Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ರಿಯಲ್ ಜಂಟಲ್ ಮ್ಯಾನ್ ಯಾವತ್ತೂ ಈ ಮೂರು ಪ್ರಶ್ನೆ ಹೆಣ್ಣಿನ ಬಳಿ ಕೇಳಲ್ಲ, ಇಂಥವರು ಸಿಕ್ಕರೆ ನಿಮ್ಮ ಬದುಕು ಬಂಗಾರವಾಗುತ್ತೆ
ರಿಯಲ್ ಮ್ಯಾನ್ ನನ್ನ ಬದುಕಿನಲ್ಲಿ ಬರಬೇಕೆಂಬುವುದು ಪ್ರತಿಯೊಂದು ಹೆಣ್ಣಿನ ಕನಸಾಗಿರುತ್ತದೆ. ಯಾವ ಹೆಣ್ಣಿಗೆ ಅಂಥ ಪುರುಷ ಸಿಗುತ್ತಾನೋ ಅವಳ ಬದುಕು ತುಂಬಾನೇ ಚೆನ್ನಾಗಿರುತ್ತದೆ, ಅಲ್ಲದೆ ಅವಳ ಬದುಕಿನಲ್ಲಿ ಅವಳ ಕನಸುಗಳಿಗೆ ಸದಾ ಜೊತೆಗೆ ನಿಲ್ಲುತ್ತಾನೆ. ಆದರೆ ಪುರುಷನಲ್ಲಿರುವ ಯಾವ ಗುಣಗಳು ಅವನನ್ನು ರಿಯಲ್ ಮ್ಯಾನ್ ಆಗಿ ಮಾಡುತ್ತದೆ ಎಂದು ನೋಡುವುದಾದರೆ ಅವನು ಎಂಥದ್ದೇ ಪರಿಸ್ಥಿತಿ ಇರಲಿ ಈ ಮೂರು ಪ್ರಶ್ನೆ ನಿಮ್ಮನ್ನು ಕೇಳುವುದೇ ಇಲ್ಲ:

ನೀನು ನಿನ್ನ ಚೌಕಟ್ಟು ಮೀರಬೇಡ
ನಿಮ್ಮನ್ನು ಒಂದು ಚೌಕಟ್ಟಿನಲ್ಲಿಡಲು ಆತ ಬಯಸುತ್ತಿದ್ದಾನೆ ಎಂದರೆ ಆತನ ತಾಳಕ್ಕೆ ಕುಣಿಯುವ ವ್ಯಕ್ತಿಯನ್ನು ಬಯಸುತ್ತಿದ್ದಾನೆ ಎಂದರ್ಥ. ಆದರೆ ಒಬ್ಬ ಒಳ್ಳೆಯ ಸಂಗಾತಿ ನಿಮ್ಮ ಭಾವನೆಗಳನ್ನು ಅರಿತುಕೊಳ್ಳುತ್ತಾನೆ, ನಿಮ್ಮ ಕನಸುಗಳನ್ನು ಅರ್ಥ ಮಾಡಿಕೊಂಡು ಆ ಕನಸು ನೀವು ನನಸು ಮಾಡಿಕೊಳ್ಳಲು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾನೆ. ಎಷ್ಟೇ ಕಷ್ಟಬರಲಿ ನಿಮಗಾಗಿ ಅವನು ನಿಲ್ಲುತ್ತಾನೆ. ಈ ಜಗತ್ತು ಏನೇ ಹೇಳಲಿ ನಿನಗಾಗಿ ನಾನಿದ್ದೇನೆ ಎಂಬ ಧೈರ್ಯ ತುಂಬುತ್ತಾನೆ.
ನಿಮ್ಮ ಯಶಸ್ಸು ಕೂಡ ತನ್ನದೇ ಯಶಸ್ಸು ಎಂದು ಭಾವಿಸಿ ಸಂಭ್ರಮ ಪಡುತ್ತಾನೆ. ನೀನು ಹೀಗೆ ಇರಬೇಕು, ಇದೆಲ್ಲಾ ನಿನಗೆ ಬೇಕಾಗಿಲ್ಲ ಎಂದು ಹೇಳುವ ಪುರುಷ ನಿಮಗಾಗಿ ಎಷ್ಟೇ ಆಸ್ತಿ ಮಾಡಿದರೂ ನೀವು ಪಂಜರದೊಳಗಿನ ಪಕ್ಷಿಯಾಗುತ್ತೀರಿ, ಅದೇ ನಿಮ್ಮನ್ನು ಅರ್ಥ ಮಾಡಿಕೊಳ್ಳು ಸಂಗಾತಿ ಸಿಕ್ಕರೆ ತುಂಬಾನೇ ಖುಷಿಯಾಗಿರುತ್ತೀರಿ.
