Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಂಡ-ಹೆಂಡತಿ ನಡುವೆ ಹೀಗಿದ್ದರೆ ಅದು ಕೋಲ್ಡ್ ರಿಲೇಷನ್‌ಶಿಪ್, ಜಾಗ್ರತೆ
ಕೆಲವೊಂದು ಸಂಬಂಧ ತೋರ್ಪಡಿಕೆಗೆ ಅಷ್ಟೇ... ಆದರೆ ಅ ವ್ಯಕ್ತಿಗೆ ಸಂಗಾತಿ ಮೇಲೆ ನಿಜವಾದ ಪ್ರೀತಿಯಾಗಲಿ, ಗೌರವವಾಗಲಿ ಇರಲ್ಲ, ಯಾವುದೋ ಒಂದು ಕಾರಣಕ್ಕೆ ಮದುವೆಯಾಗಿರುತ್ತಾರೆ, ಆದರೆ ಸಂಗಾತಿಗೆ ನೀಡಬೇಕಾದ ಪ್ರೀತಿ ನೀಡಲ್ಲ, ಮುಕ್ತವಾಗಿ ಮಾತನಾಡಲ್ಲ, ಒಂದು ರೀತಿ ನಿಗೂಢವಾಗಿ ವರ್ತಿಸಲಾರಂಭಿಸುತ್ತಾರೆ.

ಯಾವುದೋ ಒಂದು ಕಾರಣದಿಂದ ಮದುವೆಯಾಗಿರುತ್ತಾರೆ
ಒಂದೋ ಮನೆಯವರು ಒತ್ತಾಯ ಮಾಡಿದರು ಎಂದು ಅಥವಾ ಆಸ್ತಿಗಾಗಿ ಮದುವೆಯಾಗಿರುತ್ತಾರೆ. ಅದರೆ ಅವರಿಗೆ ಈ ಮದುವೆಯಲ್ಲಿ ಒಂದಿಷ್ಟೂ ಇಷ್ಟವಿರಲ್ಲ, ಅಲ್ಲದೆ ಅವರಿಗೆ ಬೇರೆ ಕಡೆ ಆಕರ್ಷಣೆಯೂ ಇರಬಹುದು, ಹೀಗಿದ್ದಾಗ ಆ ವ್ಯಕ್ತಿಯ ವರ್ತನೆ ಹೀಗಿರುತ್ತದೆ
ಖುಷಿಯಿಂದ ಇರಲ್ಲ, ಪ್ರೀತಿ ವ್ಯಕ್ತ ಪಡಿಸಲ್ಲ
ನನೀವು ಅವರನ್ನು ಪ್ರೀತಿಯಿಂದ ಸಮೀಪಿಸಿದರೆ ಆ ಕಡೆ ನಿರ್ಲಕ್ಷ್ಯ, ನಿಮ್ಮತ್ತ ಗಮನವೂ ಹರಿಸಲ್ಲ, ಅಲ್ಲದೆ ನೀವು ಬಯಸಿದಂಥ ಪ್ರೀತಿ ಸಿಗಲ್ಲ ಅವರು ನಿಮ್ಮಿಂದ ಅಂತರ ಬಯಸುತ್ತಿದ್ದಾರೆ ಎಂದು ಅನಿಸಲಾರಂಭಿಸುವುದು.
ದೈಹಿಕವಾಗಿ ಬೆರೆಯಲು ಹಿಂಜರಿಕೆ
ಅವರು ನೀವು ಒಂದಾದರೂ ಅಲ್ಲಿ ಯಾವುದೇ ಖುಷಿ ಇರಲ್ಲ, ಯಾಂತ್ರಿಕವಾಗಿ ಎಲ್ಲವೂ ನಡೆಯುತ್ತೆ, ಅವರು ನಿಮ್ಮ ಬಳಿ ಪ್ರೀತಿಯ ಮಾತುಗಳನ್ನಾಡುವುದಾಗಲಿ, ನಿಮ್ಮನ್ನು ಹೊಗಳುವುದಾಗಲಿ, ಒಂದು ಪ್ರೀತಿಯ ಅಪ್ಪುಗೆಯಾಗಲಿ ಏನೂ ಇರಲ್ಲ, ದೇಹಗಳು ಒಂದಾದರೂ ಮನಸ್ಸುಗಳು ಒಂದಾಗಲು ಅವಕಾಶ ನೀಡಿರಲ್ಲ
ನಿಮ್ಮ ಜೊತೆ ಏನೂ ಹಂಚಿಕೊಳ್ಳದಿರುವುದು
ಇದು ಕೂಡ ಕೋಲ್ಡ್ ರಿಲೇಷನ್‌ಶಿಪ್‌ನ ಲಕ್ಷಣವಾಗಿದೆ, ಸಂಗಾತಿ ನಿಮ್ಮ ಬಳಿ ಪ್ರೀತಿಯಿಂದ ಏನೂ ಹಂಚಿಕೊಳ್ಳುವುದಿಲ್ಲ, ಅವರ ಯಶಾವ ವಿಷಯವೂ ನಿಮಗೆ ತಿಳಿಯುವುದಿಲ್ಲ, ಅವರು ನಿಮ್ಮ ಜೊತೆ ಸಮಯ ಕಳೆಯುವುದಕ್ಕಿಂತ ನಿಮ್ಮಿಂದ ದೂರವಿರಲು ಬೇರೆ ಯಾವುದೋ ಕೆಲಸದ ನೆಪ ಹೇಳಲಾರಂಭಿಸುತ್ತಾರೆ.
ಈ ಬಗೆಯ ಲಕ್ಷಣಗಳು ಕಂಡು ಬಂದಾಗ ಏನು ಮಾಡಬೇಕು?
