Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮದುವೆಯಾದ ನವಜೋಡಿಗೆ ಈ ವಿಚಾರ ತಿಳಿದಿರಲೇಬೇಕಂತೆ..!
ಮದುವೆ ಅನ್ನೋದು ಜನುಮ ಜನುಮಗಳ ಅನುಬಂಧ ಎನ್ನಲಾಗುತ್ತದೆ. ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂಬ ಮಾತಿದೆ. ಒಮ್ಮೆ ಮದುವೆಯಾದವರು ಕೊನೆ ಉಸಿರು ಇರುವರೆಗೂ ಒಟ್ಟಿಗೆ ಬದುಕಬೇಕು ಎಂಬ ಆಸೆಯಿಂದಿರುತ್ತಾರೆ, ಆದರೆ ಕೆಲವೊಮ್ಮೆ ಅರ್ಧದಲ್ಲಿಯೇ ಕೊನೆಯಾಗುವುದನ್ನು ಸಹ ನಾವು ನೋಡಿದ್ದೇವೆ.
ಮದುವೆಯು ಜೀವನದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ, ಇದು ಅನನ್ಯ ಅನುಭವಗಳು, ಸವಾಲುಗಳು ಮತ್ತು ಬೆಳವಣಿಗೆಯ ಅವಕಾಶಗಳಿಂದ ತುಂಬಿದೆ. ನವವಿವಾಹಿತರಲ್ಲಿ ಹವವು ರೀತಿಯ ಭಯ ನಾವು ನೋಡಬಹುದು. ಮದುವೆಯಾದ ಹೊಸತರಲ್ಲಿ ಸ್ವಲ್ಪ ದಿನಗಳ ಕಾಲ ಅವರಲ್ಲಿ ಹೊಂದಾಣಿಕೆಯ ಸಮಸ್ಯೆಯಿಂದ ಹಿಡಿದು ಯಾರಲ್ಲೂ ಹೇಳಿಕೊಳ್ಳಲಾಗದ ಸಮಸ್ಯೆ ಎದುರಾಗಬಹುದು.

ಆದರೆ ಮದುವೆಯಾದ ಹೊಸ ಜೋಡಿ ಈ ಅಂಶಗಳ ಕುರಿತು ಅಥವಾ ಈ ವಿಚಾರಗಳ ತಿಳಿದುಕೊಳ್ಳುವುದು ಉತ್ತಮವಂತೆ. ಹಾಗಾದರೆ ಮಾತ್ರ ಸಂಬಂಧ ಅನ್ನೋದು ಗಟ್ಟಿಯಾಗಿ ಕೊನೆಯವರೆಗೂ ನಿಲ್ಲುತ್ತದೆ. ಹಾಗಾದ್ರೆ ಯುವ ಜೋಡಿ ಯಾವ ವಿಚಾರವಾಗಿ ಹೆಚ್ಚು ಗಮನ ಕೊಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಸಂಗಾತಿ ಜೊತೆ ಮಾತುಕತೆ
ಮದುವೆಯಾದ ಜೋಡಿ ಮೊದಲ ಕೆಲವು ದಿನಗಳ ಕಾಲ ಒಬ್ಬರನೊಬ್ಬರ ಅರಿತುಕೊಳ್ಳುವುದು ಅವರ ಕುರಿತು ತಿಳಿದುಕೊಳ್ಳುವುದು ಉತ್ತಮ. ಇದಕ್ಕಾಗಿ ಇಬ್ಬರು ಸಹ ಪರಸ್ಪರ ತಮ್ಮ ಕುರಿತು ಆದಷ್ಟು ಹಂಚಿಕೊಳ್ಳಬೇಕಾಗುತ್ತದೆ. ಅದರಲ್ಲೂ ಮದಿವೆಯಾದ ಕೆಲವ ದಿನಗಳ ಒಳಗೆ ನೀವೆಷ್ಟು ಸಮಯ ಒಟ್ಟಿಗೆ ಕಳೆಯುತ್ತೀರಿ ಎನ್ನುವುದು ಬಹಳ ಮುಖ್ಯವಾಗುತ್ತದೆ. ಮ್ಮ ಆಲೋಚನೆಗಳು, ಭಾವನೆಗಳು ಮತ್ತು ಅಗತ್ಯಗಳನ್ನು ಬಹಿರಂಗವಾಗಿ ಮತ್ತು ಗೌರವದಿಂದ ವ್ಯಕ್ತಪಡಿಸುವುದನ್ನು ಒಳಗೊಂಡಿರುತ್ತದೆ.
