Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ಮದುವೆಯಾಗೋ ತಪ್ಪು ಖಂಡಿತ ಮಾಡದಿರಿ !
ಮದುವೆ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ತುಂಬಾನೇ ಮುಖ್ಯ. ಅನೇಕರು ಅವರು ಮೆಚ್ಚಿದವರನ್ನು ಮದುವೆಯಾಗುತ್ತಾರೆ, ಇನ್ನೂ ಹಲವಾರು ಮನೆಯವರು ನೋಡಿದವರನ್ನು ಮದುವೆಯಾಗ್ತಾರೆ. ಆದ್ರೆ ಮದುವೆ ಅನ್ನೋದು ಮಕ್ಕಳಾಟವಲ್ಲ. ಯಾರೋ ಹೇಳಿದರೂ ಅನ್ನೋ ಕಾರಣಕ್ಕೆ ಅಥವಾ ಯಾರದೋ ಒತ್ತಾಯಕ್ಕೆ ಮದುವೆಯಾದರೆ ಮದುವೆಯ ನಂತರ ನಮ್ಮ ಜೀವನ ಸುಖವಾಗಿರೋದಕ್ಕೆ ಸಾಧ್ಯವೇ ಇಲ್ಲ. ಕೆಲವೊಂದು ಸಲ ನಾವು ಮದುವೆಗೆ ಸಿದ್ಧರಾಗಿರೋದಿಲ್ಲ. ಅದು ದೈಹಿಕ ಹಾಗೂ ಮಾನಸಿಕವಾಗಿಯೂ ಇರಬಹುದು. ಒಂದು ವೇಳೆ ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ನೀವಿನ್ನೂ ಮದುವೆಗೆ ಸಿದ್ಧರಾಗಿಲ್ಲ ಎಂದರ್ಥ.

1. ನಿಮ್ಮ ರಿಲೇಶನ್ ಶಿಪ್ ಶುರುವಾಗಿ ಹೆಚ್ಚು ಸಮಯ ಆಗದಿದ್ದಾಗ :
ಕೆಲವೊಂದು ಸಲ ಹೇಗಾಗುತ್ತೆ ಅಂದ್ರೆ ಪ್ರೀತಿಯಲ್ಲಿ ಬಿದ್ದ ಕೆಲವೇ ತಿಂಗಳಲ್ಲಿ ನಿಮ್ಮ ಸಂಗಾತಿ ಮದುವೆಯಾಗಬೇಕು ಎಂದು ಒತ್ತಡ ಹೇರುತ್ತಾರೆ. ಈ ಒತ್ತಡಕ್ಕೆ ಮಣಿದು ಮದುವೆಯಾಗೋದಕ್ಕೆ ಹೋಗಬೇಡಿ. ನಾವು ಒಬ್ಬರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು ಅಂದ್ರೆ ಕನಿಷ್ಠ ಪಕ್ಷ ಒಂದು ವರ್ಷವಾದರೂ ಬೇಕೇ ಬೇಕು. ಇನ್ನೂ ಅರೇಂಜ್ ಮ್ಯಾರೇಜ್ ಆದ್ರೂ ಕೂಡ ಅಷ್ಟೇ ತುರ್ತಾಗಿ ಮದುವೆಯಾಗೋದು ಸರಿಯಲ್ಲ. ಅರ್ಥ ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ.
2. ನಿಮ್ಮಿಬ್ಬರ ರಹಸ್ಯಗಳನ್ನು ಶೇರ್ ಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ :
ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ರಹಸ್ಯಗಳು ಖಂಡಿತ ಇರುತ್ತದೆ. ಅದನ್ನು ಎಲ್ಲರ ಜೊತೆಗೆ ಹಂಚಿಕೊಳ್ಳೋದಕ್ಕೆ ಆಗೋದಿಲ್ಲ. ಆದರೆ ಹೆಚ್ಚಿನ ಬಾರಿ ನಮ್ಮ ಸಂಗಾತಿ ಅಥವಾ ಸಂಗಾತಿ ಆಗುವವರ ಜೊತೆ ಎಲ್ಲಾ ರಹಸ್ಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತೇವೆ. ಆದರೆ ಆರಂಭದಲ್ಲಿ ಸಂಗಾತಿಯೊಂದಿಗೂ ಕೂಡ ಕೆಲವೊಂದು ವಿಚಾರಗಳಲ್ಲಿ ಮುಚ್ಚು ಮರೆ ಮಾಡೋದು ಸಹಜ ಆದರೆ ಸಮಯ ಕಳೆದಂತೆ ಎಲ್ಲವೂ ಸರಿಯಾಗುತ್ತದೆ. ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. ಹೀಗಾಗಿ ಮದುವೆಯಾಗೋದಕ್ಕೆ ಅವಸರ ಬೇಡ.