ಸಂಸಾರದಲ್ಲಿ ಈ ರೀತಿ ಕಂಡು ಬಂದಾಗ ನೀವು ಈ ಬಗ್ಗೆ ಅವರ ಬಳಿ ಒಪನ್ ಆಗಿ ಮಾತನಾಡಿ, ಅವರಿಂದ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿ. ಆವಾಗ ಅವರು ಹೇಳಿದರೆ ಅರ್ಥ ಮಾಡಿಕೊಳ್ಳಬಹುದು, ಅಗಲೂ ಹೇಳದೆ ಇದ್ದರೆ ನಿಮ್ಮ ಬದುಕಿನ ನಿರ್ಧಾರ ನೀವು ತೆಗೆದುಕೊಳ್ಳುವುದು ಒಳ್ಳೆಯದು.
ಒಂದೋ ಅವರಿಗೆ ನಿಮ್ಮ ಮೇಲೆ ಆಸಕ್ತಿ ಇರಲ್ಲ ಅಥವಾ ಬೇರೆ ಸಂಬಂಧ ಇರುತ್ತೆ
ಮದುವೆಯ ಬಳಿಕ ಬದುಕು ತುಂಬಾ ಯಾಂತ್ರಿಕವಾಗಿದೆ ಅವನಿಗೆ ಅಥವಾ ಅವಳಿಗೆ ನನ್ನ ಮೇಲೆ ಆಕರ್ಷಣೆ ಇಲ್ಲ, ಯಾವುದೇ ಆಸಕ್ತಿ ಇಲ್ಲ ಎಂದಾದರೆ ಅವರಿಗೆ ನೀವೆಂದರೆ ಇಷ್ಟವೇ ಇರಲ್ಲ ಅಥವಾ ಬೇರೆ ಕಡೆ ಸಂಬಂಧ ಇರುತ್ತದೆ, ಆದರೆ ಜಾತಿ, ಮನೆತನ ಹೀಗೆ ಬೇರೆ ಯಾವುದೋ ಕಾರಣಕ್ಕೆ ಮದುವೆಯಾಗಿರುತ್ತಾರೆ, ಇಂಥ ಜೊತೆ ಬಾಳುವುದು ತುಂಬಾನೇ ನರಕ.
ಮಗು ಆದರೆ ಎಲ್ಲಾ ಸರಿಯಾದೀತು ಎಂಬ ಆಲೋಚನೆ ಸರಿಯೇ?
ಮದುವೆಯಾದ ಮೇಲೆ ಎಲ್ಲಾ ಗಂಡ-ಹೆಂಡತಿ ರೀತಿ ಒಂದು ಒಳ್ಳೆಯ ಸಂಬಂಧ ಇರಲ್ಲ ಎಂದಾಗ ನಮ್ಮ ಸಂಕಟವನ್ನು ಮನೆಯವರು ಅಥವಾ ಸ್ನೇಹಿತರ ಬಳಿ ಹೇಳಿಕೊಂಡಾಗ ಬಹುತೇಕರು ನೀಡುವ ಸಲಹೆಯೆಂದರೆ ಒಂದು ಮಗುವಾದರೆ ಎಲ್ಲವೂ ಸರಿಯಾದೀತು.
ಸಂಗಾತಿಯ ವರ್ತನೆ ವಿಚಿತ್ರವಾಗಿದ್ದಾಗ ಮಗು ಮಾಡಿಕೊಳ್ಳದಿರುವುದು ಒಳ್ಳೆಯದು
ಅವರು ಮಗುವಾದ ಮೇಲೆ ಬದಲಾಗುತ್ತಾರೆ ಎಂದು ಮಗು ಮಾಡಿಕೊಂಡು ಮಗುವಾದ ಮೇಲೆ ಕೂಡ ಬದಲಾಗದೆ ಹೋದರೆ ನೀವು ಮಾತ್ರ ಅನುಭವಿಸುತ್ತಿದ್ದ ನೋವು, ಆ ಮುಂದೆ ಆ ಮಗು ಕೂಡ ಅನುಭವಿಸಬೇಕಾಗುತ್ತದೆ, ಅದಕ್ಕೆ ಪೋಷಕರ ಪ್ರೀತಿ ಸರಿಯಾಗಿ ಸಿಗಲ್ಲ, ಮಗುವಾದ ಮೇಲೆ ಕೂಡ ಸರಿ ಬರುತ್ತಿಲ್ಲ ಎಂದಾದರೆ ವಿಚ್ಛೇದನ ಬಗ್ಗೆ ಆಲೋಚಿಸುವಾಗ ಅದು ಕೂಡ ಮಗುವನ್ನು ಬಾಧಿಸುವುದು.
ಹಾಗಾಗಿ ಮದುವೆಯಾದಾಗ ಸಂಗಾತಿಗೆ ನಿಮ್ಮ ಮೇಲೆ ಇಷ್ಟವಿಲ್ಲ ಎಂದು ನಿಮಗನಿಸುತ್ತಿದ್ದರೆ ಆ ಸಮಸ್ಯೆ ಬಗೆಹರಿಯುವವರೆಗೆ ಮಗು ಮಾಡಿಕೊಳ್ಳಬೇಡಿ.. . ಅವರ ಜೊತೆ ಮುಕ್ತವಾಗಿ ಮಾತನಾಡಿ, ಹೀಗೆ ಹೋದರೆ ನಮ್ಮ ಸಂಬಂಧಕ್ಕೆ ಅರ್ಥವೇನು ಕೇಳಿ, ಅವರ ಉತ್ತರದಿಂದ ನಿಮ್ಮ ಭವಿಷ್ಯದ ನಿರ್ಧಾರ ನೀವು ತೆಗೆದುಕೊಳ್ಳಬಹುದು.



Click it and Unblock the Notifications