Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ನಿಮ್ಮ ಸ್ನೇಹಿತೆಯ ನಡವಳಿಕೆ ಹೀಗಿದ್ದರೆ ಖಂಡಿತ ಅವರಿಗೆ ನಿಮ್ಮ ಮೇಲೆ ಪ್ರೀತಿಯಾಗಿದೆ ಎಂದರ್ಥ!
ನಮೆಗೆಲ್ಲರಿಗೂ ಒಬ್ರು ಬೆಸ್ಟ್ ಫ್ರೆಂಡ್ ಖಂಡಿತ ಇರ್ತಾರೆ. ಅದ್ರಲ್ಲಿ ಅನ್ಯ ಲಿಂಗದ ಬೆಸ್ಟ್ ಫ್ರೆಂಡ್ ಜೊತೆಗೆ ನಮಗೆ ಒಂದು ರೀತಿ ಉತ್ತಮ ಬಾಂಧವ್ಯ ಇರುತ್ತದೆ. ಅವರು ನಮ್ಮ ಮೇಲೆ ಮಾಡುವ ಕಾಳಜಿ, ತೋರಿಸುವ ಪ್ರೀತಿ ಎಲ್ಲವೂ ನಮಗೆ ಇಷ್ಟ ಆಗುತ್ತದೆ. ಕೆಲವೊಂದು ಸಲ ಇವರು ಯಾಕೆ ನಮ್ಮ ಮೇಲೆ ಇಷ್ಟು ಕಾಳಜಿಯನ್ನು ತೋರಿಸುತ್ತಿದ್ದಾರೆ ಅನ್ನೋ ಭಾವನೆ ಮೂಡೋದಕ್ಕೆ ಶುರುವಾಗುತ್ತದೆ. ಒಂದು ವೇಳೆ ನಿಮಗೆ ಈ ರೀತಿ ಏನಾದ್ರು ಅನ್ನಿಸಿದ್ರೆ ಖಂಡಿತ ನಿಮ್ಮ ಸ್ನೇಹಿತೆಗೆ ನಿಮ್ಮ ಮೇಲೆ ಪ್ರೀತಿ ಆಗಿದೆ ಎಂದರ್ಥ. ಅಷ್ಟಕ್ಕು ನಿಮ್ಮ ಬೆಸ್ಟ್ ಫ್ರೆಂಡ್ ಗೆ ನಿಮ್ಮ ಮೇಲೆ ಪ್ರೀತಿ ಆಗಿದೆ ಅಂತ ಗೊತ್ತಾಗೋದು ಹೇಗೆ? ಇಲ್ಲಿದೆ ಟಿಪ್ಸ್
1. ಅವರಿಗೆ ನಿಮ್ಮ ಜೀವನದ ಮೇಲೆ ತುಂಬಾ ಆಸಕ್ತಿ ಇರುತ್ತದೆ
ನಿಮ್ಮ ಸ್ನೇಹಿತೆಗೆ ನಿಮ್ಮ ಮೇಲೆ ಪ್ರೀತಿ ಹುಟ್ಟಿದ್ರೆ ಅವರು ನಿಮ್ಮ ಮೇಲೆ ಹೆಚ್ಚಿನ ಆಸಕ್ತಿಯನ್ನು ತೋರಿಸೋದಕ್ಕೆ ಶುರು ಮಾಡುತ್ತಾರೆ. ನಿಮ್ಮ ಕನಸು ಹಾಗೂ ಆಸೆಗಳು ಅವರಿಗೆ ತುಂಬಾನೇ ಮುಖ್ಯವಾಗುತ್ತದೆ. ನಿಮ್ಮ ಇಷ್ಟದ ಆಹಾರ, ಸಿನಿಮಾ, ಹವ್ಯಾಸಗಳು ಹಾಗೂ ಬಾಲ್ಯದ ಕಥೆಗಳನ್ನು ಕೇಳಲು ಅವರು ತುಂಬಾನೇ ಉತ್ಸುಕರಾಗಿರುತ್ತಾರೆ. ಈ ಬಗ್ಗೆ ಅವರು ಹೆಚ್ಚಿನ ಆಸಕ್ತಿ ತೋರುತ್ತಿದ್ದರೆ ಖಂಡಿತ ಅವರಿಗೆ ಪ್ರೀತಿ ಆಗಿದೆ ಎಂದರ್ಥ.

