Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಹುಡುಗಿಯರನ್ನು ಇಂಪ್ರೆಸ್ ಮಾಡ್ಬೇಕಾ? ಹಾಗಾದ್ರೆ ಮೊದಲ ಡೇಟ್‌ನಲ್ಲಿ ಈ ತಪ್ಪುಗಳನ್ನು ಮಾಡ್ಲೇಬೇಡಿ
ಜೀವನದ ಮೊದಲ ಡೇಟ್ ಪ್ರತಿಯೊಬ್ಬರ ಜೀವನದಲ್ಲೂ ತುಂಬಾನೇ ಸ್ಪೆಷಲ್ ಆಗಿರುತ್ತದೆ. ಅದು ಹುಡಗ ಅಥವಾ ಹುಡುಗಿಯೇ ಆಗಿರಲಿ ಫಸ್ಟ್ ಡೇಟ್ ಅಂದ್ರೆ ತುಂಬಾನೇ ಎಕ್ಸೈಟ್ ಆಗಿರ್ತಾರೆ. ಅದ್ರಲ್ಲೂ ಹುಡುಗ್ರು ತಮ್ಮ ಹುಡುಗನ್ನು ಇಂಪ್ರೆಸ್ ಆಡೋದಕ್ಕೂ ಸಾಕಷ್ಟು ಪ್ರಯತ್ನವನ್ನೂ ಪಡ್ತಾರೆ.
ಆದ್ರೆ ಕೆಲವೊಂದು ಸಲ ಫಸ್ಟ್ ಡೇಟ್ ಟೈಂನಲ್ಲಿ ಹುಡುಗರು ಮಾಡೋ ಕೆಲವೊಂದು ತಪ್ಪುಗಳು ಅವರನ್ನು ಮುಜುಗೊರಕ್ಕೀಡು ಮಾಡುತ್ತದೆ. ಅಷ್ಟಕ್ಕು ಫಸ್ಟ್ ಡೇಟ್‌ಗೆ ಹೋಗೋವಾಗ ಹುಡುಗರು ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಅನ್ನೋದನ್ನು ತಿಳಿಯೋಣ.

1. ಡ್ರೆಸ್ಸಿಂಗ್ ಸೆನ್ಸ್ ಚೆನ್ನಾಗಿರಲಿ
ಹುಡುಗರೇ, ಮೊದಲ ಬಾರಿಗೆ ಡೇಟಿಂಗ್‌ಗೆ ಹೋಗೋವಾಗ ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಹೆಚ್ಚಾಗಿ ಗಮನ ಕೊಡಿ. ನೀವು ಹಾಕುವ ಬಟ್ಟೆ ಆ ಪರಿಸ್ಥಿತಿಗೆ ಸರಿ ಹೊಂದುವ ಹಾಗಿರಲಿ. ಪ್ಯಾಂಟ್ ಹಾಗೂ ಶರ್ಟ್ ಬಣ್ಣ ಒಂದಕ್ಕೊಂದು ಸರಿಹೊಂದುವಂತಿರಲಿ. ಬಟ್ಟೆಗೆ ಮ್ಯಾಚ್ ಆಗುವಂತಹ ಶೂ ಧರಿಸಿ. ಇನ್ನೂ ಸ್ಟಾಂಡರ್ಡ್ ಆಗಿರೋ ಒಂದು ವಾಚ್ ಧರಿಸಿಕೊಳ್ಳಿ. ಅಷ್ಟೇ ಅಲ್ಲದೇ, ನಿಮ್ಮ ಕೂದಲು ಹಾಗೂ ಗಡ್ಡದ ಬಗ್ಗೆ ಕೂಡ ಗಮನವಿರಲಿ. ಕೂದಲನ್ನು ಕೆದರಿಕೊಂಡು ಹೋಗದಿರಿ. ಒಟ್ಟಿನಲ್ಲಿ ಹುಡುಗಿ ನಿಮ್ಮನ್ನು ನೋಡಿದ ತಕ್ಷಣ ಮೆಚ್ಚಿಕೊಳ್ಳುವಂತಿರಬೇಕು.
