Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಅಪ್ಪನಿಗೆ ಮಕ್ಕಳು ಎಂಥದ್ದೇ ಸಂದರ್ಭವಾಗಿರಲಿ ಈ ಮಾತುಗಳನ್ನು ಹೇಳಲೇಬಾರದು
ಈ ವರ್ಷ ಜೂನ್ 16ರಂದು ಅಪ್ಪಂದಿರ ದಿನವನ್ನು ಆಚರಿಸಲಾಗುವುದು. ತನ್ನಅಪ್ಪನ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ಅಭಿಪ್ರಾಯವಿರುತ್ತದೆ. ಕೆಲವರಿಗೆ ಅಪ್ಪನ ಬಗ್ಗೆ ತುಂಬಾ ಭಯವಿರುತ್ತದೆ, ಇನ್ನು ಅಪ್ಪ ಎಂದರೆ ಅತ್ಯಾಪ್ತ ಸ್ನೇಹ, ಇನ್ನು ಕೆಲವರಿಗೆ ಅಪ್ಪ ಎಂದರೆ ಕೋಪ ಹೀಗೆ ಅಪ್ಪ ಎನ್ನುವ ಮೂರ್ತಿ ನಾನಾ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ.

ಅಮ್ಮನ ಕಷ್ಟಗಳ ಅರಿವು ನಮಗೆ ಸ್ಪಷ್ಟವಾಗಿ ಗೊತ್ತಿರುತ್ತದೆ, ಆದರೆ ಎಷ್ಟೋ ಮಕ್ಕಳಿಗೆ ಅಪ್ಪನ ಕಷ್ಟ ಗೊತ್ತಿರುವುದಿಲ್ಲ, ಇಡೀ ಕುಟುಂಬದ ಜವಾಬ್ದಾರಿಯ ಭಾರ ಹೊತ್ತು ನಡೆಯುವ ಅಪ್ಪಂದಿರಲ್ಲಿ ಕೆಲವರು ಮನೆಗೆ ಬಂದಾಗ ತಮ್ಮ ಭಾವನೆಗಳನ್ನು ಹೆಂಡತಿ ಮಕ್ಕಳ ಜೊತೆ ಹೇಳಿಕೊಳ್ಳುವುದಿಲ್ಲ, ಏನೋ ಒಂದು ರೀತಿಯ ಬಿಗುಮಾನದಿಂದ ವರ್ತಿಸುತ್ತಾರೆ. ಈ ಕಾರಣದಿಂದ ಅಪ್ಪನ ಹತ್ರ ಅಮ್ಮನ ಬಳಿ ಇರುವ ಸಲುಗೆ ಇರಲ್ಲ, ನಿಜ ಆದರೆ ಅಪ್ಪನ ತ್ಯಾಗ ಅವನ ಬೆವರು ಮರೆಯಲೇಬಾರದು.
ಅಪ್ಪನಿಗೆ ಈ ಮಾತುಗಳನ್ನು ಎಂದಿಗೂ ಹೇಳಬೇಡಿ
ನೀನು ನಮ್ಮ ಅಪ್ಪನಾಗಿರಬಾರದಿತ್ತು
ಕೆಲವೊಮ್ಮೆ ಯಾವುದೇ ಕಾರಣಕ್ಕೆ, ಯಾವುದೋ ಸಂದರ್ಭದಲ್ಲಿ ಅಪ್ಪ-ಮಕ್ಕಳ ನಡುವೆ ಜಗಳವಾಗಬಹುದು ಆದರೆ ಯಾವುದೇ ಕಾರಣಕ್ಕೆ ಅಪ್ಪನಿಗೆ ನೀನು ನಮ್ಮ ಅಪ್ಪ ಆಗಿರಬಾರದಿತ್ತು ಎಂದು ಹೇಳಬೇಡಿ. ಏಕೆಂದರೆ ಆ ಘಳಿಗೆಯಲ್ಲಿ ಅವನು ನಿಮಗೆ ಕೆಟ್ಟವನಾಗಿ ಕಂಡಿರಬಹುದು, ಆದರೆ ಇಡೀ ಜೀವನ ಕೆಟ್ಟವನಾಗಿರಲ್ಲ.
