Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮಹಿಳೆಗೆ ಇಷ್ಟವಾಗದ ನಿಮ್ಮ 6 ಅಭ್ಯಾಸಗಳಿವು..! ಈ ಅಭ್ಯಾಸ ಆಕೆಗೆ ಇಷ್ಟವಾಗಲ್ಲ!
ಪತಿ-ಪತ್ನಿ ಸಂಬಂಧ ಎಂದರೆ ಹಾಲು ಜೇನಿನಂತೆ ಇರಬೇಕು ಎಂದು ಹೇಳುತ್ತಾರೆ. ಏಕೆಂದರೆ ಜೀವನದ ಉದ್ದಕ್ಕೂ ಇಬ್ಬರು ಬೆರೆತು ಬಾಳಬೇಕು. ಒಬ್ಬರನೊಬ್ಬರು ಪ್ರೀತಿ, ವಿಶ್ವಾಸದಲ್ಲಿ ನಂಬಿಕೆ ಇಟ್ಟು ಬಾಲಬೇಕು. ಜೊತೆ ಜೊತೆಯಲ್ಲಿ ಕೊನೆಯವರೆಗೂ ಬದುಕಿ ಬಾಳಬೇಕಾಗುತ್ತದೆ. ಹೀಗಾಗಿ ಇಬ್ಬರ ಸಂಬಂಧ ಯಾವಾಗಲು ಸಂತೋಷದಿಂದ ಕೂಡಿರಬೇಕಾಗುತ್ತದೆ.
ಆದರೆ ಇತ್ತೀಚಿಗೆ ಕುಟುಂಬ, ಸಂಬಂಧಗಳು ಬಹಳ ಬೇಗ ಹಾಳಾಗುತ್ತಿವೆ. ಒಬ್ಬರ ಮೇಲೆ ಮತ್ತೊಬ್ಬರು ಅನ್ಯೋನ್ಯತೆ, ಪ್ರಾಮಾಣಿಕತೆ ಉಳಿಸಿಕೊಳ್ಳಬೇಕು. ಆದ್ರೆ ಪ್ರತಿ ಬಾರಿ ನೀವು ನಿಮ್ಮ ಪತ್ನಿಯನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತೀರುವಾಗ ಏನಾದರು ಅಡ್ಡಿಯಾಗಬಹುದು. ಇಲ್ಲವೆ ಆಕೆ ನಿಮ್ಮ ಮೇಲೆ ಮುನಿಸಿಕೊಂಡಂತೆ ಕಾಣಬಹುದು.

ನಮ್ಮ ಕೆಲವು ಗುಣಗಳಿಂದ ಆಕೆ ಕೋಪಗೊಳ್ಳಬಹುದು. ಹಾಗಾದ್ರೆ ಆಕೆಯಲ್ಲಿ ಕೋಪ ತರಿಸುವ ನಿಮ್ಮ ಕೆಲವು ಗುಣಗಳೇನು? ನೀವು ಯಾವ ಕೆಲಸ ಮಾಡಿದಾಗ ಆಕೆ ಕೋಪಗೊಳ್ಳುತ್ತಾಳೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ತಡವಾಗಿ ಏಳುವುದು ಹಾಗೂ ತಡವಾಗಿ ಮನೆಗೆ ಬರುವುದು
ನೀವು ಎಷ್ಟೇ ತಡವಾಗಿ ಮಲಗಿದರು ಬೆಳಗ್ಗೆ ತಡವಾಗಿ ಏಳುವುದು ಆಕೆಗೆ ಇಷ್ಟವಾಗುವುದಿಲ್ಲ. ಒಂದು ಎರಡು ದಿನವಾದರೆ ಆಕೆಯು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನಿತ್ಯವು ಇದೇ ರೀತಿ ಆದರೆ ಆಕೆ ಯಾವಾಲು ಇದನ್ನು ಗೊಣಗುತ್ತಾಳೆ. ತಡವಾಗಿ ಎದ್ದು ಗಡಿಬಿಡಿಯಲ್ಲಿ ಕೆಲಸಕ್ಕೆ ಹೊರಡುವುದು, ಇಲ್ಲವೆ ಬೇರೆಡೆ ತೆರೆಳಲು ಹೊರಡುವಾಗ ಆಕೆಯನ್ನು ಏನಾದರು ಕೇಳಿದ ಸಿಡಿಲಿನಂತೆ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ. ಅದೇ ರೀತಿ ರಾತ್ರಿ ತಡವಾಗಿ ಬರುವುದು ಸಹ ಆಕೆಯ ಸಹನೆ ಮೀರಿಸುತ್ತೆ. ಇದರಿಂದ ಆಕೆ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ, ಈ ಅಭ್ಯಾಸವನ್ನೇ ಆಕೆ ಒತ್ತಿ ಒತ್ತಿ ನಿಮಗೆ ಹೇಳುತ್ತಿರುತ್ತಾಳೆ.
