Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬಂಧ ಗಟ್ಟಿಯಾಗಿರಬೇಕೆಂದರೆ ಸಂಗಾತಿಗೆ ಈ ಮಾತುಗಳನ್ನು ಹೇಳಲೇಬಾರದು
ಸಂಬಂಧದಲ್ಲಿ ಒಂದು ಮಾತು ಬರುತ್ತೆ, ಹೋಗುತ್ತೆ, ಆದರೆ ಕೆಲವೊಂದು ಮಾತುಗಳು ಬರಲೇಬಾರದು. ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಅಂತಾರಲ್ಲ, ಹಾಗೆ ಈ ರೀತಿಯ ಮಾತುಗಳು ಬಂದ್ರೆ ಮುಗೀತು ಸಂಸಾರದಲ್ಲಿ ದೊಡ್ಡ ಬಿರುಕು ಉಂಟಾಗಬಹುದು.
ಸಂಗಾತಿಗೆ ಯಾವುದೇ ಕಾರಣಕ್ಕೆ ಈ ಮಾತುಗಳನ್ನು ಹೇಳಲೇಬೇಡಿ...

ನೀನು ನನ್ನನ್ನು ನಿಜವಾಗಲೂ ಪ್ರೀತಿಸುತ್ತಿದ್ದರೆ ಹೀಗೆ....
ಹೌದು ಪದೇ ಪದೇ ಈ ರೀತಿ ಹೇಳುತ್ತಿದ್ದರೆ ಅದು ತುಂಬಾನೇ ಕಿರಿಕಿರಿ ಅನಿಸುವುದು. ಮನುಷ್ಯರೆಂದ ಮೇಲೆ ಸಣ್ಣ ಪುಟ್ಟ ತಪ್ಪುಗಳಾಗುವುದು.
ಹಾಗಂತ ಅವರು ನಿಮ್ಮನ್ನು ಪ್ರೀತಿಸುತ್ತನೇ ಇಲ್ಲ ಎಂಬಂಥೆ ಮಾತನಾಡಬೇಡಿ.
ಯಾವಾಗಲೂ ನೀನು ಹೀಗೆನೇ
ಈ ಪದ ಹೇಳುವುದು ಸುಲಭ, ಆದರೆ ಕೇಳುವವರಿಗೆ ತುಂಬಾ ನೋವಾಗುತ್ತದೆ ಅಲ್ಲದೆ ಅವರ ಆತ್ಮವಿಶ್ವಾಸ ಕೂಡ ಕಡಿಮೆಯಾಗಬಹುದು. ಆದ್ದರಿಂದ ಈ ರೀತಿ ಮಾತ್ರ ಹೇಳಬೇಡಿ.
ನನ್ನಿಂದಲ್ಲ, ನಿನ್ನಿಂದ ಸಮಸ್ಯೆಯಾಗುತ್ತಿದೆ
ಪದೇ ಪದೇ ಈ ರೀತಿ ಹೇಳುತ್ತಿದ್ದರೆ ಅವರಿಗೆ ಜೊತೆಗೆ ಇರಬೇಕೆ, ಬೇಡ್ವೆ ಎಂಬ ಆಲೋಚನೆ ಬರುವಂತಾಗುವುದು, ಈ ಮಾತುಗಳು ಹೇಳುವ ಮುನ್ನ ಜಾಗ್ರತೆ.
ಡ್ರಾಮಾ ಸಾಕು
ಸಂಸಾರದಲ್ಲಿ ಯಾರು ಡ್ರಾಮಾ ಮಾಡಲ್ಲ, ಅವರದ್ದೂ ಒಂದು ಕಾರಣವಿರುತ್ತದೆ, ಅದನ್ನು ಕೇಳಿ ಬದಲಿಗೆ ನಿಂದು ನಾಟಕ, ಡ್ರಾಮ ಅಂದೆಲ್ಲಾ ಹೇಳಬೇಡಿ. ಇದರಿಂದ ಅವರ ಭಾವನೆಗಳಿಗೆ ನೋವಾಗುತ್ತದೆ, ನಿಮಗೆ ಅವರ ಮಾತುಗಳನ್ನು ಕೇಳುವ ತಾಳ್ಮೆಯಿಲ್ಲದಿದ್ದರೆ ತಾಳ್ಮೆ ತಂದುಕೊಂಡು ಕೇಳಿ, ಡ್ರಾಮಾ ಸಾಕು ಎಂದೆಲ್ಲಾ ಹೇಳಿ ಅವರ ಮನಸ್ಸಿಗೆ ಮತ್ತಷ್ಟು ನೋವುಂಟು ಮಾಡಬೇಡಿ.
