Latest Updates
-
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ!
ಸೋಷಿಯಲ್ ಮೀಡಿಯಾದಿಂದ ಪ್ರತಿಯೊಬ್ಬರ ಜೀವನದಲ್ಲಿ ಸಂಭವಿಸುತ್ತಿದೆ ಈ 4 ಅನಾಹುತ
ಇಂದು ಸೋಷಿಯಲ್ ಮೀಡಿಯಾ ದಿನ... ಸೋಷಿಯಲ್ ಮೀಡಿಯಾ ನಮ್ಮೆಲ್ಲರ ಬದುಕನ್ನು ಎಷ್ಟೊಂದು ಬದಲಾಯಿಸಿದೆ ಅಲ್ವಾ? ದೂರವಿದ್ದವರನ್ನು ಹತ್ರ ಮಾಡಿದೆ, ಹತ್ರ ಇರುವವರನ್ನು ದೂರ ಮಾಡಿದೆ, ಹೌದಲ್ವಾ?
ಇವತ್ತಿನ ಬಹುತೇಕ ಮನೆಗಳಲ್ಲಿ ಇದೇ ಪರಿಸ್ಥಿತಿ. ಕೈಯಲ್ಲೊಂದು ಮೊಬೈಲ್ ಹಿಡಿದು ಕೂತರೆ ನಮ್ಮ ಪಕ್ಕದಲ್ಲಿಯೇ ಇರುವವರನ್ನು ಮಾತನಾಡಿಸಲು ನಮಗೆ ಸಮಯವಿಲ್ಲ, ಫ್ಯಾಮಿಲಿ ಟ್ರಿಪ್ ಅಂತ ಹೋಗ್ತೀವಿ,ಆದರೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು, ವೀಡಿಯೋಗಳನ್ನು ಅಪ್‌ಲೋಡ್ ಮಾಡಿ ಎಷ್ಟು ಲೈಕ್ಸ್, ಕಮೆಂಟ್ಸ್ ಬಂದಿದೆ ಎಂದು ನೋಡುವುದರಲ್ಲಿ ಸಮಯ ಕಳೆಯುತ್ತೇವೆ. ಫ್ಯಾಮಿಲಿ ಜೊತೆ ಒಂದು ರೆಸ್ಟೋರೆಂಟ್‌ಗೆ ಹೋದ್ರೂ ಅಲ್ಲಿಯೂ ಇದೆ ಕತೆ ಒಟ್ಟಿನಲ್ಲಿ ಈ ಸೋಷಿಯಲ್ ಮೀಡಿಯಾ ಎಂಬುವುದು ನಮ್ಮನ್ನು ಆವರಿಸಿಕೊಂಡು ಬಿಟ್ಟಿದೆ ಅಲ್ವಾ?

ಸೋಷಿಯಲ್ ಮೀಡಿಯಾದಿಂದ ಸಂಬಂಧ ದೂರಾಗುತ್ತಿದೆಯೇ?
ಈ ಸೋಷಿಯಲ್ ಮೀಡಿಯಾದಿಂದಾಗಿ ಸಂಬಂಧ ಹಾಳಾಗುತ್ತಿದೆ. ಎಷ್ಟೋ ವೈವಾಹಿಕ ಜೀವನ ಇದರಿಂದಾಗಿ ಮುರಿದು ಬಿದ್ದಿದೆ ಹಾಗಂತ ಸೋಷಿಯಲ್ ಮೀಡಿಯಾದಿಂದ ಎಷ್ಟೋ ಸಂಬಂಧಗಳು ಒಂದಾಗಿದೆ, ದೂರವಿರುವ ನಮ್ಮ ವ್ಯಕ್ತಿಯನ್ನು ತುಂಬಾ ಸಮೀಪಕ್ಕೆ ತಂದಿದೆ. ಆದ್ದರಿಂದ ನಿಜವಾಗಲೂ ಸೋಷಿಯಲ್ ಮೀಡಿಯಾದಿಂದಾಗಿ ಸಂಬಂಧ ಹಾಳಾಗುತ್ತಿದೆಯೇ ಎಂದು ಕೇಳಿದರೆ ಉತ್ತರ ಮಾತ್ರ 50\50, ಈ ಮಾತನ್ನು ನೀವು ಒಪ್ಪುತ್ತೀರಿ ತಾನೆ?
