Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೊಸೆ ಅತ್ತೆಗೆ ಹೇಳ ಬಯಸುವ ಮಾತುಗಳಿವು
ಹೆಣ್ಣಿನ ಜೀವನವೇ ಬಹಳ ವಿಚಿತ್ರ ನೋಡಿ. ಆರಂಭದಲ್ಲಿ ತಂದೆ ತಾಯಿಯ ಜೊತೆಗೆ ಖುಷಿಯಲ್ಲಿ ಸುಖವಾಗಿ ಜೀವಿಸುತ್ತಿದ್ದ ಆಕೆ ಮದುವೆಯಾದ ನಂತರ ಬೇರೆಯದೇ ಪ್ರಪಂಚಕ್ಕೆ ಕಾಲಿಡುತ್ತಾಳೆ. ತನ್ನವರಲ್ಲದೆ ಇರುವವರನ್ನ ತನ್ನವರು ಎಂದು ಭಾವಿಸಿಕೊಂಡು ಅವರ ಜೊತೆಗೆ ಜೀವನ ನಡೆಸುತ್ತಾಳೆ. ಗಂಡನನ್ನು ಅತಿಯಾಗಿ ಪ್ರೀತಿಸುವ ಹೆಣ್ಣು ಮಕ್ಕಳು ಆತನ ತಂದೆ ತಾಯಿಯನ್ನು ಕೂಡ ಅಷ್ಟೇ ಪ್ರೀತಿಸುತ್ತಾರೆ ಹಾಗೂ ಗೌರವಿಸುತ್ತಾರೆ. ಆದರೆ ಇದನ್ನು ಯಾವಾಗ ಅತ್ತೆ ಅಥವಾ ಮಾವ ಅರ್ಥ ಮಾಡಿಕೊಳ್ಳುವುದಿಲ್ಲವೋ ಆಗ ಸಮಸ್ಯೆ ಆರಂಭವಾಗುತ್ತದೆ.

ಸೊಸೆಯಾದವಳು ಅತ್ತೆಗೆ ಕೆಲವೊಂದು ವಿಷಯಗಳನ್ನು ಹೇಳಬೇಕು ನನ್ನನ್ನು ಈ ರೀತಿ ನೋಡಿಕೊಳ್ಳಿ ಎಂದು ವಿನಂತಿಸಿಕೊಳ್ಳಬೇಕು ಎಂದಲ್ಲ ಭಾವಿಸುತ್ತಾಳೆ ಆದರೆ ಅದನ್ನ ಕೇಳುವ ವ್ಯವಧಾನ ಅತ್ತೆಯಂದಿರಿಗೆ ಇದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ. ಬೇರೆ ಮನೆಯಿಂದ ನಿಮ್ಮ ಮನೆಗೆ ಮಹಾಲಕ್ಷ್ಮಿಯಾಗಿ ಕಾಲಿಟ್ಟ ಹೆಣ್ಣು ಮಕ್ಕಳನ್ನು ನೀವು ಹೇಗೆ ನೋಡಿಕೊಳ್ಳುತ್ತೀರೋ ಅದೇ ರೀತಿ ಆಕೆ ಕೂಡ ನಿಮ್ಮನ್ನು ಪ್ರೀತಿಸುತ್ತಾಳೆ ಹಾಗೂ ಗೌರವಿಸುತ್ತಾಳೆ. ಈ ಕೆಲವು ವಿಚಾರಗಳನ್ನು ಅತ್ತೆಯ ಬಳಿ ಹೇಳಿಕೊಳ್ಳಲು ಸೊಸೆ ಬಯಸುತ್ತಾಳೆ.
