Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಈ ಅಭ್ಯಾಸ ಇಂದೇ ನಿಲ್ಲಿಸಿಬಿಡಿ: ಇಲ್ಲದಿದ್ದರೆ ಆಕೆ ನಿಮ್ಮಿಂದ ದೂರಾಗುತ್ತಾಳೆ..!
ಯಾವುದೇ ಸಂಬಂಧವಾಗಿರಲಿ ಕೊನೆಯವರೆಗೂ ಗಟ್ಟಿಯಾಗಿ ಉಳಿಯಬೇಕಾದರೆ ಅಲ್ಲಿ ವಿಶ್ವಾಸ ಹಾಗೂ ಪರಸ್ಪರ ನಂಬಿಕೆ ಇರಬೇಕು. ಹೀಗಿದ್ದಾಗ ಮಾತ್ರ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಇಲ್ಲದಿದ್ದರೆ ಅಂತಹ ಸಂಬಂಧದಲ್ಲಿ ಯಾವಾಗಲು ಕಲಹವೇ ಮೂಡುತ್ತಿರುತ್ತದೆ. ಅದ್ರಲ್ಲೂ ದಾಂಪತ್ಯ ಸಂಬಂಧದಲ್ಲಿ ಯಾವ ರೀತಿಯ ಅನ್ಯೋನತೆ ಇರಲಿದೆ ಎಂಬುದೇ ಪ್ರಮುಖವಾಗುತ್ತದೆ.
ಯಾವುದೇ ಸಂಬಂಧದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಆದರೆ ಒಬ್ಬರನ್ನೊಬ್ಬರು ಎಷ್ಟೇ ಪ್ರೀತಿಸಿದರೂ ಕೆಲವು ಬಾರಿ ಗಲಾಟೆ, ಕಲಹ ಮೂಡುತ್ತದೆ. ಆದರೆ ಯುವತಿ ತನ್ನ ಪ್ರಿಯಕರನಿಂದ ಇಲ್ಲವೆ ಪತ್ನಿಯಲ್ಲಿ ಇಷ್ಟಪಡದ ಒಂದಿಷ್ಟು ಗುಣಗಳಿರುತ್ತವೆಯಂತೆ. ಆಕೆಗೆ ಇಷ್ಟವಾಗದ ಈ ಗುಣಗಳು ನಿಮ್ಮಲ್ಲಿದ್ದರೆ ತಕ್ಷಣ ಗುಣಗಳ ಬದಲಾಯಿಸಿಕೊಳ್ಳಬೇಕಂತೆ. ಇಲ್ಲಿದಿದ್ದರೆ ಆಕೆ ನಿಮ್ಮ ಪ್ರೇಯಸಿ ಇಲ್ಲವೆ ಪತ್ನಿ ದೂರಾಗಬಹುದಂತೆ.

ತಮ್ಮನ್ನು ತಾವೇ ಹೊಗಳುವುದು
ಯಾರೇ ಆದರು ತಮ್ಮನ್ನು ತಾವು ಹೊಗಳಿಕೊಳ್ಳಬಾರದಂತೆ. ಅದರಲ್ಲೂ ನಿಮ್ಮ ಪ್ರೇಯಸಿ ಅಥವಾ ಪತ್ನಿಯ ಎದುರು ನಿಮ್ಮನ್ನು ನೀವು ಹೊಗಳಿಕೊಳ್ಳುವುದು ಅವರಿಗೆ ಕಿಂಚಿತ್ತು ಇಷ್ಟವಾಗುವುದಿಲ್ಲವಂತೆ. ಹೀಗೆ ಮಾಡುವುದರಿಂದ ಅವರಲ್ಲಿ ನಿಮ್ಮ ಮೇಲೆ ಬೇಸರವಾಗಬಹುದು.
ಸುಳ್ಳು ಹೇಳುವುದು
ನೀವು ಯಾವುದೇ ವಿಚಾರವಾಗಿ ಸಂಗಾತಿ ಬಳಿ ಇಲ್ಲವೆ ಪ್ರೇಯಸಿ ಬಳಿಯಲ್ಲಿ ಸುಳ್ಳುಗಳ ಹೇಳುವುದು ಅವರಿಗೆ ಹಿಡಿಸುವುದಿಲ್ಲ. ಆ ಕ್ಷಣದಲ್ಲಿ ಅದು ಸುಳ್ಳು ಎಂದು ಅವರಿಗೆ ತಿಳಿಯದಿದ್ದರೂ ಮುಂದೊಂದು ದಿನ ತಿಳಿದರೆ ನಿಮ್ಮ ಬಗ್ಗೆ ಬೇಸರ ಮೂಡಬಹುದು. ಜೊತೆಗೆ ಅಸೂಯೇ ಮೂಡಬಹುದು. ನೀವು ಸತ್ಯ ಹೇಳಲು ಮುಂದಾದಾಗಲೂ ಅದು ಸುಳ್ಳು ಎಂಬ ಭಾವನೆ ಅವರಿಗೆ ಮೂಡಬಹುದು. ಸಣ್ಣ ಸಣ್ಣ ಸುಳ್ಳುಗಳು ಅಥವಾ ತಮಾಷೆಗೆ ನೀವು ಹೇಳುವ ಸುಳ್ಳುಗಳು ಸಹ ಅವರಲ್ಲಿ ನಿಮ್ಮ ವಿರುದ್ಧ ವ್ಯತಿರಿಕ್ತ ಭಾವನೆ ಮೂಡಿಸಬಹುದು.
