Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಗಂಡ-ಹೆಂಡತಿ ಸಂಬಂಧ ಹಾಳು ಮಾಡುವ ಸಂಗತಿಗಳಿವು
ಪ್ರೀತಿ, ದಾಂಪತ್ಯ ಇವೆಲ್ಲವೂ ಚೆನ್ನಾಗಿದ್ದರೆ ಮಾತ್ರ ಬದುಕೆಂಬ ಜಟಕಾಬಂಡಿ ಸರಾಗವಾಗಿ ಸಾಗಲು ಸಾಧ್ಯ. ದಾಂಪತ್ಯ ಜೀವನ ಸುಗಮವಾಗಿ ಇರಬೇಕು ಎಂದರೆ ಪರಸ್ಪರ ಪ್ರೀತಿ, ಗೌರವ, ಅರ್ಥ ಮಾಡಿಕೊಳ್ಳುವಿಕೆ, ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವುದು ಹೀಗೆ ಪ್ರತಿಯೊಂದೂ ಇರಬೇಕು. ಆಗ ಮಾತ್ರ ಆ ಸಂಬಂಧ ಚಂದನೆಯ ರೂಪ ಪಡೆದುಕೊಳ್ಳಲು ಸಾಧ್ಯವಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ವಿಚ್ಛೇದನದ ಸುದ್ದಿಯನ್ನೇ ಕೇಳುತ್ತಿದ್ದೇವೆ. ಇಷ್ಟಪಟ್ಟು ಪ್ರೀತಿಸಿ ಮದುವೆಯಾದರೂ ಸಹ ಜೊತೆಯಾಗಿ ಬಾಳುವುದು ಸವಾಲು ಎಂದು ಅನೇಕ ದಂಪತಿ ಭಾವಿಸಿದ್ದಿದೆ. ಹೀಗೆ ಏಕೆ ಅಗುತ್ತದೆ..? ಸಂಗಾತಿಯಲ್ಲಿನ ಯಾವ ತಪ್ಪುಗಳು ದಾಂಪತ್ಯದ ನೊಗವನ್ನು ತಪ್ಪು ದಾರಿಗೆ ಎಳೆದೊಯ್ಯುತ್ತದೆ ಎಂಬ ಪ್ರಶ್ನೆಗೆ ಸಾಕಷ್ಟು ರೀತಿಯಲ್ಲಿ ಉತ್ತರ ನೀಡಬಹುದು.
ದಾಂಪತ್ಯ ಎಂದಮೇಲೆ ಯಾವುದೋ ಒಂದು ವಿಚಾರದ ಮೇಲೆ ವೈಮನಸ್ಯ ಮೂಡುವುದು ಸಹಜ. ಆದರೆ ಪತಿ - ಪತ್ನಿ ಇಬ್ಬರೂ ಸೇರಿ ಸರಿಪಡಿಸಿಕೊಳ್ಳಬೇಕು. ನಿಮ್ಮ ಯುದ್ಧದಲ್ಲಿ ನೀವಿಬ್ಬರೂ ಒಂದೇ ತಂಡ ಎನ್ನುವುದು ಗಮನದಲ್ಲಿರಬೇಕು. ಆದರೆ ಇಂತಾ ಚಿಕ್ಕ ಚಿಕ್ಕ ವಿಷಯಗಳಲ್ಲೇ ಎಡವುವ ಈಗಿನ ಯುವ ಜೋಡಿಗಳು ದಾಂಪತ್ಯ ಮೊಳಕೆಯೊಡೆಯುವ ಹೊತ್ತಲ್ಲೇ ವಿಚ್ಚೇದನಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತುತ್ತಿವೆ.
