Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸಂಗಾತಿಯ ಈ ಅಪ್ಪುಗೆಯ ರೀತಿಯಿಂದಲೇ ಅವರ ಭಾವನೆ ತಿಳಿಯಬಹುದು
ಸತಿ-ಪತಿ ಆಗಾಗ ಪ್ರೀತಿಯ ಅಪ್ಪುಗೆ ನೀಡಬೇಕು, ಇದು ಇಬ್ಬರ ನಡುವೆ ಬಾಂಧವ್ಯ ಹೆಚ್ಚಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಅಪ್ಪುಗೆಯನ್ನು ಹಲವು ರೀತಿಯಲ್ಲಿ ನೀಡುತ್ತಾರೆ. ಎದುರು ಬದುರಾಗಿ ಅಪ್ಪಿಕೊಳ್ಳಿಕೊಳ್ಳುತ್ತಾರೆ, ಹಿಂದಿನಿಂದ ಅಪ್ಪಿಕೊಳ್ಳುತ್ತಾರೆ, ಹಾಗೇ ಸುಮ್ಮನೆ ಬಿಗಿದಪ್ಪಿಕೊಳ್ಳುತ್ತಾರೆ. ಆದರೆ ನಾವು ಅಪ್ಪಿಕೊಳ್ಳುವ ರೀತಿಯಿದೆಯೆಲ್ಲಾ ಅದಕ್ಕೆ ಒಂದೊಂದು ಅರ್ಥವಿದೆ ಗೊತ್ತಾ? ಹೌದು ಯಾವ ಅಪ್ಪುಗೆ ಏನನ್ನು ಸೂಚಿಸುತ್ತದೆ ಎಂದು ನೋಡೋಣ ಬನ್ನಿ:

ಸೈಡ್ ಅಪ್ಪುಗೆ:
ಇದು ತುಂಬಾ ಕಂಫರ್ಟ್ ಅನುಭವ ನೀಡುವುದು. ನೀವಿಬ್ಬರು ಒಬ್ಬರನ್ನೊಬ್ಬರು ಹೀಗೆ ಅಪ್ಪಿಕೊಂಡು ಪ್ರಕೃತಿಯ ಸುಂದರ ದೃಶ್ಯ ಸವಿಯುವಾಗ, ಟಿವಿ ನೋಡುವಾಗ ಅಥವಾ ಇಬ್ಬರು ಒಬ್ಬರಿಗೊಬ್ಬರು ಅಂಟಿಕೊಂಡು ಕೂತು ಭವಿಷ್ಯದ ಬಗ್ಗೆ ಮಾತಗಳನ್ನಾಡುವಾಗ ತುಂಬಾನೇ ಕಂಫರ್ಟ್ ಅನಿಸುವುದು.
ಬಿಗಿದಪ್ಪಿಕೊಳ್ಳುವುದು
ಸುಮ್ಮನೆ ಹೀಗೆ ಅಪ್ಪಿಕೊಳ್ಳುವುದಿಲ್ಲ. ಇಬ್ಬರು ಪರಸ್ಪರ ನೋಡಿ ತುಂಬಾ ದಿನವಾದಾಗ ಅಥವಾ ತುಂಬಾ ಖುಷಿಯಾದಾಗ ಹೀಗೆ ಅಪ್ಪಿಕೊಳ್ಳುತ್ತಾರೆ. ಈ ಅಪ್ಪುಗೆಯೇ ಸಾಕು ನಮ್ಮ ಭಾವನೆಗಳನ್ನು ಹೇಳಲು, ಇಲ್ಲಿ ಪದಗಳು ಬೇಕಾಗಿಲ್ಲ, ನಾವು ಏನು ಹೇಳದೆಯೇ ಎಷ್ಟು ಮಿಸ್ ಮಾಡುತ್ತಿದ್ದೇವೆ , ಎಷ್ಟು ಖುಷಿಯಾಗುತ್ತಿದ್ದೇವೆ ಎಂದು ಹೇಳುತ್ತದೆ.
