Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 5 ತಪ್ಪುಗಳು ನಿಮ್ಮ ಸಂಬಂಧ ಕೊನೆಯಾಗಿಸಬಹುದು..! ಈ ತಪ್ಪುಗಳ ಮಾಡಲೇಬೇಡಿ..!
ಒಂದೊಳ್ಳೆ ಸಂಬಂಧ ಬೆಳೆಯಬೇಕಾದರೆ ಅಲ್ಲಿ ನಂಬಿಕೆ ಅನ್ನೋದು ಮುಖ್ಯವಾಗಿರುತ್ತದೆ. ಯಾವ ಸಂಬಂಧದಲ್ಲಿ ನಂಬಿಕೆ ಕ್ಷೀಣಿಸುತ್ತಾ ಹೋಗಲಿದ್ಯೋ ಆ ಸಂಬಂಧ ಅಂತ್ಯದತ್ತ ಸಾಗುತ್ತದೆ. ಹೀಗಾಗಿ ಯಾವುದೇ ಸಂಬಂಧವಾಗಿರಲಿ ಅದರಲ್ಲಿ ನಂಬಿಕೆ ಇಟ್ಟುಕೊಳ್ಳುವುದು ಮುಖ್ಯ.
ಆದರೆ ಇತ್ತೀಚಿಗೆ ಸಂಬಂಧಗಳು ಎಷ್ಟು ಬೇಗ ಹಾಳಾಗುತ್ತವೆ ಅಂದ್ರೆ ಅದೆಷ್ಟೊ ಸಂಬಂಧ ಮುನಿಸಿನಲ್ಲೋ, ಜಗಳದಲ್ಲೋ ಅಂತ್ಯವಾಗುತ್ತಿದೆ. ಆದರೆ ಇಂದು ನಾವು ನಿಮ್ಮ ಉತ್ತಮ ಸಂಬಂಧವನ್ನು ಹಾಳುಮಾಡುವ ಕೆಲವು ವಿಷಯಗಳು ಮತ್ತು ಅಭ್ಯಾಸಗಳ ಬಗ್ಗೆ ಹೇಳಲಿದ್ದೇವೆ. ಆದ್ದರಿಂದ ನೀವು ನಿಮ್ಮ ಸಂಬಂಧವನ್ನು ಉಳಿಸಲು ಬಯಸಿದರೆ ಈ ತಪ್ಪುಗಳನ್ನು ಮಾಡುವುದನ್ನು ತಪ್ಪಿಸುವುದು ಉತ್ತಮ.

ಹಾಗಾದರೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೇಗೆ ನಡೆದುಕೊಳ್ಳುವುದು ನಿಮ್ಮ ಸಂಬಂಧ ಹಾಳಾಗಲು ಕಾರಣವಾಗಿದೆ. ಯಾವೆಲ್ಲಾ ಕೆಲಸಗಳು ನಿಮ್ಮ ಸಂಬಂಧವನ್ನು ಹಾಳು ಮಾಡುತ್ತಿವೆ. ಅದರಿಂದ ಹೊರಬರುವುದು ಹೇಗೆ ಎಂಬುದನ್ನು ನಾವಿಂದು ನೋಡೋಣ.
ಹೇಳಲಾಗದ ನಿರೀಕ್ಷೆಗಳು
ಅನೇಕ ಬಾರಿ ಜನರು ತಮ್ಮ ಮನಸ್ಸಿನಲ್ಲಿ ಪರಸ್ಪರ ದೂರವಾಗಲು ಪ್ರಾರಂಭಿಸುತ್ತಾರೆ. ಏನನ್ನೂ ಹೇಳದೆ ನಿಮ್ಮ ಮನಸ್ಸಿನಲ್ಲಿಯೇ ವಿಚಾರಗಳ ಇಟ್ಟುಕೊಂಡಿರುವುದು, ನಿಮ್ಮ ಇಚ್ಛೆಯನ್ನು ವ್ಯಕ್ತಪಡಿಸದಿರುವುದು ಸಂಬಂಧಗಳಲ್ಲಿ ಅಸಮಾಧಾನ ಮತ್ತು ತಪ್ಪುಗ್ರಹಿಕೆಯ ಬೀಜಗಳನ್ನು ಬಿತ್ತಬಹುದು. ಸಂಬಂಧಗಳಲ್ಲಿ, ಜನರು ತಮ್ಮ ಸಂಗಾತಿಯು ತಮ್ಮ ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಸಾಮಾನ್ಯವಾಗಿ ನಿರೀಕ್ಷಿಸುತ್ತಾರೆ, ಆದರೆ ಪರಸ್ಪರ ಮಾತನಾಡದ ಕಾರಣ, ಅವರು ಯಾವಾಗಲೂ ಹತಾಶೆ ಮತ್ತು ನಿರಾಶೆಯನ್ನು ಹೊಂದಿರುತ್ತಾರೆ, ಇದು ಸಂಬಂಧಗಳು ಕೆಡಲು ಕಾರಣವಾಗುತ್ತದೆ.