ಸಂಗಾತಿಯನ್ನು ಇನ್ನೊಬ್ಬರೊಂದಿಗೆ ಹೋಲಿಸದಿರಿ :
ಒಬ್ಬೊಬ್ಬರ ವ್ಯಕ್ತಿತ್ವ ಒಂದೊಂದು ರೀತಿ. ಒಬ್ಬರ ಹಾಗೆ ಈ ಜಗತ್ತಿನಲ್ಲಿ ಇನ್ನೊಬ್ಬರು ಇರಲು ಸಾಧ್ಯವೇ ಇಲ್ಲ ಎಂಬುದು ಮೊದಲು ನಿಮ್ಮ ತಲೆಯಲ್ಲಿ ಇರಬೇಕು. ಅವರ್ಯಾರೋ ಒಳ್ಳೆಯವರು ನೀನು ಅವರಂತೆ ಅಲ್ಲ ಎಂಬ ಹೋಲಿಕೆ ಬೇಡ. ಯಾರಲ್ಲಿಯೂ ಹಣವಿದೆ ನಮ್ಮಲ್ಲಿ ಇಲ್ಲ ಎಂಬ ದುಃಖವೂ ಒಳ್ಳೆಯದಲ್ಲ. ನನ್ನ ಅಮ್ಮನಂತೆ ನೀನಿಲ್ಲ ಎಂಬ ಕುಹಕವೂ ಒಳ್ಳೆಯದಲ್ಲ. ನಿಮ್ಮ ಸಂಗಾತಿಗಿಂತ ಜಾಸ್ತಿ ಹಣ ಹೊಂದಿದವನ ಬಳಿಯಲ್ಲಿ ಆರೋಗ್ಯವೇ ಇಲ್ಲದಿರಬಹುದು. ನಿಮ್ಮ ಸಂಗಾತಿಯ ವಯಸ್ಸಿನಲ್ಲಿ ನಿಮ್ಮ ತಾಯಿ ಹೇಗಿದ್ದರೋ ಎಂದು ನೀವು ನೋಡಿಲ್ಲ. ಹೀಗಾಗಿ ಹೋಲಿಕೆಗಳು ಸಂಬಂಧ ಹಳಸುವಂತೆ ಮಾಡುತ್ತವೆ ಎಂಬುದು ನಿಮ್ಮ ತಲೆಯಲ್ಲಿ ಇರಬೇಕು.
ಜಗಳ ಪರಿಹರಿಸದೇ ಮಲಗುವುದು :
ದಾಂಪತ್ಯ ಎಂದ ಮೇಲೆ ಜಗಳ, ಮನಸ್ತಾಪ, ವೈಮನಸ್ಯ ಎಲ್ಲವೂ ಸಹಜ. ಆದರೆ ನಿಮ್ಮ ಗುರಿ ಅದನ್ನು ಸರಿಪಡಿಸಿಕೊಳ್ಳುವುದು ಆಗಿರಬೇಕೇ ಹೊರತು ಇನ್ನಷ್ಟು ಜಟಿಲಗೊಳಿಸಿಕೊಳ್ಳುವಂತೆ ಇರಬಾರದು. ಅನೇಕರು ಪದೇ ಪದೇ ಜಗಳ ಮಾಡುತ್ತಾರೆ. ತಿಂಗಳುಗಟ್ಟಲೇ ಮಾತು ಬಿಡುತ್ತಾರೆ. ಒಬ್ಬರ ಮುಖ ಕಂಡರೆ ಇನ್ನೊಬ್ಬರಿಗೆ ಆಗದು ಎಂಬಂತೆ ಬದುಕಲು ಆರಂಭಿಸುತ್ತಾರೆ. ಇವುಗಳು ಖಂಡಿತವಾಗಿಯೂ ದಾಂಪತ್ಯ ಜೀವನವನ್ನು ಉಳಿಸಲು ಸಾಧ್ಯವೇ ಇಲ್ಲ.
ನಿಮ್ಮ ಸಂಗಾತಿಗೆ ಆದ್ಯತೆ ನೀಡದಿರುವುದು
ಇಬ್ಬರು ಒಂದಾಗಿ ಬಾಳಬೇಕೆಂದು ನಿರ್ಧರಿಸಿದ ಮೇಲೆ ಪರಸ್ಪರರ ಅಭಿಪ್ರಾಯಗಳ ಮೇಲೆ ಗೌರವ ಹೊಂದುವುದು ಮುಖ್ಯ. ಆದರೆ ಪ್ರತಿಬಾರಿಯೂ ನನ್ನ ಮಾತೇ ನಡೆಯಬೇಕು. ನನ್ನ ಆದ್ಯತೆಗಳಿಗೆ ಮಾತ್ರ ಮಾನ್ಯತೆ ಸಿಗಬೇಕು ಎಂಬಥ ಗುಣಗಳು ದಾಂಪತ್ಯವನ್ನು ಉಳಿಸಲಾರವು. ಇಬ್ಬರೂ ಇಬ್ಬರ ಅಭಿಪ್ರಾಯಗಳಿಗೆ ಗೌರವ ನೀಡಬೇಕು. ನಿಮ್ಮಿಬ್ಬರ ಆದ್ಯತೆ ನೀವೇ ಆಗಿರಬೇಕು. ಎಂಥದ್ದೇ ಸಂದರ್ಭದಲ್ಲಿಯೂ ಯಾರನ್ನೂ ಯಾರು ಬಿಟ್ಟುಕೊಡಬಾರದು.
