Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ ರೀತಿಯೆಲ್ಲಾ ಇದ್ದರೆ ನಿಮ್ಮದು ಸೀರಿಯಸ್ ರಿಲೇಷನ್‌ಶಿಪ್ ಅಲ್ವೇ ಅಲ್ಲ, ಹುಷಾರು ಕಣ್ರಿ...
ಎಲ್ಲಾ ರೊಮ್ಯಾಂಟಿಕ್ ರಿಲೇಷನ್‌ಶಿಪ್ ಒಂದೇ ರೀತಿ ಇರುವುದಿಲ್ಲ, ಕೆಲವೊಂದು ಜೋಡಿಗಳನ್ನು ನೋಡಿದಾಗ ರೊಮ್ಯಾಂಟಿಕ್ ಜೋಡಿಗಳು ಅನಿಸುತ್ತದೆ, ಆದರೆ ಸಂಬಂಧ ಗಟ್ಟಿಯಾಗಿರುವುದಿಲ್ಲ, ಯಾವುದೊ ಒಂದು ಕಾರಣಕ್ಕೆ ಪ್ರೀತಿಸುವ ನಾಟಕ ಆಡಿ ಮೋಸ ಮಾಡುತ್ತಿರುತ್ತಾರೆ, ಆದರೆ ಅದನ್ನು ತಿಳಿಯದೆ ಮತ್ತೊಬ್ಬ ಸಂಗಾತಿ ಮೋಸ ಹೋಗುತ್ತಾರೆ, ತಾನು ಮೋಸ ಹೋದೆ ಎಂದು ತಿಳಿಯುವಷ್ಟರಲ್ಲ ಬದುಕು ಹಾಳಾಗಿರುತ್ತದೆ. ಇದನ್ನು ಸಿಚುವೇಷನ್‌ಶಿಪ್ ಎಂದು ಕರೆಯಲಾಗುವುದು.
ಇಬ್ಬರೂ ರಿಲೇಷನ್‌ಶಿಪ್‌ನಲ್ಲಿ ಸೀರಿಯಸ್ ಆಗಿಲ್ಲ, ಸುಮ್ಮನೆ ಒಂದು ಅಫೆಕ್ಷನ್‌ಗಾಗಿ ಜೊತೆಗಿದ್ದಾರೆ ಎಂದಾದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ, ಆದರೆ ನಿಜವಾಗಲೂ ಒಬ್ಬರು ಇಷ್ಟಪಡುತ್ತಿದ್ದು ಮತ್ತೊಬ್ಬರು ರಿಲೇಷನ್‌ಶಿಪ್‌ನಲ್ಲಿ ಸೀರಿಯಸ್ ಆಗಿ ಇಲ್ಲ ಅಂದ್ರೆ ಮಾತ್ರ ತುಂಬಾನೇ ಕಷ್ಟವಾಗುವುದು. ಅಂಥವರು ನಮ್ಮ ಸಂಗಾತಿ ನಿಜವಾಗಲೂ ನಮ್ಮನ್ನು ಪ್ರೀತಿಸುತ್ತಿದ್ದಾರಾ ಅಥವಾ ಕೇವಲ ತೋರ್ಪಡಿಕೆಯ ಪ್ರೀತಿ ತೋರಿಸುತ್ತಿದ್ದಾರಾ ಎಂದು ಕೆಲವೊಂದು ಲಕ್ಷಣಗಳಿಂದ ತಿಳಿಯಬಹುದು.

ಸಿಚುವೇಷನ್‌ಶಿಪ್ ರಿಲೇಷನ್‌ನಲ್ಲಿದ್ದೇವಾ, ಇಲ್ವಾ ಅಂತ ತಿಳಿಯುವುದು ಹೇಗೆ? ನಿಮ್ಮ ರಿಲೇಷನ್‌ಶಿಪ್ ಈ ರೀತಿಯಿದ್ದರೆ ಅದು ಸೀರಿಯಸ್ ರಿಲೇಷನ್‌ಶಿಪ್ ಅಲ್ವೇ ಅಲ್ಲ...
ರಿಲೇಷನ್‌ಶಿಪ್ ಸ್ಟೇಟಸ್ ಏನು ಎಂಬ ಕ್ಲಾರಿಟಿ ಇರಲ್ಲ
ಇಬ್ಬರು ಜೊತೆಗಿರುತ್ತಿರ, ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತಿದ್ದೀರಿ ಎಂದೆಲ್ಲಾ ಅನಿಸುತ್ತಿರುತ್ತದೆ, ಆದರೆ ಕಮಿಟಿಡ್ ಎಂದು ಒಪ್ಪಿಕೊಳ್ಳಲು ಸಿದ್ಧವಿರಲ್ಲ, ಮದುವೆ ಬಗ್ಗೆ ಯಾವುದೇ ಮಾತುಕತೆ ಇರಲ್ಲ, ಇಬ್ಬರ ಭವಿಷ್ಯದ ಬಗ್ಗೆ ಯಾವುದೇ ಚರ್ಚೆ ಇರಲ್ಲ ಎಂದಾದರೆ ನಿಮ್ಮ ರಿಲೇಷನ್‌ಶಿಪ್ ಸ್ಟ್ರಾಂಗ್ ಇಲ್ಲ ಎಂದು ಹೇಳಬಹುದು.