ನೀನು ಸತ್ತು ಹೋದ್ರೆ ಒಳ್ಳೆಯದು
ಈ ಮಾತುಗಳು ತುಂಬಾ ಕಠೋರ, ಅಪ್ಪನಿಗೆ ಈ ಮಾತುಗಳನ್ನು ಹೇಳಲೇಬಾರದು, ಈ ಮಾತುಗಳನ್ನು ಹೇಳುವ ಮಕ್ಕಳು ಈ ಪ್ರಪಂಚದಲ್ಲಿ ಯೋಗ್ಯತೆ ಇಲ್ಲದವರು. ಕೋಪ ಬರಬಹುದು, ಆದರೆ ನಿಮ್ಮ ಕೋಪ ನಿಯಂತ್ರಿಸಿ. ಅವನು ಕೆಟ್ಟ ವರ್ತನೆಯಿಂದ ಕೆಟ್ಟ ಅಪ್ಪನೇ ಆಗಿರಬಹುದು, ಆದರೆ ಈ ಮಾತುಗಳನ್ನು ಹೇಳಲೇಬಾರದು.
ಅಪ್ಪನ ವೇಷ ಭೂಷಣ ನೋಡಿ ನಿನ್ನ ನೋಡಿದರೆ ನಾಚಿಕೆಯಾಗುತ್ತೆ ಅಥವಾ ಅಸಹ್ಯವಾಗುತ್ತೆ ಎಂದು ಹೇಳುವುದು
ಈ ತಪ್ಪು ತುಂಬಾ ಮಕ್ಕಳು ಮಾಡುತ್ತಾರೆ, ಅದರಲ್ಲಿಯೂ ಅಪ್ಪ ಬಡವನಾಗಿದ್ದರೆ ಮಕ್ಕಳ ವಿದ್ಯಾಭ್ಯಾಸ ಅವರ ಹೊಟ್ಟೆ ತುಂಬಿಸುವ ಒದ್ದಾಟದಲ್ಲಿ ಅವನು ಅವನು ಉಡುಪು ಕಡೆ ಗಮನ ಕೊಡಲು ಸಾಧ್ಯವಾಗಿರುವುದಿಲ್ಲ. ಅವನ ಕೊಳಕು ಅಂಗಿಗಳು ಅಥವಾ ಹರಿದ ಅಂಗಿಗಳು ನಿಮ್ಮನ್ನು ಅವನು ಎಷ್ಟು ಕಷ್ಟಪಟ್ಟು ಸಾಕುತ್ತಿದ್ದಾನೆ ಎಂಬುವುದನ್ನು ಸೂಚಿಸುತ್ತದೆ, ಆದ್ದರಿಂದಾಗಿ ಅವನ ಉಡುಪು ಅಥವಾ ವೇಷಭೂಷಣ ನೋಡಿ ನಿಮ್ಮ ಅಪ್ಪ ಎಂದು ಸ್ನೇಹಿತರಿಗೆ ಪರಿಚಯಿಸಲು ಹಿಂಜರಿಯಬೇಡಿ. ನೀವು ತುಂಬಾ ಪ್ರೀತಿಯಿಂದ ಇದು ನನ್ನ ಅಪ್ಪ ಎಂದು ಹೆಮ್ಮೆಯಿಂದ ಪರಿಚಯಿಸಿ, ಅದರ ಬದಲಿಗೆ ಅವನ ಲುಕ್ ಬಗ್ಗೆ ಕಮೆಂಟ್ ಮಾಡಬೇಡಿ.