ಆದರೂ ಸೋಷಿಯಲ್ ಮೀಡಿಯಾದಿಂದ ನಮ್ಮ ಸಂಬಂಧದಲ್ಲಿ ಈ ಅನಾಹುತವಾಗದಂತೆ ಜಾಗ್ರತೆವಹಿಸಬೇಕಾಗಿದೆ:
* ವಿವಾಹಿತರಾಗಿದ್ದರೆ ಬೆಡ್‌ರೂಂನಿಂದ ಸೋಷಿಯಲ್ ಮೀಡಿಯಾ ದೂರವಿಡಿ: ಕೆಲವರು ಬೆಡ್‌ರೂಂನಲ್ಲಿ ಕುಳಿತು ಮೊಬೈಲ್‌ನಲ್ಲಿ ರೀಲ್ಸ್, ನ್ಯೂಸ್ ನೋಡುವುದರಲ್ಲಿ ತುಂಬಾ ಬ್ಯುಸಿಯಾಗಿರುತ್ತಾರೆ, ಆದರೆ ಇದರಿಂದ ಸಂಬಂಧದಲ್ಲಿ ಎಷ್ಟು ದೊಡ್ಡ ಬಿರುಕು ಉಂಟಾಗಬಹುದು ಎಂಬುವುದನ್ನು ಬಹುಶಃ ನೀವು ಊಹಿಸರಲಿಕ್ಕೂ ಇಲ್ಲ, ಹೌದು ಸಂಗಾತಿ ಸದಾ ಮೊಬೈಲ್‌ನಲ್ಲಿ ಬ್ಯುಸಿ ಇದ್ದರೆ ಅವರು ಯಾರ ಜೊತೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಕು? ಇದರಿಂದ ಅವರಿಗೆ ಅಸಮಧಾನ ಉಂಟಾಗುವುದು, ಅಷ್ಟು ಮಾತ್ರವಲ್ಲ ಸದಾ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದರೆ ಸಂಗಾತಿ ಮೇಲೆ ಅನುಮಾನ ಬರಬಹುದು. ಸಂಸಾರದಲ್ಲಿ ಅನುಮಾನದ ಒಂದು ಸಣ್ಣ ಕಿಡಿ ಹೊತ್ತಿದರೆ ಸಾಕು ಸಂಸಾರವನ್ನೇ ಸುಟ್ಟು ಬೂದಿ ಮಾಡಬಹುದು.
* ಸೋಷಿಯಲ್ ಮೀಡಿಯಾ ಎಂಬ ಭ್ರಮೆಯಿಂದ ನೆಮ್ಮದಿ ಹಾಳಾಗುತ್ತಿದೆ: ಸೋಷಿಯಲ್ ಮೀಡಿಯಾ ಎಂಬುವುದು ಒಂದು ಭ್ರಮೆ. ಹೌದು ಅದರಲ್ಲಿ ಹಾಕುವ ಫೋಟೋಗಳು, ವೀಡಿಯೋಗಳು ನಿಜವಾಗಿರಬೇಕೆಂದಿಲ್ಲ. ಉದಾಹರಣೆಗೆ ಕೆಲವರು ಒಂದು ಫೋಟೋ ಹಾಕಿ ಹ್ಯಾಪಿ ವಿಥ್ ಮೈ ಲವ್ ಎಂದು ಕ್ಯಾಪ್ಷನ್ ಹಾಕಿರುತ್ತಾರೆ. ಅದನ್ನು ನೋಡಿ ನಾವು ಓಹೋ ಅವರೆಷ್ಟು ರೊಮ್ಯಾಂಟಿಕ್ ಕಪಲ್ ಎಂದು ಯೋಚಿಸುತ್ತೇವೆ, ಆದರೆ ಅವರ ಬದುಕು ನಿಜವಾಗಲೂ ನಾವು ಊಹಿಸಿದಂತೆ ಇರಬೇಕೆಂದೇನೂ ಇಲ್ಲ. ಇನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫ್ರೆಂಡ್ಸ್ ಹಾಕುವ ಫೋಟೋಗಳನ್ನು, ವೀಡಿಯೋಗಳನ್ನು ನೋಡಿ ಅವರ ಬದುಕು ಸೂಪರ್, ನನ್ನ ಬದುಕು ಮಾತ್ರ ಹೀಗಾಯ್ತು ಎಂದೆಲ್ಲಾ ಕೊರಗಿ ಖಿನ್ನತೆಗೆ ಜಾರುವವರೂ ಇದ್ದಾರೆ. ಆದ್ದರಿಂದ ಸೋಷಿಯಲ್ ಮೀಡಿಯಾ ಎಂಬುವುದು ಭ್ರಮೆ.