ನಿನಗೆ ಜವಾಬ್ದಾರಿನೇ ಇಲ್ಲ
ನಾವು ಹೀಗೆ ಹೇಳಿದ ತಕ್ಷಣ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದೇ ಹೊರತು ಅವರು ತಕ್ಷಣ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಬದಲಿಗೆ ನೀವು ಅವರ ಮಾಡಬೇಕಾದ ಕರ್ತವ್ಯ ಏನು ಎಂಬುವುದಾಗಿ ತಿಳಿ ಹೇಳಿ. ಕೆಲವರು ಹೀಗೆ ಹೇಳಿದರೆ ಕಿವಿಗೇ ಹಾಕಿಕೊಳ್ಳುವುದಿಲ್ಲ, ಆಗ ಅವರಿಗೆ ನೀವು ಮಾಡಿದರೆ ಈ ಕೆಲಸ ಸರಿಯಾಗುತ್ತೆ ಈ ರೀತಿ ಇನ್‌ಡೈರೆಕ್ಟ್ ಆಗಿ ಹೇಳಿ ಅವರು ಖುಷಿಯಿಂದ ಜವಾಬ್ದಾರಿ ತೆಗೆದುಕೊಳ್ಳಲು ಮುಂದೆ ಬರುತ್ತಾರೆ.
ತಪ್ಪಾಗಿ ಭಾವಿಸಬೇಡ ಅಂತ ಹೇಳಿ ಹೇಳುವುದು
ನಿಮಗೆ ನೀವು ಹೇಳುವ ಮಾತಿನಿಂದ ಅವರು ತಪ್ಪು ಭಾವಿಸಬಹುದು ಎಂಬ ಅಂಜಿಕೆ ಇದ್ದರೆ ಹೇಳುವುದಕ್ಕೆ ಹೋಗಬೇಡಿ, ಹೇಳಿ ನಂತರ ದೊಡ್ಡ ರಾದ್ಧಾಂತ ಆಗುವುದಕ್ಕಿಂತ ಇದೇ ವಾಸಿ.
ನೀನು ನಿನ್ನ ಅಮ್ಮ (ಅಪ್ಪನ) ಥರನೇ ಆಡ್ತಾ ಇದ್ದೀಯ
ಕೆಟ್ಟ ವಿಚಾರಕ್ಕೆ ಅಪ್ಪ-ಅಮ್ಮನ ಉದಾಹರಣೆಯಾಗಿ ಹೇಳಿದರೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮ ಅಪ್ಪ-ಅಮ್ಮನ ಬಗ್ಗೆ ಸಂಗಾತಿ ಕೊಂಕು ಮಾತುಗಳನ್ನಾಡಿದರೆ ಇದರಿಂದ ಇಬ್ಬರ ನಡುವಿನ ಸಮಸ್ಯೆ ಮತ್ತಷ್ಟು ಜಟಿಲವಾಗಿವುದು.
ಐ ಡೋಂಟ್ ಕೇರ್
ಸಂಬಂಧದಲ್ಲಿ ಈ ಪದಗಳನ್ನು ಬಳಸಲೇಬೇಡಿ, ನಿನ್ನ ಬಗ್ಗೆ ಐ ಡೋಂಟ್ ಕೇರ್, ನೀನು ಏನು ಆಲೋಚಿಸಿದರೂ ಐ ಡೋಂಟ್ ಕೇರ್, ನೀನು ಏನು ಮಾಡಿದರೂ ಐ ಡೋಂಟ್ ಕೇರ್ ಅಂತ ಹೇಳಬೇಡಿ. ಈ ರೀತಿ ಹೇಳಲು ಅವರೇನು ಮೂರನೇಯ ವ್ಯಕ್ತಿಯಲ್ಲ, ಜೊತೆಗೆ ಬಾಳ್ವೆ ಮಾಡುತ್ತಿದ್ದೇವೆ ಎಂದ ಮೇಲೆ ಎಲ್ಲಾ ವಿಷಯಗಳ ಬಗ್ಗೆ ಕೇರ್ ತೆಗೆಯಬೇಕೆ? ಇಲ್ಲದಿದ್ದರೆ ಆ ಸಂಬಂಧಕ್ಕೇನು ಅರ್ಥ ಅಲ್ವಾ?