3. ನೀವು ಜಗಳ ಆಡದಿದ್ದಾಗ
ಸಂಬಂಧದಲ್ಲಿ ಸುಖ-ದುಃಖ ಎರಡು ಕೂಡ ಇರುತ್ತದೆ. ನಾವು ನಮ್ಮ ಸಂಗಾತಿಯನ್ನು ಎಷ್ಟು ಪ್ರೀತಿಸುತ್ತೇವೋ ಅಷ್ಟೇ ಬಾರಿ ಜಗಳ ಆಡುತ್ತೇವೆ. ಆದರೆ ಎಷ್ಟೇ ಬಾರಿ ಜಗಳ ಆಡಿದರೂ ಕೂಡ ಮತ್ತೆ ಎಲ್ಲವೂ ಸರಿ ಹೋಗುತ್ತದೆ. ನಿಮ್ಮ ಸಂಬಂಧದಲ್ಲಿ ಇನ್ನೂ ಜಗಳ ಶುರು ಆಗಿಲ್ಲ ಎಂದಾದರೆ ನೀವಿನ್ನೂ ಪ್ರೀತಿಯ ಆರಂಭದಲ್ಲಿದ್ದೀರಿ ಎಂದರ್ಥ. ಇಂತಹ ಸಂದರ್ಭದಲ್ಲಿ ಮದುವೆಯಾಗೋದು ಸರಿಯಲ್ಲ.
4. ಆರ್ಥಿಕವಾಗಿ ಸದೃಢರಾಗದಿದ್ದಾಗ
ಮದುವೆಗೂ ಮೊದಲು ಆರ್ಥಿಕವಾಗಿ ಸದೃಢರಾಗೋದು ತುಂಬಾನೇ ಮುಖ್ಯವಾಗುತ್ತದೆ. ನೀವು ಆಗರ್ಭ ಶ್ರೀಮಂತರಾಗದಿದ್ದರೂ ತೊಂದರೆಯಿಲ್ಲ ಆದರೆ ನಿಮ್ಮ ಹೆಂಡತಿ, ಮಕ್ಕಳಿಗೆ ಉತ್ತಮ ಜೀವನ ಕಲ್ಪಿಸಲು ಶಕ್ತರಾಗಿರಬೇಕು. ನಿಮ್ಮ ಕೈಯಲ್ಲಿ ದುಡ್ಡಿಲ್ಲದಿದ್ದಾಗ ಅಥವಾ ನಿಮಗೆ ಬರುವ ಸಂಭಳದಲ್ಲಿ ನೀವು ಜೀವನ ನಡೆಸೋದು ಕಷ್ಟ ಎಂದಾಗ ಮದುವೆಯಾಗೋದಕ್ಕೆ ಹೋಗಬೇಡಿ. ಸ್ವಲ್ಪ ಸಮಯ ಕಾಯುವುದೇ ಉತ್ತಮ.