* ಬದುಕು ಹಾಳು ಮಾಡಿಕೊಳ್ಳುವವರಿಗೇನು ಕಡಿಮೆಯಿಲ್ಲ: ಸೋಷಿಯಲ್ ಮೀಡಿಯಾದಲ್ಲಿ ಗೊತ್ತು-ಪರಿಚಯವಿಲ್ಲದ ವ್ಯಕ್ತಿ ಜೊತೆ ಸ್ನೇಹ ಸಂಬಂಧ ಬೆಳೆಸಿ ನಂತರ ಬದುಕನ್ನು ಹಾಳು ಮಾಡಿಕೊಂಡಿರುವ ಅನೇಕ ಉದಾಹರಣೆಗಳು ಸಿಗುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ನಾವು ಕಂಡಂಥ ವ್ಯಕ್ತಿ ಆಗಿರಲಿಕ್ಕಿಲ್ಲ ನಿಜವಾಗಿ ಅವರ ಜೊತೆ ಬಾಳಲು ಆರಂಭಿಸಿದಾಗ. ಇನ್ನು ಕೆಲವರು ಮೋಸ ಮಾಡಲೆಂದೇ ಅಂಥ ಸೋಷಿಯಲ್ ಮೀಡಿಯಾದಲ್ಲಿರುತ್ತಾರೆ, ಆದ್ದರಿಂದ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಿಲ್ಲದ ವ್ಯಕ್ತಿ ಜೊತೆ ಸ್ನೇಹಕ್ಕಾಗಿ ಕೈಚಾಚುವ ಮುನ್ನ ನೂರು ಬಾರಿ ಆಲೋಚಿಸುವುದು ಒಳ್ಳೆಯದು.
* ಹತ್ತಿರವಿರುವವರನ್ನು ದೂರ ಮಾಡುತ್ತಿದ್ದೇವೆ: ಮನೆಗೆ ಬಂದಾಗ ಕುಟುಂಬದ ಜೊತೆ ಸಮಯ ಕಳೆಯಿರಿ, ಮೊಬೈಲ್ ಹಿಡಿದು ಕೂರುವುದರಿಂದ ನಮ್ಮವರ ಜೊತೆಗಿನ ಬಾಂಧವ್ಯ ಗಟ್ಟಿಯಾಗುವುದಿಲ್ಲ. ಮನೆಯಲ್ಲಿ ತಾಯಿ-ತಂದೆ, ಮಕ್ಕಳು, ಸಂಗಾತಿ ಜೊತೆ ಸಮಯ ಕಳೆಯಿರಿ. ಸೋಷಿಯಲ್ ಮೀಡಿಯಾದಲ್ಲಿ ಸದಾ ಮುಳುಗಿರುವ ಬದಲಿಗೆ ಅದನ್ನು ಬಳಸುವ ಸಮಯಕ್ಕೆ ಕಡಿವಾಣ ಹಾಕಿ.
ಸೋಷಿಯಲ್ ಮೀಡಿಯಾವನ್ನು ಮನರಂಜನೆಗಾಗಿ ಬಳಸುವುದರಲ್ಲಿ ತಪ್ಪಲ್ಲ, ಆದರೆ ಅದರಿಂದ ನಮ್ಮ ಸಂಸಾರ, ನಮ್ಮವರು ದೂರವಾಗದಂತೆ ಎಚ್ಚರವಹಿಸಬೇಕಷ್ಟೇ....



Click it and Unblock the Notifications











