Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಿಮ್ಮ ಸಂಗಾತಿಯ ವರ್ತನೆ ಸೋಷಿಯಲ್ ಮೀಡಿಯಾದಲ್ಲಿ ಹೀಗಿದ್ದರೆ ಅದು ರೆಡ್ ಫ್ಲ್ಯಾಗ್ !
ಈ ಸೋಷಿಯಲ್ ಮೀಡಿಯಾ ಎಷ್ಟೋ ಜೋಡಿಗಳನ್ನು ಒಂದು ಮಾಡಿದರೆ ಇನ್ನು ಕೆಲವು ಜೋಡಿಗಳು ಬೇರೆಯಾಗಲು ಕೂಡ ಕಾರಣವಾಗುತ್ತಿದೆ, ಇಲ್ಲಿ ಸೋಷಿಯಲ್ ಮೀಡಿಯಾ ದೂರಿ ಪ್ರಯೋಜನವಿಲ್ಲ, ಅದು ಅವರ ಯೋಚನಾಶಕ್ತಿಗೆ ಬಿಟ್ಟದ್ದು.
ಆದರೆ ನಮ್ಮಿಬ್ಬರ ಸಂಬಂಧದಲ್ಲಿ ಏನೋ ಮಿಸ್ ಹೊಡೆಯುತ್ತಿದೆ ಎಂಬುವುದು ಕೂಡ ಸೋಷಿಯಲ್ ಮೀಡಿಯಾದಿಂದಲೇ ಗೊತ್ತಾಗುವುದು, ಅವರು ನಮ್ಮಿಂದ ಏನೋ ಬಚ್ಚಿಡುತ್ತಿದ್ದಾರೆ ಎಂಬುವುದು ಅವರ ಸೋಷಿಯಲ್ ಮೀಡಿಯಾ ಆ್ಯಕ್ಟಿವಿಟಿ ನೋಡಿ ತಿಳಿಯಬಹುದು.

ನಿಮ್ಮ ಸಂಗಾತಿ ನಿಮ್ಮಿಂದ ಈ ವಿಷಯಗಳನ್ನು ಮುಚ್ಚಿಡುತ್ತಿದ್ದಾರೆ ಎಂದರೆ ನೀವು ಜಾಗ್ರತೆವಹಿಸುವುದು ಒಳ್ಳೆಯದು:
ಅವರು ಸೋಷಿಯಲ್ ಮೀಡಿಯಾ ಬಳಸುವಾಗನೀವು ಬಂದರೆ ತಕ್ಷಣ ಫೋನ್ ಆಫ್ ಮಾಡುವುದು
ಹೌದು ಅವರು ಫೋನ್ ಹಿಡಿದು ಸೋಷಿಯಲ್ ಮೀಡಿಯಾ ನೋಡ್ತಾ ಇದ್ದಾರೆ, ವಾಟ್ಸಾಪ್ , ಇನ್‌ಸ್ಟಾ ಚೆಕ್ ಮಾಡುತ್ತಿದ್ದಾರೆ ಎಂಬುವುದು ತಪ್ಪಲ್ಲ, ಆದರೆ ನಿಮ್ಮನ್ನು ಕಂಡ ತಕ್ಷಣ ಅವರಲ್ಲಿ ಏನೋ ಭಯ, ಫೋನ್ ಆಫ್ ಮಾಡುವುದು ಮಾಡಿದರೆ ಖಂಡಿತ ಈ ಸ್ವಭಾವ ಬೇರೆಯದೇ ಕತೆ ಹೇಳುತ್ತದೆ
ಅವರ ಸ್ಟೋರಿಯನ್ನು ನಿಮ್ಮಿಂದ ಮುಚ್ಚಿಡುತ್ತಿದ್ದಾರೆ ಎಂದಾರೆ
ಅವರು ಅವರು ಹಾಕುವ ಸ್ಟೋರಿಯನ್ನು ನಿಮ್ಮಿಂದ ಮುಚ್ಚಿಡುವುದು ನಿಮಗೆ ಗೊತ್ತಾದರೆ ನೀವು ಈ ಬಗ್ಗೆ ಅವರಲ್ಲಿ ಮಾತನಾಡುವುದು ಒಳ್ಳೆಯದು, ಒಂದೋ ಬೇರೆ ಕಡೆ ಆಕರ್ಷಣೆಯಿಂದಾಗಿ ಈ ರೀತಿ ಮುಚ್ಚಿಡಬಹುದು ಅಥವಾ ನೀವು ಬೈಯ್ಯುತ್ತೀರಿ ಎಂದು ಅವರು ನಿಮ್ಮಿಂದ ಕೆಲವೊಂದು ವಿಷಯ ಬಚ್ಚಿಡಬಹುದು.
ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಇರುವಿಕೆ ಸಂಪೂರ್ಣ ಮರೆತು ಬಿಡುವುದು
ಅವರು ನಿಮ್ಮ ಹಾಗೂ ಅವರ ಸಂಬಂಧವನ್ನು ಸೋಷಿಯಲ್ ಮೀಡಿಯಾದಲ್ಲಿ ಬಚ್ಚಿಡುತ್ತಿದ್ದಾರೆ, ನೀವು ಹಾಕಿದ ಪೋಸ್ಟ್ ಕಡೆ ಗಮನಹರಿಸಲ್ಲ, ಬೇರೆಯವರಿಗೆ ಕಮೆಂಟ್ ಹಾಕುವ ಅವರು ನಿಮ್ಮ ಬಗ್ಗೆ ಒಂದು ಕಮೆಂಟ್ ಕೂಡ ಹಾಕಲ್ಲ ಎಂದಾದರೆ ನೀವು ಈ ಬಗ್ಗೆ ಗಮನಹರಿಸುವುದು ಒಳ್ಳೆಯದು. ಅಲ್ಲದೆ ನೀವು ಅವರಿಗೆ ಟ್ಯಾಗ್ ಮಾಡಿದ ಫೋಟೋಗಳನ್ನು ಅವರು ಹೈಡ್ ಮಾಡುತ್ತಿದ್ದಾರೆ ಎಂದಾದರೆ ಅದು ಈ ಬಗ್ಗೆ ಇತ್ತೀಚೆಗೆ ಅವರಲ್ಲಿ ಈ ಬಗೆಯ ವರ್ತನೆ ಕಂಡು ಬರುತ್ತಿದೆ ಎಂದಾದರೆ ಅದು ಖಂಡಿತ ರೆಡ್ ಫ್ಲ್ಯಾಗ್.
ಸೋಷಿಯಲ್ ಮೀಡಿಯಾ ಅಕೌಂಟ್ ನಿಮ್ಮಿಂದ ಬಚ್ಚಿಟ್ಟಿದ್ದರೆ
ಹೌದು ನಾನು ಸೋಷಿಯಲ್ ಮೀಡಿಯಾದಲ್ಲಿ, ನನಗೆ ಇನ್‌ಸ್ಟಾ ಐಡಿ ಇಲ್ಲ ಎಂದು ಹೇಳುತ್ತಿದ್ದವರು ನಿಮಗೆ ಗೊತ್ತಿಲ್ಲದಂತೆ ಸೋಷಿಯಲ್ ಮೀಡಿಯಾ ಬಳಸುತ್ತಿದ್ದರೆ ಜಾಗ್ರತೆವಹಿಸಿ.
ಅವರ ಸೋಷಿಯಲ್ ಮೀಡಿಯ ಫಾಸ್‌ವರ್ಡ್ ನಿಮಗೂ ಅವರು ಹೇಳಬೇಕಾ?
ಅವರ ಸೋಷಿಯಲ್ ಮೀಡಿಯಾ ಪಾಸ್‌ವರ್ಡ್ ನಿಮಗೆ ಅವರು ಹೇಳಬೇಕೆಂದೇನೂ ಇಲ್ಲ, ಅವರು ಹೇಳಿದರೆ ಒಕೆ, ಇಲ್ಲಾಂದರೂ ಒಕೆ, ಇದರ ಬಗ್ಗೆ ತುಂಬಾ ಒತ್ತಾಯ ಮಾಡಲು ಹೋಗಬಾರದು, ಅದು ಅವರ ಪ್ರೈವೆಸಿ ಧಕ್ಕೆಯಾಗುವುದು. ಆದ್ದರಿಂದ ಗಂಡ ಹೆಂಡತಿ ನಿಮ್ಮ ಸೋಷಿಯಲ್ ಮೀಡಿಯಾ ಪಾಸ್‌ವರ್ಡ್ ಶೇರ್ ಮಾಡಬೇಕೆಂದೇನೂ ಇಲ್ಲ. ಅವರ ಪಾಸ್‌ವರ್ಡ್ ನೀವೂ ಕೇಳಬೇಡಿ, ಆದರೆ ನಿಮ್ಮಿಬ್ಬರಿಗೂ ಪಾಸ್‌ವರ್ಡ್ ಗೊತ್ತಿರುತ್ತಿತ್ತು, ಆದರೆ ಇತ್ತೀಚೆಗೆ ಹೊಸ ಪಾಸ್‌ವರ್ಡ್ ಹಾಕಿ ಅವರು ಅದರ ಬಗ್ಗೆ ನಿಮಗೆ ಹೇಳುತ್ತಿಲ್ಲ ಎಂದಾದರೆ ಜಾಗ್ರತೆವಹಿಸಿ.
ಸಂಗಾತಿಗೆ ಅನುಮಾನ ಬಂದಾಗ ಏನು ಮಾಡಬೇಕು?
ಸಂಶಯ ಸಂಬಂಧವನ್ನು ಹಾಳು ಮಾಡುವುದು, ಒಂದು ವೇಳೆ ಸಂಗಾತಿ ಸಂಶಯ ಬಂದಾಗ ನಿಮ್ಮ ಕಡೆಯಿಂದ ಯಾವುದೇ ತಪ್ಪು ಆಗುತ್ತಿಲ್ಲ ಎಂದಾದರೆ ನೀವು ನಿಮ್ಮ ಪಾಸ್‌ವರ್ಡ್ ಓಪನ್ ಮಾಡಿ ನಿಮ್ಮ ಮೊಬೈಲ್ ಚೆಕ್ ಮಾಡಲು ಸಂಗಾತಿಗೆ ನೀಡಲು ಹಿಂಜರಿಯಬೇಡಿ...
ಒಂದು ಒಳ್ಳೆಯ ಸಂಬಂಧ ಬಾಳಬೇಕೆಂದರೆ ಅಲ್ಲಿ ನಂಬಿಕೆ ಇರಬೇಕು, ಹೊಂದಾಣಿಕೆ ಇರಬೇಕು.



Click it and Unblock the Notifications
