Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಕೆಲಸಕ್ಕೆ ಹೋಗುವ ಮಹಿಳೆಯನ್ನು ಪ್ರೀತಿಸುವ ಹುಡುಗರೇ ಈ ವಿಚಾರದಲ್ಲಿ ಕಾಂಪ್ರಮೈಸ್ ಆಗಲೇಬೇಕು
ನಮ್ಮ ಮನಸ್ಸು ಯಾರ ಕಡೆಗೆ ವಾಲುತ್ತದೆಯೋ ಅವನ್ನು ನಾವು ಪ್ರೀತಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಸ್ಕೂಲ್, ಕಾಲೇಜಿಗೆ ಹೋಗುವಾಗಲೂ ಅನೇಕರು ಪ್ರೀತಿಯಲ್ಲಿ ಬೀಳುತ್ತಾರೆ. ಹೆಚ್ಚಿನ ಜನ ಆಫೀಸ್‌ನಲ್ಲಿರುವ ತಮ್ಮ ಸಹೋದ್ಯೋಗಿಯ ಜೊತೆಗೆ ಪ್ರೀತಿಯಲ್ಲಿ ಬೀಳುತ್ತಾರೆ. ಈ ರೀತಿಯ ಪ್ರೀತಿ ಮದುವೆಯವೆರೆಗೂ ಹೋಗುವ ಸಾಧ್ಯತೆ ಹೆಚ್ಚು.
ಆದರೆ ಕೆಲಸದಲ್ಲಿರುವ ಸ್ವತಂತ್ರ ಮಹಿಳೆಯನ್ನು ಪ್ರೀತಿಸೋದು ಅಷ್ಟೊಂದು ಸುಲಭದ ವಿಚಾರವಲ್ಲ. ಯಾಕಂದ್ರೆ ಸ್ವತಂತ್ರ ಮಹಿಳೆಯನ್ನು ಪ್ರೀತಿಸುವ ಮೊದಲು ಕೆಲವೊಂದು ಅಂಶಗಳನ್ನು ನೀವು ಗಮನದಲ್ಲಿಡಬೇಕಾಗುತ್ತದೆ. ಹಾಗಾದ್ರೆ ಆ ವಿಚಾರಗಳು ಯಾವುದು ಅನ್ನೋದನ್ನು ತಿಳಿದುಕೊಳ್ಳೋಣ.

1. ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕಾಗುತ್ತದೆ
ಪುರುಷರೇ ನೀವೇನಾದ್ರು ಕೆಲಸಕ್ಕೆ ಹೋಗುವ ಸ್ವತಂತ್ರ ಮಹಿಳೆಯನ್ನು ಮದುವೆಯಾಗೋದಾದ್ರೆ ಮದುವೆಯಾದ ಮೇಲೆ ಜವಾಬ್ದಾರಿಗಳನ್ನು ಸಮನಾಗಿ ಹಂಚಿಕೊಳ್ಳೋದಕ್ಕೆ ಸಿದ್ಧವಿರಬೇಕಾಗುತ್ತದೆ. ಆಫೀಸ್‌ಗೆ ಹೋಗಿ ಬಂದು ಮನೆಯಲ್ಲಿ ಸುಮ್ಮನೇ ಕೂರುವ ಹಾಗಿಲ್ಲ. ಪ್ರತಿಯೊಂದು ಕೆಲಸದಲ್ಲೂ ನೀವು ಆಕೆಯೊಂದಿಗೆ ಕೈ ಜೋಡಿಸಲೇಬೇಕು. ಶಾಪಿಂಗ್, ಮನೆಕೆಲಸ, ಬಜೆಟ್ ಪ್ಲಾನಿಂಗ್ ಎಲ್ಲವನ್ನೂ ಸಮನಾಗಿ ಹಂಚಿಕೊಳ್ಳಬೇಕು.