ನಿಮ್ಮ ಪ್ರೀತಿಯನ್ನು ಪದೇ ಪದೇ ಸಾಬೀತು ಮಾಡುತ್ತಲೇಇರಬೇಕು
ಪ್ರೀತಿಯೆಂದರೆ ಅದು ನಂಬಿಕೆ, ನಿಮ್ಮ ಪ್ರೀತಿಯನ್ನು ಪದೇ ಪದೇ ಸಾಬೀತು ಮಾಡುವ ಪರಿಸ್ಥಿತಿ ಬಂದಿದೆ ಎಂದರೆ ನಿಮ್ಮ ಪ್ರೀತಿಯಲ್ಲಿ ನಂಬಿಕೆಯಿಲ್ಲ, ನಿಮ್ಮ ಸಂಗಾತಿ ನಿಮ್ಮ ಮೇಲೆ ಸಂಶಯವಿದೆ ಎಂದರ್ಥ. ಪ್ರತಿಬಾರಿ ನಿಮ್ಮ ಪ್ರೀತಿಯನ್ನು ಅವರಿಗೆ ಅರ್ಥ ಮಾಡಿಕೊಡಿಸುತ್ತಲೇ ಇರಬೇಕು, ನೀವು ಅವರನ್ನು ಎಷ್ಟೊಂದು ಪ್ರೀತಿಸುತ್ತೀರಿ ಎಂದು ಸಾಬೀತು ಮಾಡಲೇಬೇಕೆಂದಿದ್ದರೆ ಅಂಥ ಪುರುಷ ನಿಮಗೆ ನೋವು ಹೊರತು ಖುಷಿ ಕೊಡಲ್ಲ. ಅವನಲ್ಲಿ ಸಂಶಯ ಪಿಶಾಚಿ ಇರುತ್ತದೆ, ಆ ಸಂಶಯದ ಗುಣದಿಂದಲೇ ಆತ ಅವನ ಬದುಕನ್ನು ನರಕ ಮಾಡುವುದಲ್ಲದೆ ನಿಮ್ಮ ಬದುಕನ್ನು ಕೂಡ ನರಕ ಮಾಡುತ್ತಾನೆ.
ನೀನು ಬದಲಾಗಬೇಕು ಎಂದು ಕೇಳಿದರೆ
ನೀವು ಏನಾಗಿದ್ದೀರೋ ಅದನ್ನು ಸ್ವೀಕರಿಸುವ ಗುಣ ಅವನ್ನಲ್ಲಿರಬೇಕು, ನೀನು ಬದಲಾಗಬೇಕು ಎಂದು ಆತ ಕೇಳಿದರೆ ಆತನನ್ನು ರಿಯಲ್ ಮ್ಯಾನ್ ಎನ್ನಲು ಸಾಧ್ಯವೇ ಇಲ್ಲ. ನೀನು ಬದಲಾಗಬೇಕು ಎಂದು ನಿಮ್ಮ ಒಳಿತಿಗೆ ಹೇಳಬೇಕೇ ಹೊರತು ಅವನ್ನ ಸ್ವಾರ್ಥಕ್ಕಲ್ಲ. ನೀವು ಚಿಕ್ಕ ಪುಟ್ಟ ವಿಷಯಕ್ಕೆ ಭಯ ಪಡುವುದು, ಆತ್ಮವಿಶ್ವಾಸ ಕಳೆದುಕೊಳ್ಳುವುದು ಮಾಡುವಾಗ ನೀನು ಹೀಗಿರಬೇಡ ಬದಲಾಗು ಎನ್ನುವ ಪುರುಷ ಸಿಕ್ಕರೆ ನೀವು ಅದೃಷ್ಟವಂತರು, ಅದೇ ನೀವೇನೋ ಸಾಧನೆ ಮಾಡಬೇಕು ಎಂದು ಹೊರಟಾಗ ಅದೇನು ಬೇಕಾಗಿಲ್ಲ, ತೆಪ್ಪಗೆ ಮನೆ ನೋಡಿಕೊಂಡು ಇರು ಅಥವಾ ನೀನು ಹೀಗಿರುವುದು ನನಗೆ ಇಷ್ಟವಿಲ್ಲ ಬದಲಾಗಬೇಕು ಎಂದು ಹೇಳುತ್ತಿದ್ದಾನೆ ಎಂದರೆ ಅವನು ಸದಾ ನೋವನ್ನೇ ಕೊಡುವ ವ್ಯಕ್ತಿಯಾಗಿರುತ್ತಾನೆ.
ಹಾಗಾಗಿ ಇಂಥ ಪುರುಷ ಸಿಕ್ಕರೆ ಅದು ಟಾಕ್ಸಿಕ್ ಸಂಬಂಧವಾಗುವುದು, ಹಾಗಾಗಿ ರಿಯಲ್ ಮ್ಯಾನ್ ಎಂದು ಕರೆಸಿಕೊಳ್ಳಲು ಇಷ್ಟಪಡುವ ಪುರುಷ ಯಾವತ್ತಿಗೂ ಈ ಪ್ರಶ್ನೆಗಳನ್ನು ಕೇಳಲೇಬಾರದು. ಯಾರ ಬದುಕಿನಲ್ಲಿ ಇಂಥ ಪುರುಷ ಸಿಕ್ಕಿದ್ದಾರೋ ಅವರನ್ನು ಎಂದಿಗೂ ಯಾವುದೇ ಕಾರಣಕ್ಕೆ ಮಿಸ್ ಮಾಡಿಕೊಳ್ಳದಿರಿ.



Click it and Unblock the Notifications