ಮಗಳಂತೆ ಕಾಣಿ;
ಒಂದು ಮನೆಯಲ್ಲಿ ಮಗಳು ಹಾಗೂ ಸೊಸೆ ಇಬ್ಬರು ಇದ್ದರೆ ಅವರಿಬ್ಬರನ್ನ ನೋಡುವ ರೀತಿ ಬೇರೆ ಬೇರೆ ಆಗಿರುತ್ತದೆ. ಉದಾಹರಣೆಗೆ ಮಗಳಿಗೆ ಇರುವಷ್ಟು ಫ್ರೀಡಂ, ಆಕೆಗೆ ಕೊಡುವಷ್ಟು ಪ್ರೀತಿ ಮನೆಯ ಸೊಸೆಗೆ ನೀಡಲಾಗುವುದಿಲ್ಲ. ಮಗಳು ಯಾವುದೇ ತಪ್ಪು ಮಾಡಿದರು ಅದು ದೊಡ್ಡ ವಿಷಯವಾಗುವುದಿಲ್ಲ ಅದೇ ಸೊಸೆ ಸಣ್ಣ ತಪ್ಪು ಮಾಡಿದರು ಅದನ್ನೇ ಗುಡ್ಡವನ್ನಾಗಿಸಿ ಜಗಳವಾಡುವ ಅತ್ತೆಯಂದಿರು ಇದ್ದಾರೆ. ಆದರೆ ಸೊಸೆ ಕೇಳುವ ವಿಷಯ ಒಂದೇ, ಅಮ್ಮನ ಬಿಟ್ಟು ಬಂದಿರುವ ನನಗೆ ನೀವು ತಾಯಿಯ ಪ್ರೀತಿಯನ್ನು ಕೊಡಿ. ನಾನು ನಿಮ್ಮ ಮಗಳು ಎಂದು ಭಾವಿಸಿ ಆಗ ನಾನು ಕೂಡ ನಿಮ್ಮನ್ನ ತಾಯಿಯಂತೆ ಟ್ರೀಟ್ ಮಾಡುತ್ತೇನೆ. ಪ್ರೀತಿಯಿಂದ ನಡೆದುಕೊಳ್ಳುತ್ತೇನೆ. ಇದನ್ನು ಅತ್ತೆಯಂದಿರು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.
ನಿಮ್ಮಂತೆ ನಿಮ್ಮ ಮಗನನ್ನು ನಾನು ಪ್ರೀತಿಸುತ್ತೇನೆ!
ಅದು ಅರೇಂಜ್ಡ್ ಮ್ಯಾರೇಜ್ ಆಗಿರಲಿ ಅಥವಾ ಲವ್ ಮ್ಯಾರೇಜ್ ಆಗಿರಲಿ ಮದುವೆಯಾದ ನಂತರ ಗಂಡನನ್ನು ಹೆಂಡತಿ ಪ್ರೀತಿಸುವುದು ಸಹಜ. ಆದರೆ ಎಷ್ಟು ಮನೆಗಳಲ್ಲಿ ಅತ್ತೆಯಾದವಳಿಗೆ ಸೊಸೆ ಹಾಗೂ ಮಗ ಬಹಳ ಪ್ರೀತಿಯಿಂದ ಇದ್ದಾಗ ತನ್ನನ್ನ ನಿರ್ಲಕ್ಷಿಸುತ್ತಿದ್ದಾರೆ ಎನ್ನುವ ಭಾವನೆ ಬರುತ್ತದೆ ಅಲ್ಲದೆ ಆತ ತನ್ನ ಮಗ ತಾನೇ ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸುವುದು ಎನ್ನುವ ಭಾವವು ಇರುತ್ತದೆ. ಆದರೆ ಸೊಸೆ ಅತ್ತಿಗೆ ಈ ಮಾತನ್ನ ಹೇಳಬೇಕು ಎಂದುಕೊಳ್ಳುತ್ತಾಳೆ ನಿಮ್ಮ ಮಗನ ನೀವು ಎಷ್ಟು ಪ್ರೀತಿಸುತ್ತೀರೋ, ನಾನು ಕೂಡ ಹೆಂಡತಿಯಾಗಿ ಅಷ್ಟೇ ಪ್ರೀತಿಸುತ್ತೇನೆ. ಆತ ನಿಮಗೆ ಮಾತ್ರ ಮಗ ಅಲ್ಲ ನನಗೆ ಗಂಡನು ಹೌದು ಹಾಗಾಗಿ ನಿಮ್ಮಷ್ಟೇ ಪ್ರೀತಿ ಕಾಳಜಿ ಆತನ ಮೇಲೆ ನನಗೂ ಇದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಿ.
ನನಗೂ ಬೇಕು ಪ್ರಶಂಸೆ!
