Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನೀವು ಪ್ರೀತಿಸುವ ಹುಡುಗ ಇದ್ದಕ್ಕಿದ್ದ ಹಾಗೆ ನಾಪತ್ತೆಯಾದರೆ ಏನು ಮಾಡಬೇಕು?
ನೀವು ತುಂಬಾ ಸಮಯದಿಂದ ಒಬ್ಬ ಹುಡುಗನನ್ನು ಡೇಟ್ ಮಾಡುತ್ತಿದ್ದೀರಾ ಅಂದುಕೊಳ್ಳಿ. ನೀವಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿ ಮಾಡುತ್ತಿರುತ್ತೀರಿ. ಆ ಹುಡುಗ ನಿನ್ನನ್ನು ಬಿಟ್ಟು ಬೇರೆ ಜಗತ್ತೇ ಗೊತ್ತಿಲ್ಲ ಅಂತೆಲ್ಲಾ ಹೇಳುತ್ತಿರುತ್ತಾನೆ. ಆದರೆ ಇದ್ದಕ್ಕಿದ್ದ ಹಾಗೆ ಆ ಹುಡುಗ ನಿಮ್ಮಲ್ಲಿ ಒಂದು ಮಾತನ್ನು ಹೇಳದೇ ಬಿಟ್ಟು ಹೋಗುತ್ತಾನೆ. ಒಂದು ವೇಳೆ ನಿಮ್ಮ ಹುಡುಗ ಹೇಳದೇ ಕೇಳದೇ ಬಿಟ್ಟು ಹೋದರೆ ಏನು ಮಾಡಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್.
1. ನಿಮ್ಮ ಸಂಗಾತಿಯನ್ನು ಸಂಪರ್ಕಿಸಿ
ಒಂದು ವೇಳೆ ನಿಮ್ಮ ಹುಡುಗ ನಿಮ್ಮನ್ನು ಹೇಳದೇ ಕೇಳದೇ ಬಿಟ್ಟು ಹೋದರೆ ನೀವು ವಿಚಲಿತರಾಗಬೇಡಿ. ಮೊದಲಿಗೆ ಅವರನ್ನು ಸಂಪರ್ಕಿಸೊದಕ್ಕೆ ಪ್ರಯತ್ನಿಸಿ. ಅವರನ್ನು ಫೋನ್ ಮೂಲಕ ಸಂಪರ್ಕಿಸಿ. ಕಾಲ್ ಅಥವಾ ಮೆಸೇಜ್ ಮಾಡಿ ಅವರು ಎಲ್ಲಿದ್ದಾರೆ ಎನ್ನುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ. ಆನಂತರ ಮುಂದಿನ ಕ್ರಮ ಕೈಗೊಳ್ಳಿ.

2. ನಿಮ್ಮನ್ನು ನೀವು ಧೂಷಿಸಬೇಡಿ
ನಿಮ್ಮ ಹುಡುಗ ನಿಮ್ಮನ್ನು ಇದ್ದಕ್ಕಿದ್ದ ಹಾಗೆ ಬಿಟ್ಟು ಹೋದರೆ ಅದು ನಿಮ್ಮ ತಪ್ಪಲ್ಲ. ಆತ ಬಿಟ್ಟು ಹೋಗಲು ನೀವೇ ಕಾರಣ ಎಂದು ನೊಂದುಕೊಳ್ಳೋದನ್ನು ಬಿಟ್ಟು ಬಿಡಿ. ಅವನು ಬಿಟ್ಟು ಹೋಗಿದ್ದಕ್ಕಾಗಿ ನಿಮ್ಮ ಮೇಲೆ ನೀವು ತಪ್ಪನ್ನು ಹೊರಿಸೋದನ್ನು ಬಿಟ್ಟು ಆತ ಯಾಕೆ ಬಿಟ್ಟು ಹೋಗಿರಬಹುದು ಎಂದು ಆಲೋಚಿಸಿ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
3. ಸೋಶಿಯಲ್ ಮೀಡಿಯಾ ಅಕೌಂಟ್ ಪರಿಶೀಲಿಸಿ
ನಿಮ್ಮ ಹುಡುಗ ಇದ್ದಕ್ಕಿದ್ದ ಹಾಗೆ ನಾಪತ್ತೆಯಾದ ಅಂತ ಇಟ್ಟುಕೊಳ್ಳಿ. ಈ ಸಮಯದಲ್ಲಿ ನಿಮಗೆ ಆತ ಕಾಲ್ ಹಾಗೂ ಮೆಸೇಜ್ ಸಂಪರ್ಕಕ್ಕೆ ಸಿಗದೇ ಹೋದರೆ ಮೊದಲಿಗೆ ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ನ ಪರಿಶೀಲಿಸಿ. ಅದ್ರಲ್ಲಿ ಆತ ಮೆಸೇಜ್ ಮಾಡಿದ್ದಾನಾ ಅಂತ ತಿಳಿದುಕೊಳ್ಳಿ. ಇಲ್ಲವಾದರೆ ಅವನ ಸೋಶಿಯಲ್ ಮೀಡಿಯಾ ಅಕೌಂಟ್ ಆಕ್ಟೀವ್ ಆಗಿದ್ಯಾ ಅನ್ನೋದನ್ನು ತಿಳಿಯಿರಿ.
