Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ಇನ್ನೂ ಸಿಂಗಲ್ ಆಗಿದ್ದೀರಾ..? ಹೊಸ ಅಧ್ಯಯನ ನಿಮಗೆ ಶಾಕ್ ನೀಡಲಿದೆ..!!
ಕೈಯಲ್ಲಿ ಸರಿಯಾದ ಡಿಗ್ರಿ ಇಲ್ಲ, ಡಿಗ್ರಿ ಇದ್ದರೂ ಕೆಲಸ ಇಲ್ಲ, ಕೆಲಸ ಇದ್ದರೂ ಸಂಬಳ ಇಲ್ಲ, ಸಂಬಳ ಇದ್ರೂ ನೆಮ್ಮದಿ ಇಲ್ಲ, ಹೀಗೆ ಯುವ ಸಮುದಾಯದ ಕಷ್ಟ ಒಂದಾ ಎರಡಾ..? ಇಂದಿನ ಯುವ ಪೀಳಿಗೆ ಈ ಮೇಲಿನ ಯಾವುದಾದರೊಂದು ಸಮಸ್ಯೆಯೊಳಗೆ ಸಿಲುಕಿರುವುದು ಖಚಿತ. ಯಾಕಂದ್ರೆ ಭಾರತದಂತಹ ದೇಶದಲ್ಲಿ ಯುವ ಸಮುದಾಯ ಹೆಚ್ಚಿದ್ದರೂ ಅವರಲ್ಲಿ ಸಂಪನ್ಮೂಲ ಕೊರತೆ, ಅವಕಾಶಗಳ ಕೊರತೆಯಿಂದಾಗಿ ಯುವಶಕ್ತಿಯ ಸರಿಯಾದ ಬಳಕೆಯಾಗುತ್ತಿಲ್ಲ ಅನ್ನೋ ವಾದ ಹಿಂದಿನಿಂದಲೂ ಇದೆ.
ಅದರಲ್ಲೂ ಯುವ ಪೀಳಿಗೆ ಈಗ ಅತೀ ಹೆಚ್ಚಿನ ಒತ್ತಡ, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುತ್ತಾರೆ. ಇತ್ತೀಚಿನ ಸಮಸ್ಯೆಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವುದು ಮದುವೆಯ ವಿಚಾರಗಳು. ವಯಸ್ಸು ಮೀರಿದರೂ ಮದುವೆ ಹುಡುಗಿ ಸಿಗುತ್ತಿಲ್ಲ, ಹುಡುಗ ಸಿಗುತ್ತಿಲ್ಲ ಅನ್ನೋದು ಬಹುದೊಡ್ಡ ಸಮಸ್ಯೆ. ಹೀಗಾಗಿ ಬಹುತೇಕ ಮಂದಿ ಈಗ ಸಿಂಗಲ್ಸ್..!

ಸಿಂಗಲ್ಸ್ ಸಂಖ್ಯೆ ಈಗ ಏರಿಕೆಯಾಗಿರುವುದು ಅಧ್ಯಯನಗಳಲ್ಲಿ ತಿಳಿದುಬಂದಿದೆ. ಸೂಕ್ತ ಸಂಗಾತಿ ಆಯ್ಕೆ ಮಾಡುವುದು ಹಾಗೆ ಸಿಗುವುದು ಕೂಡ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ಯುವ ಸಮುದಾಯ ಸಿಂಗಲ್ಸ್ ಆಗಿ ಉಳಿಯುತ್ತಿದ್ದಾರಂತೆ. ಇದಕ್ಕಿಂತ ಅಚ್ಚರಿಯ ವಿಚಾರ ಏನೆಂದರೆ ಈ ಸಿಂಗಲ್ಸ್‌ಗಳಿಗಿಂತ ಜಂಟಿಯಾಗಿರುವ ಮಂದಿ ಹೆಚ್ಚು ಖುಷಿಯಾಗಿದ್ದಾರಂತೆ.
ಹೌದು ಸಿಂಗಲ್ಸ್ ಮಂದಿಗಿಂತ ಜಂಟಿ ಆಗಿರುವವರು ಜೀವನದಲ್ಲಿ ಖುಷಿಯಾಗಿದ್ದಾರೆ. ಅವರಲ್ಲಿನ ಭಾವನಾತ್ಮಕ ಒಡನಾಟವು ಅವರಲ್ಲಿ ಸಂತೋಷಕ್ಕೆ ಕಾರಣವಾಗುತ್ತದೆ. ಇದು ಅವರನ್ನು ಒತ್ತಡ ಸೇರಿ ಹಲವು ಸಮಸ್ಯೆಗಳಿಂದ ದೂರ ಇಡಲು ಸಹಾಯ ಮಾಡುತ್ತಿದೆ ಎಂಬ ವಿಚಾರ ತಿಳಿದುಬಂದಿದೆ.
ಎವಲ್ಯೂಷನರಿ ಸೈಕಲಾಜಿಕಲ್ ಸೈನ್ಸ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನವು ಭಾವನಾತ್ಮಕ ಆರೋಗ್ಯ ಯಾರಲ್ಲಿ ಚನ್ನಾಗಿದೆಯೋ ಅವರಲ್ಲಿ ತಮ್ಮ ಜೀವನದ ಕುರಿತು ತೃಪ್ತಿ ಹೊಂದಿದ್ದಾರೆ ಎಂದು ವಿವರಿಸುತ್ತಿದೆ. ಈ ಅಧ್ಯಯನಕ್ಕಾಗಿ ವೈವಿಧ್ಯಮಯ ಸಂಸ್ಕೃತಿಗಳಾದ್ಯಂತ 12 ದೇಶಗಳಿಂದ 6,338 ಯುವ ಜನರನ್ನು ಆಯ್ಕೆ ಮಾಡಲಾಗಿತ್ತಂತೆ.
