Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
ನೀವು ಪ್ರೀತಿಸುವ ಹುಡುಗನಿಗೆ ಕುಡಿಯೋ ಅಭ್ಯಾಸ ಇದ್ಯಾ? ಹಾಗಾದ್ರೆ ಈ ವಿಚಾರಗಳ ಬಗ್ಗೆ ಹುಷಾರಾಗಿರಿ!
ನಮಗೆ ಯಾರ ಮೇಲೆ ಬೇಕಾದರೂ ಪ್ರೀತಿ ಹುಟ್ಟಬಹುದು. ಕೆಲವೊಂದು ಸಲ ನಾವು ಒಬ್ಬರ ಬಗ್ಗೆ ತಿಳಿದುಕೊಂಡು, ಅವರ ಗುಣಗಳನ್ನು ಮೆಚ್ಚಿ ಪ್ರೀತಿಯಲ್ಲಿ ಬೀಳುತ್ತೇವೆ. ಆದರೆ ಕೆಲವೊಂದು ಸಲ ಒಬ್ಬ ವ್ಯಕ್ತಿಯ ಕೆಲವು ಗುಣಗಳು ನಮಗೆ ಇಷ್ಟವಾಗದಿದ್ದರೂ ಕೂಡ ನಾವು ಅವರೊಂದಿಗೆ ಪ್ರೀತಿಯಲ್ಲಿ ಬೀಳುತ್ತೇವೆ.
ಒಂದು ವೇಳೆ ನೀವು ಪ್ರೀತಿಸುತ್ತಿರುವ ವ್ಯಕ್ತಿಗೆ ಕುಡಿತದ ಚಟ ಇದ್ದರೆ ಏನಾಗಲಿದೆ ಗೊತ್ತಾ? ಅಷ್ಟಕ್ಕು ಒರ್ವ ಕುಡಿತದ ಚಟ ಹೊಂದಿರುವ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬೀಳೋ ಮೊದಲು ನೀವು ಈ ವಿಚಾರಗಳನ್ನು ತಿಳಿದುಕೊಂಡಿರಲೇಬೇಕು.

1. ನಿಮಗೆ ತಪಿತಸ್ಥ ಭಾವನೆ ಕಾಡಬಾರದು
ನಿಮಗೆ ಕುಡಿತದ ಚಟ ಹೊಂದಿರುವ ವ್ಯಕ್ತಿಯ ಮೇಲೆ ಪ್ರೀತಿ ಆಗಿದೆ ಎಂದಿಟ್ಟುಕೊಳ್ಳಿ. ಮೊದ ಮೊದಲು ನೀವು ಅವರ ಕುಡಿತದ ಚಟವನ್ನು ತಡೆದುಕೊಳ್ಳುತ್ತೀರಿ. ಆದರೆ ದಿನ ಕಳೆದಂತೆ ಅವರ ಅಭ್ಯಾಸ ಅತಿಯಾಗುತ್ತದೆ. ಇದರಿಂದ ನಿಮಗೂ ಕೂಡ ಮಾನಸಿಕ ಹಿಂಸೆ ಉಂಟಾಗುತ್ತದೆ.
ನಿಮ್ಮ ಸ್ನೇಹಿತರೇ ನಿಮ್ಮನ್ನು ಕುಡುಕನ ಹುಡುಗಿ ಎಂದು ಹೀಯಾಳಿಸಬಹುದು. ಆಗ ನಿಮಗೆ ತಪಿತಸ್ಥ ಭಾವನೆ ಕಾಡಲೇಬಾರದು. ಏಕೆಂದರೆ ಅವರ ಕುಡಿತದ ಚಟ ಗೊತ್ತಿದ್ದು ಕೂಡ ನೀವು ಅವರನ್ನು ಪ್ರೀತಿ ಮಾಡಿರೋದ್ರಿಂದ ನೀವು ಇದನ್ನೆಲ್ಲಾ ಸಹಿಸಿಕೊಳ್ಳಲೇಬೇಕು. ಸಾಧ್ಯವಾದರೆ ನಿಮ್ಮ ಹುಡುಗನನ್ನು ಸರಿ ಮಾಡಲು ಪ್ರಯತ್ನಿಸಿ. ಇಲ್ಲವಾದರೆ ನೀವು ನಿಮ್ಮ ಸ್ನೇಹಿತರು ಹಾಗೂ ಆಪ್ತ ಬಳಗಕ್ಕೆ ಉತ್ತರಿಸಲು ತಯಾರಾಗಿ ಇರಬೇಕು.
