Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್‌ನಲ್ಲಿ ಪ್ರೀತಿಯನ್ನು ಕೊನೆವರೆಗೂ ಉಳಿಸಿಕೊಳ್ಳೋದು ಹೇಗೆ?
ಲಾಂಗ್ ಡೆಸ್ಟೆನ್ಸ್ ರಿಲೇಶನ್‌ಶಿಪ್‌ನಲ್ಲಿರೋದು ತುಂಬಾನೇ ಕಷ್ಟ. ಹುಡುಗ-ಹುಡುಗಿ ಹತ್ತಿರವಿದ್ದಾಗಲೇ ಕೆಲವೊಂದು ಸಲ ಪ್ರೀತಿಯನ್ನು ಉಳಿಸಿಕೊಳ್ಳೋದಕ್ಕೆ ಸಾಧ್ಯವಾಗೋದಿಲ್ಲ. ಇನ್ನೂ ನಮ್ಮನ್ನು ಪ್ರೀತಿಸಿದವರು ದೂರವಿದ್ದಾಗ ಜಗಳ, ಮನಸ್ಥಾಪಗಳು ಎದುರಾಗೋದು ಕಾಮನ್.
ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್‌ನಿಂದಾಗಿ ಅದೆಷ್ಟೋ ಪ್ರೀತಿ ಮುರಿದು ಬಿದ್ದಿರೋದನ್ನು ನಾವು ನೋಡಿದ್ದೇವೆ. ಆದರೆ ಎಷ್ಟು ವರ್ಷವಾದರೂ ಸರಿ ಪ್ರೀತಿಸಿದವರಿಗಾಗಿ ಕಾದು ಅವರನ್ನೇ ಮದುವೆಯಾಗುವ ಖುಷಿ ಅದನ್ನು ಹೇಳೋದಕ್ಕೆ ಸಾಧ್ಯವಿಲ್ಲ. ಅಷ್ಟಕ್ಕು ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ಅನ್ನು ಕೊನೆವರೆಗೂ ಉಳಿಸಿಕೊಳ್ಳೋದು ಹೇಗೆ ಇಲ್ಲಿದೆ ಟಿಪ್ಸ್.

1. ನಂಬಿಕೆ ಮುಖ್ಯ
ಪ್ರೀತಿ ಗಟ್ಟಿಯಾಗಿ ಉಳಿಯೋದಕ್ಕೆ ಅದಕ್ಕೆ ನಂಬಿಕೆ ಎನ್ನುವ ಬಂಧನದ ಅವಶ್ಯಕತೆ ಇದೆ. ಲಾಂಗ್ ಡೆಸ್ಟೆನ್ಸ್ ರಿಲೇಶನ್‌ಶಿಪ್‌ನಲ್ಲಿ ಅನೇಕರಿಗೆ ಒಂದು ಭಯ ಕಾಡುತ್ತಿರುತ್ತೆ. ಅದೇನೆಂದರೆ ನಾನು ದೂರ ಇದ್ದಾಗ ನನ್ನ ಸಂಗಾತಿ ಬೇರೆಯವರ ಪ್ರೀತಿಯ ಬಲೆಯಲ್ಲಿ ಬಿದ್ದು ಬಿಡುತ್ತಾರೋ ಎಂದು. ಸುಖಾ ಸುಮ್ಮನೆ ಭಯ ಪಡುವುದರ ಬದಲಾಗಿ ಅವರ ಮೇಲೆ ನಂಬಿಕೆ ಇಡಿ. ಇನ್ನೂ ಪ್ರೀತಿಸಿದವರಿಗೆ ಮೋಸ ಮಾಡೋದಕ್ಕೆ ಹೋಗಬಾರದು. ನಮ್ಮವರು ಎಷ್ಟು ದೂರದಲ್ಲಿದ್ದರೂ ಪರವಾಗಿಲ್ಲ ನಮ್ಮ ಪ್ರೀತಿ ಪ್ರಾಮಾಣಿಕವಾಗಿರಬೇಕು.