4. ನೀವು ಬ್ಯೂಸಿಯಾಗಿರಿ
ನಿಮ್ಮ ಹುಡುಗ ಏನಾದರೂ ನಿಮ್ಮನ್ನು ಹೇಳದೇ ಕೇಳದೇ ಬಿಟ್ಟು ಹೋದರೆ ಅವನಿಗೆ ನಿಮ್ಮ ಜೊತೆ ಬದುಕೋದಕ್ಕೆ ಇಷ್ಟವಿಲ್ಲ ಎಂದರ್ಥ. ಇಂತಹ ಸಮಯದಲ್ಲಿ ನೀವು ಆತನ ಬಗ್ಗೆ ಚಿಂತಿಸುತ್ತಾ, ಕಣ್ಣೀರು ಹಾಕುತ್ತಾ ಕೂರಬೇಡಿ. ಬದಲಾಗಿ ನೀವು ನಿಮ್ಮ ಗುರಿಯೆಡೆಗೆ ಕಾರ್ಯ ಪ್ರವೃತ್ತರಾಗಿ. ಯಶಸ್ಸಿನೆಡೆಗೆ ಹೆಜ್ಜೆ ಹಾಕಿ. ನೀವು ಬ್ಯೂಸಿಯಾಗಿದ್ದರೆ ಆತನ ನೆನಪು ನಿಮಗೆ ಕಾಡೋದೇ ಇಲ್ಲ.
5. ಅವನ ನೆನಪಿಗಾಗಿ ಇರುವ ಯಾವ ವಸ್ತುಗಳನ್ನು ಇಟ್ಟುಕೊಳ್ಳಬೇಡಿ
ಬಿಟ್ಟು ಹೋದ ಹುಡುಗನ ನೆನಪು ನಿಮಗೆ ಪದೇ ಪದೇ ಕಾಡೋದು ಸಹಜ. ಅದ್ರಲ್ಲೂ ಅವನು ಕೊಟ್ಟ ವಸ್ತುಗಳು, ಅವನ ಫೋಟೋ, ವಿಡಿಯೋ ನೋಡುತ್ತಿದ್ದರೆ ಮತ್ತೆ ಮತ್ತೆ ನಿಮಗೆ ಆ ನೋವು ಕಾಡದೇ ಇರೋದಿಲ್ಲ. ಇಂತಹ ಸಂದರ್ಭದಲ್ಲಿ ಅವನ ನೆನಪಾಗುವ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳಬೇಡಿ. ಎಲ್ಲಾ ಫೋಟೋಗಳನ್ನು ಡಿಲಿಟ್ ಮಾಡಿ. ನಿಮ್ಮ ಕೆಲಸದ ಕಡೆಗೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ.
6. ಅವನ ಆಪ್ತ ಸ್ನೇಹಿತರ ಜೊತೆಗೆ ಮಾತನಾಡಿ
ಹುಡುಗ ನಿಮ್ಮನ್ನು ಏಕಾಏಕಿ ಬಿಟ್ಟು ಹೋದರೆ ಮೊದಲಿಗೆ ಆತನ ಸ್ನೇಹಿತರನ್ನು ಮಾತನಾಡಿಸಿ ವಿಚಾರ ತಿಳಿದುಕೊಳ್ಳಿ. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಆಪ್ತರ ಬಳಿ ಎಲ್ಲಾ ವಿಚಾರವನ್ನು ಹೇಳಿಕೊಂಡಿರುತ್ತಾರೆ. ಹೀಗಾಗಿ ಅವನ ಸ್ನೇಹಿತರ ಜೊತೆ ಮಾತನಾಡಿದರೆ ಎಲ್ಲಾ ವಿಚಾರಗಳು ಗೊತ್ತಾಗಲಿದೆ.
7. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ
ಬಿಟ್ಟು ಹೋದವರ ನೆನಪು ಕಾಡೋದು ಸಹಜ. ಅದ್ರಲ್ಲೂ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದವರು ನಮ್ಮನ್ನು ಬಿಟ್ಟು ಹೋದರೆ ಸಹಿಸೋದಕ್ಕೆ ಸಾಧ್ಯಾನಾ? ಅವನು ಮಾಡಿದ ಮೋಸ ನಿಮಗೆ ನೆನಪಾಗಿ ನೀವು ದುಃಖಿಸುತ್ತಾ ಇರುತ್ತೀರಿ. ಇಂತಹ ಸಂದರ್ಭದಲ್ಲಿ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ. ಆಗ ಆ ನೋವಿನಿಂದ ಹೊರ ಬರಲು ಸಾಧ್ಯವಾಗುತ್ತದೆ.
ನಿಮ್ಮ ಸಹವಾಸವೇ ಬೇಡ ಎಂದು ಬಿಟ್ಟು ಹೋದವರು, ನಿಮ್ಮ ಪ್ರೀತಿಯನ್ನು ಎಡಗಾಲಲ್ಲಿ ಒದ್ದು ಹೋದವರಿಗಾಗಿ ನೀವು ಚಿಂತಿಸಿ ಫಲವಿಲ್ಲ. ನೀವು ಜೀವನದಲ್ಲಿ ಎಲ್ಲವನ್ನೂ ಎದುರಿಸಿ ಮುನ್ನುಗೋದನ್ನು ಕಲಿಯಬೇಕು. ನಿಮಗಾಗಿ ಒಂದು ಪ್ರಪಂಚವಿದೆ ಅಲ್ಲಿ ನೀವು ನಿಮ್ಮವರಿಗಾಗಿ ಬದುಕಬೇಕು ಅನ್ನೋದನ್ನು ಮರೀಬೇಡಿ.



Click it and Unblock the Notifications