ಯಾವಾಗಲೂ ನೀವೇ ಸರಿ ಎಂದು ವಾದಿಸುವುದು ಇಲ್ಲವೆ ಸಾಬೀತು ಮಾಡಲು ಮುಂದಾಗುವುದು
ಯಾವಾಗಲೂ ನಿಮ್ಮನ್ನು ಸರಿ ಎಂದು ಸಾಬೀತುಪಡಿಸುವ ತಪ್ಪು ನಿಮ್ಮ ಸಂಬಂಧವನ್ನು ಹಾಳುಮಾಡುತ್ತದೆ. ಈ ಕಾರಣದಿಂದಾಗಿ, ಸಂಬಂಧದಲ್ಲಿ ಜಗಳಗಳು ಹೆಚ್ಚಾಗುತ್ತವೆ. ಇಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಬದಲು, ತಮ್ಮನ್ನು ಸರಿ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ತಪ್ಪು ಎಂದು ಪರಿಗಣಿಸಲು ಪ್ರಾರಂಭಿಸಿದಾಗ, ಅದು ಸಂಬಂಧದ ಬೆಳವಣಿಗೆಯ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಇದರ ಜೊತೆ ಯಾವಾಗಲೂ ನಾನೇ ಸರಿ ಎಂಬ ಮನೋಭಾವನೆಯು ಸಹ ಸಂಬಂಧ ಹಾಳಾಗಲು ಪ್ರಮುಖಕಾರಣವಾಗಿದೆ. ಹೀಗಾಗಿ ಈ ರೀತಿ ವಾದ ಮಂಡಿಸುವ ಅಭ್ಯಾಸ ನಿಲ್ಲಿಸಿಬಿಡಿ.
ನಿರ್ಲಕ್ಷಿಸುವುದು
ನಿಮ್ಮ ಪ್ರೀತಿ ಪಾತ್ರರಾಗಿರಲಿ ಅಥವಾ ನಿಮ್ಮ ಜೊತೆಗಾರರನ್ನು ನೀವು ನಿರ್ಲಕ್ಷಿಸುವುದು ಸಹ ಆ ಸಂಬಂಧ ಹಾಳಾಗಲು ಕಾರಣವಾಗುತ್ತದೆ. ಒಬ್ಬರನೊಬ್ಬರ ಸಮಸ್ಯೆಗಳನ್ನು ಗ್ರಹಿಸದಿರುವುದು ಅಥವಾ ಭಾವನಾತ್ಮಕವಾಗಿ ನಿಮ್ಮನ್ನು ಹಿಡಿದಿಟ್ಟುಕೊಳ್ಳುವುದು ನಿಮ್ಮಿಬ್ಬರ ನಡುವೆ ಭಾವನಾತ್ಮಕ ಅಂತರವನ್ನು ಉಂಟುಮಾಡಬಹುದು. ಇದು ನಿಮ್ಮ ಸಂಬಂಧದಲ್ಲಿ ಹೇಳಲಾಗದ ಉದ್ವೇಗದ ವಾತಾವರಣವನ್ನು ಸೃಷ್ಟಿಸುತ್ತದೆ.
ತಪ್ಪುಗಳ ಪಟ್ಟಿ ಮುಂದಿಡುವುದು
ಸಾಮಾನ್ಯವಾಗಿ ಇಬ್ಬರು ಮಾಡುವ ಸಾಮಾನ್ಯ ತಪ್ಪು ಇದಾಗಿದೆ. ಯಾವುದಾದರು ಸಣ್ಣ ವಿಚಾರಕ್ಕೆ ಮುನಿಸು ಎದುರಾಗಿದ್ದರೆ ಅದನ್ನು ಪರಿಹರಿಸಿಕೊಳ್ಳುವ ಬದಲಾಗಿ ಹಳೆಯ ತಪ್ಪುಗಳ ಲೆಕ್ಕ ಮುಂದಿಡುವುದು ಒಳ್ಳೆಯ ಅಭ್ಯಾಸವಲ್ಲ. ಇದರಿಂದ ಸಮಸ್ಯೆ ದೊಡ್ಡದಾಗಬಹುದೇ ವಿನಃ ಪರಿಹಾರ ಸಿಗುವುದಿಲ್ಲ. ಇದೇ ಕಾರಣಕ್ಕೆ ಹಲವು ಸಂಬಂಧ ಮುರಿದು ಬೀಳುತ್ತವೆ.
"ನನ್ನಂತೆಯೇ ಇರು" ಎಂಬ ಮನಸ್ಥಿತಿ
'ನನ್ನಂತೆ ಇರು' ಮನಸ್ಥಿತಿಯು ಸಂಬಂಧಗಳಲ್ಲಿ ಹೋಲಿಕೆ ಮತ್ತು ಟೀಕೆಗಳಿಗೆ ಕಾರಣವಾಗುತ್ತದೆ. ನಿಮ್ಮಂತೆ ವರ್ತಿಸುವಂತೆ ಇತರ ವ್ಯಕ್ತಿಗೆ ಒತ್ತಡ ಹೇರುವುದು ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ನಿಮ್ಮ ಈ ಮನಸ್ಥಿತಿಯು ನಿಮ್ಮ ಸಂಗಾತಿಯ ಮೇಲೆ ಒತ್ತಡ ಹೇರಬಹುದು. ನಿಮ್ಮ ಈ ಮನಸ್ಥಿತಿಯಿಂದಾಗಿ ಇನ್ನೊಬ್ಬರ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ.



Click it and Unblock the Notifications