2. ಆಕೆಗಾಗಿ ಸಮಯ ಕೊಡಿ
ಕೆಲಸಕ್ಕೆ ಹೋಗುವ ಸ್ವತಂತ್ರ ಮಹಿಳೆಯನ್ನು ನೀವು ಪ್ರೀತಿಸುತ್ತಿದ್ದರೆ ಆಕೆಯನ್ನು ನೀವು ನಿಮಗೆ ಬೇಕಾದ ಹಾಗೆ ಆಡಿಸೋದಕ್ಕೆ ಆಗೋದಿಲ್ಲ. ಆಕೆಗೂ ಕೆಲವೊಂದು ನಿರ್ದಿಷ್ಟ ಗುರಿಗಳು ಇರುತ್ತದೆ. ಆ ನಿರ್ದಿಷ್ಟ ಗುರಿಗಾಗಿ ಆಕೆ ಕೆಲಸ ಮಾಡುತ್ತಿರುತ್ತಾಳೆ. ಇಂತಹ ಸಂದರ್ಭದಲ್ಲಿ ಯಾವಾಗಲೂ ಆಕೆ ನಿಮಗಾಗಿ ಲಭ್ಯವಿರಬೇಕೆಂದು ಯೋಚಿಸಬಾರದು. ಆಕೆಗಾಗಿ ಸ್ವಂತ ಕೆಲಸಕ್ಕಾಗಿ ಸಮಯ ಕೊಡಿ.
3. ನೀವು ಆಕೆಯೊಂದಿಗೆ ಗೆಲ್ಲೋದಿಕ್ಕೆ ಆಗೋದಿಲ್ಲ
ಮದುವೆಯಾದ ಮೇಲೆ ಕೆಲ ಪುರುಷರು ತಮ್ಮ ಪ್ರಾಬಲ್ಯವನ್ನೇ ಸಾಧಿಸುತ್ತಾರೆ. ಮಹಿಳೆಗೆ ಮಾತನಾಡೋದಕ್ಕೂ ಅವಕಾಶ ನೀಡೋದಿಲ್ಲ. ಒಂದು ವೇಳೆ ನೀವು ಕೆಲಸಕ್ಕೆ ಹೋಗುವ ಮಹಿಳೆಯನ್ನು ಮದುವೆಯಾಗೋದಾದರೆ ಆ ರೀತಿ ಮಾಡೋದಕ್ಕೆ ಆಗೋದಿಲ್ಲ. ಆಕೆ ಕೂಡ ನಿಮ್ಮಷ್ಟೇ ಓದಿ ಸಂಭಳ ಪಡೆಯುತ್ತಿರೋದ್ರಿಂದ ಆಕೆ ಸಮಾನತೆ ಬಯಸುತ್ತಾಳೆ. ಇದನ್ನೆಲ್ಲಾ ಎದುರಿಸಲು ನೀವು ತಯಾರಿರಬೇಕು.
4. ಒಂದು ಸಂಬಂಧಕ್ಕೆ ಬದ್ಧರಾಗಿರುತ್ತಾಳೆ
ಒರ್ವ ಸಶಕ್ತ ಮಹಿಳೆ ಆಕೆಯ ಕಾಳಜಿಯನ್ನು ಆಕೆಯೇ ಮಾಡುತ್ತಾಳೆ. ಆಕೆ ಅಷ್ಟೊಂದು ಸುಲಭವಾಗಿ ಪ್ರೀತಿಯಲ್ಲಿ ಬೀಳೋದಿಲ್ಲ. ಒಂದು ವೇಳೆ ಅವಳಿಗೆ ನೀವು ಇಷ್ಟವಾದರೆ ಕೊನೆವರೆಗೆ ನಿಮ್ಮ ಜೊತೆಯಲ್ಲಿಯೇ ಬದುಕೋದು ಅವಳ ಆಸೆಯಾಗಿರುತ್ತದೆ. ಪ್ರೀತಿಯಲ್ಲಿ ಪ್ರಾಮಾಣಿಕಳಾಗಿರುತ್ತಾಳೆ. ನಿಮ್ಮ ತಲೆಯಲ್ಲಿ ಕೊಂಚ ದಿನ ಆಕೆಯ ಜೊತೆಗೆ ಡೇಟ್ ಮಾಡಿ ನಂತರ ಆಕೆಗೆ ಕೈ ಕೊಡಬೇಕೆನ್ನುವ ಆಲೋಚನೆ ಇದ್ದರೆ ಈಗಲೇ ಅದನ್ನು ತೆಗೆದು ಹಾಕಿ.