ನಿಮ್ಮ ಎಲ್ಲೆಂದರಲ್ಲಿ ಇಡುವುದು
ನೀವು ಮನೆಯಲ್ಲಿದ್ದಾಗ ನಿಮ್ಮ ಉಡುಪುಗಳು, ವಸ್ತುಗಳು ಎಲ್ಲೆಂದರಲ್ಲಿ ಇಡುವುದು ಪತ್ನಿಗೆ ಬೇಸರ ತರಿಸಬಹುದು. ಅಲ್ಲದೆ ಯಾವಾಗಲು ಆಕೆ ಈ ವಿಚಾರ ನಿಮ್ಮ ಬಳಿ ಹೇಳಿಕೊಂಡು ಬೇಸರ ಮಾಡಿಕೊಳ್ಳುತ್ತಿರಬಹುದು. ಇದು ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಿಸಬಹುದಂತೆ.
ಅವರ ಕೆಲಸದಲ್ಲಿ ಸಹಾಯ ಮಾಡದಿರುವುದು
ನೀವು ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಆಕೆ ಯಾವಾಗಲು ಕೆಲಸ ಮಾಡುವ ಸಂದರ್ಭ ಬರಬಹುದು. ಈ ರೀತಿ ಮಾಡಬಾರದಂತೆ. ಯಾವಾಗಲಾದರು ಆಕೆಯ ಕೆಲಸದಲ್ಲಿ ನೀವು ಸಹ ಭಾಗಿಯಾಗಬೇಕಂತೆ. ಇಲ್ಲದಿದ್ದರೆ ಆಕೆ ನಿಮ್ಮ ಗುಣವನ್ನು ಒಂದೇ ಬಾರಿಗೆ ಅಳೆಯಬಹುದು. ಇದು ನಿಮ್ಮ ಸಂಬಂಧದಲ್ಲಿ ವಿರಸಕ್ಕೆ ಕಾರಣವಾಗಬಹುವು. ಇಲ್ಲವೆ ಆಕೆಯ ಮನದಲ್ಲಿ ಇದೊಂದು ಕೆಟ್ಟ ಅನುಭವವಾಗಬಹುದು.
ಅಮೂಲ್ಯ ವಸ್ತು ಕಳೆದುಕೊಳ್ಳವುದು
ನೀವು ನಿಮ್ಮ ಬಳಿ ಇರುವ ಯಾವುದಾದ್ರು ವಸ್ತುವನ್ನು ಪದೆ ಪದೇ ಕಳೆದುಕೊಳ್ಳುವುದು ಇಬ್ಬರ ನಡುವಿನ ಕಲಹಕ್ಕೆ ಕಾರಣವಾಗಬಹುದಂತೆ. ಅದ್ರಲ್ಲೂ ಇಬ್ಬರಿಗೆ ಸೇರಿದ ವಸ್ತುವನ್ನು ನೀವು ಕಳೆದುಕೊಂಡು ಇದೊಂದು ಸಣ್ಣ ವಿಚಾರ ಎಂದು ನಿರ್ಲಕ್ಷ್ಯ ಮಾಡಿದರೆ ಪತ್ನಿಗೆ ಬೇಸರ ತರಿಸಬಹುದು. ಈ ವರ್ತನೆ ಮತ್ತೆ ಮತ್ತೆ ಮುಂದುವರೆದರೆ ಸಂಬಂಧದಲ್ಲಿ ಬಿರುಕು ಕಾಣಿಸಬಹುದು.
ವಿಚಾರಗಳ ಮುಚ್ಚಿಡುವುದು
ನೀವು ಆಕೆಗೆ ಅಗತ್ಯವಿಲ್ಲ ಎಂದು ಹೇಳಿಕೊಂಡು ಕೆಲವು ವಿಚಾರಗಳನ್ನು ಮುಚ್ಚಿಡುವುದು ಇಲ್ಲವೆ ಆಕೆಯಿಂದ ಯಾವುದಾದ್ರು ವಿಚಾರವನ್ನು ಗೌಪ್ಯವಾಗಿಡುವುದು ಆಕೆಗೆ ಇಷ್ಟವಾಗುವುದಿಲ್ಲ. ಅದರಲ್ಲು ಕೆಲವೊಂದು ವಿಚಾರ ಆಕೆಯೊಂದಿಗೆ ಹೇಳದೆ ಗೌಪ್ಯವಾಗಿ ವ್ಯವಹರಿಸುವುದು ಇಬ್ಬರ ನಡುವಿನ ಕಲಹಕ್ಕೆ ಕಾರಣವಾಗಬಹುದಂತೆ.
ಮನೆಗೆ ತಡವಾಗಿ ಬರುವುದು
ನೀವು ಯಾವುದೇ ಕಾರಣವಿಲ್ಲದೆ ಯಾವಾಗಲು ಮನೆಗೆ ತಡವಾಗಿ ಬರುವುದು ಆಕೆಯಲ್ಲಿ ಬೇಸರ ತರಿಸಲಿದೆಯಂತೆ, ಅಲ್ಲದೆ ಈ ನಿಮ್ಮ ಅಭ್ಯಾಸದಿಂದ ಆಕೆಯ ಮನದಲ್ಲಿ ಮನುಮಾನ ಮೂಡಬಹುದು. ಇದು ಇಬ್ಬರ ಸಂಬಂಧ ಹಾಳು ಮಾಡಬಹುದು.



Click it and Unblock the Notifications