ಸೊಸೆಯಾದವಳು ಮನೆಯ ಹೊರಗೆ ದುಡಿದುಕೊಂಡು ಬಂದರೂ ಕೂಡ ಮನೆಯ ಒಳಗೆ ಕೆಲಸ ಮಾಡಲೇಬೇಕು ಅಡುಗೆ ಮನೆ ಕೆಲಸದಿಂದ ಹಿಡಿದು ಪ್ರತಿಯೊಂದು ಕೆಲಸವನ್ನು ನಿಭಾಯಿಸುವ ಸೊಸೆಗೂ ಕೂಡ ಅತ್ತೆಯಿಂದ ಒಂದಿಷ್ಟು ಪ್ರಶಂಸೆಯ ಅಗತ್ಯ ಇರುತ್ತದೆ. ಒಳ್ಳೆಯ ಕೆಲಸ ಮಾಡಿದ್ದೀಯಾ, ಉತ್ತಮವಾಗಿ ಅಡುಗೆ ಮಾಡಿದ್ದೀಯ ಎನ್ನುವಂತಹ ಸಣ್ಣಪುಟ್ಟ ಹೊಗಳಿಕೆಗಳು ಕೂಡ ಸೊಸೆಗೆ ಬಹಳ ದೊಡ್ಡ ಉಡುಗೊರೆಯಾಗಿರುತ್ತದೆ. ಮದುವೆಯಾಗಿ ಬಂದ ಸೊಸೆ ಕೂಡ ಇದನ್ನೇ ಬಯಸುತ್ತಾಳೆ, ತನ್ನ ಅತ್ತೆ ಮಾವ ನಾನು ಮಾಡುವ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಬೇಕು ಎಂದು ಆಸೆ ಪಡುತ್ತಾರೆ. ಇದನ್ನ ಅತ್ತೆಯಂದಿರು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.
ನಿಮ್ಮನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ!
ಎಷ್ಟು ಅತ್ತೆ ಮಾವಂದಿರಿಗೆ ಇದೊಂದು ಭಯ ಇರುತ್ತದೆ. ತನ್ನ ಮಗ ಮದುವೆಯಾಗಿದ್ದಾನೆ ಸೊಸೆ ನಮ್ಮನ್ನ ಹೇಗೆ ನೋಡಿಕೊಳ್ಳುತ್ತಾಳೋ ಏನೋ? ನಮ್ಮ ವಯಸ್ಸಾದ ಕಾಲದಲ್ಲಿ ನಮ್ಮನ್ನು ಜೊತೆಗೆ ಇಟ್ಟುಕೊಳ್ಳುತ್ತಾರೆ ಇಲ್ಲವೋ ಎನ್ನುವ ಭಯ ಇರುತ್ತದೆ. ಮಾತನಾಡುವುದು ಅಥವಾ ಸೊಸೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. ಸೊಸೆಯಾದವಳು ನಿಮ್ಮ ಮಗನಂತೆ ನಾನು ಕೂಡ ಜೀವನ ಪರ್ಯಂತ ನಿಮ್ಮನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ ನನ್ನ ಮೇಲೆ ಅನುಮಾನ ಪಡಬೇಡಿ ಎಂದು ಹೇಳಿಕೊಳ್ಳಲು ಬಯಸುತ್ತಾಳೆ. ಅತ್ತೆ ಸೊಸೆಯನ್ನು ನಂಬುವುದು ಬಹಳ ಮುಖ್ಯ
ನನ್ನ ಸಂಬಂಧಿಕರಿಗೆ ಗೌರವ ಕೊಡಿ!
