Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಅಪ್ಪಿ- ತಪ್ಪಿಯೂ ಸಹೊದ್ಯೋಗಿಗಳೊಂದಿಗೆ ಈ ವಿಚಾರಗಳನ್ನು ಹಂಚಿಕೊಳ್ಳದಿರಿ!
ಸಾಮಾನ್ಯವಾಗಿ ನಮ್ಮ ಕೆಲಸದ ಜಾಗದಲ್ಲಿ ನಮ್ಮ ಸಹೋದ್ಯೋಗಿಗಳು ನಮ್ಮೊಂದಿಗೆ ಚೆನ್ನಾಗಿ ಇರುತ್ತಾರೆ. ನಾವು ಕೂಡ ಅವರನ್ನು ನಮ್ಮ ಹಿತೈಷಿಗಳು ಅಂತ ನಂಬಿಕೊಂಡಿರುತ್ತೀವಿ. ಆದರೆ ನಮ್ಮ ಎಲ್ಲಾ ಸಹೋದ್ಯೋಗಿಗಳು ನಮ್ಮ ಹಿತೈಷಿಗಳಾಗಿರೋದಿಲ್ಲ. ಕೆಲವರು ನಮ್ಮ ಹಿತ ಶತ್ರುಗಳಾಗಿರುತ್ತಾರೆ. ನಮಗೆ ಗೊತ್ತಿಲ್ಲದ ಹಾಗೆ ನಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಾರೆ. ಅಷ್ಟಕ್ಕು ನಮ್ಮ ಸಹೋದ್ಯೋಗಿಗಳು ನಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗೋದು ಹೇಗೆ? ಅವರ ನಡವಳಿಕೆ ಹೀಗಿದ್ದರೆ ಖಂಡಿತ ಅವರು ನಿಮಗೆ ಕೆಡುಕನ್ನು ಬಯಸುತ್ತಿದ್ದಾರೆ ಎಂದರ್ಥ.
1. ಅವರು ನಿಮ್ಮ ಬಗ್ಗೆ ಹಿಂದಿನಿಂದ ಮಾತನಾಡುತ್ತಾರೆ
ಸಹೋದ್ಯೋಗಿಗಳ ಜೊತೆಗೆ ನಾವು ಸ್ನೇಹ ಬೆಳೆಸುತ್ತೇವೆ. ಹಾಗೂ ನಾವು ಪ್ರತಿಯೊಂದು ವಿಚಾರವನ್ನು ಅವರೊಂದಿಗೆ ಶೇರ್ ಮಾಡಿಕೊಳ್ಳುತ್ತೇವೆ. ನಮ್ಮ ವೈಯಕ್ತಿ ವಿಚಾರದಲ್ಲಿ ಅವರು ತುಂಬಾನೇ ಆಸಕ್ತಿ ಹೊಂದಿರುತ್ತಾರೆ. ನಾವು ಅವರನ್ನು ನಂಬಿ ಎಲ್ಲಾ ವಿಚಾರವನ್ನು ಅವರಲ್ಲಿ ಹೇಳಿಕೊಳ್ಳುತ್ತೇವೆ. ಆದರೆ ಅವರು ನಮ್ಮ ಬಗ್ಗೆ ಇತರರಲ್ಲಿ ಕೆಟ್ಟದಾಗಿ ಮಾತನಾಡುತ್ತಾರೆ. ನಮ್ಮ ವೈಯಕ್ತಿಕ ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಾರೆ. ಇಂತವರ ಸ್ನೇಹ ಮಾಡಲು ಹೋಗಲೇಬೇಡಿ.

2. ನಿಮ್ಮ ಐಡಿಯಾಗಳನ್ನು ಅವರೊಂದಿಗೆ ಹಂಚಿಕೊಳ್ಳಬೇಡಿ
ನಿಮ್ಮ ಸಹೋದ್ಯೋಗಿಗಳು ನಿಮ್ಮ ಜೊತೆ ಎಷ್ಟೇ ಆತ್ಮೀಯರಾಗಿದ್ದರೂ ಕೂಡ ಅವರೊಂದಿಗೆ ನಿಮ್ಮ ಕೆಲಸದ ಐಡಿಯಾಗಳನ್ನು ಹಂಚಿಕೊಳ್ಳಬೇಡಿ. ಯಾಕಂದ್ರೆ ಕೆಲವೊಂದು ಸಲ ಅವರು ನಿಮ್ಮ ಐಡಿಯಾಗಳನ್ನು ಕದ್ದು ಬಾಸ್‌ನಿಂದ ಕ್ರೆಡಿಟ್ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದು ನಿಮ್ಮ ಭವಿಷ್ಯವನ್ನೇ ಹಾಳು ಮಾಡಿ ಬಿಡಬಹುದು.
