Latest Updates
-
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು!
ಈ 6 ಬಗೆಯ ಹೆಂಗಸರು ತಮ್ಮ ಗಂಡನಿಗೆ ಮೋಸ ಮಾಡುವ ಸಾಧ್ಯತೆ ಹೆಚ್ಚಂತೆ!!
ಹೆಂಡತಿ ಗಂಡನಗೆ ಮೋಸ ಮಾಡುವುದಾಗಲಿ, ಗಂಡ ಹೆಂಡತಿಗೆ ಮೋಸ ಮಾಡುವುದಾಗಲಿ ಮಾಡಿದರೆ ಅಲ್ಲಿ ಹಾಳಾಗುವುದು ಒಂದು ಸುಂದರ ಸಂಸಾರ ಹಾಗೂ ಒಬ್ಬರ ನಂಬಿಕೆ. ಹಾಗಾಗಿ ಮದುವೆಯಾದ ಮೇಲೆ ಕೆಲ ಸಂಸಾರದಲ್ಲಿ ಹೆಂಡತಿ ಮೋಸ ಮಾಡಿದರೆ ಇನ್ನು ಕೆಲ ಸಂಸಾರದಲ್ಲಿ ಗಂಡ ಮೋಸ ಮಾಡುತ್ತಾನೆ.
ಕೆಲವೊಂದು ಮಹಿಳೆಯರನ್ನು ಗಮನಿಸಿದರೆ ಬೇರೆ ಕಡೆ ಆಕರ್ಷಣೆ ಅಧಿಕವಿದೆ ಈಕೆ ತನ್ನ ಗಂಡನಿಗೆ ಮೋಸ ಮಾಡುತ್ತಾಳೆ ಅಥವಾ ಮಾಡುತ್ತಿದ್ದಾಳೆ ಎಂದು ಹೇಳಬಹುದು...

ಅತ್ಯಧಿಕ ಸೋಷಿಯಲ್ ಮೀಡಿಯಾ ಬಳಸುತ್ತಿರುವ ಮಹಿಳೆ:
ಈಗ ಎಲ್ಲರೂ ಸೋಷಿಯಲ್ ಮೀಡಿಯಾ ಬಳಸುತ್ತಾರೆ,ಆದರೆ ಆಕೆ ಹೆಚ್ಚಾಗಿ ಬಳಸುತ್ತಿದ್ದಾಳೆ, ಅದರಲ್ಲಿಯೂ ಅವಳಿಗೆ ನಿಮ್ಮ ಜೊತೆ ಮಾತನಾಡಲು ಹೆಚ್ಚು ಆಸಕ್ತಿಯಿಲ್ಲ, ಸದಾ ಸಮಯ ಸೋಷಿಯಲ್ ಮೀಡಿಯಾದಲ್ಲಿಯೇ ಇರುತ್ತಾಳೆ, ಮೊಬೈಲ್ ನೋಡಿ ಏನೋ ಯೋಚಿಸಿ ನಗುವುದು ಇತ್ತೀಚೆಗೆ ನಿಮಗೆ ತಿಳಿಯಬಾರದೆಂದು ಪಾಸ್‌ವರ್ಡ್ ಎಲ್ಲಾ ಬದಲಾಯಿಸಿರುವುದು ಮಾಡಿದ್ದರೆ ಆಕೆಯ ವರ್ತನೆ ಸಂಶಯಪಡುವಂಥದ್ದೇ ಎಂಬುವುದನ್ನು ಮನಃಶಾಸ್ತ್ರಜ್ಞರು ಕೂಡ ಒಪ್ಪುತ್ತಾರೆ. ಇತ್ತೀಚೆಗೆ ಆಕೆ ನಿಮ್ಮಿಂದ ತುಂಬಾ ವಿಷಯವನ್ನು ಮುಚ್ಚಿಡುತ್ತಾಳೆ ಎಂದಾದರೆ ಆಕೆ ನಿಮಗೆ ಮೋಸ ಮಾಡುತ್ತಿದ್ದಾಳೆ ಎಂದರ್ಥ.
ಪುರುಷನ ವಯಸ್ಸು:
ಇಂಥದ್ದೊಂದು ಅಚ್ಚರಿಯ ಸಂಗತಿಯನ್ನು ಅಧ್ಯಯನದ ವರದಿ ಹೇಳಿದೆ. Ashley Madison ಎಂಬ ಡೇಟಿಂಗ್ app ಅಚ್ಚರಿಉ ವಿಷಯ ಹೇಳಿದೆ. 29, 29, 49 ಹೀಗೆ ಈ ವಯಸ್ಸಿನಲ್ಲಿರುವಾಗ ತಮ್ಮ ಹೆಂಡತಿ ನಮಗೆ ಮೋಸ ಮಾಡಿರುವುದಾಗಿ ಅನೇಕ ಪುರುಷರು ಬರೆದುಕೊಂಡಿದ್ದಾರೆ, ಈ 9 ಸಂಖ್ಯೆಗೂ ಸಂಗಾತಿಯಿಂದ ಮೋಸ ಹೋಗುವುದಕ್ಕೂ ಏನು ಸಂಬಂಧ ಎಂದು ಹೇಳಿಲ್ಲ.
