾರದು. ಗೊತ್ತಾಗದ ವಿಚಾರವನ್ನು ಅತ್ತೆಯಿಂದ ಕೇಳಿ ತಿದುಕೊಳ್ಳಬೇಕು.
5. ಗಂಡ, ಮಕ್ಕಳ ಜೊತೆಗೆ ನಿನಗೆ ಪ್ರಾಮುಖ್ಯತೆ ನೀಡೋದನ್ನು ಮರೀಬೇಡ!
ಹೆಚ್ಚಿನ ಹೆಣ್ಣು ಮಕ್ಕಳು ಮದುವೆಯಾದ ಮೇಲೆ ಹೆಚ್ಚಿನ ಪ್ರಾಮುಖ್ಯತೆಯನ್ನು ಗಂಡ ಹಾಗೂ ಮಕ್ಕಳಿಗೆ ನೀಡುತ್ತಾರೆ. ಮದುವೆಯ ನಂತರ ತಮ್ಮೆಲ್ಲಾ ಆಸೆ, ಕನಸುಗಳನ್ನು ಮರೆತೇ ಬಿಡುತ್ತಾರೆ. ಈ ರೀತಿ ಮಾಡುವುದು ತಪ್ಪು. ಯಾವಾಗಲೂ ನಾವು ನಮಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಮನೆಯನ್ನು ನಡೆಸುವುದರ ಜೊತೆ ಜೊತೆಗೆ ನಿನ್ನ ಕನಸುಗಳು ಬೆಳೆಯಬೇಕು, ನಿನ್ನ ಆಸೆಗಳು ಈಡೇರುವಂತೆ ನೋಡಿಕೊಳ್ಳಬೇಕು.
6. ಗಂಡನ ಜೊತೆಗೆ ಮುಕ್ತವಾಗಿ ಮಾತನಾಡಬೇಕು
ಮದುವೆಯಾಗಿ ಗಂಡನ ಮನೆಗೆ ಹೋದ ನಂತರ ಒರ್ವ ಹೆಣ್ಣು ಮಗಳಿಗೆ ಗಂಡನೇ ಮೊದಲ ಪ್ರಾಮುಖ್ಯತೆಯಾಗಿರುತ್ತಾನೆ. ಏನೇ ವಿಚಾರಗಳು ಇದ್ದರೂ ಕೂಡ ಗಂಡನ ಬಳಿ ಯಾವುದೇ ರೀತಿ ಮುಜುಗೊರ ಇಲ್ಲದೇ ಮುಕ್ತವಾಗಿ ಮಾತನಾಡಬೇಕು. ಇನ್ನೂ ಲೈಂಗಿಕತೆ ವಿಚಾರದಲ್ಲೂ ಕೂಡ ನಾಚಿಕೆ ಮಾಡಿಕೊಳ್ಳಬಾರದು. ನಿಮಗನಿಸಿದ್ದನ್ನು ನೇರವಾಗಿ ಹೇಳಬೇಕು.
7. ಮಗಳೇ, ನಿನಗಾಗಿ ನಾನಿದ್ದೇನೆ!
ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗೋ ಮೊದಲು ಒಂದು ರೀತಿ ಭಯ ಇದ್ದೇ ಇರುತ್ತದೆ. ಆಗ ಆಕೆಗೆ ದೈರ್ಯ ತುಂಬುವುದು ತಾಯಿಯಾದವಳ ಕರ್ತವ್ಯ. ನೀನು ಯಾವಾಗ ಬೇಕಾದರೂ ನಮ್ಮ ಮನೆಗೆ ಬರಬಹುದು. ನಿನ್ನ ಕಷ್ಟ-ಸುಖಗಳನ್ನು ನನ್ನ ಬಳಿ ಹಂಚಿಕೊಳ್ಳಬಹುದು ಎಂದು ತಾಯಿಯು ಮಗಳಿಗೆ ದೈರ್ಯ ಹೇಳಬೇಕು.
ಮಗಳು ಮದುವೆಯಾಗಿ ಬೇರೆಯವರ ಮನೆಗೆ ಹೋಗುವ ಮೊದಲು ಆಕೆಗೆ ದೈರ್ಯ ತುಂಬಿ ಈ ವಿಚಾರಗಳನ್ನು ತಿಳಿಸುವುದು ತಾಯಿಯ ಕರ್ತವ್ಯವಾಗಿದೆ.



Click it and Unblock the Notifications

