Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
ಪತಿ-ಪತ್ನಿಯ ನಡುವೆ ಅಂತರ ಹೆಚ್ಚಿಸುವ 5 ಅಂಶಗಳಿವು..!
ಮದುವೆ ಮತ್ತು ಸಂಬಂಧಗಳ ಉಳಿಸಿಕೊಳ್ಳೋದು ಅಂದ್ರೆ ಅದೊಂದು ತಪಸ್ಸಿನಂತೆ. ಯಾಕೆಂದ್ರೆ ಯಾವಾಗ ಯಾರ ಸಂಬಂಧದಲ್ಲಿ ಬಿರುಕು ಮೂಡಲಿದೆ ಅನ್ನೋದನ್ನ ಯಾರು ಸಹ ಊಹಿಸಲು ಸಾಧ್ಯವಾಗೋದಿಲ್ಲ. ನಾವು ಇತ್ತಿಚಿಗೆ ಕಂಡ ಹಲವು ವಿಚ್ಛೇದನ ಪ್ರಕರಣಗಳೇ ಇದಕ್ಕೆ ಸಾಕ್ಷಿ ಎನ್ನುವಂತಾಗಿದೆ.
ಮದುವೆ ಅಥವಾ ಸಂಬಂಧವನ್ನು ಉಳಿಸಿಕೊಳ್ಳುವಾಗ, ನಂಬಿಕೆ, ಸಮಯ ಮತ್ತು ಶ್ರಮವನ್ನು ಅತ್ಯಂತ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಕೆಲವೊಮ್ಮೆ, ಅನೇಕ ಪ್ರಯತ್ನಗಳ ನಂತರ, ಸಂಬಂಧಗಳಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಇದಕ್ಕೆ ಹತ್ತು ಹಲವು ಕಾರಣಗಳಿರುತ್ತವೆ.

ಹಾಗಾದ್ರೆ ನಾವಿಂದು ಗಂಡ ಹೆಂಡತಿಯ ನಡುವೆ ಸಾಮಾನ್ಯವಾಗಿ ಯಾವ ವಿಚಾರದಿಂದಾಗಿ ಕಲಹಗಳು ಮೂಡುತ್ತವೆ ಹಾಗು ಯಾವ ಅಂಶ ಇಬ್ಬರ ಸಂಬಂಧ ದೂರಾಗಲು ಕಾರಣವಾಗಲಿದೆ ಎಂಬುದನ್ನು ನೋಡೋಣ.
1. ಮಾತನಾಡದಿರುವುದು
ಪ್ರತಿ ದಂಪತಿಗಳ ನಡುವೆ ಕಲಹಕ್ಕೆ ಕಾರಣವಾಗುವುದೇ ಮಾತು. ಕೆಲವು ಬಾರಿ ಮಾತು ಹೆಚ್ಚಾಗಿ ಜಗಳ ಆರಂಭವಾದರೆ ಮತ್ತೆ ಕೆಲವು ಬಾರಿ ಮಾತನಾಡದೆ ಜಗಳಗಳು ಆರಂಭವಾಗುತ್ತವೆ. ಆದರೆ ನೀವು ಕೋಪದಲ್ಲಿ ಹೇಳಿದ ವಿಷಯಗಳ ಬಗ್ಗೆ ಜಗಳವಾಡುವುದು ತುಂಬಾ ಅಪಾಯಕಾರಿ ಪರಿಣಾಮಗಳಿಗೆ ಕಾರಣವಾಗಬಹುದು. ಇದಲ್ಲದೆ, ಜಗಳ ಮುಗಿದ ನಂತರವೂ ನೀವು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದಿದ್ದರೆ, ನಿಮ್ಮ ನಡುವಿನ ಪ್ರೀತಿಯು ಕ್ಷೀಣಿಸಲು ಪ್ರಾರಂಭಿಸುತ್ತದೆ. ಕರುಣೆ, ಸಹಾನುಭೂತಿಯ ಕೊರತೆ ಯಾವುದೇ ಗಡಿಬಿಡಿಯಿಲ್ಲದೆ, ನೀವು ಮೂಲಭೂತ ವಿಷಯಗಳ ಬಗ್ಗೆ ಕಾಳಜಿ ವಹಿಸುವುದನ್ನು ಎಂದಿಗೂ ನಿಲ್ಲಿಸಬಾರದು.
ಒಮ್ಮೆ ನೀವು ಸಂಗಾತಿ ಜೊತೆ ಅಥವಾ ಆತನ ಜೊತೆ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟರೆ ಅದು ನಿಮ್ಮ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗುತ್ತದೆ. ಮುಂದೆ ಇದೊಂದು ದೊಡ್ಡ ಕಂದಕವಾಗಿ ರೂಪುಗೊಳ್ಳುತ್ತದೆ.
