Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಅನೈತಿಕ ಸಂಬಂಧ ಇಲ್ಲ, ಆದ್ರೂ ಆತನಿಗೆ ಅವಳ ಮೇಲೆ ಆಸಕ್ತಿ ಕಡಿಮೆಯಾಗಲು 8 ಕಾರಣಗಳು
ಏಕೆ ಅವನಿಗೆ ಇತ್ತೀಚೆಗೆ ನನ್ನಲ್ಲಿ ಆಸಕ್ತಿ ಇಲ್ಲ, ಅವನು ಏಕೆ ನನ್ನಿಂದ ದೂರಾಗುತ್ತಿದ್ದಾನೆ, ಬೇರೆ ಕಡೆ ಸಂಬಂಧವಿರಬಹುದೇ? ಎಂದು ಸಾಕಷ್ಟು ಹೆಣ್ಮಕ್ಕಳಿಗೆ ಅನಿಸುವುದು, ಮೊದ ಮೊದಲಿಗೆ ಅವನಿಗೆ ಬೇರೆ ಕಡೆ ಆಕರ್ಷಣೆವಿರಬಹುದೇ ಎಂಬ ಸಂಶಯ ಮೂಡುವುದು, ನಂತರ ಆ ದಿಕ್ಕಿನಲ್ಲಿ ಗೂಢಚಾರ ಮಾಡಿ ತಿಳಿದರೂ ಅಂಥ ಯಾವ ಸುಳಿವು ಸಿಗದೇ ಹೋದಾಗ ಅವನಿಗೆ ಬೇರೆ ಕಡೆ ಅನೈತಿಕ ಸಂಬಂಧವಿಲ್ಲ, ಆದರೂ ಏಕೆ ಬದಲಾಗಿದ್ದಾನೆ ಎಂದು ಅನಿಸುವುದು.

ನಿಮ್ಮ ಸಂಗಾತಿಯಲ್ಲಿ ಈ ಬಗೆಯ ಲಕ್ಷಣ ಕಂಡು ಬಂದರೆ ಈ ಕಾರಣಗಳಿರಬಹುದು:
ತುಂಬಾನೇ ಒತ್ತಡದ ಬದುಕು
ಆರ್ಥಿಕ ಸಾಲ, ಒಂದು ರಾಶಿ ಜವಾಬ್ದಾರಿಗಳು, ಅದನ್ನು ಪೂರೈಸಲು ಸಾಧ್ಯವಾಗದೆ ಮಾಡುವ ಒದ್ದಾಟ ಇವೆಲ್ಲದರ ನಡುವೆ ಈ ರೊಮ್ಯಾನ್ಸ್ ಎನ್ನುವುದು ದೂರಾಗುವುದು. ಸದಾ ಚಿಂತೆಯೇ ಆತನನ್ನು ಆವರಿಸಿದಾಗ ಹೆಂಡತಿ ಕಡೆ ಗಮನ ಹರಿಸಲ್ಲ.
ಪತಿ-ಪತ್ನಿ ನಡುವೆ ಯಾವುದೇ ವಿಶೇಷ ಬಾವನೆ ಮೂಡದೆ ಹೋದಾಗ
ಬದುಕು ತುಂಬಾನೇ ಯಾಂತ್ರಿಕವಾದಾಗ ಕೂಡ ಅವನಿಗೆ ಈ ಲೈಂಗಿಕತೆಯಲ್ಲಿ ಆಸಕ್ತಿ ಕಡಿಮೆಯಾಗುವುದು. ಹಾಗಾಗಿ ಸಂಬಂಧದಲ್ಲಿ ಕೆಲವೊಂದು ಸರ್‌ಪ್ರೈಸ್‌ಗಳನ್ನು ಕೊಡುವುದು ಒಳ್ಳೆಯದು ಎಂದು ಹೇಳಲಾಗುವುದು. ಎದ್ದ, ಕೆಲಸ ಮಾಡಿದ, ಮಲಗಿದ ಅಂತ ಜೀವನ ಕಳೆಯದೆ ನಿಮಗಿಬ್ಬರಿಗಾಗಿ ಸಮಯ ಕಳೆಯಿರಿ.