2. ಕುಡಿದು ನಿಮ್ಮ ಜೊತೆಗೆ ಅಸಭ್ಯವಾಗಿ ವರ್ತಿಸಬಹುದು
ನಿಮ್ಮ ಹುಡುಗ ಸಿಕ್ಕಾಪಟ್ಟೆ ಕುಡಿದು ನಿಮ್ಮ ಜೊತೆಗೆ ಅಸಭ್ಯವಾಗಿ ವರ್ತಿಸಬಹುದು. ಫೋನ್ ಮಾಡಿ ಅಥವಾ ನಿಮ್ಮ ಜೊತೆಗೆ ಇರುವಾಗ ನಿಮಗೆ ಬೈಬಹುದು. ಕೆಲವೊಂದು ಸಲ ಹೊಡೆಯಲು ಪ್ರಯತ್ನ ಮಾಡಬಹುದು. ಇದಕ್ಕೆಲ್ಲಾ ಉತ್ತರ ಕೊಡೋದಕ್ಕೆ ನೀವು ಸಿದ್ಧರಾಗಿ ಇರಬೇಕು. ನೀವು ಪ್ರೀತಿಯಲ್ಲಿ ಬೀಳುವ ಮೊದಲೇ ನಿಮಗೆ ಅವರ ಈ ಚಟದ ಬಗ್ಗೆ ಗೊತ್ತಿದ್ದರಿಂದ ನಿಮ್ಮಲ್ಲಿ ಈಗ ಉಳಿದಿರೋದು ಬರೀ ಎರಡು ಆಯ್ಕೆಗಳು ಮಾತ್ರ. ಒಂದಾ ನೀವು ಅವರು ಮಾಡಿದ್ದನ್ನೆಲ್ಲಾ ಸಹಿಸಿಕೊಳ್ಳಬೇಕು. ಎರಡನೇಯದ್ದು ಅವರ ವಿರುದ್ಧ ಹೋರಾಡಬೇಕು.
3. ಜವಾಬ್ದಾರಿ ತೆಗೆದುಕೊಳ್ಳಬೇಕು
ನೀವು ಪ್ರೀತಿಸುತ್ತಿರುವ ಹುಡುಗ ದುಡಿಯುತ್ತಿದ್ದರೂ ಕೂಡ ಆತ ಕೈಯಲ್ಲಿ ಒಂದು ಬಿಡಿಗಾಸು ಉಳಿಯೋದಿಲ್ಲ. ಯಾಕಂದ್ರೆ ಆತ ತಾನು ದುಡಿದ ದುಡ್ಡನ್ನೆಲ್ಲಾ ಕುಡಿಯೋದಕ್ಕೆ ಖರ್ಚು ಮಾಡುತ್ತಾನೆ. ಹೀಗಿರುವಾಗ ನೀವು ಎಲ್ಲಾದರೂ ಹೊರಗಡೆ ಹೋಗುವಾಗ, ಊಟಕ್ಕೆ ಹೋಗುವಾಗ, ಏನಾದರೂ ಕೊಂಡುಕೊಳ್ಳಬೇಕಾದರೆ ಆತ ದುಡ್ಡು ಕೊಡಬೇಕು ಎಂದು ನೀವು ಬಯಸೋದಕ್ಕೆ ಆಗೋದಿಲ್ಲ. ಬದಲಾಗಿ ಅದರ ಜವಾಬ್ದಾರಿಯನ್ನು ನೀವು ಹೊತ್ತುಕೊಳ್ಳಬೇಕು. ಆ ಎಲ್ಲಾ ಖರ್ಚುಗಳನ್ನು ನೀವೇ ಭರಿಸಬೇಕಾಗುತ್ತದೆ.
4. ಕುಡಿತದ ಚಟ ಬಿಡಲು ಒತ್ತಡ ಹಾಕಬೇಡಿ
ನಿಮ್ಮ ಹುಡುಕನ ಕುಡಿತದ ದಾಸನಾಗಿದ್ದರೆ ಆತನಿಗೆ ಕುಡಿಯೋದು ಬಿಟ್ಟು ಬೇರ್ಯಾವುದೇ ವಿಚಾರಗಳು ತಲೆಗೆ ಬರೋದಿಲ್ಲ. ನೀವು ಅವರ ಮೇಲೆ ಪ್ರೀತಿ, ಕಾಳಜಿ ತೋರಿದರೂ ಕೂಡ ಅವರು ಅದನ್ನು ಗಣನೆಗೆ ತೆಗೆದುಕೊಳ್ಳೋದಿಲ್ಲ.