2. ಸಂವಹನ ಚೆನ್ನಾಗಿರಲಿ
ಮೊದಲ ಡೇಟ್‌ನಲ್ಲಿ ಹುಡುಗಿ ನಿಮ್ಮ ಮಾತನ್ನು ಕೇಳಿ ಇಂಪ್ರೆಸ್ ಆಗಬೇಕೇ ಹೊರತು, ನಿಮ್ಮ ಮಾತಿನಿಂದ ಆಕೆಗೆ ಇರಿಸು ಮುರಿಸಾಗಬಾರದು ಅಲ್ವಾ? ಹೀಗಾಗಿ ನಿಮ್ಮ ಮಾತು ಹಿತವಾಗಿರಲಿ. ಆ ಸಮಯಕ್ಕೆ ಅಗತ್ಯವಿರೋ ಮಾತುಗಳನ್ನು ಮಾತ್ರ ಆಡಿದರೆ ಸಾಕು. ಇನ್ನೂ ವೈಟರ್ ಅನ್ನು ಮಾತನಾಡಿಸೋವಾಗಲು ಸಭ್ಯತೆಯಿಂದ ಮಾತನಾಡಿಸಿ. ಇನ್ನೂ ನೀವು ಆಹಾರವನ್ನು ಆರ್ಡರ್ ಮಾಡೋವಾಗ ಆಕೆಗೇನು ಇಷ್ಟ ಅನ್ನೋದನ್ನು ಕೇಳಿ ತಿಳಿದುಕೊಳ್ಳಿ. ನಂತರ ಆರ್ಡರ್ ಮಾಡಿ
3. ಫಿಟ್ ಆಗಿದ್ದರೆ ಒಳ್ಳೆಯದು
ಇತ್ತೀಚಿಗೆ ಯುವಕ- ಯುವತಿಯರು ಫಿಟ್‌ನೆಸ್‌ಗೆ ತುಂಬಾನೇ ಪ್ರಾಮುಖ್ಯತೆ ನೀಡುತ್ತಾರೆ. ಪ್ರತಿಯೊಬ್ಬರು ಜಿಮ್‌ಗೆ ಹೋಗಿ ಬೆವರಿಸ್ತಾರೆ. ನಮ್ಮ ದೇಹ ಫಿಟ್ ಆಗಿದ್ದರೆ ಯಾವುದೇ ಬಟ್ಟೆಯಾದರೂ ನಮಗೆ ಸರಿಯಾಗಿ ಒಪ್ಪುತ್ತದೆ. ಡೇಟ್‌ಗೆ ಹೋಗೋವಾಗ ಹುಡುಗಿಯರು ನಿಮ್ಮ ಮೈ ಕಟ್ಟನ್ನು ಗಮನಿಸ್ತಾರೆ. ಹಾಗಂತ ನಿಮ್ಮಲ್ಲಿ 6 ಪ್ಯಾಕ್ ಇರಬೇಕು ಅಂತೇನಿಲ್ಲ. ಬದಲಾಗಿ ಹೊಟ್ಟೆ ಕರಗಿಸಿದ್ರೆ ಸಾಕು. ಇನ್ನೂ ನಿಮಗೆ ಹುಷಾರಿಲ್ಲದ ಸಮಯದಲ್ಲಿ ಹುಡುಗಿಯನ್ನು ಡೇಟ್‌ಗೆ ಕರೆಯಬೇಡಿ. ನೀವು ಪದೇ ಪದೇ ಕೆಮ್ಮುತ್ತಾ, ಸೀನುತ್ತಾ ಇದ್ದರೆ ಹುಡುಗಿಗೆ ಇಷ್ಟವಾಗೋದಿಲ್ಲ.
4. ಕಣ್ಣಿನ ಸಂಪರ್ಕ ಚೆನ್ನಾಗಿರಲಿ
ನಾವು ಒಬ್ಬರ ಜೊತೆಗೆ ಮಾತನಾಡುವಾಗ ನಾವಾಡುವ ಮಾತುಗಳು ಹಾಗೂ ನಮ್ಮ ಕಣ್ಣಿನ ಸಂಪರ್ಕ ತುಂಬಾನೇ ಮುಖ್ಯವಾಗುತ್ತದೆ. ಹುಡುಗಿಯನ್ನು ಡೇಟ್‌ಗೆ ಕೆದುಕೊಂಡು ಹೋಗುವಾಗ ಆಕೆಯ ಜೊತೆಗೆ ನೀವು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬೇಕು. ಮಾತನಾಡುವಾಗ ಆಚೆ, ಈಚೆ ನೋಡುತ್ತಿದ್ದರೆ ನಿಮ್ಮ ಹುಡುಗಿಗೂ ಮುಜುಗೊರ ಅನ್ನಿಸಬಹುದು. ಇನ್ನೂ ಕೆಲವು ಹುಡುಗರ ದೃಷ್ಟಿ ಸರಿಯಿರೋದಿಲ್ಲ. ಹೀಗಾಗಿ ಐ ಕಾಂಟೆಕ್ಟ್ ಬಗ್ಗೆ ಗಮನ ಹರಿಸುವುದು ತುಂಬಾನೇ ಮುಖ್ಯ.