ನಿಮ್ಮ ಗುರಿಗಳ ಬಗ್ಗೆ ಇಬ್ಬರಿಗೂ ಅರಿವಿರಲಿ
ಹೊಸದಾಗಿ ಮದುವೆಯಾಗಿದೆ ಎಂಬ ಕಾರಣಕ್ಕೆ ನಿಮ್ಮ ಮುಂದಿನ ಗುರಿಗಳ ಬಗ್ಗೆ ಆಕೆ ಅಥವಾ ಆತನೊಂದಿಗೆ ಹಂಚಿಕೊಳ್ಳಲು ಹಿಂಜರಿಯಬಾರದಂತೆ. ನಿಮ್ಮ ಮುಂದಿನ ಗುರಿ ಏನು? ಏನು ಮಾಡಬೇಕು ಅಂದುಕೊಂಡಿದ್ದೀರಿ? ಯಾವ ದಾರಿಯತ್ತ ಸಾಗಬೇಕು. ಈ ಗುರಿ ತಲುಪಲು ಯಾರ ಪಾಲು ಎಷ್ಟು ಹೀಗೆ ಎಲ್ಲಾ ವಿಚಾರಗಳ ಚರ್ಚೆ ಮಾಡಬೇಕಂತೆ.
ಸಂಬಂಧಿಕರು-ಕುಟುಂಬ, ಸ್ನೇಹಿತರ ಮಾಹಿತಿ
ಹೊಸದಾಗಿ ಮದುವೆಯಾದಾಗ ನಿಮ್ಮ ಕುಟುಂಬ, ಆವರ ಕುಟುಂಬ ಸಂಬಂಧಿಕರು ಅವರ ನಡುವಿನ ಮಾತುಕೆಗೆ ಅವರ ಜೊತೆಗೆ ಅನ್ಯೋನ್ಯತೆ ಹೇಗಿದೆ, ಅವರ ಜೀವನ ಹೇಗಿದೆ ಎಂಬ ಕುರಿತು ಎಲ್ಲಾ ಮಾಹಿತಿ ಹಂಚಿಕೊಳ್ಳುವುದು ಉತ್ತಮವಂತೆ. ಅಲ್ಲದೆ ಯಾವ ಕುಟುಂಬದಲ್ಲಿ ಯಾವ ಹಿರಿಯರಿದ್ದಾರೆ, ನಿಮ್ಮ ಕುಟುಂಬದ ಬೆಳವಣಿಗೆಯಲ್ಲಿ ಯಾರ ಪಾತ್ರ ಮುಖ್ಯವಾಗಿದೆ ಎಂಬ ಕುರಿತಂತೆ ಮುಕ್ತ ಮಾತುಕತೆ ನಡೆಸಬೇಕಂತೆ.
ಆಕೆ ಅಥವಾ ಆತನ ಮದುವೆಯಾದ ಪ್ರಸಂಗ
ಹೊಸದಾಗಿ ಮದುವೆಯಾದಾಗ ಮಾತನಾಡಲು ಏನು ಇರುವುದಿಲ್ಲ ಎಂಬುದು ಎಲ್ಲರ ದೂರಾಗಿರುತ್ತದೆ. ಆದ್ರೆ ನೀವು ಆತ ಅಥವಾ ಆಕೆಯನ್ನು ಮದುವೆಯಾಗಲು ನಿಶ್ಚಯಿಸಿದ್ದು ಏಕೆ ಎಂಬ ಕುರಿತು ಸಹ ಹಂಚಿಕೊಳ್ಳಬೇಕಂತೆ. ಇದೆಲ್ಲಾ ಮದುವೆಯಾದ ಆರಂಭದ ದಿನದಲ್ಲೇ ಮಾತುಕತೆಗೆ ಸೂಕ್ತವಾದ ವಿಚಾರಗಳಂತೆ.
ಆಕೆ/ಆತನೊಂದಿಗೆ ಸುತ್ತಾಟ
ಮದುವೆಯಾದ ಆರಂಭದಲ್ಲಿ ಎಲ್ಲಾ ಜೋಡಿಗಳು ಇದನ್ನು ಮಾಡುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಂತೆ. ದೇವಸ್ಥಾನ ಸಣ್ಣಪುಟ್ಟ ಪ್ರವಾಸಿ ತಾಣಕ್ಕೆ ಹೋಗುವುದು ಉತ್ತಮವಂತೆ, ಈ ವೇಳೆ ಆಕೆ ಅಥವಾ ಆತನ ಇಷ್ಟಗಳೇನು? ಒಬ್ಬರನೊಬ್ಬರು ಅರಿತುಕೊಳ್ಳಲು ಸಹಾಯವಾಗುತ್ತದೆ. ಆದರೆ ಕೆಲವು ಜೋಡಿ ಮದುವೆಯಾದ ಹೊಸತು ಎಂದು ಓಡಾಡುವುಲ್ಲ. ಜೊತೆಗೆ ಕೆಲಸದ ಒತ್ತಡದಲ್ಲಿ ಇದೆಲ್ಲವನ್ನೂ ಬಿಟ್ಟು ನಗರಕ್ಕೆ ಹೋಗುವುದು, ಆಫಿಸ್ ಕೆಲಸಕ್ಕೆ ಹೋಗುವುದು, ಇಲ್ಲದೆ ಮನೆಯಲ್ಲೇ ಇರುವುದು ನಡೆಯುತ್ತದೆ. ಇದು ಒಂದಲ್ಲಾ ಒಂದು ದಿನ ಇಬ್ಬರ ನಡುವಿನ ಬಿರುಕಿಗೂ ಕಾರಣವಾಗಬಹುದಂತೆ.



Click it and Unblock the Notifications