2. ನಿಮ್ಮ ಜೊತೆಗೆ ಆತ್ಮೀಯವಾಗೋದಕ್ಕೆ ಇಷ್ಟಪಡುತ್ತಾರೆ
ನಿಮ್ಮ ಸ್ನೇಹಿತೆಗೆ ನಿಮ್ಮ ಮೇಲೆ ಪ್ರೀತಿ ಆಗಿದ್ದರೆ ಅವರು ನಿಮ್ಮ ಜೊತೆಗೆ ತುಂಬಾನೇ ಆತ್ಮೀಯವಾಗೋದಕ್ಕೆ ಆಸೆ ಪಡುತ್ತಾರೆ. ಅವಕಾಶ ಸಿಕ್ಕಾಗಲೆಲ್ಲಾ ನಿಮ್ಮ ಕೈ, ಭುಜವನ್ನು ಮುಟ್ಟುತ್ತಾರೆ. ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುತ್ತಾರೆ. ಅವರಿಗೆ ಎಷ್ಟೇ ಕೆಲಸ ಇದ್ದರೂ ಕೂಡ ಅದನ್ನೆಲ್ಲಾ ಬಿಟ್ಟು ಮೊದಲ ಪ್ರಾಮುಖ್ಯತೆ ನಿಮಗೆ ನೀಡುತ್ತಾರೆ. ನಿಮ್ಮ ಜೊತೆಗೆ ಆತ್ಮೀಯ ಸಮಯ ಕಳೆಯೋದು ಅವರಿಗೆ ತುಂಬಾನೇ ಇಷ್ಟವಾಗುತ್ತದೆ.
3. ನೀವು ಅವರ ಜೊತೆಗಿದ್ದಾಗ ಖುಷಿಯಾಗಿರುತ್ತಾರೆ
ನಿಮ್ಮ ಗೆಳತಿಗೆ ಯಾವಾಗಲೂ ನಿಮ್ಮ ಜೊತೆ ಇರೋದಕ್ಕೆ ಇಷ್ಟ. ನೀವು ಅವರ ಜೊತೆಗಿದ್ದಾಗ ಅವರ ಮುಖದಲ್ಲಿ ಒಂದು ರೀತಿ ನಗು ಇರುತ್ತದೆ. ನಿಮ್ಮನ್ನು ಅವರು ತುಂಬಾನೇ ಸ್ಪೆಷಲ್ ಆಗಿ ಟ್ರೀಟ್ ಮಾಡ್ತಾರೆ. ಅವರ ಮುಖದಲ್ಲಿ ಕಾಣಿಸೋ ಆ ನಾಚಿಕೆಯ ನಗುವೇ ಅವರು ನಿಮ್ಮ ಎಷ್ಟು ಪ್ರೀತಿಸ್ತಾರೆ ಅನ್ನೋದನ್ನು ಗೊತ್ತು ಮಾಡಿಸುತ್ತದೆ.
4. ನೀವು ಬೇರೆ ಮಹಿಳೆಯ ಜೊತೆಗಿರೋದು ಅವರಿಗೆ ಇಷ್ಟ ಆಗೋದಿಲ್ಲ
ನಿಮ್ಮ ಸ್ನೇಹಿತೆ ನಿಮ್ಮ ಬಗ್ಗೆ ತುಂಬಾನೇ ಪೊಸೆಸಿವ್ ಆಗಿರುತ್ತಾರೆ. ನೀವು ಬೇರೆ ಮಹಿಳೆಯ ಜೊತೆಗೆ ಮಾತನಾಡೋದು ಕೂಡ ಅವರಿಗೆ ಒಂದು ರೀತಿ ಇರಿಸು ಮುರಿಸು ಅನ್ನಿಸುತ್ತದೆ. ನೀವು ಅವರಿಕ್ಕಿಂತ ಹೆಚ್ಚಾಗಿ ಬೇರೆಯವರ ಜೊತೆಗೆ ಕ್ಲೋಸ್ ಆಗೋದು ಖಂಡಿತ ಅವರಿಗೆ ಇಷ್ಟ ಆಗೋದಿಲ್ಲ. ಅಷ್ಟೇ ಅಲ್ಲ, ನೀವೇನಾದರೂ ಬೇರೆ ಮಹಿಳೆಯ ಜೊತೆಗೆ ಮಾತನಾಡುತ್ತಿದ್ದರೂ ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಾರೆ.