2. ಭವಿಷ್ಯದ ಬಗ್ಗೆ ಯೋಜನೆಗಳನ್ನು ರೂಪಿಸಿಕೊಳ್ಳಿ
ನೀವು ಪ್ರೀತಿಸಿದವರು ನಿಮ್ಮಿಂದ ದೂರವಿದ್ದರೂ ಪರವಾಗಿಲ್ಲ. ಅವರ ಜೊತೆಯಲ್ಲಿ ನೀವು ಭವಿಷ್ಯದ ಬಗ್ಗೆ ಕನಸು ಕಾಣಬೇಕು. ಮದುವೆಯಾದ ಮೇಲೆ ಎಲ್ಲಿ ನೆಲೆಸಬೇಕು? ಯಾವ ರೀತಿ ಜೀವನ ಸಾಗಿಸಬೇಕು ಎಂದೆಲ್ಲಾ ಲೆಕ್ಕಾಚಾರ ಹಾಕಿಕೊಳ್ಳಿ. ದೂರವಿದ್ದರೂ ನಿಮ್ಮಿಬ್ಬರ ಪ್ರೀತಿ ಗಟ್ಟಿಯಾಗಿರುವಂತೆ ನೋಡಿಕೊಳ್ಳಿ. ಆಗ ಒಂದಲ್ಲ ಒಂದು ನೀವು ಅಂದುಕೊಂಡಂತೆ ನೀವು ಪ್ರೀತಿಸಿದವರನ್ನೇ ಮದುವೆಯಾಗುತ್ತೀರಿ.
3. ನಿಮ್ಮ ಪೋಷಕರನ್ನು ಒಪ್ಪಿಸಿ ಮದುವೆಯಾಗಿ
ಸಾಮಾನ್ಯವಾಗಿ ಪೋಷಕರಿಗೆ ಪ್ರೇಮ ವಿವಾಹಗಳಲ್ಲಿ ಅಷ್ಟೊಂದು ಆಸಕ್ತಿ ಇರೋದಿಲ್ಲ. ನೀವು ಹುಡಕಿರೋ ವಧು/ವರ ನನ್ನು ಅವರು ಅಷ್ಟೊಂದು ಸುಲಭವಾಗಿ ಸ್ವೀಕರಿಸೋದಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಹೇಗಾಗುತ್ತೆ ಎಂದರೆ ಪೋಷಕರು ಒಪ್ಪಲಿಲ್ಲ ಅನ್ನೋ ಕಾರಣಕ್ಕೆ ಪ್ರೀತಿ ಮುರಿದು ಬೀಳುತ್ತೆ. ಆದರೆ ಇದು ಸರಿಯಲ್ಲ, ಏನಾದರೂ ಸರಿ ಪೋಷಕರನ್ನು ಒಪ್ಪಿಸಿ ಮದುವೆಯಾಗಿ.
4. ಒಬ್ಬರಿಗೊಬ್ಬರು ಸಮಯ ಮೀಸಲಿಡಿ
ಪ್ರೀತಿಸಿದವರು ದೂರವಿದ್ದಾಗ ನಮಗೆ ಬೇಕಾದಾಗಲೆಲ್ಲ ಸಿಗೋದಕ್ಕೆ ಆಗೋದಿಲ್ಲ. ಇಂತಹ ಸಂದರ್ಭದಲ್ಲಿ ಅವರ ಜೊತೆಗೆ ನಾವು ಸಂವಹನ ಮಾಡುತ್ತಿದ್ದಾಗ ಮಾತ್ರ ಪ್ರೀತಿ ಉಳಿಯುತ್ತದೆ. ರಾತ್ರಿ ಸಮಯದಲ್ಲಿ ಮಾತನಾಡೋದಕ್ಕೆ ಇಬ್ಬರು ಸಮಯ ಮೀಸಲಿಡಿ ವಿಡಿಯೋ ಕಾಲ್, ಮೆಸೇಜ್ ಮಾಡಬಹುದು. ವೀಕೆಂಡ್‌ನಲ್ಲಿ ಸಾಧ್ಯವಾದಷ್ಟು ಅವರ ಜೊತೆಗೆ ಮಾತನಾಡುತ್ತಿರಿ. ಆಗ ನಿಮ್ಮ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ.