3. ಸಹೊದ್ಯೋಗಿಗಳು ನಿಮ್ಮನ್ನು ಟೀಕಿಸುತ್ತಾರೆ
ಟೀಕೆಗಳು ಒಳ್ಳೆಯದು ಯಾಕಂದ್ರೆ ಇದರಿಂದ ನಾವು ನಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ ಇದ್ದಂತೆ. ಇದು ನಮಗೆ ಬೆಳೆಯೋದಕ್ಕೆ ಸಹಾಯ ಮಾಡುತ್ತದೆ. ಆದರೆ ನಿಮ್ಮ ಸಹೋದ್ಯೋಗಿ ನಿಮ್ಮನ್ನು ಯಾವಾಗಲೂ ಟೀಕಿಸುತ್ತಿದ್ದರೆ ನಿಮ್ಮ ಆತ್ಮ ಬಲ ಕುಗ್ಗಿ ಹೋಗುತ್ತದೆ. ಕೆಲಸದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸೋದಕ್ಕೆ ಸಾಧ್ಯವಾಗೋದಿಲ್ಲ. ನೀವು ನಿಮ್ಮ ಸಾಮರ್ಥ್ಯವನ್ನು ಅನುಮಾನಿಸೋದಕ್ಕೆ ಶುರು ಮಾಡುತ್ತೀರಿ. ಆದ್ದರಿಂದ ಇಂತವರ ಜೊತೆಗೆ ಸ್ನೇಹ ಮಾಡೋದಕ್ಕೆ ಹೋಗಬೇಡಿ.
4. ಅವರು ನಿಮ್ಮನ್ನು ಹೊರಗಿಡುತ್ತಾರೆ
ಸಹೊದ್ಯೋಗಿಗಳು ನಿಮ್ಮ ಸ್ನೇಹಿತರಂತೆಯೇ ಇರುತ್ತಾರೆ. ಆದರೆ ಅದ್ರಲ್ಲಿ ಕೆಲವರು ನಿಮ್ಮ ಏಳಿಗೆಯನ್ನು ಬಯಸುವುದಿಲ್ಲ. ಅವರು ನಿರಂತರವಾಗಿ ನಿಮ್ಮ ಪ್ರತಿಯೊಂದು ಸಭೆ ಹಾಗೂ ಈವೆಂಟ್‌ಗಳಿಂದ ಹೊರಗಿಡಲು ಪ್ರಯತ್ನಿಸುತ್ತಾರೆ. ಅವರು ನಿಮ್ಮ ಅವಕಾಶಗಳನ್ನು ಮಿತಿಗೊಳಿಸಲು ಪ್ರಯತ್ನಿಸುತ್ತಾರೆ. ಅಷ್ಟೇ ಅಲ್ಲ, ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸಿನ ಏಣಿಯನ್ನು ಏರದಂತೆ ತಡೆಯಬಹುದು. ಇಂತಹ ಸಹೋದ್ಯೋಗಿಗಳಿಂದ ನಿಮ್ಮ ಕೆಲಸದ ವಾತಾವರಣದಲ್ಲಿ ನೀವು ಪ್ರತ್ಯೇಕತೆಯನ್ನು ಅನುಭವಿಸಬಹುದು ಒಟ್ಟಿನಲ್ಲಿ ನೀವು ನಿಮ್ಮ ಕೆಲಸ ಸ್ಥಳದಲ್ಲಿ ಒಂಟಿತನ ಅನುಭವಿಸುತ್ತೀರಿ.
5. ಇತರ ಸ್ನೇಹಿತರ ವಿರುದ್ಧ ನಿಮ್ಮನ್ನು ಎತ್ತಿಕಟ್ಟಬಹುದು
ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಯೊಬ್ಬರು ಇನ್ನೊಬ್ಬ ಸಹೋದ್ಯೋಗಿಯ ಬಗ್ಗೆ ನಿಮ್ಮ ಬಳಿ ಕೆಟ್ಟದಾಗಿ ಮಾತನಾಡುತ್ತಿದ್ದರೆ ನೀವು ಅದಕ್ಕೆ ಸೊಪ್ಪು ಹಾಕೋದಕ್ಕೆ ಹೋಗಬೇಡಿ. ಯಾಕಂದ್ರೆ ಅವರು ನಿಮ್ಮ ಬಾಯಿಂದ ಏನು ಬರುತ್ತೋ ಆ ವಿಚಾರವನ್ನು ಇನ್ನೊಬ್ಬ ಸಹೋದ್ಯೋಗಿಯ ಬಳಿ ಹೋಗಿ ಚಾಡಿ ಹೇಳುವ ಸಾಧ್ಯತೆ ಇದೆ. ಇದು ನಿಮ್ಮನ್ನು ಸಿಕ್ಕಿ ಹಾಕಿಕೊಳ್ಳುವಂತೆ ಮಾಡುವ ತಂತ್ರ ಅಷ್ಟೇ. ಇಂತವರಿಂದ ಆದಷ್ಟು ದೂರ ಇದ್ದರೆ ಉತ್ತಮ.
ಕೆಲಸದ ಸ್ಥಳದಲ್ಲಿ ಸಹೊದ್ಯೋಗಿಗಳು ಎಷ್ಟೇ ಆತ್ಮೀಯರಾಗಿದ್ದರೂ ಕೂಡ ಅವರ ಜೊತೆ ಎಲ್ಲಾ ರಹಸ್ಯಗಳನ್ನು ಹಂಚಿಕೊಳ್ಳುವ ತಪ್ಪು ಮಾಡಲೇಬೇಡಿ. ಇದು ಒಂದಲ್ಲ ಒಂದು ದಿನ ನಿಮಗೆ ಆಪತ್ತು ತಂದೊಡ್ಡೋದ್ರಲ್ಲಿ ಅನುಮಾನವೇ ಇಲ್ಲ.



Click it and Unblock the Notifications