ನಿನಗೆ ನನಗಿಂತ ನಿನ್ನ ಬೇರೆ ಮಕ್ಕಳ ಮೇಲೆ ಪ್ರೀತಿ ಹೆಚ್ಚು
ಅಪ್ಪ-ಅಮ್ಮನಿಗೆ ಎಲ್ಲಾ ಮಕ್ಕಳು ಒಂದೇ , ಎಲ್ಲರ ಮೇಲೆ ಸಮಾನ ಪ್ರೀತಿ ಇರುತ್ತದೆ ಆದರೆ ನೀವು ಅವರಿಗೆ ನಿನಗೆ ನನಗಿಂತ ಅಕ್ಕ, ಅಣ್ಣ, ತಮ್ಮ, ತಂಗಿ ಹೀಗೆ ಇವರ ಮೇಲೆ ಪ್ರೀತಿ ಹೆಚ್ಚು ಎಂದು ಹೇಳಬೇಡಿ, ಇದರಿಂದ ತುಂಬಾ ನೋವುಂಟಾಗುವುದು.
ನನಗೆ ಏನು ಇಷ್ಟವೋ ಅದನ್ನು ಮಾಡುತ್ತೇನೆ
ಈ ಮಾತುಗಳನ್ನು ಮಕ್ಕಳು ಹದಿಹರೆಯದ ಪ್ರಾಯದಲ್ಲಿ ಅಥವಾ ಯೌವನ ಪ್ರಾಯದಲ್ಲಿ ಹೇಳುತ್ತಾರೆ. ಅಪ್ಪ ಅದು ಹಾಗೆ ಅಲ್ಲ ಹೀಗೆ ಎಂದು ಬುದ್ಧಿವಾದ ಹೇಳಲು ಬಂದಾಗ ಅದು ಮಕ್ಕಳಿಗೆ ಇಷ್ಟವಾಗದೆ ಈ ಮಾತುಗಳನ್ನಾಡುತ್ತಾರೆ, ಆದರೆ ಹೀಗೆ ಮಾತನಾಡುವವರು ಒಂದು ವಿಷಯವನ್ನು ಗಮನಿಸಬೇಕು, ನಿಮ್ಮನ್ನು ಈ ಸ್ಥಾನಕ್ಕೆ ಬೆಳೆಸಲು ಅವರು ಅವರ ಇಷ್ಟವನ್ನು ತ್ಯಾಗ ಮಾಡಿರುತ್ತಾರೆ, ಈಗ ನಾನು ನನಗೆ ಇಷ್ಟ ಬಂದಂತೆ ಮಾಡುತ್ತೇನೆ ಎಂದು ಹೇಳಿದಾಗ ಅದು ಅವರಿಗೆ ತುಂಬಾನೇ ನೋವುಂಟು ಮಾಡುತ್ತದೆ.
ಎಲ್ಲಾ ವಿಷಯಕ್ಕೆ ಅಮ್ಮನ ಅಭಿಪ್ರಾಯಕ್ಕೆ ಮನ್ನಣೆ ನೀಡುವುದು
ನಿಮಗೆ ಅಮ್ಮನ ಮೇಲೆ ಪ್ರೀತಿ ಹೆಚ್ಚರಬಹುದು, ಆದರೆ ಎಲ್ಲದಕ್ಕೂ ಅಮ್ಮನ ಕೇಳುವುದು, ಅಪ್ಪ ಒಂದು ಅಭಿಪ್ರಾಯ ಹೇಳಿದ ಮೇಲೂ ಮತ್ತೆ ಅಮ್ಮನ ಅಭಿಪ್ರಾಯ ನಡೆದುಕೊಳ್ಳುವುದು ಇದೆಲ್ಲಾ ಅಪ್ಪನಿಗೆ ಬೇಸರವಾಗುತ್ತದೆ. ಆದ್ದರಿಂದ ಈ ರೀತಿ ಮಾಡಬೇಡಿ. ಅಪ್ಪನಿಗೆ ಮಕ್ಕಳು ತನಗೆ ಗೌರವ ನೀಡಿದಾಗ ತುಂಬಾನೇ ಖುಷಿಯಾಗುವುದು.



Click it and Unblock the Notifications