ಕೆಲವೊಂದು ಸಲ ಅವರ ಕುಡಿತದ ಚಟದಿಂದ ಬೇಸತ್ತ ನೀವು ಕುಡಿತವನ್ನು ಬಿಟ್ಟು ಬಿಡುವಂತೆ ಒತ್ತಡ ಹಾಕೋದಕ್ಕೆ ಶುರು ಮಾಡುತ್ತೀರಿ. ಆದರೆ ಆ ರೀತಿ ಮಾಡುವುದು ತಪ್ಪು. ಅದು ಅವರಿಗೆ ಮಾನಸಿಕ ಹಿಂಸೆ ಅನ್ನಿಸಿಬಿಡಬಹುದು. ಹೀಗಾಗಿ ಅವರ ಮೇಲೆ ಒತ್ತಡ ಹಾಕೋದಕ್ಕೆ ಹೋಗಬೇಡಿ.
5. ಕುಡಿತದ ಚಟ ಬಿಡಿಸುತ್ತೇನೆ ಎಂಬ ಅತಿಯಾದ ಆತ್ಮ ವಿಶ್ವಾಸ ಬೇಡ
ಕೆಲವೊಂದು ಸಲ ಹುಡುಗಿಯರು ಹುಡುಗನ ಕುಡಿತದ ಚಟ ಬಿಡಿಸುತ್ತೇನೆ ಎಂಬ ಅತಿಯಾದ ಆತ್ಮ ವಿಶ್ವಾಸದಿಂದ ಕುಡುಕನ ಪ್ರೀತಿಯಲ್ಲಿ ಬಿದ್ದು ಬಿಡುತ್ತಾರೆ. ಆದರೆ ಪ್ರೀತಿಯಲ್ಲಿ ಬಿದ್ದ ನಂತರ ಅವರಿಗೆ ಕುಡಿತದ ಚಟವನ್ನು ಬಿಡಿಸೋದಕ್ಕೆ ಸಾಧ್ಯ ಆಗೋದಿಲ್ಲ. ಹುಡುಗಿಯ ಮಾತು ಕೇಳಿ ಸ್ವಲ್ಪ ದಿನಗಳ ಕಾಲ ಕುಡಿತವನ್ನು ಬಿಟ್ಟರೂ ಕೂಡ ಮತ್ತೆ ಪುನಃ ಕುಡಿಯೋದಕ್ಕೆ ಶುರು ಮಾಡುತ್ತಾರೆ.
ಇದನ್ನು ಸಹಿಸಿಕೊಳ್ಳೋದಕ್ಕೆ ನಿಮಗೆ ತುಂಬಾ ಕಷ್ಟ ಆಗಬಹುದು. ಕೆಲವೊಂದು ಸಲ ನಿಮ್ಮ ಬಳಿ ಕುಡಿಯೋದಿಲ್ಲ ಎಂದು ಪ್ರಮಾಣ ಮಾಡಿ ನಿಮಗೆ ಗೊತ್ತಿಲ್ಲದ ಹಾಗೆ ಕದ್ದು ಮುಚ್ಚಿ ಕುಡಿಯುತ್ತಿರಬಹುದು. ಹೀಗಾಗಿ ಕುಡಿತ ಬಿಡಿಸುತ್ತೇನೆ ಎಂಬ ಆತ್ಮ ವಿಶ್ವಾಸದಲ್ಲಿ ಖಂಡಿತ ನೀವು ಪ್ರೀತಿಯಲ್ಲಿ ಬೀಳದಿರಿ.
ಕುಡಿತದ ಚಟ ಹೊಂದಿರುವ ವ್ಯಕ್ತಿಗಳು ಸಾಮಾನ್ಯ ವ್ಯಕ್ತಿಗಳಿಗಿಂತ ವಿಭಿನ್ನವಾಗಿರುತ್ತಾರೆ. ಅವರ ಜೊತೆಗೆ ಬದುಕೋದು ಕೊಂಚ ಕಷ್ಟವೇ ಸರಿ. ಹೀಗಾಗಿ ಇದಕ್ಕೆಲ್ಲಾ ಸಿದ್ಧವಾಗಿದ್ದರೆ ಮಾತ್ರ ನೀವು ಪ್ರೀತಿಯಲ್ಲಿ ಬೀಳಬಹುದು.



Click it and Unblock the Notifications