ಮುಗಿಯದ ಜಗಳ
ಜಗಳವಾಡದ ಗಂಡ-ಹೆಂಡತಿ ಇರಲ್ಲ, ಆದರೆ ಪ್ರತಿ ದಿನವೂ ಜಗಳ, ಚಿಕ್ಕ ವಿಷಯಕ್ಕೂ ಜಗಳ, ಜಗಳ ಮಾಡಿ ವಾರಗಟ್ಟಲೆ ಮಾತು ಬಿಡುವುದು ಈ ರೀತಿಯೆಲ್ಲಾ ಅವರಿಗೂ ನಿಧಾನಕ್ಕೆ ಆ ಸಂಬಂಧ ತುಂಬಾನೇ ಬೋರ್ ಅನಿಸುವುದು.
ಭಾವನಾತ್ಮಕವಾಗಿ ಬಂಧ ಕಡಿಮೆಯಾಗುವುದು
ನಿಮ್ಮಿಬ್ಬರ ನಡುವೆ ಫೀಲಿಂಗ್ ಕಡಿಮೆಯಾಗುತ್ತಿದೆ, ನೀವಾಯ್ತು ನಿಮ್ಮ ಪಾಡಾಯ್ತು, ಅವರಾಯ್ತು ಅವರ ಪಾಡಾಯ್ತು ಎಂದು ಇದ್ದಾಗ ಅವರಿಗೂ ಆ ಸಂಬಂಧ ತುಂಬಾ ಬೋರ್ ಅಂತ ಅನಿಸಲಾರಂಭಿಸುವುದು.
ದೇಹದ ಕಡೆಗೆ ಗಮನ ಕೊಡದಿರುವುದು
ಮದುವೆಯಾಗಿ ಸ್ವಲ್ಪ ವರ್ಷದಲ್ಲಿ ನಮ್ಮ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತದೆ, ಆದರೆ ಶರೀರವನ್ನು ತೀರಾ ಗಮನಿಸದೆ ಹೋಗಬಾರದು, ನಮ್ಮ ಡ್ರೆಸ್ಸಿಂಗ್ ಇವುಗಳ ಕಡೆಗೆ ಗಮನಹರಿಸಬೇಕು.
ತುಂಬಾನೇ ಡಿಪೆಂಡ್ ಆಗುವುದು
ತುಂಬಾನೇ ಡಿಪೆಂಡ್ ಆಗುವುದು ಪುರುಷರಿಗೆ ಇಷ್ಟ ಎಂದು ಯೋಚಿಸುತ್ತಾರೆ, ಆದರೆ ತುಂಬಾನೇ ಡಿಪೆಂಡ್ ಆಗುವ ಮಹಿಳೆಗಿಂತ ಸ್ವತಃ ಎಲ್ಲಾ ಕೆಲಸ ಕಾರ್ಯ ಮಾಡುವ ಮಹಿಳೆ, ಸ್ವಾಭಿಮಾನಿ ಮಹಿಳೆಯ ಕಂಡರೆ ಪುರುಷನಿಗೆ ಗೌರವ ಹೆಚ್ಚು.
ಆರ್ಥಿಕ ಸಮಸ್ಯೆ
ಆರ್ಥಿಕ ಸಮಸ್ಯೆಯಿದ್ದಾಗ ಹೆಂಡತಿ ಕಡೆ ಅಂತಲ್ಲ ಯಾವುದೇ ವಿಷಯದ ಕಡೆಗೆ ಗಮನಹರಿಸುವುದು ತುಂಬಾನೇ ಕಷ್ಟವಾಗುವುದು.
ದೈಹಿಕ ಸಂಪರ್ಕ ಕಡಿಮೆಯಾಗುವುದು:
ಯಾವುದೋ ಕಾರಣಕ್ಕೆ ಇಬ್ಬರ ನಡುವೆ ದೈಹಿಕ ಸಂಪರ್ಕ ಇಲ್ಲದಿದ್ದಾಗ ಕೂಡ ದಾಂಪತ್ಯದಲ್ಲಿ ಸ್ವಾರಸ್ಯ ಕಡಿಮೆಯಾಗುವುದು. ಲೈಂಗಿಕ ತೃಪ್ತಿ ಅನ್ನುವುದು ವೈವಾಹಿಕ ಬದುಕಿನಲ್ಲಿ ತುಂಬಾನೇ ಮುಖ್ಯ. ಅದು ಸಿಗದೆ ಇದ್ದಾಗ ಅತೃಪ್ತಿಯಿಂದ ಸಂಗಾತಿಯಿಂದ ದೂರವಿರುತ್ತಾರೆ.



Click it and Unblock the Notifications