ಇತ್ತೀಚೆಗೆ ದೈಹಿಕ ಸಂಬಂಧದ ಕಡೆಗೆ ಹೆಚ್ಚು ಆಸಕ್ತಿ ತೋರಿಸುವುದು
ಇದು ಮಹಿಳೆಯಷ್ಟೇ ಮೋಸ ಮಾಡುವ ಪುರುಷರಲ್ಲಿಯೂ ಕಂಡು ಬರುವ ಲಕ್ಷಣವಾಗಿದೆ, ಸಂಗಾತಿಗೆ ಮೋಸ ಮಾಡುವಾಗ ಅವರು ಲೈಂಗಿಕ ವಿಷಯದಲ್ಲಿ ಹೈಪರ್‌ಆಕ್ಟಿವ್ ಆಗುತ್ತಾರೆ, ಏಕೆಂದರೆ ಆ ಸಮಯದಲ್ಲಿ ಲೈಂಗಿಕ ಬಯಕೆ ತುಂಬಾನೇ ಹೆಚ್ಚುವುದು, ಅವರು ಬಯಸಿದ ವ್ಯಕ್ತಿಯನ್ನು ಸೇರಲು ಸಾಧ್ಯವಾಗದೇ ಇದ್ದಾಗ ಸಂಗಾತಿ ಅವರ ಆಯ್ಕೆಯಾಗುತ್ತಾರೆ, ಯಾವುದೇ ಭಾವನಾತ್ಮಕ ಬಾಂಧವ್ಯ ತೋರಿಸಲ್ಲ, ಅವರು ನಮ್ಮನ್ನು ಕೇರ್ ಮಾಡುತ್ತಿಲ್ಲ, ನಮ್ಮ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ ಎಂದು ಅನಿಸುತ್ತಿರುತ್ತದೆ, ಆದರೆ ಬೆಡ್‌ರೂಂ ವಿಷಯದಲ್ಲಿ ತುಂಬಾನೇ ಆಸಕ್ತಿ ತೋರಿಸುತ್ತಾರೆ. ಇದು ಕೂಡ ಮೋಸದ ಸೂಚನೆಯಾಗಿದೆ.
ಸಂಗಾತಿಯಿಂದ ಅಂತರ ಪಾಲಿಸುವುದು
ಇನ್ನು ಕೆಲವರು ಅನೈತಿಕ ಸಂಬಂಧಕ್ಕೆ ಬೀಳುತ್ತಿದ್ದಂತೆ ಸಂಗಾತಿಯಿಂದ ಅಂತರ ಪಾಲಿಸುತ್ತಾರೆ, ಏನೋ ಒಂದು ಸುಳ್ಳು ಹೇಳಿ ಅಂತರ ಕಾಯ್ದುಕೊಳ್ಳಲು ಯತ್ನಿಸುತ್ತಾರೆ. ಪತಿ-ಪತ್ನಿ ಸೇರಿ ಎಷ್ಟೋ ಸಮಯವಾಗಿರುತ್ತದೆ, ಅವರ ಆಸೆ ಈಡೇರಿಸಲು ಬೇರೆ ವ್ಯಕ್ತಿ ಇರುವಾಗ ಅವರು ಸಂಗಾತಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಾರೆ, ಸಂಗಾತಿಯ ವರ್ತನೆ ತುಂಬಾ ನಿಗೂಢ ಅನಿಸಲಾರಂಭಿಸುತ್ತದೆ.
ದುರಾಸೆಯ ಮಹಿಳೆ:
ಆಕೆ ನಿಮ್ಮಲ್ಲಿ ಸದಾ ಕೊರತೆ ಹುಡುಕುತ್ತಿರುತ್ತಾಳೆ, ನಿಮಗಿಂತ ಶ್ರೀಮಂತ ವ್ಯಕ್ತಿ ಜೊತೆ ಸ್ನೇಹ ಬೆಳೆದರೆ ಮೋಸ ಮಾಡುವ ಸಾಧ್ಯತೆ ಹೆಚ್ಚು. ನಿಮ್ಮಲ್ಲಿ ಹಣ ನೋಡಿ ಬಂದವಳು, ಬೇರೆ ವ್ಯಕ್ತಿಯಲ್ಲಿಯೂ ಹಣ ನೋಡಿ ನಿಮಗೆ ಮೋಸ ಮಾಡಲು ಹಿಂದೇಟು ಹಾಕುವುದಿಲ್ಲ, ಅದರಲ್ಲಿಯೂ ಆಕೆ ಒಂದು ಸಂಬಂಧದಲ್ಲಿದ್ದು ಆ ವ್ಯಕ್ತಿಗಿಂತ ನಿಮ್ಮಲ್ಲಿ ದುಡ್ಡಿದೆ ಎಂದು ಬಂದಿದ್ದರೆ ಅಂಥ ಹೆಣ್ಣಿನಲ್ಲಿ ನಿಯತ್ತು ಇರಲ್ಲ.
ಗಂಡನಿಂದ ನಿರ್ಲಕ್ಷ್ಯಕ್ಕೆ ಒಳಗಾದರೆ
ಗಂಡ ಆಕೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ, ಆಕೆಯ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ, ತುಂಬಾನೇ ನಿರ್ಲಕ್ಷ್ಯ ಮಾಡುತ್ತಿದ್ದಾನೆ ಎಂದಾದರೆ ಆಕೆಯ ಮೇಲೆ ಯಾರಾದರು ಸ್ವಲ್ಪ ಅನುಕಂಪ ತೋರಿಸಿದರೂ ಆಕೆ ಆ ವ್ಯಕ್ತಿಯ ಕಡೆ ಆಕರ್ಷಿತಳಾಗಬಹುದು. ಇಲ್ಲಿ ಆಕೆಯ ತಪ್ಪು ಎನ್ನುವ ಬದಲಿಗೆ ಆಕೆಯ ಗಂಡನ ತಪ್ಪಿನಿಂದಾಗಿ ಆಕೆ ಈ ರೀತಿಯಾಗಿರುತ್ತಾಳೆ.



Click it and Unblock the Notifications
