Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಇತ್ತೀಚೆಗೆ ನಿಮ್ಮ ಸಂಗಾತಿಯ ವರ್ತನೆ ಹೀಗಿದ್ದರೆ ಅವರು ನಿಮ್ಮಿಂದ ದೂರಾಗುತ್ತಿದ್ದಾರೆ ಎಂದರ್ಥ!
ಪ್ರೇಮ ಸಂಬಂಧ ತುಂಬಾನೇ ಸುಂದರವಾದದ್ದು, ಆದರೆ ಅದು ನಿಷ್ಕಲ್ಮಷ ಪ್ರೀತಿಯಾಗಿರಬೇಕು ಅಷ್ಟೇ... ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಪ್ರೀತಿಸುತ್ತಾರೆ, ಅದನ್ನು ಅವರ ವರ್ತನೆಗಳಿಂದಲೇ ತಿಳಿಯಬಹುದು, ಅಂಥ ವರ್ತನೆಗಳನ್ನು ಗಮನಿಸಿದರೆ ಅವರಿಂದ ದೂರಿವಿದ್ದರೆ ತುಂಬಾ ನೋವುಂಟು ಮಾಡುವುದನ್ನು ತಡೆಯಬಹುದು:

ನಿಮ್ಮ ಸಂಬಂಧ ಗುಟ್ಟಾಗಿ ಇಡುವುದು
ಸಾಮಾನ್ಯವಾಗಿ ಪ್ರೀತಿ ಸಂಬಂಧ ಗುಟ್ಟಾಗಿಯೇ ಇರುತ್ತದೆ, ಆದರೆ ಅವರು ನಿಮ್ಮೊಂದಿಗಿನ ಸಂಬಂಧ ತುಂಬಾನೇ ಗುಟ್ಟಾಗಿ ಇಡಲು ಪ್ರಯತ್ನಿಸುತ್ತಿದ್ದಾರೆ, ಅವರು ನಿಮ್ಮ ಜೊತೆಗಿನ ಸಂಬಂಧದ ಎಲ್ಲಾ ದಾಖಲೆಗಳನ್ನು ಬಚ್ಚಿಡುತ್ತಿದ್ದಾರೆ ಎಂದಾದರೆ ನೀವು ಜಾಗ್ರತೆವಹಿಸಲೇಬೇಕು. ಅವರು ಗುಟ್ಟಾಗಿ ಇಟ್ಟು ನಂತರ ಮೋಸ ಮಾಡಬಹುದು, ಆದ್ದರಿಂದ ಈ ಬಗ್ಗೆ ಜಾಗ್ರತೆ.
ಅವರ ಬಗ್ಗೆ ಕೊಚ್ಚಿಕೊಳ್ಳುವುದು
ಅವರ ಸಾಧನೆಗಳನ್ನು ಕೊಚ್ಚಿಕೊಳ್ಳುವ ಅವರು ನಿಮ್ಮ ಸಾಧನೆಯನ್ನು ಸಂಭ್ರಮಿಸತ್ತಿದ್ದರೆ ನೀವು ನಿಮ್ಮ ಸಂಬಂಧ ಗಟ್ಟಿಯಾಗಿದ್ದು ಅಲ್ಲ ಎಂದು ಭಾವಿಸುವುದು ಒಳ್ಳೆಯದು, ಇಂಥವರು ನಿಮಗೆ ಗೌರವ ನೀಡುವುದಿಲ್ಲ, ಅಲ್ಲದೆ ಅವರ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ.
ಹೀಯಾಳಿಕೆ
ನಮ್ಮನ್ನು ಯಾರಾದರೂ ಸದಾ ಹೋಯಾಳಿಸುತ್ತಿದ್ದರೆ ನಮ್ಮ ಆತ್ಮವಿಶ್ವಾಸ ಕಡಿಮೆಯಾಗುವುದು, ಅಂಥವರಿಂದ ದೂರವಿರುವುದು ಒಳ್ಳೆಯದು. ಪ್ರತಿಯೊಂದು ವಿಷಯಕ್ಕೆ ಹೀಯಾಳಿಸುತ್ತಿದ್ದರೆ ಅದು ನಮ್ಮ ಸಾಧನೆ, ಪ್ರಗತಿಗೆ ಮಾರಕ. ಸಂಗಾತಿ ಹೀಯಾಳಿಸುತ್ತಿದ್ದರೆ ಅವರಿಗೆ ನೀವು ಮಾಡುತ್ತಿರುವುದು ತಪ್ಪು ಎಂದು ನೇರವಾಗಿ ಹೇಳಿ. ಅಂಥವರ ಜೊತೆಗಿನ ಬದುಕನ್ನು ರೀಥಿಂಕ್ ಮಾಡುವುದು ಒಳ್ಳೆಯದು.
