Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೆಚ್ಚಾಗುತ್ತಿದೆ ಸ್ಲೀಪ್ ಡಿವೋರ್ಸ್ ಟ್ರೆಂಡ್, ಇದರ ಕುರಿತ ಸತ್ಯಾಂಶ ತಿಳಿದಿರಲಿ
ಗಂಡ-ಹೆಂಡತಿ ಜಗಳ ಉಂಡು ಮಲಗುವವರೆಗೆ ಎಂಬ ಗಾದೆ ಮಾತಿದೆ. ಆದರೆ ಈಗ ಗಂಡ-ಹೆಂಡತಿ ಜಗಳವಾಡಿ ವಿಚ್ಛೇದನ ತಡೆಗಟ್ಟುವ ಸಲುವಾಗಿ ಸ್ಲೀಪ್ ಡಿವೋರ್ಸ್ ಮೊರೆ ಹೋಗುತ್ತಿದ್ದಾರೆ! ಗಂಡ-ಹೆಂಡತಿ ಬೇರೆ-ಬೇರೆ ಮಲಗುವುದರಿಂದ ಇಬ್ಬರ ನಡುವಿನ ಅಂತರ ಕಡಿಮೆ ಮಾಡಬಹುದೇ? ಎಂದು ಕೇಳುವುದಾದರೆ ರಿಲೇಷನ್‌ಶಿಪ್ ಎಕ್ಸ್‌ಪರ್ಟ್ಸ್ ಕೂಡ ಹೌದು ಸ್ಲೀಪ್ ಡಿವೋರ್ಸ್ ಸಂಬಂಧ ಉಳಿಸಲು ಸಹಾಯ ಮಾಡುತ್ತದೆ ಎಂಬುವುದನ್ನು ಒಪ್ಪಿಕೊಳ್ಳುತ್ತಾರೆ.

ಏನಿದು ಸ್ಲೀಪ್ ಡಿವೋರ್ಸ್
ಗಂಡ-ಹೆಂಡತಿ ಜೊತೆಯಲ್ಲಿ ಮಲಗದೆ ಸಪರೇಟ್ ಮಲಗುವುದು. ಪ್ರತ್ಯೇಕ ಬೆಡ್‌ನಲ್ಲಿ ಅಥವಾ ಪ್ರತ್ಯೇಕ ಕೋಣೆಯಲ್ಲಿ ಮಲಗುವುದು. ಬರೀ ಜಗಳವಾಡಿದಾಗ ಮಾತ್ರವಲ್ಲ ಇಬ್ಬರಿಗೆ ಕೆಲಸದ ಒತ್ತಡವಿದ್ದಾಗ ಹೀಗೆ ಮಲಗುವುದರಿಂದ ಸಂಬಂಧ ಉಳಿಸಿಕೊಳ್ಳಬಹುದು ಎಂಬುವುದು ಎಕ್ಸ್‌ಪರ್ಟ್ ಸಲಹೆಯಾಗಿದೆ.
ಕೆಲ ಸಂಸಾರದಲ್ಲಿ ಒಬ್ಬರು ರಾತ್ರಿಯಿಡೀ ಕೆಲಸ ಅಂತ ಕೂತು ಬೆಳಗ್ಗೆ ಮಲಗುತ್ತಾರೆ, ಮತ್ತೊಬ್ಬರು ಬೆಳಗ್ಗೆ ಬೇಗ ಏಳುತ್ತಾರೆ. ಹೀಗೆ ಮಲಗುವಾಗ ಇಬ್ಬರ ಸಮಯ ಮ್ಯಾಚ್ ಆಗದಿದ್ದರೆ ಒಬ್ಬರಿಂದಾಗಿ ಮತ್ತೊಬ್ಬರಿಗೆ ನಿದ್ದೆಗೆ ಭಂಗ ಉಂಟಾಗುವುದು, ಅದೇ ಪ್ರತ್ಯೇಕವಾಗಿ ಮಲಗಿದರೆ ಇಂಥ ಕಿರಿಕಿರಿ ಇರಲ್ಲ, ಈ ಕಾರಣಕ್ಕೆ ಗಂಡ ಹೆಂಡತಿ ನಡುವೆ ಮನಸ್ತಾಪ ಬರುವುದು ತಪ್ಪುತ್ತದೆ.
ಇನ್ನು ಇಬ್ಬರು ಮುನಿಸಿಕೊಂಡಾಗ ಈ ರೀತಿ ಮಲಗಿದರೆ ಪ್ರಯೋಜನಗಳಿವೆ
ಇಬ್ಬರು ಮುನಿಸಿಕೊಂಡು ಒಬ್ಬರಿಗೊಬ್ಬರು ಬೆನ್ನುಹಾಕಿ ಮಲಗಿದರೆ ನಿದ್ದೆನೂ ಬರಲ್ಲ, ಅಲ್ಲದೆ ಅಸಮಧಾನ, ಕೋಪ, ಸಂಕಟ ಎಲ್ಲಾ ಅಧಿಕವಾಗುವುದು, ಗಂಡ-ಹೆಂಡತಿ ಅಕ್ಕ-ಪಕ್ಕ ಮಲಗಿದಾಗ ಇಬ್ಬರು ಖುಷಿಯಿಂದ ಮಲಗಿದಾಗ ಮಾತ್ರ ಕಣ್ಣಿಗೆ ಸುಖ ನಿದ್ದೆ ಹತ್ತಲು ಸಾಧ್ಯ. ಇಲ್ಲದಿದ್ದರೆ ನಿದ್ದೆಬಾರದೆ ಒದ್ದಾಡಬೇಕಾಗುತ್ತದೆ. ಅದೇ ಕೋಪವಿದ್ದಾಗ ಬೇರೆ ಮಲಗಿದರೆ ತಮ್ಮ ಪಾಡಿಗೆ ತಾವು ನಿದ್ದೆ ಮಾಡುತ್ತಾರೆ, ನಿದ್ದೆ ಚೆನ್ನಾಗಿ ಆದಾಗ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು, ಕೋಪವೂ ತಣಿಯುತ್ತದೆ. ಹೀಗೆ ಸ್ಲೀಪ್ ಡಿವೋರ್ಸ್ ಗುಣಗಳ ಬಗ್ಗೆ ಹೇಳಲಾಗುವುದು.
