Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಚ್ಛೇದಿತ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡ್ತಿದ್ದೀರಾ? ಹಾಗಾದ್ರೆ ಈ ವಿಷಯ ಗೊತ್ತಿರಲೇಬೇಕು
ನಮಗೆ ಇಂಥವರ ಮೇಲೆ ಪ್ರೀತಿಯಾಗುತ್ತೆ ಅನ್ನೊದನ್ನ ಹೇಳೋದಿಕ್ಕಾಗೋದಿಲ್ಲ. ಪ್ರೀತಿ ಅನ್ನೋದು, ವಯಸ್ಸು, ಆಸ್ತಿ, ಅಂತಸ್ತು ನೋಡಿ ಬರೋದಿಲ್ಲ. ಹೀಗಿರಬೇಕಾದರೆ ಕೆಲವೊಂದು ಸಲ ವಿಚ್ಛೇದಿತ ವ್ಯಕ್ತಿಯ ಜೊತೆಗೂ ನಾವು ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇರುತ್ತದೆ. ಆದ್ರೆ ವಿಚ್ಛೇದಿತರ ಜೊತೆಗೆ ಡೇಟಿಂಗ್ ಹೋಗುವಾಗ ಕೆಲವೊಂದು ವಿಚಾರಗಳನ್ನು ನಾವು ಖಂಡಿತ ತಿಳಿದುಕೊಂಡಿರಲೇಬೇಕು. ಆಗ ಮಾತ್ರ ನಮ್ಮ ಪ್ರೀತಿ ಗಟ್ಟಿಯಾಗಿ ಉಳಿಯೋದಕ್ಕೆ ಸಾಧ್ಯ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರತಿಯೊಬ್ಬ ವ್ಯಕ್ತಿ ಕೂಡ ನೂರಾರು ಕನಸುಗಳನ್ನು ಕಂಡಿರುತ್ತಾರೆ. ಆದರೆ ಆ ಕನಸ್ಸು ಅರಳುವ ಮುನ್ನ ನುಚ್ಚು ನೂರಾದರೆ ಎಷ್ಟು ನೋವಾಗುತ್ತೆ ಅಲ್ವಾ? ಒರ್ವ ವ್ಯಕ್ತಿ ವಿಚ್ಛೇಧನ ಪಡೆಯುವ ಹಂತದವೆರೆಗೂ ತಲುಪಿದ್ದಾನೆ ಅಂದರೆ ಆತ ಅಥವಾ ಆಕೆ ದಾಂಪತ್ಯ ಜೀವನದಲ್ಲಿ ಎಷ್ಟು ನೋವನ್ನು ಅನುಭವಿಸಿರಬಹುದು ಅಲ್ವಾ? ಹೀಗಾಗಿ ವಿಚ್ಛೇದಿತ ವ್ಯಕ್ತಿಯ ಜೊತೆಗೆ ಡೇಟಿಂಗ್ ಮಾಡೋದು ಸುಲಭದ ವಿಚಾರವೇ ಅಲ್ಲ. ಇಲ್ಲಿ ನಾವು ಹೆಚ್ಚಾಗಿ ಅವರ ಬೇಕು, ಬೇಡಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ.

1. ವಿಚ್ಛೇದಿತ ಸಂಗಾತಿಗೆ ಸಮಯ ನೀಡಿ
ವಿಚ್ಚೇದಿತರು ಅಂದ ಮೇಲೆ ಅವರು ಒಂದು ಸಂಬಂಧದಲ್ಲಿ ಸಾಕಷ್ಟು ನೋವು, ಅವಮಾನ, ದು:ಖ ಎಲ್ಲವನ್ನೂ ಅನುಭವಿಸಿರುತ್ತಾರೆ. ಹೊಸ ಸಂಬಂಧದಲ್ಲಿ ನೀವು ಅದಕ್ಕೆ ಅವಕಾಶ ನೀಡಬೇಡಿ. ಅವರಿಗೆ ಸಾಧ್ಯವಾದಷ್ಟು ಸಮಯ ಕೊಡಿ. ಅವರ ನೋವನ್ನು ಮರೆಯುವಂತೆ ಮಾಡಿ. ಹೊಸ ಪ್ರೀತಿಯಲ್ಲಿ ಅವರ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಸುಖಾ ಸುಮ್ಮನೇ ಅವರನ್ನು ನೋಯಿಸೋದಕ್ಕೆ ಹೋಗಬೇಡಿ.