ತನ್ನ ತಂದೆ ತಾಯಿ ಸಹೋದರ ಸಹೋದರಿಯರ ಜೊತೆಗೆ ಹಲವು ವರ್ಷ ಜೀವನ ನಡೆಸಿದ ಹೆಣ್ಣು ಮಗಳು ಸಂಪೂರ್ಣ ಸಂಬಂಧವನ್ನು ಕಳೆದುಕೊಂಡು ಗಂಡನ ಮನೆಗೆ ಬರುತ್ತಾಳೆ ಇಂತಹ ಸಂದರ್ಭದಲ್ಲಿ ಆಕೆಯನ್ನು ನೋಡಲು ಆಕೆಯ ಮನೆಯವರು ಬಂದರೆ ಅಥವಾ ಸೊಸೆ ತನ್ನ ತಂದೆಯ ಮನೆಗೆ ಹೋಗುವ ಸಂದರ್ಭ ಬಂದರೆ ಅತ್ತೆಯಾದವಳು ಅದನ್ನು ಅರ್ಥ ಮಾಡಿಕೊಳ್ಳಬೇಕು. ಅದೇ ರೀತಿ ಸೊಸೆಯ ಮನೆಯವರನ್ನ ಸಂಬಂಧಿಕರು ಎನ್ನುವಂತೆ ಬಹಳ ಗೌರವದಿಂದ ನಡೆಸಿಕೊಳ್ಳಬೇಕು. ಸೊಸೆಯ ಮನೆಯವರಿಗೆ ಗಂಡನ ಮನೆಯವರಿಂದ ಸರಿಯಾದ ಗೌರವ ಪ್ರೀತಿ ಸಿಗುತ್ತದೆಯೋ ಆಗ ಗಂಡನ ಮನೆಯವರ ಬಗ್ಗೆ ಸೊಸೆಗೂ ಕೂಡ ಅಷ್ಟೇ ಪ್ರೀತಿ ವಿಶ್ವಾಸ ಬೆಳೆಯುತ್ತದೆ.
ನನಗೂ ಬೇಕು ಸ್ವಾತಂತ್ರ್ಯ!
ಇತ್ತೀಚಿಗೆ ಹೆಣ್ಣು ಸ್ವಾವಲಂಬಿಯಾಗಿ ಮದುವೆಯಾದ ನಂತರವೂ ಕೂಡ ಕೆಲಸಕ್ಕೆ ಹೋಗುತ್ತಾಳೆ. ಆದರೆ ಸಾಕಷ್ಟು ಮನೆಯಲ್ಲಿ ಈಗಲೂ ಕೂಡ ಸೊಸೆಗೆ ಮನೆಯ ಹೊರಗೆ ಹೋಗಿ ದುಡಿಯುವ ಅವಕಾಶವಿಲ್ಲ. ಆಕೆಗೆ ವೈಯಕ್ತಿಕವಾಗಿ ಗಂಡನ ಬಳಿ ಮಾತನಾಡಲು ಕೂಡ ಅವಕಾಶ ಇರುವುದಿಲ್ಲ. ಸ್ವಾತಂತ್ರ್ಯ ಕೊಡಿ ನನ್ನದೇ ಆಗಿರುವ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಿ ನಿಮ್ಮಂತೆ ನಿಮ್ಮ ಮಗಳನ್ನು ನಾನು ಪ್ರೀತಿಸುತ್ತೇನೆ ಅವನ ಜೊತೆಗೆ ವೈಯಕ್ತಿಕವಾಗಿ ಸ್ವಲ್ಪ ಸಮಯವನ್ನು ಕಳೆಯಲು ಅವಕಾಶ ಮಾಡಿಕೊಡಿ ಎಂದು ಕೇಳಲು ಬಯಸುತ್ತಾಳೆ. ಇದನ್ನು ಕೂಡ ಅತ್ತೆಯಾದವಳು ಅರ್ಥ ಮಾಡಿಕೊಂಡು ಸೊಸೆಗೆ ಒಂದಷ್ಟು ಸ್ವಾತಂತ್ರ್ಯ ಕೊಡಬೇಕು ಆಕೆಯ ಜೀವನದ ನಿರ್ಧಾರಗಳನ್ನು ಆಕೆಗೆ ತೆಗೆದುಕೊಳ್ಳಲು ಬಿಡಬೇಕು. ಈ ರೀತಿ ಅತ್ತೆ ಸೊಸೆಯಂದಿರಲ್ಲಿ ಹೊಂದಾಣಿಕೆ ಬಂದು ಬಿಟ್ಟರೆ ಆ ಸಂಸಾರ ಆನಂದ ಸಾಗರ ಎನ್ನುವುದರಲ್ಲಿ ಎರಡು ಮಾತಿಲ್ಲ!



Click it and Unblock the Notifications