5. ನಿಮ್ಮ ಜೀವನ ಶೈಲಿಯನ್ನು ಬದಲಿಸೋದಕ್ಕೆ ತಯಾರಿಲ್ಲದಾಗ
ಮದುವೆಗೂ ಮೊದಲು ನಮ್ಮ ಜೀವನಶೈಲಿ ಬೇರೆಯದ್ದೇ ರೀತಿಯಲ್ಲಿರುತ್ತದೆ. ಅನೇಕರಂತೂ ನನ್ನ ಲೈಫ್, ನನ್ನ ರೂಲ್ಸ್ ಅನ್ನುವಂತಿರುತ್ತಾರೆ. ಆದರೆ ಮದುವೆಗೆ ನಂತರ ಕೆಲವೊಂದು ವಿಚಾರಗಳಲ್ಲಿ ನೀವು ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಸಂಗಾತಿಗಾಗಿ ನಿಮ್ಮ ಜೀವನ ಶೈಲಿಯನ್ನು ಬದಲಿಸೋದು ಅನಿವಾರ್ಯವಾಗಿರುತ್ತದೆ. ಆದರೆ ಕೆಲವರ ಗುಣ ಹೇಗಿರುತ್ತದೆ ಅಂದರೆ ನಾನು ಯಾರಿಗಾಗಿಯೂ ಬದಲಾಗೋದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ. ಅಂತವರು ಸದ್ಯಕ್ಕೆ ಮದುವೆಯಾಗೋದು ಒಳ್ಳೆಯದಲ್ಲ.
6. ಸ್ನೇಹಿತರು ಮದುವೆಯಾಗುತ್ತಿದ್ದರೆಂದು ನೀವು ಆಗಬೇಡಿ
ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ವಯಸ್ಸಿನ ಎಲ್ಲರಿಗೂ ಮದುವೆಯಾಗುತ್ತಿರುತ್ತದೆ. ನಿಮ್ಮ ಮನೆಯಲ್ಲಿ ನಿಮ್ಮ ಮೇಲೆ ಒತ್ತಡ ಹೇರುತ್ತಿರುತ್ತಾರೆ. ನಿಮ್ಮ ಸ್ನೇಹಿತರು ಮದುವೆಯಾಗುತ್ತಿದ್ದಾರೆ ಎನ್ನುವ ಕಾರಣಕ್ಕೆ ನೀವು ಮದುವೆಯಾಗಬೇಕೆಂದೇನಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಯಕ್ತಿಕ ಜೀವನ ಅನ್ನೋದು ಇರುತ್ತದೆ. ನಾವು ನಮಗಾಗಿ ಮದುವೆಯಾಗಬೇಕೇ ಹೊರತು ಬೇರೆಯವರಿಗಾಗಿ ಅಲ್ಲ.
7. ಮದುವೆ ಜವಾಬ್ದಾರಿಯೇ ಹೊರತು ಹೊರೆ ಆಗಬಾರದು
ಮದುವೆ ಮಕ್ಕಳಾಟವಲ್ಲ. ನಮ್ಮನ್ನೇ ನಂಬಿ ಬರುವ ಜೀವವನ್ನು ಸಾಯೋವರೆಗೂ ಚೆನ್ನಾಗಿ ನೋಡಿಕೊಳ್ಳುವ ಶಕ್ತಿ ಇರಬೇಕು. ಮದುವೆಯನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕೇ ಹೊರತು ಅದು ನಮಗೆ ಹೊರೆ ಆಗಬಾರದು. ನಿಮ್ಮ ಮನಸ್ಸು ಯಾವಾಗ ಮದುವೆಗೆ ಸಿದ್ಧನಿದ್ದೀನಿ ಎಂದು ಹೇಳುತ್ತದೆಯೋ ಆ ದಿನ ನೀವು ಮದುವೆಗೆ ತಯಾರಾಗಿ ಸಾಕು.
ಒತ್ತಡಕ್ಕೋ ಅಥವಾ ಸಂದರ್ಭಕ್ಕೆ ಗಂಟು ಬಿದ್ದು ಮದುವೆಯಾಗೋ ತಪ್ಪು ನಿರ್ಧಾರ ತೆಗೆದುಕೊಳ್ಳೋದಕ್ಕೆ ಹೋಗಬೇಡಿ. ನಿಮ್ಮ ಮದುವೆಯ ಬಗ್ಗೆ ನಿಮಗೆ ಯಾವಾಗ ಸ್ಪಷ್ಟನೆ ಸಿಗುತ್ತದೋ ಆಗ ನೀವು ಮದುವೆಗೆ ಸಿದ್ಧರಿದ್ದೀರಿ ಎಂದರ್ಥ.



Click it and Unblock the Notifications