ನಿನ್ನ ಕಟ್ಟಿಕೊಂಡು ಜೀವನ ಹಾಳಾಯ್ತು
ಈ ಪದಗಳನ್ನು ಬಳಸಲೇಬೇಡಿ, ಇರುವ ಸಮಸ್ಯೆಗಳನ್ನು ಬಗೆಹರಿಸಿ ಮುಂದುವರೆಯುವುದು ಹೇಗೆ ಎಂದು ಚಿಂತಿಸಬೇಕೆ ಹೊರತು ನಿನ್ನ ಕಟ್ಟಿಕೊಂಡು ನನ್ನ ಜೀವನ ಹಾಳಾಯ್ತು, ನನ್ನ ಜೀವನದಲ್ಲಿ ನೆಮ್ಮದಿಯಾಗಿಲ್ಲ ಎಂಬ ಪದಗಳನ್ನು ಬಳಸಬೇಡಿ, ಇದು ಇಬ್ಬರ ನಡುವೆ ಅಗಲಿಕೆ ಹೆಚ್ಚಿಸುತ್ತದೆ.
ನಿನಗಿಂತ ಅವನು/ ಅವಳು (ನಿಮ್ಮ ಮಾಜಿ) ಬೆಟರ್
ನಿಮ್ಮ ಸಂಗಾತಿಯನ್ನು ಮಾಜಿ ಜೊತೆಗೆ ಎಂದಿಗೂ ಹೋಲಿಸಬೇಡಿ. ಇದರಿಂದ ನಿಮ್ಮ ಸಂಗಾತಿಗೆ ತುಂಬಾನೇ ನೋವಾಗುವುದು. ಅವಳು ಅಥವಾ ಅವನು ಬೆಟರ್ ಅಂತ ಹೇಳುವ ಮುನ್ನ ಈಗ ನಿಮ್ಮ ಜೊತೆ ಬಾಳ್ವೆ ಮಾಡುತ್ತಿರುವುದು ಮಾಜಿ ಜೊತೆಯಲ್ಲ ಎಂಬುವುದು ನೆನಪಿರಲಿ.
ನಂಗೆ ನಿನ್ನ ಜೊತೆ ಬಾಳ್ವೆ ಮಾಡಿ ಸಾಕಾಗಿದೆ ಡಿವೋರ್ಸ್ ಬೇಕು
ಈ ಮಾತು ಹೇಳುವ ಮುನ್ನ ನೂರು ಬಾರು ಯೋಚಿಸಿ, ಸುಮ್ ಸುಮ್ಮನೆ ಹೇಳಬೇಡಿ. ನಿಜವಾಗಲೂ ನನಗೆ ಸಾಕಾಗಿದೆ ಈ ಸಂಬಂಧದಿಂದ ಬಿಡುಗಡೆ ಬೇಕು ಎಂದನಿಸಿದಾಗ ಮಾತ್ರ ಹೇಳಿ. ಕೆಲವೊಮ್ಮೆ ನಮ್ಮ ಜೀವನ ನಮ್ಮ ಕೈ ಮೀರಿ ಹೋಗುತ್ತಿದೆ, ಇದರಿಂದ ಹೊರ ಬರದಿದ್ದರೆ ನಾನೇ ಇಲ್ಲವಾಗುತ್ತೇನೆ ಎಂದನಿಸಲಾರಂಭಿಸಿದಾಗ ಅಂಥ ಸಂಬಂಧದಿಂದ ಹೊರ ಬರಲು ದೃಢವಾದ ತೀರ್ಮಾನ ತೆಗೆದುಕೊಂಡಾಗ ಮಾತ್ರ ಹೇಳಬೇಕು.
ಚಿಕ್ಕ-ಪುಟ್ಟ ಜಗಳಕ್ಕೆ ಡಿವೋರ್ಸ್ ಎಂಬ ಪದ ಬಳಸಲೇಬೇಡಿ.



Click it and Unblock the Notifications