2. ಲೈಂಗಿಕತೆ
ಲೈಂಗಿಕತೆಯನ್ನು ನಿರಾಕರಿಸುವುದು ನಿಮ್ಮ ಆಯ್ಕೆ ಮಾತ್ರವಲ್ಲದೆ ನಿಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ. ಒಬ್ಬ ಸಂಗಾತಿ ಪ್ರತಿ ಬಾರಿ ಲೈಂಗಿಕ ಸಂಬಂಧವನ್ನು ನಿರಾಕರಿಸಿದರೆ, ಸಂಬಂಧವು ಮುರಿದುಹೋಗುತ್ತದೆ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳದಿರುವುದು ನಿಮ್ಮ ಮನಸ್ಸಿನಲ್ಲಿದ್ದರೆ ಮತ್ತು ನಿಮ್ಮ ಸಂಗಾತಿಗೆ ಹೇಳಲು ಸಾಧ್ಯವಾಗದಿದ್ದರೆ, ನಿಮ್ಮ ಸಂಬಂಧವು ಗಟ್ಟಿಯಾಗುವುದಿಲ್ಲ.
3. ಮರುಕಳಿಸುವ ತಪ್ಪುಗಳು
ಒಂದು ಸಂಬಂಧ ಹಾಳಾಗಲು ಮತ್ತೊಂದು ಕಾರಣ ಏನೆಂದರೆ ಅಲ್ಲಿ ಮಾಡಿದ ತಪ್ಪುಗಳಿಗೆ ಒಮ್ಮೆ ಕ್ಷಮೆ ಕೇಳಿದ್ದ ಬಳಿಕ ಮತ್ತದೆ ತಪ್ಪು ಮಾಡುವುದಂತೆ. ನೀವು ಪದೇ ಪದೇ ಒಂದೇ ತಪ್ಪು ಎಸಗುತ್ತಿದ್ದರೆ ಅದು ಇಬ್ಬರ ನಡುವೆ ದೊಡ್ಡ ಸಮಸ್ಯೆ ತಂದೊಡ್ಡಲಿದೆ. ಅಲ್ಲದೆ ಆ ತಪ್ಪು ಇಬ್ಬರಲ್ಲಿರುವ ನಂಬಿಕೆ, ಪ್ರೀತಿಯನ್ನು ಕೊಲ್ಲುವಂತೆ ಮಾಡಲಿದೆ. ಇದು ನಿಮ್ಮ ಸಂಗಾತಿಯ ಬಗ್ಗೆ ನಿಮಗೆ ನಿರಾಶೆಯನ್ನುಂಟು ಮಾಡುತ್ತದೆ. ಈ ಅಭ್ಯಾಸದಿಂದ ಬಂಧ ಕ್ರಮೇಣ ಮಸುಕಾಗಲು ಪ್ರಾರಂಭವಾಗುತ್ತದೆ.
4. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳದಿರುವುದು
ನಿಮ್ಮ ಮನಸ್ಸಿನಲ್ಲಿ ಬಹಳಷ್ಟು ಆಸೆಗಳು, ಭಾವನೆಗಳನ್ನು ಆಕೆಯೊಂದಿಗೆ ಅಥವಾ ಆತನೊಂದಿಗೆ ಹಂಚಿಕೊಳ್ಳದೆ ಇರುವುದು ಸಹ ನಿಮ್ಮಿಬ್ಬರ ಸಂಬಂಧದ ದೂರಾಗಲು ಕಾರಣವಾಗಬಹುದು. ಬಹುಪಾಲು ಸಂಬಂಧಗಳು ಹಾಲಾಗುತ್ತಿರುವುದೇ ಇಬ್ಬರ ನಡುವಿನ ಭಾವನೆ, ಹೊಂದಾಣಿಕೆಯ ಕೊರತೆಯಿಂದ. ಆದರೆ ಇಬ್ಬರು ಕುಳಿತು ಮಾತನಾಡಿದರೆ ಇದೊಂದು ಸಮಸ್ಯೆ ಆಗಿರುವುದಿಲ್ಲ.
5. ದೂರದಲ್ಲಿ ನೆಲೆಸಿರುವುದು
ಇತ್ತೀಚಿನ ದಿನಗಳಲ್ಲಿ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಪತಿ ಅಥವಾ ಪತ್ನಿ ದುಡಿಮೆಯ ಉದ್ದೇಶದಿಂದಾಗಿ ದೂರದ ಊರುಗಳಲ್ಲಿ ನೆಲೆಸಿರುತ್ತಾರೆ. ಅವರು ತಿಂಗಳಿಗೊಮ್ಮೆ 6 ತಿಂಗಳಿಗೊಮ್ಮೆ ಇಲ್ಲವೆ ವರ್ಷಕ್ಕೊಮ್ಮೆ ಭೇಟಿಯಾಗಲು ಮುಂದಾಗುತ್ತಾರೆ. ಇದು ಸಹ ಅವರ ಕೌಂಟುಬಿಕ ಸಮಸ್ಯೆಯಲ್ಲಿ ಕಾರಣವಾಗುತ್ತಿದೆ, ಇಬ್ಬರ ನಡುವೆ ಸಂಬಂಧದಲ್ಲಿ ಏರುಪೇರು ಸಂಭಿಸುವ ಕಾರಣಗಳಲ್ಲಿ ಒಂದಾಗುತ್ತಿದೆ.



Click it and Unblock the Notifications