Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಅಬ್ಬಬ್ಬಾ..! ವಿಚ್ಛೇದನದ ಪರಿಹಾರ ರೂಪದಲ್ಲಿ ಈ ಮಹಿಳೆಗೆ ಸಿಗ್ತಿದೆ ಬರೋಬರಿ ₹8,333 ಸಾವಿರ ಕೋಟಿ ಆಸ್ತಿ..!
ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅಂತಾ ಗಾದೆ ಮಾತೊಂದಿತ್ತು. ಆಧುನಿಕ ಯುಗಕ್ಕೆ ಇದನ್ನು ಮದುವೆ ಮಾಡಿ ನೋಡು, ಡಿವೋರ್ಸ್ ಪಡೆದು ನೋಡು ಅಂತಾ ಬದಲಾಯಿಸಬೇಕಾ ಎಂಬ ಅನುಮಾನಗಳು ಮೂಡುತ್ತಿವೆ.
ಕೆಲವು ದಿನಗಳ ಹಿಂದೆಯಷ್ಟೇ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯಾ ಹಾಗೂ ನತಾಶಾ ಜೋಕ್ವಿಕ್ ಅವರ ದಾಂಪತ್ಯ ಜೀವನ ಮುರಿದಿದೆ. ನತಾಶಾಗೆ ಹಾರ್ದಿಕ್ರ 70 ಪ್ರತಿಶತ ಆಸ್ತಿ ಸಿಗುತ್ತದೆ ಎಂಬೆಲ್ಲ ವದಂತಿಗಳು ಬಾರೀ ಸದ್ದು ಮಾಡಿದ್ದು ನಿಮಗೆ ತಿಳಿದಿರಬಹುದು.

ಆದರೆ ಇದೀಗ ಮತ್ತೊಂದು ವಿಚ್ಛೇದನ ಭಾರೀ ದೊಡ್ಡ ಪ್ರಮಾಣದಲ್ಲಿ ಸುದ್ದಿ ಮಾಡುತ್ತಿದ್ದು ದಾಖಲೆಯನ್ನೇ ಬರೆಯುವದರಲ್ಲಿದೆ. ದಕ್ಷಿಣ ಕೊರಿಯಾದ ವ್ಯಾಪಾರಿ ಉದ್ಯಮದಲ್ಲಿರುವ ಚೆಯ್ ಟೇ-ವೋನ್ ತಮ್ಮ ವಿಚ್ಛೇದನದ ಕಾರಣಕ್ಕೆ ಭಾರೀ ಸುದ್ದಿಯಲ್ಲಿದ್ದಾರೆ.
ದಾಂಪತ್ಯ ಜೀವನದಿಂದ ವಿಚ್ಛೇದನ ಪಡೆದಿರುವ ಈ ವ್ಯಕ್ತಿ ಮಾಜಿ ಪತ್ನಿ ರೋಹ್ ಸೋ-ಯಂಗ್‌ಗೆ ಬರೋಬ್ಬರಿ 8,333 ಕೋಟಿ ರೂಪಾಯಿಗಳನ್ನು ನೀಡಬೇಕು ಎಂದು ಕೋರ್ಟ್ ಆದೇಶ ನೀಡಿದೆ. ಒಂದು ವೇಳೆ ಈ ಎಲ್ಲಾ ಷರತ್ತುಗಳಿಗೆ ಒಪ್ಪಿ ಚೆಯ್ ವಿಚ್ಛೇದನ ಕೊಟ್ಟು ಪರಿಹಾರ ನೀಡಿದರೆ ಇದು ಆ ದೇಶದ ಅತೀದೊಡ್ಡ ವಿಚ್ಛೇದನದ ಪರಿಹಾರ ಮೊತ್ತ ಎನಿಸಲಿದೆ.