2. ನಿಮ್ಮ ಸಂಗಾತಿಯ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ
ನಿಮ್ಮ ವಿಚ್ಛೇದಿತ ಸಂಗಾತಿಗೆ ಮೊದಲೇ ಮಕ್ಕಳಿದ್ದರೆ ಆ ಮಕ್ಕಳಲ್ಲಿ ನೀವು ಯಾವುದೇ ರೀತಿ ಭೇದ-ಭಾವ ತೋರಬಾರದು. ಸಂಗಾತಿಯ ಮಕ್ಕಳನ್ನು ನಿಮ್ಮ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳಬೇಕು. ಇಲ್ಲವಾದರೆ ಅವರ ಮನಸ್ಸಿಗೆ ನೋವಾಗಬಹುದು. ನಿಮಗೆ ವಿಚ್ಛೇದಿತ ಸಂಗಾತಿ ಬೇಕೆಂದರೆ ಅವರ ಮಕ್ಕಳನ್ನು ಕೂಡ ನೀವು ಸ್ವೀಕರಿಸಲೇಬೇಕಾಗುತ್ತದೆ. ಹೀಗಾಗಿ ಮಕ್ಕಳ ಕಡೆಗೂ ನಿಮ್ಮ ಗಮನವಿರಬೇಕು.
3. ಅತಿಯಾದ ನಿರೀಕ್ಷೇ ಇಟ್ಟುಕೊಳ್ಳಬೇಡಿ
ನಾವು ಒಬ್ಬ ವ್ಯಕ್ತಿಯ ಜೊತೆಗೆ ಡೇಟಿಂಗ್ ಮಾಡುತ್ತಿದ್ದೀವಿ ಅಂದ ಮೇಲೆ ಅವರ ಮೇಲೆ ಖಂಡಿತ ಅತಿಯಾದ ನಿರೀಕ್ಷೇ ಇದ್ದೇ ಇರುತ್ತದೆ. ಅವರು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಕು, ತುಂಬಾ ಪ್ರೀತಿ ಮಾಡಬೇಕು, ನಮ್ಮ ಭಾವನೆಗಳಿಗೆ ಬೆಲೆ ಕೊಡಬೇಕು ಎಂದು. ಇದೆಲ್ಲಾ ಸರಿ, ಆದರೆ ವಿಚ್ಚೇಧಿತ ಸಂಗಾತಿ ಹಳೆಯ ಪ್ರೀತಿಯನ್ನು ಮರೆಯಬೇಕು. ಹಳೆಯ ಸಂಗಾತಿಯ ಜೊತೆಗೆ ಸಂಪರ್ಕ ಇಟ್ಟುಕೊಳ್ಳಲೇಬಾರದು. ಹೀಗೆಲ್ಲಾ ನೀವು ಅವರಿಗೆ ನಿರ್ಬಂಧ ವಿಧಿಸಬಾರದು. ಇದು ಅವರಿಗೆ ಉಸಿರುಗಟ್ಟಿಸಿದಂತಾಗಬಹುದು.
4. ಇಬ್ಬರ ಸಂತೋಷಕ್ಕೂ ಬೆಲೆ ಕೊಡಿ
ನೀವು ವಿಚ್ಛೇದಿತ ವ್ಯಕ್ತಿಯನ್ನು ಡೇಟಿಂಗ್ ಮಾಡುತ್ತಿದ್ದೀರಿ ಎಂದರೆ ಈ ಸಂಬಂಧದಲ್ಲಿ ಇಬ್ಬರೂ ಯಾವ ರೀತಿ ಸುಖವಾಗಿರಬಹುದು ಅನ್ನೋದಕ್ಕೆ ಉತ್ತರ ಕಂಡುಕೊಳ್ಳಿ. ಕೇವಲ ನಿಮ್ಮ ಸುಖ, ಸಂತೋಷಕಷ್ಟೇ ಪ್ರಾಮುಖ್ಯತೆ ಕೊಡಬೇಡಿ. ಬದಲಾಗಿ ನಿಮ್ಮ ಸಂಗಾತಿಯೂ ಸಂತೋಷವಾಗಿ ಇರುವಂತೆ ನೋಡಿಕೊಳ್ಳಿ. ಅವರು ಸಂತೋಷವಾಗಿರಲು ಏನು ಮಾಡಬೇಕು? ಅವರ ಇಷ್ಟ-ಕಷ್ಟಗಳ ಬಗ್ಗೆ ಅರಿತುಕೊಳ್ಳಿ. ಇದರಿಂದ ಪ್ರೀತಿಯಲ್ಲಿ ಇಬ್ಬರು ಸುಖವಾಗಿರಬಹುದು.
