Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಈ 5 ಸಮಸ್ಯೆ ಇರುವ ಸಂಸಾರದಲ್ಲಿ ಗಂಡ-ಹೆಂಡತಿ ಖುಷಿಯಾಗಿರಲು ಸಾಧ್ಯವೇ ಇಲ್ಲ
ಸಂಸಾರ ಎಂದ ಮೇಲೆ ಸಣ್ಣ ಪುಟ್ಟ ಸಮಸ್ಯೆಗಳು ಇಲ್ಲದೆ ಇರುತ್ತದೆಯೇ? ಆದರೆ ಕೆಲವೊಂದು ಸಮಸ್ಯೆಗಳು ಇದೆಯೆಲ್ಲಾ ಅದು ಚಿಕ್ಕ ಸಮಸ್ಯೆಗಳೇ ಅಲ್ಲ, ಆ ಸಮಸ್ಯೆಗಳಿಂದಾಗಿ ಸಂಸಾರ ಒಡೆದು ಹೋಗುವುದು. ಕೆಲವರು ವಿಚ್ಛೇದನ ಪಡೆಯುವುದಿಲ್ಲ, ಆದರೆ ದಾಂಪತ್ಯ ಜೀವನಕ್ಕೆ ಒಂದು ಅರ್ಥವಿಲ್ಲದಂತೆ ಬದುಕುತ್ತಾರೆ. ಸಂಸಾರದಲ್ಲಿ ಈ ಸಮಸ್ಯೆಗಳಿದ್ದರೆ ತುಂಬಾ ಎಚ್ಚರವಹಿಸಿ ಸರಿಪಡಿಸಲು ಪ್ರಯತ್ನಿಸಿ ಇಲ್ಲದಿದ್ದರೆ ಸಂಸಾರ ಹಾಳಾಗುವುದು ಜೋಕೆ:

1. ಮಾತುಕತೆ ಕಡಿಮೆಯಾಗುವುದು
ಸರಿಯಾದ ಸಂವಹನ ಇಲ್ಲದಿರುವುದು ಬಹುತೇಕ ಸಂಸಾರದಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಸಂವಹನ ಇಲ್ಲವೆಂದರೆ ಅಲ್ಲಿ ತಪ್ಪು ಕಲ್ಪನೆಗಳು ಹೆಚ್ಚಾಗುತ್ತಲೇ ಹೋಗುವುದು. ಇದರಿಂದಾಗಿ ಹೊಸ ಸಮಸ್ಯೆಗಳೂ ಬರುವುದು.
ಪರಿಹಾರವೇನು?
ಸಂವಹನ ಕಡಿಮೆಯಾಗಿದ್ದರೆ ನೀವು ನಿಮ್ಮ ಸಂಗಾತಿ ಜೊತೆ ಈ ಕುರಿತು ಮಾತುಕತೆ ನಡೆಸಿ, ಅವರು ಮಾತನಾಡುತ್ತಿಲ್ಲ ಎಂದು ನೀವು ಮಾತನಾಡದೆ ಇರಬೇಡಿ, ನೀವು ಅವರ ಜೊತೆ ಮಾತನಾಡಿ, ಪ್ರತಿಯೊಂದು ವಿಷಯವನ್ನು ಹಂಚಿಕೊಳ್ಳಿ ಹೀಗೆ ಮಾಡುವುದರಿಂದ ಸಂವಹನ ಹೆಚ್ಚಾಗುವುದು.
2. ದೈಹಿಕ ಸಂಬಂಧ ಕಡಿಮೆಯಾಗುವುದು
ವರ್ಷಗಳು ಉರುಳುತ್ತಿದ್ದಂತೆ ಕೆಲ ದಾಂಪತ್ಯದಲ್ಲ ದೈಹಿಕ ಸಂಪರ್ಕ ಕಡಿಮೆಯಾಗುವುದು, ಲೈಂಗಿಕ ಸಂತೃಪ್ತಿ ಕೂಡ ಆರೋಗ್ಯಕರ ಸಂಬಂಧಕ್ಕೆ ಅತ್ಯಾವಶ್ಯಕ. ಈ ಬಗ್ಗೆ ಮಾತನಾಡಲು ಹಿಂಜರಿಕೆ ಬೇಡ, ಮುಕ್ತ ಮಾತುಕತೆ ನಡೆಸಿ.