ಆಕರ್ಷಣೆಗಳಿಗೆ ಬಲಿಯಾಗದಿರಿ
ಕಾಲ ಕಳೆದಂತೆ ಅನೇಕರಿಗೆ ದಾಂಪತ್ಯ ಬೇಸರ ಮೂಡಿಸಿಬಿಡುತ್ತದೆ. ಹೀಗಾದಾಗೆಲ್ಲ ಅನೇಕರು ತಪ್ಪು ದಾರಿ ಹಿಡಿಯುವುದಿದೆ. ಸಂಗಾತಿಗೆ ತಿಳಿಯದಂತೆ ಕದ್ದು ಮುಚ್ಚಿ ಇನ್ನೊಬ್ಬರೆಡೆಗೆ ಆಕರ್ಷಿತರಾಗುವುದು. ಅಕ್ರಮ ಸಂಬಂಧಗಳನ್ನು ಆರಂಭಿಸುವುದು. ಇದ್ಯಾವುದೂ ನಿಮ್ಮ ದಾಂಪತ್ಯಕ್ಕೆ ಒಳ್ಳೆಯದಲ್ಲ. ಪ್ರೀತಿ ಎಂದಮೇಲೆ ಬದ್ಧತೆ ಇರಬೇಕು. ಎಷ್ಟೇ ವರ್ಷ ಕಳೆದರೂ ಪ್ರೀತಿ ಹೆಚ್ಚಾಗಬೇಕು ವಿನಃ ಕಡಿಮೆಯಾಗಬಾರದು.
ಮುಕ್ತವಾಗಿ ಚರ್ಚಿಸಿ
ಎಷ್ಟೋ ಸಂಬಂಧಗಳು ಸಂವಹನದ ಕೊರತೆಯಿಂದ ಮುರಿದು ಬೀಳುತ್ತಿದೆ. ಹೀಗಾಗಿ ಪರಸ್ಪರ ಮಾತನಾಡಿ. ಇಬ್ಬರ ನಡುವೆ ಮೂಡಿದ ತಪ್ಪು ಭಾವನೆಗಳನ್ನು ಆಗಿಂದಾಗಲೇ ಸರಿಪಡಿಸಿಕೊಳ್ಳಿ. ಏನೇ ಅಸಮಾಧಾನಗಳಿದ್ದರೂ ನೇರವಾಗಿ ಹೇಳಿಕೊಳ್ಳಿ. ಕೋಪ ಮಾಡಿಕೊಂಡು ಮಾತು ನಿಲ್ಲಿಸುವುದು ಯಾವುದಕ್ಕೂ ಪರಿಹಾರವಲ್ಲ ಎಂಬುದು ತಿಳಿದಿರಲಿ. ಎಲ್ಲವನ್ನೂ ಮುಕ್ತವಾಗಿ ಮಾತನಾಡಿ. ಸಮಾಧಾನದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಆಗ ಮಾತ್ರ ನಿಮ್ಮ ಸಂಬಂಧ ನೂರಾರು ವರ್ಷಗಳ ಕಾಲ ಮಾದರಿಯಾಗಿರಲು ಸಾಧ್ಯವಿದೆ. ಅರಿತು ಬಾಳಿದರೆ ದಾಂಪತ್ಯಕ್ಕಿಂತ ಸುಂದರ ಸಂಬಂಧ ಮತ್ತೊಂದಿಲ್ಲ.



Click it and Unblock the Notifications