Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸಂಗಾತಿಯಲ್ಲಿ ಈ ರೀತಿಯ ಬದಲಾವಣೆಗಳು ಕಂಡು ಬಂದರೆ ಅವುಗಳು ವಿಚ್ಛೇದನದ ಮುನ್ಸೂಚನೆ
ವಿಚ್ಛೇದನದ ನಿರ್ಧಾರಕ್ಕೆ ಯಾರೂ ಒಂದೇ ದಿನದಲ್ಲಿ ಬರುವುದಿಲ್ಲ, ಇಬ್ಬರ ನಡುವಿನ ಸಮಸ್ಯೆಗಳನ್ನು ಇತ್ಯರ್ಥ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದಾಗ, ಒಟ್ಟಿಗೆ ಬಾಳಲು ಸಾಧ್ಯವೇ ಇಲ್ಲ ಅವರವರ ಖುಷಿ, ನೆಮ್ಮದಿಗಾಗಿ ಬೇರೆಯಾಗೋಣ ಎಂದು ಯೋಚಿಸಿದಾಗ ವಿಚ್ಛೇದನದ ಬಗ್ಗೆ ಆಲೋಚಿಸುತ್ತಾರೆ.
ವಿಚ್ಛೇದನಕ್ಕೆ ಅದರ ಸುಳಿವು ಸಿಗುವುದು, ಸಂಗಾತಿ ನಮ್ಮಿಂದ ತುಂಬಾನೇ ದೂರ ಹೋಗುತ್ತಿದ್ದಾರೆ ಎಂದು ಅನಿಸುತ್ತದೆ. ಸಂಬಂಧದಲ್ಲಿ ಈ ಬಗೆಯ ಲಕ್ಷಣಗಳು ಇಬ್ಬರು ಮಾನಸಿಕವಾಗಿ, ದೈಹಿಕವಾಗಿ ತುಂಬಾನೇ ದೂರ ಆಗಿದ್ದೀರಿ ಎಂಬುವುದನ್ನು ಸೂಚಿಸುತ್ತದೆ:

ನನಗೂ ಈ ವ್ಯಕ್ತಿಗೆ ಸಂಬಂಧವೇ ಇಲ್ಲದಂತೆ ಜೀವಿಸುವುದು
ಇಬ್ಬರು ಒಂದೇ ಮನೆಯಲ್ಲಿ ಇರಬಹುದು, ಆದರೆ ಮೊದಲಿನಂತೆ ಯಾವುದೂ ಇರುವುದಿಲ್ಲ, ಮಾತುಕತೆ ಇರಲ್ಲ, ಒಂದು ನಗು, ಅಪ್ಪುಗೆ ಏನೂ ಇಲ್ಲ, ಒಂದೇ ಬೆಡ್‌ನಲ್ಲಿ ಮಲಗಿದರೂ ಪರಸ್ಪರ ದೈಹಿಕ ಆಕರ್ಷಣೆ ಇರಲ್ಲ. ನೀವು ಎಲ್ಲಾ ಮರೆತು ಪ್ರೀತಿ ತೋರಿಸಲು ಪ್ರಯತ್ನಿಸಿದರೆ ಅವರಲ್ಲಿ ಯಾವುದೇ ಬದಲಾವಣೆ ಇರಲ್ಲ, ನಿಮ್ಮ ಕಡೆ ಒಂದಿಷ್ಟೂ ಆಕರ್ಷಣೆ ಅವರಲ್ಲಿ ಇರಲ್ಲ.
ನಿಮ್ಮಲ್ಲಿರುವ ತಪ್ಪುಗಳೇ ದೊಡ್ಡದಾಗಿ ಕಾಣುವುದು, ನಿಮ್ಮ ಪ್ಲಸ್ ಪಾಯಿಂಟ್ ಗಮನಿಸುವುದೇ ಇಲ್ಲ
ನಿಮ್ಮಿಂದ ಅವರ ದೂರ ಆಗುತ್ತಿರುವಾಗ ಅವರಿಗೆ ನಿಮ್ಮಲ್ಲಿರುವ ತಪ್ಪುಗಳೇ ಕಾಣುತ್ತದೆ. ನಿಮ್ಮ ತಪ್ಪುಗಳ ಒಟ್ಟಿಯೇ ಅವರ ಬಳಿ ಇರುತ್ತದೆ, ನಿಮ್ಮನ್ನು ನೋಡಲು ಇಷ್ಟಪಡುವುದಿಲ್ಲ. ಅತಿಯಾದ ಟೀಕೆ , ನಮ್ಮ ಮೇಲೆ ಅವರಿಗಿರುವ ಅಸಮಧಾನ ಇವೆಲ್ಲವೂ ಅವರು ನಿಮ್ಮಿಂದ ದೂರ ಹೋಗುತ್ತಿದ್ದಾರೆ ಎನ್ನುವುದರ ಸೂಚನೆಯಾಗಿದೆ.
