Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
The Great Indian Wedding Race:ಈ ಸ್ಪರ್ಧೆಯಲ್ಲಿ ಗೆದ್ದರೆ ಆಯೋಜಕರೇ ಮಾಡಿಕೊಡುತ್ತಾರೆ ಡೆಸ್ಟಿನೇಷನ್ ವೆಡ್ಡಿಂಗ್
ಡೆಸ್ಟಿನೇಷನ್ ವೆಡ್ಡಿಂಗ್ ಎಂಬುವುದು ಬಹುತೇಕರ ಕನಸು, ಅಂಥ ವೆಡ್ಡಿಂಗ್ ಮಾಡುವ ಕನಸು ಇದ್ದರೂ ಅದಕ್ಕಾಗುವ ಖರ್ಚು ಊಹಿಸಿ ಕೆಲವರು ಹಿಂಜರಿಯುತ್ತಾರೆ, ಆದರೆ ಡೆಸ್ಟಿನೇಷನ್ ವೆಡ್ಡಿಂಗ್ ಅಂತ ಒಂದು ಸ್ಪರ್ಧೆಯ ಮೂಲಕ ನಮ್ಮ ಕನಸು ನೆರವೇರುವಂತಿದ್ದರೆ ಎಷ್ಟು ಚೆನ್ನಾಗಿರುತ್ತೆ ಎನ್ನುವವರಿಗೆ ಅಂಥ ಒಂದು ಸ್ಪರ್ಧೆ ಇದೆ ಗೊತ್ತಾ? ಹೌದು ಡೆಸ್ಟಿನೇಷನ್ ವೆಡ್ಡಿಂಗ್‌ನ ಕನಸು ಕಾಣುವ ಜೋಡಿಗಳಿಗೆ, 'ದಿ ಗ್ರೇಟ್ ಇಂಡಿಯನ್ ವೆಡ್ಡಿಂಗ್ ರೇಸ್' ಅಂತ ಎಂಬ ಸ್ಪರ್ಧೆ ಇದೆ ಗೊತ್ತಾ.

ಯಾವ ಜೋಡಿ ಇದರಲ್ಲಿ ಭಾಗವಹಿಸಿ ಗೆಲ್ಲುತ್ತಾರೋ ಅವರಿಗೆ ಡೆಸ್ಟಿನೇಷನ್ ವೆಡ್ಡಿಂಗ್ ಭಾಗ್ಯ ದೊರೆಯಲಿದೆ. 'ದಿ ಗ್ರೇಟ್ ಇಂಡಿಯನ್ ವೆಡ್ಡಿಂಗ್ ರೇಸ್' ಆಯೋಜಕರೇ ವಿಜೇತ ಜೋಡಿಯ ಡೆಸ್ಟಿನೇಷನ್ ವೆಡ್ಡಿಂಗ್‌ನ ಸಂಪೂರ್ಣ ಜವಾಬ್ದಾರಿವಹಿಸಲಿದ್ದಾರೆ. ಈ ಸ್ಪರ್ಧೆಯ ರಾಯಭಾರಿಗಳಾಗಿ ದಕ್ಷಿಣ ಭಾರತ ಚಿತ್ರರಂಗದ ನಟಿಯರಾದ ಅದ್ವಿತಿ ಶೆಟ್ಟಿ ಮತ್ತು ಕಾವ್ಯಾ ಶೆಟ್ಟಿ ಭಾಗವಹಿಸಿದ್ದಾರೆ.