ಯಾವುದೇ ಎಮೋಷಲ್ ಬಾಂಡಿಂಗ್ ಇಲ್ಲದಿರುವುದು
ಆ ವ್ಯಕ್ತಿ ಕೆಲವೊಮ್ಮೆ ತುಂಬಾ ಕ್ಲೋಸ್ ಇರುತ್ತಾರೆ ನಂತರ ಇದ್ದಕ್ಕಿದ್ದಂತೆ ತಟಸ್ಥವಾಗಿರುವುದು, ನಿಮ್ಮ ಫೋನ್‌ಗೆ, ಮೆಸೇಜ್‌ಗೆ ಸರಿಯಾಗಿ ರಿಪ್ಲೈ ಮಾಡದಿರುವುದು, ನಂತರ ಪುನಃ ಬಂದು ತುಂಬಾ ಪ್ರೀತಿ ತೋರಿಸುವುದು ಮಾಡುವಂತೆ ನಟಿಸುವುದು ಮಾಡುತ್ತಿದ್ದರೆ ಇಂಥವರ ಸಂಬಂಧ ಮುಂದುವರೆಸಿದರೆ ನಿಮಗೆ ಖಂಡಿತ ನೆಮ್ಮದಿ ಇರಲ್ಲ.
ಮತ್ತೊಬ್ಬರಿಗೆ ನಿಮ್ಮ ಸಂಬಂಧ ತಿಳಿಯಬಾರದು ಎಂದು ಬಯಸುವುದು
ಪ್ರೇಮಿಗಳು ತಾವು ಪ್ರೀತಿಸುತ್ತಿರುವ ವಿಷಯ ಯಾರಿಗೂ ಗೊತ್ತಾಗಬಹುದೆಮದು ಬಯಸುವುದು ಸಹಜ, ಆದರೆ ಕನಿಷ್ಠ ಅವರ ಸ್ನೇಹಿತರಿಗಾದರೂ ಗೊತ್ತಿರುತ್ತದೆ. ಆದರೆ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಹೇಳಿಕೊಳ್ಳದ ವ್ಯಕ್ತಿಯಾದರೆ, ಮನೆಯವರ, ಸ್ನೇಹಿತರ ಮುಂದೆ ನಿಮ್ಮ ಸಂಬಂಧವನ್ನು ತುಂಬಾ ರಹಸ್ಯವಾಗಿಡಲು ಬಯಸುತ್ತಿದ್ದಾರೆ ಎಂದಾದರೆ ಕುರಿತು ನೀವು ಸ್ವಲ್ಪ ಯೋಚಿಸುವುದು ಒಳ್ಳೆಯದು.
ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸದಿರುವುದು
ಇಬ್ಬರು ಒಬ್ಬರನ್ನೊಬ್ಬರು ಇಷ್ಟಪಡಲು ಆರಂಭಿಸಿದ ಮೇಲೆ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುತ್ತಾರೆ, ಆದರೆ ಅವರ ಜೀವನದ ಯಾವುದೇ ಪ್ರಮುಖ ವಿಷಯಗಳ ಕುರಿತು ನಿಮಗೆ ಹೇಳುವುದಿಲ್ಲ, ನಿಮ್ಮಿಬ್ಬರ ಕುರಿತ ಯಾವುದೇ ಫ್ಯೂಚರ್ ಪ್ಲ್ಯಾನ್ ಇಲ್ಲ, ಆ ಕುರಿತು ಮಾತೂ ಆಡುವುದಿಲ್ಲ, ಒಂದು ವೇಳೆ ನೀವು ಈ ಕುಡಿತು ಹೇಳಿದರೆ ಕೋಪಗೊಳ್ಳುವುದು ಅಥವಾ ಆ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದಾದರೆ ಅವರದ್ದು ಟೈಮ್ ಪಾಸ್ ಲವ್ ಎಂದು ಹೇಳಬಹುದು. ನೀವು ನಿಮ್ಮ ಲವ್ ಬಗ್ಗೆ ಸೀರಿಯಸ್ ಆಗಿರುವವರಾದರೆ ಇಂಥವರ ಜೊತೆ ಸಂಬಂಧ ಮುಂದುವರೆಸಿದರೆ ಮನಸ್ಸಿಗೆ ನೋವಾಗುವುದು.
ಯಾವುದೋ ಒಂದು ಉದ್ದೇಶಕ್ಕೆ ಪ್ರೀತಿಯ ನಾಟಕ
ಇನ್ನು ಕೆಲವರು ಯಾವುದೋ ಕಾರಣಕ್ಕೆ ನಿಮ್ಮ ಜೊತೆ ತುಂಬಾ ಚೆನ್ನಾಗಿರುತ್ತಾರೆ, ನಿಮ್ಮನ್ನು ಇಷ್ಟಪಡುವಂತೆ ನಟಿಸುತ್ತಾರೆ, ಆದರೆ ಅವರಿಗೆ ನಿಜವಾಗಿಯೂ ಇಷ್ಟವಿರುವುದಿಲ್ಲ, ಕಾರ್ಯಸಾಧನೆಗೆ ಪ್ರೀತಿಯ ಮುಖವಾಡ ಹಾಕಿರುತ್ತಾರೆ ಅಂಥವರ ಬಗ್ಗೆ ಜಾಗ್ರತೆ.



Click it and Unblock the Notifications