5. ಸ್ನೇಹಿತೆಯ ಸೋಶಿಯಲ್ ಮಿಡಿಯಾ ಗಮನಿಸಿ
ನಿಮ್ಮ ಸ್ನೇಹಿತೆಗೆ ನಿಮ್ಮ ಮೇಲೆ ಪ್ರೀತಿಯಾಗಿದೆ ಅಂತ ತಿಳಿಸುವ ಮತ್ತೊಂದು ಲಕ್ಷಣವೆಂದರೆ ಈ ಹಿಂದೆ ಅವರು ನಿಮ್ಮ ಸೋಶಿಯಲ್ ಮಿಡಿಯಾ ಪೋಸ್ಟ್ ಗಳಿಗೆ ಕಾಮೆಂಟ್ ಮಾತ್ರ ನೀಡುತ್ತಿದ್ದರು. ಆದ್ರೀಗ ನಿಮ್ಮ ಹಳೆಯ ಪೋಸ್ಟ್ ಗಳನ್ನು ಲೈಕ್ ಮಾಡ್ತಾರೆ. ಅಷ್ಟೇ ಅಲ್ಲ, ಕೆಲವೊಂದು ಪ್ರೀತಿಯ, ರೋಮ್ಯಾಂಟಿಕ್ ಮೀಮ್ಸ್ ಗಳನ್ನು ನಿಮಗೆ ಟ್ಯಾಗ್ ಮಾಡ್ತಾರೆ.
6. ಹೆಚ್ಚಿನ ಸಮಯ ನಿಮಗಾಗಿ ಮೀಸಲಿಡುತ್ತಾರೆ
ನೀವಿಬ್ಬರೂ ಸ್ನೇಹಿತರಾಗಿದ್ದಾಗ ಒಬ್ಬರಿಗೊಬ್ಬರು ಎಷ್ಟು ಸಮಯ ನೀಡುತ್ತಿದ್ದಿರಿ ಎಂದು ಖಂಡಿತ ನಿಮಗೆ ಗೊತ್ತಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಿಮ್ಮ ಸ್ನೇಹಿತೆ ನಿಮಗಾಗಿ ಹೆಚ್ಚಿನ ಸಮಯ ಮೀಸಲಿಡುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ನಿಮ್ಮನ್ನು ಭೇಟಿಯಾಗುತ್ತಾರೆ. ಹೆಚ್ಚಿನ ಸಮಯ ನಿಮಗಾಗಿ ಮೀಸಲಿಡುತ್ತಾರೆ. ನಿಮಗಾಗಿ ಸಪ್ರೈಸ್ ನೀಡುತ್ತಾರೆ, ಏನಾದರೂ ಉಡುಗೊರೆಗಳನ್ನು ನೀಡುತ್ತಾರೆ.
7. ನಿಮ್ಮ ಕುಟುಂಬದ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಾರೆ
ಇತ್ತೀಚಿನ ದಿನಗಳಲ್ಲಿ ನಿಮ್ಮ ಸ್ನೇಹಿತೆ ನಿಮ್ಮ ಕುಟುಂಬದ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿರಬಹುದು. ಆಗಾಗ್ಗೆ ನಿಮ್ಮ ಮನೆಗೆ ಬಂದು ನಿಮ್ಮ ಕುಟುಂಬಸ್ಥರನ್ನು ಭೇಟಿ ಮಾಡುತ್ತಾರೆ. ನಿಮ್ಮ ಅಮ್ಮನ ಜೊತೆಗೆ, ನಿಮ್ಮ ಒಡಹುಟ್ಟಿದವರ ಜೊತೆಗೆ ಹೆಚ್ಚು ಆತ್ಮೀಯರಾಗುತ್ತಾರೆ. ಅವರ ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವಗಳನ್ನು ನೆನಪಿನಲ್ಲಿ ಇಡುತ್ತಾರೆ. ಹೀಗೆ ನಿಮ್ಮ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಸೃಷ್ಟಿಸಿಕೊಳ್ಳುತ್ತಾರೆ.
ಬೆಸ್ಟ್ ಫ್ರೆಂಡ್ ಜೊತೆಗೆ ಪ್ರೀತಿ ಆಗೋದ್ರಲ್ಲಿ ತಪ್ಪಿಲ್ಲ. ಈ ರೀತಿಯ ಕೆಲವು ಲಕ್ಷಣಗಳು ನಿಮ್ಮ ಸ್ನೇಹಿತೆಯಲ್ಲಿ ಇದ್ದರೆ ಖಂಡಿತ ಅವರು ನಿಮ್ಮನ್ನು ಪ್ರೀತಿ ಮಾಡೋದಕ್ಕೆ ಶುರು ಮಾಡಿದ್ದಾರೆ ಎಂದರ್ಥ.



Click it and Unblock the Notifications