5. ಆಕೆ ಎಲ್ಲದಕ್ಕೂ ನಿಮ್ಮನ್ನು ಅವಲಂಬಿಸೋದಿಲ್ಲ
ಸಾಮಾನ್ಯವಾಗಿ ಹುಡುಗರ ಬಾಯಲ್ಲಿ ಬರೋ ಮಾತು ಅಂದ್ರೆ ಗರ್ಲ್‌ಫ್ರೆಂಡ್ ಇದ್ರೆ ಎಲ್ಲದಕ್ಕೂ ನಾವೇ ಖರ್ಚು ಮಾಡಬೇಕೆಂದು. ಒಂದು ವೇಳೆ ನೀವು ಕೆಲಸಕ್ಕೆ ಹೋಗುವ ಮಹಿಳೆಯ ಜೊತೆಗೆ ಪ್ರೀತಿಯಲ್ಲಿದ್ದರೆ ಆಕೆಯ ಖರ್ಚು ವೆಚ್ಚಗಳನ್ನು ಅವಳೇ ನೋಡಿಕೊಳ್ಳುತ್ತಾರೆ. ಪ್ರತಿ ಬಾರಿಯೂ ನಿಮ್ಮ ಕೈಯಿಂದಲೇ ಖರ್ಚು ಮಾಡಿಸೋದಿಲ್ಲ. ಕೆಲವೊಂದು ಸಲ ನೀವು ಹೊರಗಡೆ ಹೋದಾಗ ಆಕೆ ಬಿಲ್ ಪಾವತಿ ಮಾಡುತ್ತಾಳೆ.
6. ಆಕೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾಳೆ
ಸ್ವಾತಂತ್ರ ಮಹಿಳೆಯರು ಸಾಮಾನ್ಯವಾಗಿ ಗಟ್ಟಿಗಿತ್ತಿಯರಾಗಿರುತ್ತಾರೆ. ಅವರು ಎಂತಹ ಪರಿಸ್ಥಿತಿ ಬಂದರೂ ಕೂಡ ದೈರ್ಯದಿಂದ ಎದುರಿಸುತ್ತಾರೆ. ತಮ್ಮ ಪ್ರಿಯಕರ ಬಂದು ತನ್ನ ಸಮಸ್ಯೆಯನ್ನು ಬಗೆಹರಿಸಲಿ ಎಂದು ಕಾದು ಕುಳಿತುಕೊಳ್ಳೋದಿಲ್ಲ. ಆ ಸಂದರ್ಭದಲ್ಲಿ ತಮ್ಮ ಕೈಯಲ್ಲಿ ಏನು ಸಾಧ್ಯವಾಗುತ್ತೆ ಅದನ್ನು ಮಾಡುತ್ತಾರೆ. ನಂತರ ತನ್ನ ಹುಡುಗನಿಗೆ ತಾನು ಎದುರಿಸಿದ ಕಷ್ಟದ ಕುರಿತು ಹೇಳಿಕೊಳ್ಳುತ್ತಾರೆ.