ಅಧ್ಯಯನವು ಭಾಗವಹಿಸುವವರ ಸಂಬಂಧದ ಸ್ಥಿತಿ ಮತ್ತು ಭಾವನಾತ್ಮಕ ಯೋಗಕ್ಷೇಮದ ಸಂಪರ್ಕವನ್ನು ವಿಶ್ಲೇಷಿಸಿದೆ. ಅದರಲ್ಲಿ ಸಿಂಗಲ್ಸ್ ಹಾಗೂ ಜೋಡಿಯಾಗಿರುವವರಲ್ಲಿ ಈ ಅಧ್ಯಯನ ನಡೆಸಲಾಗಿದೆ. ಏಕಾಂಗಿಯಾಗಿರುವವರಲ್ಲಿ ಜೀವನ ಅತೃಪ್ತಿ, ದುಖ, ಅಸಮಾಧಾನ, ಒತ್ತಡದಂತಹ ಅಂಶಗಳು ಹೆಚ್ಚಾಗಿರುವುದು ಕಂಡುಬರುತ್ತದೆ. ಹಾಗೆ ಅವರು ಒಬ್ಬಂಟಿಯಾಗಿರಲು ಹೆಚ್ಚು ಇಷ್ಟಪಡುತ್ತಿರುತ್ತಾರೆ ಎಂಬುದನ್ನು ಅಧ್ಯಯನ ಬಹಿರಂಗಪಡಿಸಿದೆ.
ಹಾಗೆ ಜೋಡಿಯವರಲ್ಲಿ ಕಡಿಮೆ ಒತ್ತಡ, ಆತ್ಮವಿಶ್ವಾಶ ಹೆಚ್ಚು, ಜೀವನ ಕೌಶಲ್ಯತೆ, ಜೀವನ ಆದರ್ಶಗಳು ಸೇರಿ ಒಟ್ಟಾರೆ ಯೋಗಕ್ಷೇಮದಲ್ಲಿ ಅವರು ಮುಂದಿದ್ದಾರೆ. ಹಾಗೆ ಸಂತೃಪ್ತತೆ ಹೊಂದಿದ್ದಾರೆ ಎಂಬುದನ್ನು ವಿವರಿಸುತ್ತದೆ.
ಈ ಅಧ್ಯಯನದಲ್ಲಿ ಎಲ್ಲಾ ಸಿಂಗಲ್ಸ್ ಕಡಿಮೆ ಅಂಕಗಳ ಪಡೆದಿದ್ದರು. ಕೆಲವರು ಇಷ್ಟವಿಲ್ಲದಿದ್ದರೂ ಒಬ್ಬಂಟಿಯಾಗಿ ಬದುಕಬೇಕಾದ ಅನಿವಾರ್ಯತೆಯಲ್ಲಿದ್ದರು. ಇದರಿಂದ ಅವರಲ್ಲಿ ಒತ್ತಡ, ಪೂರೈಸಲಾಗದ ಹಲವು ಬೇಡಿಕೆಗಳು ಹೆಚ್ಚಲು ಕಾರಣವಾಗುತ್ತದೆ ಎಂಬುದನ್ನು ಕೂಡ ಕಂಡುಕೊಂಡರು. ಸಿಂಗಲ್ಸ್‌ಗಳು ತಮ್ಮ ಆಯ್ಕೆ ಮತ್ತು ಸಂಬಂಧದ ಸ್ಥಿತಿಯಲ್ಲಿ ಹೆಚ್ಚು ವಿಶ್ವಾಸ ಹೊಂದಿದ್ದರೂ, ಆಯ್ಕೆಯಿಲ್ಲದೆ ಏಕಾಂಗಿಯಾಗಿರುವ ವ್ಯಕ್ತಿಗಳು ಕಳಪೆ ಭಾವನಾತ್ಮಕ ಆರೋಗ್ಯದ ಜೊತೆಗೆ ಕಡಿಮೆ ತೃಪ್ತಿಯನ್ನು ಹೊಂದಿರುವುದು ಕೂಡ ವರದಿಯಲ್ಲಿದೆ.
ಇದರಿಂದ ಸರಳವಾಗಿ ತಿಳಿದುಬರುವುದು ಏನೆಂದರೆ ಏಕಾಂಗಿ ಆಗಿರುವವರು ಜೀವನದಲ್ಲಿ ಒತ್ತಡ, ನೋವು ಹಾಗೂ ಅತೃಪ್ತಿಯ ಅಂಶಗಳನ್ನು ಹೆಚ್ಚಾಗಿ ತೋರ್ಪಡಿಸುತ್ತಾರೆ. ಆದ್ರೆ ಪ್ರೀತಿಯಲ್ಲಿರುವವರು, ಜೋಡಿಯಾಗಿರುವವರಲ್ಲಿ ಈ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಸಿಂಗಲ್ಸ್ ಆಗಿರುವುದು ಮಾನಸಿಕ ನೆಮ್ಮದಿಗೂ ಕೆಟ್ಟದ್ದೂ ಹಾಗೆ ದೇಹಕ್ಕೂ..!!



Click it and Unblock the Notifications