ಸಂಗಾತಿಯನ್ನು ಮಡಿಲಿನಲ್ಲಿ ಕೂರಿಸಿ ಬಿಗಿದಪ್ಪಿಕೊಳ್ಳುವುದು
ಈ ಅಪ್ಪುಗೆ ದೈಹಿಕ ಆಸಕ್ತಿಯನ್ನು ವ್ಯಕ್ತಪಡಿಸುತ್ತದೆ, ಒಬ್ಬರನ್ನೊಬ್ಬರು ಅಪ್ಪಿಕೊಂಡು, ಕಣ್ಣಿಗೆ ಕಣ್ಣಿಟ್ಟು, ತುಟಿಯನ್ನು ಚುಂಬಿಸುತ್ತಾ ಮೈ ಮರೆಯುವ ಆ ಕ್ಷಣ ತುಂಬಾನೇ ಆತ್ಮೀಯ ಅನಿಸುವುದು. ಈ ಅಪ್ಪುಗೆ ದೈಹಿಕವಾಗಿ, ಮಾನಸಿಕವಾಗಿ ನಮ್ಮನ್ನು ಹತ್ತಿರವಾಗಿಸುತ್ತೆ.
ತೋಳಿನಲ್ಲಿ ತಲೆಹಿಟ್ಟು ಅಪ್ಪಿಕೊಳ್ಳುವುದು
ಒಬ್ಬರ ತೋಳಿಗೆ ಮತ್ತೊಬ್ಬರು ತಲೆಹಿಟ್ಟು ಅಪ್ಪಿಕೊಂಡಾಗ ಆ ವ್ಯಕ್ತಿ ನಿಮ್ಮ ಸಾನಿಧ್ಯದಲ್ಲಿ ತುಂಬಾನೇ ಸುರಕ್ಷಿತೆ ಅನುಭವಿಸುತ್ತಾರೆ. ಈ ರೀತಿಯ ಅಪ್ಪುಗೆಯಲ್ಲಿ ಅವರಿಗೆ ನೀವೆಷ್ಟು ಮುಖ್ಯ ಎಂಬುವುದನ್ನು ಸೂಚಿಸುತ್ತದೆ. ಈ ಬಗೆಯ ಅಪ್ಪುಗೆ ಮನಸ್ಸಿಗೆ ಸಮಧಾನ ನೀಡುವುದು. ಸಂಗಾತಿಯನ್ನು ಸಂತೈಸುವಾಗಲೂ ಈ ಬಗೆಯ ಅಪ್ಪುಗೆ ನೀಡಿದರೆ ಮನಸ್ಸು ತುಂಬಾನೇ ಹಗುರವಾಗುವುದು.
ಹಿಂಬದಿಯಿಂದ ಅಪ್ಪಿಕೊಳ್ಳುವುದು
ಇದು ತುಂಬಾ ರೊಮ್ಯಾಂಟಿಕ್ ಅನುಭವ ಉಂಟು ಮಾಡುವುದು. ನಿಮ್ಮ ಸಂಗಾತಿ ತುಂಬಾನೇ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದಾಗ ಈ ಬಗೆಯ ಅಪ್ಪುಗೆ ನೀಡುತ್ತಾರೆ, ಈ ಅಪ್ಪುಗೆ ದೈಹಿಕ ಆಸೆಯನ್ನು ಹೆಚ್ಚಿಸುತ್ತದೆ, ಕಾಮವನ್ನು ಉದ್ರೇಕಿಸುತ್ತದೆ.
ತೋಳಿನಲ್ಲಿ ಬಂದಿಯಾಗುವುದು
ಕೆಲಸದಿಂದ ಬಳಲಿ ಬೆಂಡಾದ ದೇಹಕ್ಕೆ ಸಂಗಾತಿಯ ಈ ಅಪ್ಪುಗೆ ಎಕ್ಟ್ರಾ ಬೂಸ್ಟ್ ನೀಡುವುದರಲ್ಲಿ ನೋ ಡೌಟ್. ಈ ಅಪ್ಪುಗೆಯಲ್ಲಿ ದೈಹಿಕ ಆಸೆ ಇರಬಹುದು, ಇಲ್ಲದಿರಬಹುದು ಆದರೆ ಇಬ್ಬರ ನಡುವೆ ಭಾವನಾತ್ಮಕ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸುತ್ತದೆ. ದಿನದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಮಲಗುವ ಮುನ್ನ ಸತಿ-ಪತಿ ಈ ರೀತಿ ತೋಳಿನಲ್ಲಿ ಬಂದಿಯಾಗಿ ಬಿಸಿ ಅಪ್ಪುಗೆ ಜೊತೆಗೆ ಹಿತವಾದ ಮುತ್ತು ನೀಡಿದರೆ ಇಬ್ಬರ ನಡುವೆ ಅನುರಾಗದ ಸೆಲೆ ಯಾವತ್ತೂ ಇರಲಿದೆ.



Click it and Unblock the Notifications