3. ಬೋರ್ ಆಗುವುದು
ಇನ್ನು ಕೆಲವು ಸಂಸಾರದಲ್ಲಿ ಒಂದಿಷ್ಟು ವರ್ಷವಾಗುತ್ತಿದ್ದಂತೆ ಬೋರ್ ಆಗುವುದು, ಇದರಿಂದ ದಾಂಪತ್ಯ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಕೆಲವರು ಇದೇ ಕಾರಣದಿಂದಾಗಿ ಅನೈತಿಕ ಸಂಬಂಧದಲ್ಲಿ ಬೀಳುತ್ತಾರೆ. ಆದರೆ ಸಂವಹನ ಇಲ್ಲದೇ ಇದ್ದಾಗ, ಲೈಂಗಿಕ ಸಂತೃಪ್ತಿ ಇಲ್ಲದೇ ಇದ್ದಾಗ ಮಾತ್ರ ಸಂಬಂಧ ಬೋರ್ ಅನಿಸಲಾರಂಭಿಸುವುದು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ನಡೆಯಲಾರಂಭಿಸಿದರೆ ಸಮಸ್ಯೆ ಉಂಟಾಗಲ್ಲ.
4. ಒಬ್ಬರನ್ನೊಬ್ಬರು ಗೌರವಿಸದೆ ಇರುವುದು
ಸಂಸಾರ ಎಂದ ಹೆಂಡತಿಗೆ ಗಂಡನ ಮೇಲೆ ಗೌರವ ಇರಬೇಕು, ಗಂಡನಿಗೆ ಹೆಂಡತಿ ಮೇಲೆ ಗೌರವ ಇರಬೇಕು. ಇಬ್ಬರನ್ನೊಬ್ಬರು ಕಂಟ್ರೋಲ್ ಮಾಡಲು ಯತ್ನಿಸಬಾರದು. ಇಬ್ಬರು ಒಬ್ಬರನ್ನೊಬ್ಬರು ಗೌರವಿಸಬೇಕು. ಇದರಿಂದ ನಂಬಿಕೆ ಹೆಚ್ಚಾಗುತ್ತದೆ. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇರಲಿದೆ. ಅಲ್ಲದೆ ಇಂಥ ಸಂಬಂಧದಲ್ಲಿ ತಮ್ಮ ಅಭಿಪ್ರಾಯವನ್ನು ಹೇಳಲು ಕೂಡ ಅವಕಾಶವಿರುತ್ತದೆ, ಇದರಿಂದ ಜೀವನ ತುಂಬಾ ಚೆನ್ನಾಗಿರಲಿದೆ.
5. ನಂಬಿಕೆಯಲ್ಲಿ ವ್ಯತ್ಯಾಸ
ಯಾವುದೇ ಸಂಸಾರದಲ್ಲಿ ಇಬ್ಬರು ಒಂದೇ ರೀತಿ ಇರುವುದಿಲ್ಲ, ಆದರೆ ಇಬ್ಬರ ಮೌಲ್ಯಗಳು, ವರ್ತನೆಗಳು ತುಂಬಾನೇ ಭಿನ್ನವಾಗಿದ್ದರೆ ಮಾತ್ರ ಹೊಂದಿಕೊಂಡು ಹೋಗಲು ಕಷ್ಟವಾಗುವುದು. ಇಬ್ಬರ ನಂಬಿಕೆಗಳಿಗೆ ತುಂಬಾನೇ ಭಿನ್ನವಾಗಿದ್ದರೆ ಅಂಥ ದಾಂಪತ್ಯದಲ್ಲಿ ಹೊಂದಾಣಿಕೆ ಎಂಬುವುದು ಕಷ್ಟವಾಗುವುದು. ಉದಾಹರಣೆಗೆ ಒಬ್ಬರು ಪಾರ್ಟಿ, ಶಾಪಿಂಗ್ ಅಂತ ತಿರುಗುತ್ತಾ ಮನೆ ಕಡೆ ಗಮನ ನೀಡದಿದ್ದರೆ ಮತ್ತೊಬ್ಬರು ಕುಟುಂಬದ ಮೌಲ್ಯಗಳಿಗೆ ತುಂಬಾನೇ ಬೆಲೆ ಕೊಡುವವರು ಆದರೆ ಅವರಿಬ್ಬರ ನಡುವೆ ಹೊಂದಾಣಿಕೆ ಬರುವುದಿಲ್ಲ.



Click it and Unblock the Notifications