ಸ್ಲೀಪ್ ಡಿವೋರ್ಸ್ ಸಂಬಂಧಕ್ಕೆ ಅಪಾಯಕಾರಿಯೂ ಹೌದು
ಸಂಬಂಧ ಉಳಿಸಿಕೊಳ್ಳಲು ಸ್ಲೀಪ್ ಡಿವೋರ್ಸ್ ಮೊರೆಹೋದರೆ ಇಬ್ಬರ ನಡುವೆ ಭಾವನಾತ್ಮಕ ಕನೆಕ್ಷನ್ ಕಡಿಮೆಯಾಗುವ ಸಾಧ್ಯತೆ ಇದೆ. ಇಬ್ಬರು ಪ್ರತ್ಯೇಕ ಮಲಗುವುದರಿಂದ ದೈಹಿಕವಾಗಿಯೂ ದೂರವಾಗುತ್ತಾರೆ, ಇದರಿಂದಾಗಿ ಇಬ್ಬರ ನಡವೆ ಶಾಶ್ವತ ಅಂತರ ಬೆಳೆಯುವ ಸಾಧ್ಯತೆ ಇದೆ. ಸಂಬಂಧ ಉಳಿಸಿಕೊಳ್ಳಲು ಪಾಲಿಸುವ ಈ ಸ್ಲೀಪ್ ಡಿವೋರ್ಸ್ ಸಂಬಂಧದಲ್ಲಿ ದೊಡ್ಡ ಅಂತರವನ್ನೇ ತರಬಹುದು.
ಬೇರೆ ಕಡೆ ಆಕರ್ಷಣೆ ಬೆಳೆಯಬಹುದು
ಸ್ಲೀಪ್ ಡಿವೋರ್ಸ್ ಅಂತ ಇಬ್ಬರು ಬೇರೆ-ಬೇರೆ ರೂಂನಲ್ಲಿ ಮಲಗಲು ಆರಂಭಿಸಿದರೆ ಈ ಸಾಮಾಜಿಕ ಜಾಲದ ಕಾಲದಲ್ಲಿ ಬೇರೆ ಕಡೆ ಆಕರ್ಷಿತರಾಗುವ ಸಾಧ್ಯತೆಯೂ. ರಾತ್ರಿ ಹೊತ್ತು ಬೇರೆಯವರ ಜೊತೆ ಚಾಟಿಂಗ್ ಅಂತ ಕಳೆಯುವ ಅಪಾಯವೂ ಇದೆ. ಆದ ಕಾರಣ ಈ ಸ್ಲೀಪ್ ಡಿವೋರ್ಸ್ ಒಳ್ಳೆಯದೇ ಎಂದು ಹೇಳುವುದಾದರೂ ಈ ಅಪಾಯಗಳನ್ನು ಅಲ್ಲಗಳೆಯುವಂತಿಲ್ಲ.
ಇಬ್ಬರ ನಡುವೆ ಅನುಬಂಧ ಗಟ್ಟಿಯಾಗಲು ಏನು ಮಾಡಬೇಕು?
ಈ ಸ್ಲೀಪ್ ಡಿವೋರ್ಸ್ ಎಂಬುವುದು ಇತ್ತೀಚಿನ ಟ್ರೆಂಡ್ ಅಷ್ಟೇ. ಇದರಲ್ಲಿ ಒಳಿತು-ಕೆಡಕು ಎರಡೂ ಇದೆ. ಈ ವಿಧಾನಕ್ಕಿಂತ ಸಂವಹನದ ವಿಧಾನದ ಮೂಲಕ ಸಂಸಾರವನ್ನು ಗಟ್ಟಿ ಮಾಡುವುದೇ ಜಾಣತನ. ಏನೇ ಸಮಸ್ಯೆಯಿದ್ದರೂ ಇಬ್ಬರು ಕೂತು ಮಾತನಾಡುವ ಮೂಲಕ ಪರಿಹರಿಸಿದರೆ ಇಬ್ಬರ ಬಾಂಧವ್ಯ ಗಟ್ಟಿಯಾಗುವುದು, ಈ ಸ್ಲೀಪ್ ಡಿವೋರ್ಸ್ ಅಗ್ಯತವೇ ಬರಲ್ಲ, ಈ ಕುರಿತು ನಿಮ್ಮ ಅಭಿಪ್ರಾಯವೇನು?



Click it and Unblock the Notifications