5. ಹಳೆಯ ಪ್ರೀತಿಯ ಬಗ್ಗೆ ಪದೇ ಪದೇ ನೆನಪಿಸಬೇಡಿ
ವಿಚ್ಛೇದಿತ ವ್ಯಕ್ತಿ ಎಂದ ಮೇಲೆ ಅವರು ಹಳೆಯ ಪ್ರೀತಿಯಿಂದ ಸಾಕಷ್ಟು ನೋವನ್ನು ಅನುಭವಿಸಿರುತ್ತಾರೆ. ಹೀಗಾಗಿ ನೀವು ಪ್ರತಿನಿತ್ಯ ಅದೇ ವಿಚಾರದ ಬಗ್ಗೆ ಮಾತನಾಡಲು ಹೋಗಬೇಡಿ. ಅವರ ಮೇಲೆ ಅಯ್ಯೋ, ಪಾಪ ಎಂದು ಕರುಣೆ ಕೂಡ ತೋರಬೇಡಿ. ಇದು ಅವರನ್ನು ಮತ್ತಷ್ಟು ಕುಗ್ಗಿಸಬಹುದು. ಹೀಗಾಗಿ ನಿಮ್ಮ ಜೊತೆಗೆ ಇರುವಾಗ ಅವರು ಆ ನೋವನ್ನೆಲ್ಲಾ ಮರೆತು ಖುಷಿಯಾಗಿರುವಂತೆ ನೋಡಿಕೊಳ್ಳಿ. ಹಳೆಯ ಕಹಿ ನೆನಪುಗಳು ಹತ್ತಿರ ಸುಳಿಯದಂತೆ ನೋಡಿಕೊಳ್ಳೋದು ನಿಮ್ಮ ಜವಾಬ್ದಾರಿ.
6. ಅವರು ಹೇಗಿದ್ದಾರೋ ಅದೇ ರೀತಿ ಸ್ವೀಕರಿಸಿ
ಪ್ರೀತಿಯಲ್ಲಿ ಬಿದ್ದ ಮೇಲೆ ನಾವು ನಮ್ಮ ಸಂಗಾತಿಯನ್ನು ನಮಗೆ ಬೇಕಾದ ಹಾಗೇ ಬದಲಾಯಿಸಿಕೊಳ್ಳೋದಕ್ಕೆ ಪ್ರಯತ್ನ ಪಡುತ್ತೀವಿ. ಆದರೆ ವಿಚ್ಚೇದಿತ ಸಂಗಾತಿ ವಿಚಾರದಲ್ಲಿ ಈ ರೀತಿ ಮಾಡಲು ಹೋಗಬೇಡಿ. ನಿಮಗೆ ಅವರು ವಿಚ್ಚೇದಿತರು ಎಂದು ಗೊತ್ತಿದ್ದ ಮೇಲೂ ನೀವು ಅವರನ್ನು ಪ್ರೀತಿಸಿದ್ದೀರಿ ಎಂದ ಮೇಲೆ ಅವರು ಹೇಗಿದ್ದಾರೋ ಹಾಗೇ ಅವರನ್ನು ಸ್ವೀಕರಿಸಿ. ನಿಮಗಾಗಿ ಅವರ ಗುಣ, ನಡತೆ, ಅಲೋಚನೆಗಳನ್ನು ಬದಲಾಯಿಸೋದಕ್ಕೆ ಹೋಗಬೇಡಿ ಅದು ಸರಿಯಲ್ಲ.
7. ಮೊಸದಾಟ ಆಡಬೇಡಿ
ವಿಚ್ಛೇದಿತ ವ್ಯಕ್ತಿ ಈಗಾಗಲೇ ಮೊದಲ ಪ್ರೀತಿಯಲ್ಲಿ ನೊಂದು ಹೋಗಿರುತ್ತಾನೆ. ನೀವು ಆತನ ಬಾಳಲ್ಲಿ ಹೆಜ್ಜೆ ಇಡುತ್ತಿದ್ದೀರಿ ಎಂದರೆ ಅದು ನಿಷ್ಕಲ್ಮಶ ಪ್ರೀತಿಯಾಗಿರಲಿ. ಅದನ್ನು ಬಿಟ್ಟು ನೀವು ಆತನ ಜೊತೆಗೆ ಮೋಸದಾಟ ಆಡಲು ಹೋಗಬೇಡಿ. ಆತನ ದುಡ್ಡಿಗಾಗಿ, ಆತನ ಆತನಿಗಿರುವ ಪ್ರತಿಷ್ಠೆಗಾಗಿ ಅವನನ್ನು ಪ್ರೀತಿಯ ಬಲೆಗೆ ಬೀಳಿಸೋದು ನೀವು ಮಾಡುವ ದೊಡ್ಡ ತಪ್ಪು. ನೀವು ಆತನಿಗೆ ಪ್ರೀತಿ ಕೊಡುವ ಪವಿತ್ರವಾಗಿರಲಿ.
ಪ್ರೀತಿಯಲ್ಲಿ ಬೀಳುವುದು ನಮ್ಮ ಕೈಯಲ್ಲಿ ಇರೋದಿಲ್ಲ. ಆದರೆ ಒಂದು ಆರೋಗ್ಯಪೂರ್ಣ ಸಂಬಂಧವನ್ನು ಬೆಳೆಸುವುದು ನಮ್ಮ ಕೈನಲ್ಲಿರುತ್ತದೆ. ನಾವು ಹೇಳಿರುವ ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಖಂಡಿತ ನೀವು ಖುಷಿಯಾಗಿರಬಹುದು.



Click it and Unblock the Notifications