ವೃತ್ತಿಯಲ್ಲಿ ಉದ್ಯಮಿ ಎನಿಸಿರುವ ಚೆಯ್ 35 ವರ್ಷಗಳ ಹಿಂದೆ ರೋಹ್ ಸೋ-ಯಂಗ್ ಜೊತೆ ವಿವಾಹವಾಗಿದ್ದರು. ಆದರೆ ಚೆಯ್ ವಿವಾಹೇತರ ಅಕ್ರಮ ಸಂಬಂಧ ಹೊಂದಿದ್ದು ಈ ಸಂಬಂಧದಿಂದ ಮಗುವನ್ನೂ ಹೊಂದಿದ್ದಾರೆ ಎಂಬ ವಿಚಾರ ಪತ್ನಿ ಗಮನಕ್ಕೆ ಬಂದಿದೆ. ಇದಾದ ಬಳಿಕ ಪತ್ನಿ ರೋಹ್ ತನ್ನ ಮೂವರು ಮಕ್ಕಳೊಂದಿಗೆ ಕಳೆದ 10 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಹಾಗೂ ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ .
ಚೆಯ್ ದಕ್ಷಿಣ ಕೊರಿಯಾದ ಅತ್ಯಂತ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರು. ಪ್ರಪಂಚದ ಎರಡನೇ ಅತೀ ದೊಡ್ಡ ಮೆಮೊರಿ ಚಿಪ್ ತಯಾರಕ ಸಂಸ್ಥೆ ಎಸ್ಕೆ ಗ್ರೂಪ್ನ ಅಧ್ಯಕ್ಷರಾಗಿರುವ ಚೆಹ್ ಇದೀಗ ತನ್ನ ಕಂಪನಿಯ ಷೇರುಗಳ ಒಂದು ಭಾಗವನ್ನು ಪತ್ನಿಗೆ ನೀಡಬೇಕಿದೆ.
ಅಲ್ಲದೇ ಚೆಯ್ ಈ ರೀತಿ ಶ್ರೀಮಂತರಾಗೋಕೆ ಅವರ ಮಾಜಿ ಪತ್ನಿ ಹಾಗೂ ಆಕೆಯ ತಂದೆ ಕೂಡ ಕಾರಣರಾಗಿರುವ ವಿಚಾರ ಕೋರ್ಟ್ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪರಿಹಾರದ ಮೊತ್ತವನ್ನು ಈ ಮಟ್ಟಕ್ಕೆ ಕೋರ್ಟ್ ಏರಿಸಿದೆ ಎನ್ನಲಾಗಿದೆ.
ಕಳೆದ 10 ವರ್ಷಗಳಿಂದ ರೋಹ್ ತಮ್ಮ ಪತಿಯ ವಿರುದ್ಧ ಡಿವೋರ್ಸ್ ಕೇಸ್ನಲ್ಲಿ ಹೋರಾಡುತ್ತಲೇ ಇದ್ದಾರೆ.
ಕೋಟ್ಯಾಧಿಪತಿಯಾಗಿರುವ ಚೇಹ್ನ ಆಸ್ತಿಯಲ್ಲಿ ಒಂದು ಭಾಗವನ್ನು ನೀಡಲು ಇದೇ ಕೋರ್ಟ್ ಮೊದಲು ನಿರಾಕರಿಸಿತ್ತು . ಆದರೆ ಆ ಷೇರುಗಳು ಜಂಟಿ ಆಸ್ತಿ ಎಂಬುದು ಕೋರ್ಟ್ ಗಣನೆಗೆ ಬಂದ ಬಳಿಕ ತನ್ನ ಆದೇಶವನ್ನು ಬದಲಿಸಿ ಭಾರೀ ಮೊತ್ತದ ಹಣವನ್ನು ಮಾಜಿ ಪತ್ನಿ ರೋಹ್ಗೆ ಪಾವತಿಸುವಂತೆ ಚೇಹ್ಗೆ ಕೋರ್ಟ್ ಆದೇಶಿಸಿದೆ .
ಈ ಎಲ್ಲಾ ಘಟನೆಗಳು ಸಾಲು ಸಾಲಾಗಿ ಬೆಳಕಿಗೆ ಬರುತ್ತಿರೋದನ್ನು ನೋಡುತ್ತಿದ್ದರೆ ಮುಂದಿನ ದಿನಗಳಲ್ಲಿ ಪತಿಯಿಂದಿರು ತಮ್ಮ ಹೆಸರಲ್ಲಿ ಆಸ್ತಿ ಹೊಂದುವುದೇ ಅನುಮಾನ..!



Click it and Unblock the Notifications