ಗ್ರೇಟ್ ಇಂಡಿಯನ್ ವೆಡ್ಡಿಂಗ್ ರೇಸ್ ಒಂದು ಭಿನ್ನವಾದ ಸ್ಪರ್ಧೆಯಾಗಿದೆ. ಇದರಲ್ಲಿ ಡೆಸ್ಟಿನೇಶನ್ ಮ್ಯಾರೇಜ್‌ನ ಕನಸು ಕಾಣುವ ದಂಪತಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಅತ್ಯುತ್ತಮವಾದ ಅವಕಾಶ. ಇದರಲ್ಲಿ ಭಾಗವಹಿಸುವ ಸ್ಪರ್ಧೆಗಳಿಗೆ 3 ಹಂತದಲ್ಲಿ ಸ್ಪರ್ಧೆ ಮಾಡಲಾಗುವುದು. ಈ ಸ್ಪರ್ಧೆಯ ಮೊದಲ ಎರಡು ಈವೆಂಟ್‌ಗಳು ಆನ್‌ಲೈನ್ನಲ್ಲಿ ನಡೆಯುತ್ತದೆ. ಯಾರಿಗೆ ಹೆಚ್ಚು ಲೈಕ್ಸ್ ಬರುವುದೋ ಆ ಜೋಡಿ ಕೊನೆಯ ಹಂತಕ್ಕೆ ಹೋಗುವಲ್ಲಿ ಅರ್ಹರಾಗುತ್ತಾರೆ. ಕೊನೆಯ ಸುತ್ತಿಗೆ 15 ಜೋಡಿಯನ್ನು ಆಯ್ಕೆ ಮಾಡುತ್ತಾರೆ.
ಈ ಸ್ಪರ್ಧೆಯಲ್ಲಿ ಭಾಗವಹಿಸುವ ಜೋಡಿಗಳು ತಮ್ಮ ಪ್ರೀತಿ ಬಗ್ಗೆ ಚಿಕ್ಕ ವೀಡಿಯೋ ಮಾಡಿ ದಿ ಗ್ರೇಟ್ ಇಂಡಿಯನ್ ವೆಡ್ಡಿಂಗ್ ರೇಸ್' ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಾರೆ, ಯಾವ ಜೋಡಿಗೆ ಹೆಚ್ಚು ಲೈಕ್ಸ್ ಬರುವುದೋ ಆ ಜೋಡಿ ಮುಂದಿನ ಹಂತಕ್ಕೆ ಆಯ್ಕೆ ಆಗುತ್ತಾರೆ
ಈ ಸ್ಪರ್ಧೆಯಲ್ಲಿ ಸ್ಪರ್ಧಿಗಳಿಗೆ ಅನೇಕ ಸ್ಪರ್ಧೆ ನೀಡಿ ಅವರಿಬ್ಬರ ನಡುವೆ ಪ್ರೀತಿ ಎಷ್ಟಿದೆ, ಹೊಂದಾಣಿಕೆ ಹೇಗಿರಲಿದೆ ಎಂದೆಲ್ಲಾ ಪರೀಕ್ಷಿಸಲಾಗುವುದು. ಯಾರು ಈ ಸ್ಪರ್ಧೆಯಲ್ಲಿ ಗೆಲ್ಲುತ್ತಾರೋ ಅವರ ಡೆಸ್ಟಿನೇಷನ್ ಮದುವೆ ಖರ್ಚನ್ನು ಸ್ಪರ್ಧೆಯ ಆಯೋಜಕರು ಭರಿಸಲಿದ್ದಾರೆ.
ಇಲ್ಲಿ ಭಾಗವಹಿಸುವ ಜೋಡಿಗಳ ಕತೆ ತುಂಬಾ ಇಂಟೆರೆಸ್ಟಿಂಗ್ ಆಗಿರುವುದರಿಂದ ಈ ಕಾರ್ಯಕ್ರಮ ತುಂಬಾನೇ ಗಮನ ಸೆಳೆಯಲಿದೆ. ಅಲ್ಲದೆ ಈ ಸ್ಪರ್ಧೆಯಲ್ಲಿ ಮಾಡುವ ಫೋಟೋಶೂಟ್ ಅಲ್ಲಿಯ ಡೆಕೋರೇಷನ್, ಸ್ಟೇಜ್ ಸೆಟ್ಟಿಂಗ್ ಎಲ್ಲವೂ ತುಂಬಾನೇ ಗಮನ ಸೆಳೆಯಲಿದೆ.



Click it and Unblock the Notifications