5. ಸಾಧ್ಯವಾದಾಗಲೆಲ್ಲಾ ಭೇಟಿಯಾಗಿ
ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್‌ನಲ್ಲಿದ್ದಾಗ ನಮಗೆ ಬೇಕಾದಾಗಲೆಲ್ಲಾ ಭೇಟಿಯಾಗೋದಕ್ಕೆ ಸಾಧ್ಯವಾಗೋದಿಲ್ಲ. ಆದರೆ ತಿಂಗಳಿಗೊಂದು ಸಲ, ಅಥವಾ ಆರು ತಿಂಗಳಿಗೊಂದು ಸಲ, ಅವರು ತುಂಬಾ ದೂರವಿದ್ದರೆ ವರ್ಷಕ್ಕೊಂದು ಸಲವಾದರೂ ಭೇಟಿಯಾಗುತ್ತಿರಿ. ನಾವು ಒಟ್ಟಾಗಿ ಕಳೆದಾಗಲೆಲ್ಲಾ ನಮ್ಮ ನಡುವಿನ ಪ್ರೀತಿ, ಬಾಂಧವ್ಯ ಹೆಚ್ಚಾಗುತ್ತದೆ.
6. ಸಂಗಾತಿಯ ಸಾಧನೆಗೆ ಹೆಗಲಾಗಿ
ನಿಮ್ಮ ಸಂಗಾತಿ ನಿಮ್ಮನ್ನು ಬಿಟ್ಟು ದೂರ ಹೋಗೋದಕ್ಕೂ ಒಂದು ಕಾರಣವಿರುತ್ತದೆ. ನಿಮಗಾಗಿ, ನಿಮ್ಮಿಬ್ಬರ ಭವಿಷ್ಯಕ್ಕಾಗಿ ಅವರು ದುಡಿಯೋದಕ್ಕೆ ದೂರ ಹೋಗಿರುತ್ತಾರೆ. ಈ ಸಮಯದಲ್ಲಿ ಅವರು ಕೆಲವೊಂದು ಸಲ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಅಂತಹ ಸಂದರ್ಭದಲ್ಲಿ ಅವರಿಗೆ ಪ್ರೋತ್ಸಾಹ ನೀಡುವುದು ನಿಮ್ಮ ಜವಾಬ್ದಾರಿ. ಅವರ ಸಾಧನೆಯ ಪ್ರತಿ ಹೆಜ್ಜೆಯಲ್ಲೂ ನಿಮ್ಮ ಪಾಲು ಇರಬೇಕು.
7. ತಾಳ್ಮೆ ಇರಬೇಕು
ಪ್ರೀತಿಸಿದವರನ್ನು ಮದುವೆಯಾಗಬೇಕು ಎನ್ನುವ ಆಸೆ ಯಾರಿಗೆ ಇರೋದಿಲ್ಲ ಹೇಳಿ. ಆದರೆ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್‌ನಲ್ಲಿದ್ದಾಗ ಈ ಗಳಿಗೆಗಾಗಿ ತುಂಬಾನೇ ಕಾಯಬೇಕು. ಇದಕ್ಕಾಗಿ ತಾಳ್ಮೆ ತುಂಬಾನೇ ಮುಖ್ಯ. ನಿಮ್ಮ ಸಮಯಕ್ಕಾಗಿ ಕಾಯುತ್ತಿರಿ. ಆದರೆ ನಡುದಾರಿಯಲ್ಲಿ ಯಾವತ್ತೂ ಕೈ ಚೆಲ್ಲೋದಕ್ಕೆ ಹೋಗಬೇಡಿ. ನಿಮ್ಮ ಪ್ರೀತಿ ನಿಜವಾಗಿದ್ದೇ ಆದರೆ ಖಂಡಿತ ನಿಮ್ಮನ್ನು ಪ್ರೀತಿಸಿದವರ ಕೈ ಹಿಡಿಯುತ್ತೀರಿ.
ತಾಳ್ಮೆ, ತ್ಯಾಗ, ನಂಬಿಕೆ, ಪ್ರಾಮಾಣಿಕತೆ ಇಬ್ಬರಲ್ಲೂ ಇದ್ದರೆ ಖಂಡಿತ ನೀವು ಇಷ್ಟ ಪಟ್ಟವರನ್ನೇ ಕೈ ಹಿಡಿಯುತ್ತೀರಿ. ಆದರೆ ಅದಕ್ಕಾಗಿ ನೀವು ಕಾಯುತ್ತಿರಬೇಕು ಅಷ್ಟೇ.



Click it and Unblock the Notifications