ನಿಮ್ಮ ಅಭಿಪ್ರಾಯಗಳಿಗೆ ಬೆಲೆ ನೀಡದಿರುವುದು
ಅವರು ಹೇಳಿದಂತೆ ನಡೆಯಬೇಕು ಎಂದು ಹೇಳುವುದು, ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸದೇ ಇರುವುದು, ನಿಮ್ಮ ಅಭಿಪ್ರಾಯಗಳ ಮೇಲೆ ಗೌರವ ಇಲ್ಲದಂತೆ ವರ್ತಿಸುವುದು ಮಾಡಿದರೆ ಅಂಥವರನ್ನು ಮದುವೆಯಾದರೆ ಚೆನ್ನಾಗಿರುತ್ತೇವೆ ಎಂದುಬಾವಿಸುವುದೇ ತಪ್ಪು. ಸಂಸಾರ ಎಂದ ಮೇಲೆ ಇಬ್ಬರೂ ಒಬ್ಬರನ್ನೊಬ್ಬರು ಗೌರವಿಸಬೇಕು.
ಇತ್ತೀಚೆಗೆ ಏಕೋ ಭೇಟಿಯಾಗಲು ಆಸಕ್ತಿ ತೋರಿಸುತ್ತಿಲ್ಲ
ನೀವು ಸಾವಿರ ಸಲ ಕರೆ ಮಾಡಿದರೆ ಫೋನ್ ರಿಸೀವ್ ಮಾಡದೆ ಇರುವುದು. ಭೇಟಿಗೆ ದಿನ ನಿಗದಿಯಾದರು ಆ ದಿನ ನೆಪ ಹೇಳಿ ತಪ್ಪಿಸಿಕೊಳ್ಳುವುದು ಪದೇ ಪದೇ ಮಾಡಿದರೆ ನಿಮ್ಮ ದೂರದ ಸಂಬಂಧದಲ್ಲಿ ಲೋಪ ಇದೆ ಎಂದು ಅರ್ಥ. ಒಂದು , ಎರಡು ಬಾರಿ ಈ ರೀತಿ ಸಮಸ್ಯೆಯಾಗಿ ಅದಕ್ಕೆ ತಕ್ಕುದಾದ ಕಾರಣ ಹೇಳಿದರೆ ಅದನ್ನು ಒಪ್ಪಿಕೊಳ್ಳಬಹುದು. ಆದರೆ ಪದೇ ಪದೇ ಈ ರೀತಿ ಮಾಡಿದರೆ ಅವರು ನಿಮ್ಮಿಂದ ದೂರಾಗುತ್ತಿದ್ದಾರೆ ಎಂಬುವುದರ ಸೂಚನೆಯಾಗಿದೆ.
ಬೇರೆಯವರ ಜೊತೆ ಹೋಲಿಕೆ ಮಾಡುವುದು:
ನಾವು ಹೇಗಿದ್ದೇವೋ ಹಾಗೆ ಇರಬೇಕು ನಾವು ಹೇಗಿದ್ದೇವೆಯೋ ನಮ್ಮನ್ನು ಮದುವೆ ಆಗುವ ವ್ಯಕ್ತಿ ಹಾಗೆಯೇ ಇಷ್ಟ ಪಡಬೇಕು ಆದರೆ ಅವರನ್ನು ನೋಡು ಹೇಗಿದ್ದಾರೆ ನೀನು ನೋಡು ಹೇಗಿದ್ದೀಯಾ ಎಂದು ಯಾವಾಗ ಹೋಲಿಕೆ ಮಾಡಲು ಆರಂಭಿಸುತ್ತಾರೋ ಆ ಸಂಬಂಧ ಚೆನ್ನಾಗಿರುವುದಿಲ್ಲ.



Click it and Unblock the Notifications