ಪ್ರಯಾಣದ ವೇಳೆ ಸಿಡುಕು
ನೀವಿಬ್ಬರು ಎಲ್ಲಿಯಾದರು ಪ್ರಯಾಣ ಬೆಳೆಸಬೇಕಾದ ದಿನವಿದ್ದರೆ ಅಂದು ನೀವು ಶಾಂತವಾಗಿರುವುದು ಉತ್ತಮ. ಈ ವೇಳೆ ಆಕೆ ತಡ ಮಾಡುತ್ತಿದ್ದಾಳೆ ಎಂದು ರೇಗುವುದು, ಬೆದರಿಸುವುದು ಮಾಡುವುದು ಆಕೆಗೆ ಸಹಿಸಲು ಆಗುವುದಿಲ್ಲ. ಎಲ್ಲಿಯಾದರು ಹೊರಡುವಾಗ ನೀವು ಗಡಿಬಿಡಿ ಮಾಡುವ ಗುಣವಿದ್ದರೆ ಅದು ಆಕೆಗೆ ಇಷ್ಟವಾಗುವುದಿಲ್ಲ.
ನಿಮ್ಮ ವಸ್ತುಗಳ ಬಿಸಾಡುವುದು
ನೀವು ಮನೆಯಲ್ಲಿ ನಿಮ್ಮ ವಸ್ತುಗಳನ್ನು ಎಲ್ಲೆಂದರೆಲ್ಲಿ ಎಸೆಯುವ ಅಭ್ಯಾಸ ಇಟ್ಟುಕೊಂಡಿದ್ದರೆ ನಿಲ್ಲಿಸಿ ಬಿಡಿ. ಇದರಿಂದ ಆಕೆ ಇನ್ನಿಲ್ಲದಂತೆ ಕೋಪಗೊಳ್ಳುತ್ತಾಳೆ.
ರಸ್ತೆಯಲ್ಲಿ ಜಗಳ ಆಡುವುದು
ನೀವು ಪತ್ನಿ ಜೊತೆ ಹೊರಗೆ ಇದ್ದಾಗ ಇಲ್ಲವೆ ರಸ್ತೆಯಲ್ಲೇ ಆಕೆಯ ಮೇಲೆ ಮುನಿಸಿಕೊಳ್ಳುವುದು, ಜಗಳವಾಡುವುದು ಮಾಡಬಾರದಂತೆ. ಇದರಿಂದ ಆಕೆ ನಿಮ್ಮ ಮೇಲೆ ಇನ್ನಿಲ್ಲದ ಕೋಪ ಮಾಡಿಕೊಳ್ಳುತ್ತಾಳೆ. ಅಲ್ಲದೆ ಆಕೆ ರಸ್ತೆಯಲ್ಲಿ ಎಲ್ಲರ ಎದುರು ಅವಮಾನವಾದಾಗ ಅದನ್ನು ಸಹಿಸುವುದಿಲ್ಲ. ಇದು ಆಕೆಯಲ್ಲಿ ನೋವು ತರಲಿದೆ.
ಸಾರ್ವಜನಿಕ ಸ್ಥಳದಲ್ಲಿ ಜಗಳ
ನೀವು ಆಕೆಯೊಂದಿಗೆ ಇದ್ದಾಗ ಸಾರ್ವಜನಿಕ ಸ್ಥಳದಲ್ಲಿ ಯಾರೊಂದಿಗಾದರು ಜಗಳ ಆಡುವುದು ಆಕೆಗ ಇಷ್ಟವಾಗುವುದಿಲ್ಲವಂತೆ. ಇದರ ಜೊತೆಗೆ ಎಲ್ಲಾದರು ಚೌಕಾಸಿ ಮಾಡುವುದು ಸಹ ಇಷ್ಟವಾಗುವುದಿಲ್ಲ. ಆಕೆ ನಿಮ್ಮ ಈ ಗುಣಗಳನ್ನು ಯಾವಾಗಲು ದ್ವೇಷಿಸುತ್ತಾಳೆ. ಹೀಗಾಗಿ ಇಂತಹ ಗುಣಗಳನ್ನು ಮತ್ತು ಅಭ್ಯಾಸವನ್ನು ಬಿಟ್ಟು ಬಿಡಿ.
ಆಕೆಗೆ ಒಂದೇ ಪದದಲ್ಲಿ ಉತ್ತರ ನೀಡೋದು
ಆಕೆ ಕೇಳುವ ಪ್ರಶ್ನೆಗಳಿಗೆ ಒಂದೇ ಪದದಲ್ಲಿ ಉತ್ತರ ನೀಡುವುದು ಆಕೆ ಇಷ್ಟವಾಗುವುದಿಲ್ಲ. ಇದರಿಂದ ಆಕೆ ಮತ್ತಷ್ಟು ಕೋಪಗೊಳ್ಳಬಹುದು. ಅಲ್ಲದೆ ಇದು ನಿಮ್ಮಿಬ್ಬರಲ್ಲಿ ಮತ್ತಷ್ಟು ಬಿರುಕು ಮೂಡಿಸಲು ಕಾರಣವಾಗಬಹುದು. ಆಕೆ ಏನೆ ಕೇಳಿದರು ಒಂದಿಷ್ಟು ವಿಸ್ತ್ರತ ರೂಪದಲ್ಲಿ ಉತ್ತರ ನೀಡುವ ಅಭ್ಯಾಸ ಇಟ್ಟುಕೊಳ್ಳಿ, ಮನಬಿಚ್ಚಿ ಮಾತಾಡುವುದು ಉತ್ತಮ.



Click it and Unblock the Notifications