5. ಹುಡುಗಿಯ ಬಗ್ಗೆ ಕಾಳಜಿ ವಹಿಸಿ
ಹುಡುಗಿಯು ತನ್ನ ಮೊದಲ ಡೇಟ್‌ನಲ್ಲಿ ಹುಡುಗ ತನ್ನ ಬಗ್ಗೆ ಕಾಳಜಿ ವಹಿಸಬೇಕೆಂದು ಬಯಸುತ್ತಾಳೆ. ಒಂದು ವೇಳೆ ನೀವು ಅದರಲ್ಲಿ ಸೋತು ಹೋದರೆ ಹುಡುಗಿ ನಿಮ್ಮಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾಳೆ. ಇನ್ನೂ ಅಪ್ಪಿ ತಪ್ಪಿಯೂ ಮೊದಲ ಡೇಟ್‌ನಲ್ಲಿ ಆಕೆಗೆ ದುಬಾರಿ ಗಿಫ್ಟ್ ನೀಡೋದಕ್ಕೆ ಹೋಗಬೇಡಿ. ತುಂಬಾ ಜನ ಹುಡುಗಿಯರಿಗೆ ಈ ರೀತಿ ಶೋಕಿ ಮಾಡೋದು ಇಷ್ಟವಾಗೋದಿಲ್ಲ. ಇದರ ಬದಲಾಗಿ ನೀವು ಆಕೆಗೆ ಕಾಳಜಿ ತೋರಿಸಿದರಷ್ಟೇ ಸಾಕು.
6. ಬೇರೆ ಹುಡುಗಿಯರನ್ನು ನೋಡೋವಾಗ ನಿಮ್ಮ ದೃಷ್ಟಿ ಸರಿಯಾಗಿರಲಿ
ನೀವು ನಿಮ್ಮ ಹುಡುಗಿಯ ಜೊತೆ ಇದ್ದಾಗ ಬೇರೆ ಹುಡುಗಿಯರನ್ನು ನೋಡೋದಕ್ಕೆ ಹೋಗಬೇಡಿ. ಅದು ಆಕೆಗೆ ಅಗೌರವ ತೋರಿದಂತಾಗುತ್ತದೆ. ನಿಮ್ಮ ಹುಡುಗಿ ಪಕ್ಕದಲ್ಲೇ ಇದ್ದಾಗ ಬೇರೆ ಹುಡುಗಿಯನ್ನು ನೋಡುವ ಅವಶ್ಯಕತೆ ಖಂಡಿತ ನಿಮಗೆ ಇರೋದಿಲ್ಲ. ಆದರೆ ಕೆಲ ಫ್ಲರ್ಟ್ ಮಾಡೋ ಹುಡುಗರು ಹುಡುಗಿ ಪಕ್ಕದಲ್ಲೇ ಇದ್ದರೂ ಕೂಡ ಅತ್ತ- ಇತ್ತ ಕಣ್ಣಾಡಿಸಿ ಇತರ ಹುಡುಗಿಯರ ಮೇಲೆ ದೃಷ್ಟಿ ಇಡುತ್ತಾರೆ. ಈ ರೀತಿಯ ನಡವಳಿಕೆ ಹುಡುಗಿಯರಿಗೆ ಇಷ್ಟ ಆಗೋದಿಲ್ಲ.
ಹುಡುಗಿಯನ್ನು ಡೇಟ್‌ಗೆ ಕರೆದುಕೊಂಡು ಹೋಗುವಾಗ ತುಂಬಾನೇ ಜಾಗರೂಕರಾಗಿರಬೇಕು. ಫಸ್ಟ್ ಡೇಟ್‌ನಲ್ಲಿ ನೀವು ಯಾವ ರೀತಿ ನಡೆದುಕೊಳ್ಳುತ್ತೀರಿ ಅನ್ನೋದ್ರ ಮೇಲೆ ನಿಮ್ಮ ಪ್ರೀತಿಯ ಅಳಿವು ಹಾಗೂ ಉಳಿವು ನಿಂತಿರೋದು.



Click it and Unblock the Notifications