7. ಪ್ರವಾಸಕ್ಕೆ ಹೋಗಬೇಕಾದರೆ ಆಕೆಯ ಜೊತೆಗೆ ಪ್ಲಾನ್ ಮಾಡಿ
ನೀವು ಎಲ್ಲಿಗಾದರೂ ದೂರದ ಊರಿಗೆ ಪ್ರವಾಸಕ್ಕೆ ಹೋಗಬೇಕಾದರೆ ಆಕೆಗೆ ಸಪ್ರೈಸ್ ನೀಡೋದಕ್ಕೆ ಆಗೋದಿಲ್ಲ. ಅವರು ಕೆಲಸಕ್ಕೆ ಹೋಗುತ್ತಿರೋದ್ರಿಂದ ಆಕೆ ಯಾವ ದಿನ ಲಭ್ಯವಿದ್ದಾರೆ ಅನ್ನೋದನ್ನು ತಿಳಿದುಕೊಂಡು ಪ್ಲಾನ್ ಮಾಡಬೇಕಾಗುತ್ತದೆ. ಇಬ್ಬರಿಗೂ ರಜಾ ಇರುವ ದಿನ ಅಥವಾ ಸಮಯ ನೋಡಿಕೊಂಡು ಪ್ರವಾಸಕ್ಕೆ ಹೋಗಬಹುದು.
8. ಸಂಬಂಧದಿಂದ ಹೊರ ನಡೆಯೋದಕ್ಕೆ ಹಿಂಜರಿಯೋದಿಲ್ಲ
ಹುಡುಗ-ಹುಡುಗಿ ಇಬ್ಬರು ಪ್ರೀತಿಸುತ್ತಿದ್ದಾರೆ ಎಂದರೆ ಅವರ ಮಧ್ಯೆ ಎಲ್ಲವೂ ಸರಿ ಇರುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಕೆಲವೊಂದು ಕಾರಣಕ್ಕೆ ಜಗಳ, ಮನಸ್ಥಾಪಗಳಾಗೋದು ಕಾಮನ್. ನಿಮ್ಮಿಂದ ಏನಾದರೂ ದೊಡ್ಡ ತಪ್ಪಾದಾಗ ನಿಮ್ಮ ಹುಡುಗಿ ಅದನ್ನು ನೋಡಿಕೊಂಡು ಸುಮ್ಮನೇ ಕೂರೋದಿಲ್ಲ. ಎರಡು-ಮೂರು ಸಾರಿ ನಿಮಗೆ ಎಚ್ಚರಿಕೆ ನೀಡುತ್ತಾಳೆ. ಆದರೆ ಮತ್ತೆ ಮತ್ತೆ ಅದೇ ತಪ್ಪು ನಿಮ್ಮಿಂದಾದರೆ ಆಕೆ ನಿಮ್ಮನ್ನು ಬಿಟ್ಟು ಹೋಗೋದಕ್ಕೂ ಯೋಚಿಸೋದಿಲ್ಲ.
ಸ್ವತಂತ್ರ ಮಹಿಳೆಯನ್ನು ಮದುವೆಯಾದರೆ ಒಂದು ರೀತಿ ಒಳ್ಳೆಯದು. ಆಕೆ ನಿಮಗೆ ಆರ್ಥಿಕವಾಗಿ ಸಹಾಯ ನೀಡ್ತಾರೆ. ಅಷ್ಟೇ ಅಲ್ಲದೇ ಎಲ್ಲಾ ಜವಾಬ್ದಾರಿಗಳಿಗೆ ಆಕೆ ಹೆಗಲಾಗ್ತಾರೆ. ಆದ್ರೆ ಕೆಲ ಪುರುಷರು ತಮ್ಮ ಪ್ರಾಬಲ್ಯ ಮೇಲಾಗಬೇಕು ಅಂದು ಕೊಳ್ಳುತ್ತಾರೆ. ಅದು ಮಾತ್ರ ಸಾಧ್ಯವಾಗೋದಿಲ್ಲ. ಇಬ್ಬರು ಕೂಡ ಒಬ್ಬರಿಗೊಬ್ಬರು ಪರಸ್ಪರ ಗೌರವ ನೀಡಿ ಬದುಕಬೇಕಾಗುತ್ತದೆ.



Click it and Unblock the Notifications


