Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
7 ತಿಂಗಳ ಬಳಿಕ ಕೈಕೊಟ್ಟ ಹುಡುಗಿ: ₹60 ಸಾವಿರ ಖರ್ಚಿನ ಬಿಲ್ ಕಳುಹಿಸಿದ ಹುಡುಗ.!
ಪ್ರೀತಿ ಕುರುಡು ಎನ್ನಲಾಗುತ್ತೆ. ಪ್ರೀತಿಯಲ್ಲಿ ಬಿದ್ದರೆ ಪ್ರಪಂಚವೇ ಕಾಣಿಸಲ್ಲ ಅಂತಾರೆ. ಜೊತೆಗೆ ಹುಡುಗಿಗಾಗಿ ಹುಡುಗರು ಎಷ್ಟು ಬೇಕಾದರು ಖರ್ಚು ಮಾಡುತ್ತಾರೆ. ಹುಡುಗಿ ಕೇಳಿದ ವಸ್ತುವನ್ನೆಲ್ಲಾ ಕೊಡಿಸಲು ಯಾವ ಕೆಲಸವನ್ನಾದ್ರು ಮಾಡುತ್ತಾರೆ. ಹೀಗೆ ಹಣ ಮಾಡಲು ಅಡ್ಡದಾರಿ ಹಿಡಿದ ಉದಾಹರಣೆಗಳು ಸಹ ಇದೆ.
ಹುಡುಗಿಗೆ ಐಷಾರಾಮಿ ಗಿಫ್ಟ್ ಕೊಡಿಸುವುದು, ಸುತ್ತಾಟ, ಸಿನಿಮಾ, ಡಿನ್ನರ್, ಕ್ಲಬ್, ಪಾರ್ಟಿ ಅಂತೆಲ್ಲಾ ಲಕ್ಷ ಲಕ್ಷ ಖರ್ಚು ಮಾಡುವವರು ಇದ್ದಾರೆ. ಆದ್ರೆ ಇಲ್ಲೊಬ್ಬ ಪ್ರೇಮಿ ಈ ರೀತಿ ಖರ್ಚು ಮಾಡಿದ್ದ ಹಣವನ್ನೆಲ್ಲಾ ಲೆಕ್ಕ ಇಟ್ಟು ಈಗ ಹುಡುಗಿ ಕೈ ಕೊಟ್ಟ ಬಳಿಕ ವಾಪಾಸು ಕೇಳಿದ್ದಾನೆ. ಅದೂ ಸಹ ಕಂಪನಿ ಲೆಕ್ಕದಂತೆ 1 ರೂಪಾಯಿಯನ್ನೂ ಬಿಡದೆ ವಸೂಲಿಗೆ ಇಳಿದಿದ್ದಾನೆ.

ಆತ ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದು, ತಾನು ಪ್ರೀತಿಸುತ್ತಿದ್ದ ಹುಡುಗಿ ಕೈ ಕೊಟ್ಟಾಗ ಆಕೆಗೆ ಖರ್ಚು ಮಾಡಿದ ಹಣದ ಲೀಸ್ಟ್ ಮಾಡಿದ್ದಾನೆ. ಈ ಪೋಸ್ಟ್ ಅನ್ನು ಒಬ್ಬರು ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆತ ಒಟ್ಟು 60,635.48 ರೂಪಾಯಿ ಖರ್ಚು ಮಾಡಿರುವ ಬಿಲ್ ರೆಡಿ ಮಾಡಿ ಎಲ್ಲವನ್ನು ವಾಪಾಸು ಕೇಳಿದ್ದಾನೆ.
CA ನಿಖರವಾದ ಲೆಕ್ಕ ಹಾಗೂ ದಾಖಲಾತಿಗಳ ಇಡಲು ಹೆಸರಾದವರು, ಇಲ್ಲಿಯೂ ಸಹ ಅದೇ ಆಗಿದೆ. ಆತ ಟೀ ಕುಡಿಸಿದ 10 ರೂಪಾಯಿ ಬಿಲ್ ಅನ್ನು ಸಹ ಆಕೆಯ ಹೆಸರಲ್ಲಿ ಕಳುಹಿಸಿದ್ದಾನೆ. ಪ್ರತೀ ತಿಂಗಳು ಕಾಫಿ , ಡಿನ್ನರ್ ಡೇಟ್, ನೈಟ್ ಪಾರ್ಟಿ, ವ್ಯಾಲೆಂಟೈನ್ ಡೇ ಗಿಫ್ಟ್ ವರೆಗೆ ಖರ್ಚಾದ ದುಡ್ಡನ್ನು ಮರು ಪಾವತಿಸುವಂತೆ ಹೇಳಿದ್ದಾನೆ.