ಬೇರೆ ವ್ಯಕ್ತಿಯ ಜೊತೆ ಸಂಬಂಧದಲ್ಲಿರುವುದು
ಬೇರೆ ವ್ಯಕ್ತಿ ಕಡೆ ಆಕರ್ಷಣೆಯಾದಾಗ ಸಂಬಂಧದಲ್ಲಿ ಆಸಕ್ತಿ ಕಡಿಮೆಯಾಗುವುದು, ದೈಹಿಕವಾಗಿ ಯಾವುದೇ ಆಕರ್ಷಣೆ ಇರುವುದಿಲ್ಲ. ಸದಾ ಫೋನ್‌ನಲ್ಲಿರುವುದು, ನೀವು ಜೊತೆಯಲ್ಲಿದ್ದರೂ ನಿಮ್ಮ ಬಗ್ಗೆ ಗಮನಹರಿಸದೆ ಬೇರೆ ಏನೂ ಯೋಚಿಸುವುದು ಇವೆಲ್ಲಾ ಅವರು ನಿಮ್ಮಿಂದ ದೂರಾಗುತ್ತಿದ್ದಾರೆ ಎಂಬುವುದರ ಸೂಚನೆಯಾಗಿದೆ. ಸಾಮಾನ್ಯವಾಗಿ ಸಂಗಾತಿ ಅನೈತಿಕ ಸಂಬಂಧದಲ್ಲಿ ಇದ್ದಾಗ ಈ ಬಗೆಯ ಲಕ್ಷಣ ಕಂಡು ಬರುವುದು.
ವಿಚ್ಛೇದನಕ್ಕೆ ಪ್ರಮುಖ ಕಾರಣಗಳು
ಅನೈತಿಕ ಸಂಬಂಧ: ಬಹುತೇಕ ಸಂಬಂಧಗಳು ವಿಚ್ಚೇದನದಲ್ಲಿ ಕೊನೆಯಾಗಲು ಕಾರಣ ಅನೈತಿಕ ಸಂಬಂಧ. ಹೌದು ಪತಿ ಅಥವಾ ಪತ್ನಿಗೆ ಅನೈತಿಕ ಸಂಬಂಧ ಉಂಟಾದಾಗ ವೈವಾಹಿಕ ಸಂಬಂಧದ ಅಡಿಪಾಯ ಅಲುಗಾಡಿ ವೈವಾಹಿಕ ಜೀವನ ಕೊನೆಯಾಗುತ್ತದೆ.
ಸಂಶಯ: ಸಂಶಯ ಕೂಡ ಮನೆಯನ್ನು ಒಡೆಯುತ್ತದೆ, ಸಂಗಾತಿಗೆ ಯಾವುದೇ ಸಂಬಂಧವಿಲ್ಲದಿದ್ದರೂ ಸದಾ ಸಂಶಯ ಪಡುತ್ತಿದ್ದರೆ ಸಮಸ್ಯೆ ದೊಡ್ಡದಾಗಿ ಇಬ್ಬರ ನಡುವೆ ವೈ ಮನಸ್ಸು ಮೂಡಿ ದೂರಾಗುವ ನಿರ್ಧಾರಕ್ಕೆ ಬರಬಹುದು. ಸಂಶಯ ಸಂಗಾತಿಗೆ ಬಂದರೆ ಅವರಿಗೆ ಆ ಸಂಶಯಕ್ಕೆ ಕಾರಣವೇನು ಎಂದು ತಿಳಿದು ಅವರ ಸಂಶಯ ಬಗೆಹರಿಸಲು ಪ್ರಯತ್ನಿಸಬೇಕು, ಕೆಲವೊಮ್ಮೆ ಸಂಗಾತಿಯ ವರ್ತನೆಯೂ ಸಂಶಯ ಹುಟ್ಟಲು ಕಾರಣವಾಗಿರುತ್ತದೆ.
ಹೊಂದಾಣಿಕೆ ಇಲ್ಲದಿರುವುದು
ನಿಮ್ಮಿಬ್ಬರ ನಡುವೆ ಒಂದಿಷ್ಟೂ ಹೊಂದಾಣಿಕೆ ಇಲ್ಲ, ಇಬ್ಬರು ಜೊತೆಯಾಗಿ ಬಾಳಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯಲ್ಲಿ ವಿಚ್ಚೇದನ ಬಗ್ಗೆ ಆಲೋಚಿಸಬಹುದು. ಹೊಂದಾಣಿಕೆ ಇಲ್ಲದಿದ್ದರೆ ಒಟ್ಟಿಗೆ ಬದುಕಿದರೆ ಜೀವನ ನರಕವಾಗುವುದು. ಸಂಸಾರದ ಮುಖ್ಯ ಸೂತ್ರವೇ ಹೊಂದಾಣಿಕೆ.



Click it and Unblock the Notifications