ಆತ ಕಳೆದ 7 ತಿಂಗಳಿನಿಂದ ಹುಡುಗಿ ಜೊತೆ ಸುತ್ತಾಡಿದ್ದಾನಂತೆ ಒಟ್ಟು 1 ಲಕ್ಷದ 2 ಸಾವಿರ ರೂಪಾಯಿ ಈ 7 ತಿಂಗಳಲ್ಲಿ ಖರ್ಚು ಮಾಡಿದ್ದಾನೆ ಆಧರೆ ಈಗ ಅದರ ಅರ್ಧದಷ್ಟು ಹಣ ನೀಡುವಂತೆ ಕೇಳಿದ್ದಾನೆ. ಅದರಲ್ಲೂ ಶೇ.18ರಷ್ಟು ಜಿಎಸ್‌ಟಿ ಸೇರಿಸಿ ಎಕ್ಸ್ ಶೀಟ್‌ನ ಬಿಲ್ ಕಳುಹಿಸಿದ್ದಾನೆ.
ಅದ್ರೆ ಆತನ ಈ ಬಿಲ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜೊತೆಗೆ ಹಲವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಆತ ಮಾಡಿದ ಈ ಕಾರ್ಯಕ್ಕೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಯಾರು ಬ್ರೇಕ್ ಅಪ್ ಆಗುತ್ತಾರೋ ಅವರು ಬರಿಸಲೇಬೇಕು ಎಂದು ಹುಡುಗನ ಬೆಂಬಲಕ್ಕೆ ನಿಂತಿದ್ದಾರೆ.
ಜೊತೆಗೆ ಈ ಪೋಸ್ಟ್‌ಗೆ ಒಂದಿಷ್ಟು ತಮಾಷೆಯ ಕಮೆಂಟ್‌ಗಳು ಸಹ ಬಂದಿವೆ. ಈ ರೀತಿಯ ಶೀಟ್ ನಮಗೂ ಒಂದು ಮಾಡಿಕೊಡುವಂತೆ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಶೀಟ್ ನಾನು ಸೇವ್ ಮಾಡಿಟ್ಟುಕೊಳ್ಳುತ್ತೇನೆ ಮುಂದೆ ಬಳಕೆಗೆ ಬೇಕಾಗಬಹುದು ಎಂದಿದ್ದಾರೆ.
ಈ ರೀತಿ ಬಿಲ್ ಕಳುಹಿಸುವ ಮುನ್ನ ಆಕೆಯ ಸ್ವಭಾವ ಎಂತದ್ದು ಎಂಬುದನ್ನು ಆಲೋಚಿಸಿದ್ದರೆ ಇಷ್ಟು ಖರ್ಚು ಮಾಡುವುದಾದರು ತಪ್ಪುತ್ತಿತ್ತು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಇಷ್ಟು ಖರ್ಚು ನಿಮ್ಮ ತಂದೆ ತಾಯಿಗೆ ನೀವು ಮಾಡಿದ್ದರೆ ಅವರೇ ಸೂಕ್ತ ಹುಡುಗಿಯನ್ನು ಹುಡುಕುತ್ತಿದ್ದರು ಎಂದು ಮತ್ತೊಬ್ಬ ಹೇಳಿದ್ದಾರೆ.
ಮತ್ತೆ ಕೆಲವರು ಇದು ನಿಮ್ಮ ತಪ್ಪು ಆಕೆ ಏಕೆ ಹಣ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಇಬ್ಬರು ಒಟ್ಟಿಗೆ ತೆರಳಿದ್ದಾಗ ಇಬ್ಬರು ಸೇರಿ ಖರ್ಚು ಮಾಡಬೇಕು. ಬೇರೆಲ್ಲಾ ಕಡೆ ಸಮಾನತೆ ಹುಡುಕುವ ನಾವು ಇಲ್ಲಿ ಏಕೆ ನೋಡುವುದಿಲ್ಲ. ನೀವು ಹೇಳಿದ್ದರೆ ಆಕೆಯು ಹಣ ನೀಡುತ್ತಿದ್ದಳು. ಇದು ನಿಮ್ಮಿಂದಾದ ತಪ್ಪು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.



Click it and Unblock the Notifications
